ಇದೀಗ ಮಾಳವಿಕಾ ಮೋಹನನ್ ತಮ್ಮ ಹೊಸ ಫೋಟೋಶೂಟ್ಗಾಗಿ ರೆಡ್ ಕಟೌಟ್ ಡ್ರೆಸ್ ಆಯ್ದುಕೊಂಡಿದ್ದಾರೆ. ಹಾಟ್ ಲುಕ್ನಲ್ಲಿ ಸಖತ್ತಾಗಿ ಕಾಣಿಸಿಕೊಂಡಿದ್ದು, ನೋಡುಗರನ್ನು ಬೆರಗುಗೊಳಿಸಿದ್ದಾರೆ.
ಕೆಂಪು ಬಣ್ಣದ ದಿರಿಸಿನಲ್ಲಿ ನಟಿಯ ಮೈಬಣ್ಣವು ಎತ್ತಿ ತೋರುತ್ತಿದೆ. ಪ್ರತಿ ಭಂಗಿಯಲ್ಲಿ ತಮ್ಮ ಸೊಬಗನ್ನು ಮಾಳವಿಕಾ ಹೊರಹಾಕಿದ್ದಾರೆ. ಈ ಫೋಟೋಗಳು 3 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.
ಸೋಷಿಯಲ್ ಮೀಡಿಯಾದಲ್ಲಿ ಮಾಳವಿಕಾ ಹಂಚಿಕೊಂಡಿರುವ ಫೋಟೋಗಳಿಗೆ ಭರಪೂರ ಮೆಚ್ಚುಗೆಯೇ ಬಂದಿದ್ದು, ಕಾಮೆಂಟ್ ವಿಭಾಗದಲ್ಲಿ ಮಾಳವಿಕಾ ಮೋಹನನ್ ಸೌಂದರ್ಯವನ್ನು ಅಭಿಮಾನಿಗಳು ವರ್ಣಿಸಿದ್ದಾರೆ.
ಮಾಳವಿಕಾ ಮೋಹನನ್ ಉತ್ತಮ ನಿರೀಕ್ಷೆಗಳೊಂದಿಗೆ ದಕ್ಷಿಣಕ್ಕೆ ಕಾಲಿಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಸೌಂದರ್ಯಕ್ಕೆ ಎಲ್ಲರೂ ಶಾಕ್ ಆಗಿದ್ದಾರೆ. ಮಾಳವಿಕಾ ಮೋಹನನ್ ಅತ್ಯಾಕರ್ಷಕ ಫಿಗರ್ನೊಂದಿಗೆ ಹಾಟ್ ಫೋಟೋ ಶೂಟ್ ಮಾಡುವ ಮೂಲಕ ಟ್ರೆಂಡಿಂಗ್ ಆಗಿದ್ದಾರೆ.
ಮಾಳವಿಕಾ 2013 ರಲ್ಲಿ ಮಲಯಾಳಂನ 'ಪೆಟ್ಟಂ ಪೋಲ್' ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ನಂತರ ಮಾಳವಿಕಾ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಪೇಟಾ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದರು.
ಮಲಯಾಳಂ ನಟಿ ಮಾಳವಿಕಾ ಮೋಹನ್ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಛಾಯಾಗ್ರಾಹಕರಾಗಿ ಕೆಲಸ ಮಾಡಿದ ಮೋಹನನ್ ಅವರ ಮಗಳು ಮಾಳವಿಕಾ.
30 ವರ್ಷದ ಈ ನಟಿ ಮೊದಲ ಬಣ್ಣ ಹಚ್ಚಿದ್ದು, ಮಲಯಾಳಂ ಸಿನಿಮಾಗಳಲ್ಲಿ. ಆನಂತರ ಅವರು ಸೀದಾ ಕಾಲಿಟ್ಟಿದ್ದು ಸ್ಯಾಂಡಲ್ವುಡ್ಗೆ ಕಡೆಗೆ. ಹೊಸ ಪ್ರತಿಭೆ ಪೃಥ್ವಿ ನಟಿಸಿದ್ದ 'ನಾನು ಮತ್ತು ವರಲಕ್ಷ್ಮೀ' ಸಿನಿಮಾ ನಾಯಕಿಯಾಗಿದ್ದರು ಮಾಳವಿಕಾ.