ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಆಧಾರ್ ಲಿಂಕ್ ಆಗಿರುವ ಐಆರ್‌ಸಿಟಿಸಿ ಖಾತೆಯಿಂದ ತಿಂಗಳಿಗೆ ಎಷ್ಟು ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ.
ನವದೆಹಲಿ: ಭಾರತೀಯ ರೈಲ್ವೆ ಟಿಕೆಟ್ ಬುಕಿಂಗ್ ಸಂಬಂಧದ ನಿಯಮಗಳಲ್ಲಿ ಮಹತ್ವದ ಬದಲಾವಣೆಯನ್ನು ತರಲಾಗಿದೆ. ಕೆಲ ದಿನಗಳ ಹಿಂದೆಯಷ್ಟೆ ಮುಂಗಡ ಬುಕ್ಕಿಂಗ್ ಅವಧಿಯನ್ನು 120 ರಿಂದ 60 ದಿನಕ್ಕೆ ಇಳಿಕೆ ಮಾಡಲಾಗಿತ್ತು. ಇದೀಗ ಮತ್ತೊಂದು ನಿಯಮದಲ್ಲಿ ಸಣ್ಣದಾದ ಬದಲಾವಣೆಯಾಗಿದೆ. ಪ್ರಯಾಣಿಕರು ಐಆರ್‌ಸಿಟಿಸಿ ಮೂಲಕ ರೈಲ್ವೆ ಪ್ರಯಾಣದ ಟಿಕೆಟ್‌ಗಳನ್ನು ಬುಕ್ ಮಾಡಬಹುದು. ಇದಕ್ಕಾಗಿ ಮೊದಲು ಐಆರ್‌ಸಿಟಿಸಿ ಗೆ ಲಾಗಿನ್ ಆಗಬೇಕು. ಹಾಗಾದ್ರೆ ತಿಂಗಳಲ್ಲಿ ಒಂದು ಐಡಿಯಿಂದ ಎಷ್ಟು ಟಿಕೆಟ್ ಬುಕ್ ಮಾಡಬಹುದಾ ಗೊತ್ತಾ?
ನಿಮ್ಮ ಐಆರ್‌ಸಿಟಿಸಿ ಅಕೌಂಟ್‌ಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಆಗಿದ್ದರೆ ತಿಂಗಳಿಗೆ 24 ಟಿಕೆಟ್ ಬುಕ್ ಮಾಡಬಹುದಾಗಿದೆ. ಈ ಮೊದಲು ಇದು ಕೇವಲ 12 ಟಿಕೆಟ್‌ಗೆ ಮಾತ್ರ ಸೀಮಿತವಾಗಿತ್ತು. ಇದೀಗ 12 ಟಿಕೆಟ್ ಹೆಚ್ಚಳ ಮಾಡಲಾಗಿದೆ. ಈ ಮೊದಲು ಆಧಾರ್ ಲಿಂಕ್ ಆಗಿರೋ ಖಾತೆ ಮೂಲಕ ಒಂದು ತಿಂಗಳಿಗೆ 12 ಟಿಕೆಟ್ ಬುಕ್ ಮಾಡಬಹುದಾಗಿತ್ತು. ಭಾರತೀಯ ರೈಲ್ವೆಯಲ್ಲಿ ಆಗಾಗ್ಗೆ ಕುಟುಂಬಸ್ದರ ಜೊತೆ ಪ್ರಯಾಣಿಸುವ ವರ್ಗದವರಿಗಾಗಿಯೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ಮೊದಲು ಟಿಕೆಟ್ ಸಂಖ್ಯೆ 12 ಮಾತ್ರವಿದ್ದಾಗ, ಎರಡೆರಡು ಖಾತೆಗಳ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಬೇಕಾಗುತ್ತಿತ್ತು. ಹೊಸ ಬದಲಾವಣೆಯಿಂದ ಇನ್ಮುಂದೆ 24 ಟಿಕೆಟ್ ಬುಕ್ ಮಾಡಲು ಭಾರತೀಯ ರೈಲ್ವೆ ಅವಕಾಶ ನೀಡಿದೆ. ಒಂದು ವೇಳೆ ನೀವು 6ಕ್ಕಿಂತ ಹೆಚ್ಚು ಟಿಕೆಟ್ ಬುಕ್ ಮಾಡಲು ಮುಂದಾದ್ರೆ ಕೆಲ ವಿಶೇಷ ಪ್ರಕ್ರಿಯೆಯನ್ನು ಅನುಸರಿಸಬೇಕಾಗುತ್ತದೆ. ಆಗ ಮಾತ್ರ ನೀವು ಒಂದೇ ಬಾರಿಗೆ ಹೆಚ್ಚಿನ ಟಿಕೆಟ್‌ಗಳನ್ನು ಬುಕ್ ಮಾಡಲು ಸಾಧ್ಯವಾಗುತ್ತದೆ.
