ಅಪ್ಪಾಜಿಯನ್ನು ನಾನು ಎಂದಿಗೂ ಅನುಕರಿಸಲ್ಲ... ಆದರೆ... ಶಿವರಾಜ್​ಕುಮಾರ್​ ಓಪನ್​ ಮಾತು

By Suchethana D  |  First Published Nov 17, 2024, 12:53 PM IST

ಭೈರತಿ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ನಟ ಶಿವರಾಜ್​ ಕುಮಾರ್​ ಅವರು ತಂದೆ ಡಾ.ರಾಜ್​ಕುಮಾರ್​ ಬಗ್ಗೆ ಆ್ಯಂಕರ್​ ರ‍್ಯಾಪಿಡ್ ರಶ್ಮಿ ಷೋನಲ್ಲಿ  ಹೇಳಿದ್ದೇನು?
 


ನಟ ಶಿವರಾಜ್‌ಕುಮಾರ್‌ ಅವರ ನಟನೆಯ ‘ಭೈರತಿ ರಣಗಲ್‌’ ನಿನ್ನೆ ಬಿಡುಗಡೆಯಾಗಿದ್ದು, ಚೆನ್ನಾಗಿ ಓಡುತ್ತಿದೆ.  ಮಫ್ತಿ ಚಿತ್ರದ ನಂತರದ ಭೈರತಿ ರಣಗಲ್ ಚಿತ್ರದ ಮೇಲೆ ಬಹು ನಿರೀಕ್ಷೆ ಹೊಂದಿರುವ ಅವರು, ಈ ಚಿತ್ರದ  ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಭೈರತಿ ರಣಗಲ್ ಚಿತ್ರವನ್ನ   ನರ್ತನ್ ನಿರ್ದೇಶಿಸಿದ್ದಾರೆ.   ಇದು ಶಿವರಾಜ್‌ ಅವರ ಮಫ್ತಿ ಚಿತ್ರದ ಪ್ರೀಕ್ವೆಲ್ ಚಿತ್ರ ಎನ್ನಲಾಗಿದೆ.  ಭೈರತಿ ರಣಗಲ್ ಚಿತ್ರದಲ್ಲಿ ರುಕ್ಮಿಣಿ ವಸಂತ್ ಇದ್ದಾರೆ. ಅಮೃತಧಾರೆ ಖ್ಯಾತಿಯ ಭೂಮಿಕಾ ಅಂದರೆ ಛಾಯಾ ಸಿಂಗ್ ಕೂಡ ನಟಿಸಿದ್ದಾರೆ. ಇದರ ನಡುವೆಯೇ, ಶಿವರಾಜ್‌ ಕುಮಾರ್‌ ಅವರು ಜಾಹೀರಾತು, ರಿಯಾಲಿಟಿ ಷೋಗಳಲ್ಲಿಯೂ ಬ್ಯುಜಿ ಆಗಿದ್ದಾರೆ. ಇದಾಗಲೇ ಕೆಲವು ಜಾಹೀರಾತುಗಳಿಗೆ ಶಿವಣ್ಣ ರಾಯಭಾರಿಯಾಗಿದ್ದರೆ, ಡಾನ್ಸ್‌ ರಿಯಾಲಿಟಿ ಷೋನಲ್ಲಿ ತೀರ್ಪುಗಾರರಾಗಿದ್ದಾರೆ.  

ಸದ್ಯ ಶಿವರಾಜ್‌ಕುಮಾರ್‌ ಅವರು ಸದ್ಯ  ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಕನ್‌ಫರ್ಮ್ ಮಾಡಿರುವ ಶಿವರಾಜ್‌ ಕುಮಾರ್‌ ಅವರು,  ನನಗೆ ಅನಾರೋಗ್ಯ ಸಮಸ್ಯೆ ಇರುವಂಥದ್ದು ಮುಚ್ಚಿಡುವ ವಿಷಯ ಏನೂ ಅಲ್ಲ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ.  ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ. ಇದೀಗ ಅವರು ಆ್ಯಂಕರ್​ ರ‍್ಯಾಪಿಡ್ ರಶ್ಮಿ ಯೂಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಜೀವನದ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಅವರು ತಮ್ಮ ಕುಟುಂಬ, ಮಕ್ಕಳು, ಪುನೀತ್​ ರಾಜ್​ ಸೇರಿದಂತೆ ಹಲವರ ಬಗ್ಗೆ ಹೇಳಿದ್ದಾರೆ.

