ಹುಟ್ಟುಹಬ್ಬದ ದಿನ ಮತ್ತಷ್ಟು ಹಾಟ್ ಆದ ಶ್ರೀಯಾ; ಬೀಚ್‌ನಲ್ಲಿ ಸಖತ್ ಎಂಜಾಯ್

First Published Sep 13, 2022, 12:05 PM IST

ಜನ್ಮದಿನವನ್ನು ಶ್ರೀಯಾ ಬೀಚ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ಕುಟುಂಬದ ಜೊತೆ ಮಸ್ತ್ ಎಂಜಾಯ್  ಮಾಡಿದ್ದಾರೆ. ಬೀಚ್ ನಲ್ಲಿ ಬಿಕಿನಿಯಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಬಹುಭಾಷಾ ನಟಿ ಶ್ರೀಯಾ ಸರಣ್  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಆಗಾಗ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಸದ್ಯ ಮತ್ತೆ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಶ್ರೀಯಾ ಕನ್ನಡ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡ ಶ್ರೀಯಾ ಸಖತ್ ಎಂಜಾಯ್ ಮಾಡಿದ್ದಾರೆ. 

ನಟಿಮಣಿಯರಿಗೆ ಬೀಚ್ ಎಂದರೆ ತುಂಬಾ ಇಷ್ಟ. ಶ್ರೀಯಾ ಏನು ಹೊರತಾಗಿಲ್ಲ. ಜನ್ಮದಿನವನ್ನು ಶ್ರೀಯಾ ಬೀಚ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ಕುಟುಂಬದ ಜೊತೆ ಮಸ್ತ್ ಎಂಜಾಯ್  ಮಾಡಿದ್ದಾರೆ. ಬೀಚ್ ನಲ್ಲಿ ಬಿಕಿನಿಯಲ್ಲಿ ಮಿಂಚಿರುವ ಶ್ರೀಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶ್ರೀಯಾ ಇಸ್ಟ್ರಾಗ್ರಾಮ್ ನಲ್ಲಿ ತರಹೇವಾರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಪಿಂಕ್ ಬಣ್ಣದ ಬಿಕಿನಿ, ಹಳದಿ ಬಣ್ಣದ ಬಿಕಿನಿ ಹೀಗೆ ವಿವಿಧ ಬಣ್ಣದ ಬಿಕಿನಿ ತೊಟ್ಟು ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಶ್ರೀಯಾ ಶೇರ್ ಮಾಡಿರುವ ಫೋಟೋಗಳಿಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿವೆ. ಅನೇಕರು ಹುಟ್ಟುಹಬ್ಬದ ವಿಶ್ ಮಾಡುತ್ತಿದ್ದಾರೆ. 

ಶ್ರೀಯಾ ತನ್ನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ಎಲ್ಲರಿಗೂ ಧನ್ಯವಾದ ತಿಳಿಸಿ ಪೋಸ್ಟ್ ಶೇರ್ ಮಾಡಿದ್ದಾರೆ. ಶ್ರೀಯಾ ಹುಟ್ಟುಹಬ್ಬದ ಪ್ರಯುಕ್ತ ಶ್ರೀಯಾ ನಟನೆಯ ಕನ್ನಡದ ಕಬ್ಜ ಸಿನಿಮಾದ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡಿರುವ ಶ್ರೀಯಾ ಲುಕ್ ವೈರಲ್ ಆಗಿತ್ತು.  

ಅಂದಹಾಗೆ ಶ್ರೀಯಾ ಬರೋಬ್ಬರಿ 9 ವರ್ಷಗಳ ಬಳಿಕ ಕನ್ನಡ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಮೂಲಕ ಶ್ರಿಯಾ ಕನ್ನಡದಲ್ಲಿ ಮಿಂಚುತ್ತಿದ್ದಾರೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

ಶ್ರೀಯಾ ಕೊನೆಯದಾಗಿ ಆರ್ ಆರ್ ಆರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆರ್ ಆರ್ ಆರ್ ಸಿನಿಮಾಗೆ ದೊಡ್ಡ ಮಟ್ಟದ ಸಕ್ಸಸ್ ಸಿಕ್ಕಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಯಿ ಮಾಡಿದೆ. ಇನ್ನು ಹಿಂದಿಯಲ್ಲಿ ದೃಶ್ಯಂ -2 ಸಿನಿಮಾ ರಿಲೀಸ್ ಆಗಬೇಕಿದೆ. ಅಜಯ್ ದೇವಗನ್ ಜೊತೆ ಶ್ರೀಯಾ ನಟಿಸಿದ್ದಾರೆ. 
 

click me!