ಇದನ್ನೂ ಓದಿ: ರೈಲಿನಲ್ಲಿ ಬೇಲ್‌ಪುರಿ ಆಂಟಿಯ ರೀಲ್ಸ್ ನೋಡಿ ಫಿದಾ ಆದ ಪ್ರಯಾಣಿಕರು; ವಿಡಿಯೋ ನೋಡಿ
ತತ್ಕಾಲ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ
ಕನ್ಫರ್ಮ್ ಸೀಟ್ ಪಡೆಯಲು ಕನಿಷ್ಠ 15 ದಿನ ಮುಂಚಿತವಾಗಿಯೇ ಬುಕ್ ಮಾಡಬೇಕಾಗುತ್ತದೆ. ಆದ್ರೆ ಕೆಲವೊಂದು ಬ್ಯುಸಿ ಟ್ರೈನ್‌ಗಳ ಟಿಕೆಟ್‌ಗಾಗಿ ಕನಿಷ್ಠ 1 ತಿಂಗಳ ಮುಂಚಿತವಾಗಿಯೇ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಆದ್ರೆ ಕೆಲವು ಸಂದರ್ಭಗಳಲ್ಲಿ ತುರ್ತು ಪ್ರಯಾಣದ ಸಂದರ್ಭ ಎದುರಾದರೆ ಪ್ರಯಾಣಿಕರು ತತ್ಕಾಲ್ ಕೌಂಟರ್‌ನಲ್ಲಿ ಕೇವಲ ಒಂದು ಮುಂಚಿತವಾಗಿ ಕನ್ಫರ್ನ್ ಸೀಟ್ ಟಿಕೆಟ್ ಪಡೆದುಕೊಳ್ಳಬಹುದಾಗಿದೆ. ತತ್ಕಾಲ್ ಟಿಕೆಟ್‌ಗಳು ಸಾಮಾನ್ಯ ಟಿಕೆಟ್‌ಗಳಿಗಿಂತ ಹೆಚ್ಚು ಬೆಲೆ ಮತ್ತು ಪ್ರಯಾಣದ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಬುಕ್ ಮಾಡಬಹುದು ಎಂಬುದನ್ನು ನೆನಪಿನಲ್ಲಿಡಿ.
ಒಂದು PNR ನಲ್ಲಿ ಗರಿಷ್ಠ 4 ಪ್ರಯಾಣಿಕರು ತತ್ಕಾಲ್ ಟಿಕೆಟ್ ಬುಕ್ ಮಾಡಬಹುದು. ತತ್ಕಾಲ್ ಎಸಿ ಟಿಕೆಟ್ ಬುಕ್ಕಿಂಗ್ ಬೆಳಗ್ಗೆ 10 ಗಂಟೆಗೆ ಆರಂಭವಾದರೆ, ನಾನ್ ಎಸಿ ಟಿಕೆಟ್ ಬುಕ್ಕಿಂಗ್ ಬೆಳಗ್ಗೆ 11 ಗಂಟೆಗೆ ಆರಂಭವಾಗುತ್ತದೆ. ತತ್ಕಾಲ್ ಟಿಕೆಟ್ ಬುಕಿಂಗ್ ಸಂದರ್ಭದಲ್ಲಿ ಯಾವುದೇ ಮರುಪಾವತಿ ನೀಡಲಾಗುವುದಿಲ್ಲ. ಹಬ್ಬ ಅಥವಾ ರಜಾದಿನಗಳ ಸಂದರ್ಭದಲ್ಲಿ ತತ್ಕಾಲ್ ಟಿಕೆಟ್‌ಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಕೆಲವು ಸಂದರ್ಭದಲ್ಲಿ ಐಆರ್‌ಸಿಟಿಸಿ ವೆಬ್ ಪೇಜ್ ಓಪನ್ ಆಗದೇ ಪ್ರಯಾಣಿಕರು ಸಮಸ್ಯೆ ಎದುರಿಸುತ್ತಾರೆ.
ಇದನ್ನೂ ಓದಿ: ಇದು ಭಾರತದ ಮೊದಲ ಇಂಜಿನ್ ರಹಿತ ರೈಲು; ಗಂಟೆಗೆ 183 km ವೇಗದಲ್ಲಿ ಚಲಿಸೋ ಮಾಯಾಜಿಂಕೆ