
ಬೆಂಗಳೂರು: ಕನ್ನಡದ ಪ್ರತಿಭಾನ್ವಿತ ನಟ ಡಾಲಿ ಧನಂಜಯ್ ಮತ್ತು ಧನ್ಯತಾ ಮದುವೆ ದಿನಾಂಕ ಅಂತಿಮವಾಗಿದೆ. ತುಮಕೂರು ಜಿಲ್ಲೆಯ ಅರಸಿಕೆರೆಯ ಕಾಳೇನಹಳ್ಳಿಯಲ್ಲಿ ಧನಂಜಯ್ ಮತ್ತು ಧನ್ಯತಾ ಲಗ್ನಪತ್ರಿಕೆ ಬರೆಸೋ ಶಾಸ್ತ್ರ ಹಾಗೂ ನಿಶ್ಚಿತಾರ್ಥ ಶಾಸ್ತ್ರದಲ್ಲಿ ಭಾಗಿಯಾಗಿದ್ದಾರೆ. ಮುಂದಿನ ವರ್ಷದ ಅಂದ್ರೆ 16ನೇ ಫೆಬ್ರವರಿ 2025ರಂದು ಧನಂಜಯ್ ಮತ್ತು ಧನ್ಯತಾ ಮದುವೆ ನಡೆಯಲಿದೆ. ಮೈಸೂರಿನ ಎಕ್ಸಿಬಿಷನ್ ಗ್ರೌಂಡ್ ನಲ್ಲಿ ಇಬ್ಬರ ಮದುವೆ ನಡೆಯಲಿದ್ದು, ಧನ್ಯತಾ ಅವರು ವೈದ್ಯೆಯಾಗಿದ್ದಾರೆ. ನವೆಂಬರ್ 1ರಂದು ಡಾಲಿ ಧನಂಜಯ್ ತಾವು ಮದುವೆಯಾಗುತ್ತಿರುವ ಧನ್ಯತಾ ಅವರನ್ನು ಅಭಿಮಾನಿಗಳಿಗೆ ಪರಿಚಯಿಸಿದ್ದರು.
ಡಾಲಿ ಧನಂಜಯ್ ಅವರಿಗೆ ನಿಮ್ಮ ಮದುವೆ ಯಾವಾಗ ಎಂದು ಎಲ್ಲರೂ ಪ್ರಶ್ನೆ ಮಾಡುತ್ತಿದ್ದರು. ಇದಕ್ಕೆ ನಾಚಿಕೊಳ್ಳುತ್ತಲೇ ಡಾಲಿ ಶೀಘ್ರದಲ್ಲಿ ಎಂದು ಹೇಳುತ್ತಿದ್ದರು. ನವೆಂಬರ್ 1ರಂದು ಭಾವಿ ಪತ್ನಿಯನ್ನು ವಿಶೇಷ ಕವನದೊಂದಿಗೆ ಪರಿಚಯಿಸಿದ್ದರು. ಕೆಲವು ವರ್ಷಗಳ ಹಿಂದೆ ಡಾಲಿ ಧನಂಜಯ್ ಮತ್ತು ಧನ್ಯತಾ ಭೇಟಿಯಾಗಿದ್ದರು. ಪರಿಚಯ ಸ್ನೇಹ, ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕೆಲ ವರ್ಷಗಳಿಂದ ಪ್ರೇಮಪಾಶದಲ್ಲಿದ್ದ ಜೋಡಿ ಮದುವೆ ಬಂಧನಕ್ಕೊಳಾಗಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಮದುವೆಗೆ ರೆಡಿಯಾಗಿರುವ ಡಾಲಿ ಧನಂಜಯ್ ಅಂತಿಂಥವರಲ್ಲ, ಹತ್ತನೇ ಕ್ಲಾಸ್‌ನಲ್ಲಿ ಮಾಡಿದ್ದೇನು?
ತುಮಕೂರು ಜಿಲ್ಲೆಯವರಾದ ಧನಂಜಯ್ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದುಕೊಂಡಿದ್ದಾರೆ. ಇನ್ನು ಚಿತ್ರದುರ್ಗ ಮೂಲದವರಾದ ಧನ್ಯತಾ ಸಹ ಮೈಸೂರಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿದ್ದು, ಮಧ್ಯಮ ವರ್ಗದ ಕುಟುಂಬದಿಂದ ಬಂದಿದ್ದಾರೆ. ಕೆಲ ವರ್ಷಗಳಿಂದಪ ಪ್ರೀತಿಯುಲ್ಲಿದ್ದರೂ ಈ ವಿಷಯವನ್ನು ಇಬ್ಬರು ಗುಟ್ಟಾಗಿ ಇರಿಸಿದ್ದರು.
2013ರಲ್ಲಿ ಡೈರೆಕ್ಟರ್ ಸ್ಪೆಷಲ್ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ಡಾಲಿ ಧನಂಜಯ್ ದೈತ್ಯ ಪ್ರತಿಭೆಯಾಗಿ ಬೆಳೆದಿದ್ದಾರೆ. ನಾಯಕ ನಟನಾಗಿ, ಚಿತ್ರ ನಿರ್ಮಾಪಕನಾಗಿಯೂ ಕನ್ನಡ ಚಿತ್ರರಂಗಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ. ಅತ್ಯುತ್ತಮ ನಟನಿಗೆ ನೀಡುವ ಸೈಮಾ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಧನಂಜಯ್‌ಗೆ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಬಡವ ರಾಸ್ಕಲ್ ಅನ್ನೋ ಚಿತ್ರ ನಿರ್ಮಾಣ ಮಾಡುವ ಮೂಲಕವೂ ಸೈ ಎನಿಸಿಕೊಂಡಿದ್ದಾರೆ. ವಿಶೇಷ ಅಂದರೆ ತೆಲುಗು ಹಾಗೂ ತಮಿಳು ಚಿತ್ರದಲ್ಲೂ ಧನಂಜಯ್ ಕೆಲ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ಡಾಲಿ ಮದುವೆ ಫಿಕ್ಸ್.. ಡಾಕ್ಟರ್ ಜೊತೆ ಧನಂಜಯ್ ಕಲ್ಯಾಣ: ಹುಡುಗಿ ಯಾರು ಗೊತ್ತಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.