Tap to resize

Latest Videos

undefined

ನಾನೊಬ್ಬ ದೊಡ್ಡ ಕುಡುಕ ಎನ್ನುತ್ತಲೇ ಡ್ರಿಂಕ್ಸ್‌ ಮಿಕ್ಸಿಂಗ್‌ ಬಗ್ಗೆ ರಿವೀಲ್‌ ಮಾಡಿದ ಶಿವರಾಜ್‌ಕುಮಾರ್‌: ವಿಡಿಯೋ ವೈರಲ್‌!

ತಂದೆ ಡಾ.ರಾಜ್​ಕುಮಾರ್​ ಅವರ ಆದರ್ಶ, ಅವರ ಜೀವನ ಶೈಲಿ ಇತ್ಯಾದಿಗಳ ಕುರಿತು ಹೇಳಿದ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಆಗ ಶಿವರಾಜ್​ ಕುಮಾರ್​ ಅವರು, ಅನುಕರಣೆಯ ವಿಷಯ ಬಂದಾಗ, ನಾನು ನನ್ನ ತಂದೆಯನ್ನು ಅನುಕರಿಸಲು ಸಾಧ್ಯವೇ ಇಲ್ಲ. ಅವರ ಜೀವನ ಕ್ರಮವನ್ನು ಅನುಸರಿಸಬಹುದು ಅಷ್ಟೇ. ಮಾತ್ರವಲ್ಲದೇ ಅವರಿಂದ ಜೀವನ ಮೌಲ್ಯಗಳನ್ನು ಕಲಿಯುತ್ತೇನೆ. ಆದರೆ ಅವರ ಉಡುವ ಪಂಚೆ... ಇತ್ಯಾದಿಗಳನ್ನು ನಾನು ಅನುಕರಿಸಲು ಸಾಧ್ಯವಿಲ್ಲ.  ಏಕೆಂದರೆ ಅದು ರಾಜ್​ಕುಮಾರ್​ ಅವರಿಗೆ ಮಾತ್ರ ಸೀಮಿತ. ನನ್ನನ್ನು ನೀವು ರಾಜ್​ಕುಮಾರ್​ ಮಾಡಬೇಡಿ. ಆದರೆ ಅವರ ಹೆಸರು ನನ್ನ ಜೊತೆ ಇದೆ. ಅದೇ ನನಗೆ ಸಾಕು ಎಂದು ಹೇಳಿದ್ದಾರೆ.

ನಾನು ಇದೇ ವೇಳೆ ಅಮಿತಾಭ್​ ಬಚ್ಚನ್​ ಮತ್ತು ಕಮಲ ಹಾಸನ್​ ಅವರ ಫ್ಯಾನ್​ ಕೂಡ. ಅವರ ನಟನೆ, ಸ್ಟೈಲ್​ಗೆ ನಾನು ಫಿದಾ ಆಗಿದ್ದೇನೆ. ಹಾಗಂತ ಅವರನ್ನೂ ನಾನು ಅನುಕರಣೆ ಮಾಡಲು ಆಗುವುದಿಲ್ಲ.  ಏಕೆಂದ್ರೆ ಅವ್ರು ನನ್ನ ಬಾಸ್​​ ಅಷ್ಟೇ. ಅದಕ್ಕಾಗಿ ನನ್ನ ಸ್ಟೈಲೇ ಬೇರೆ. ನನ್ನ ಅಟಿಟ್ಯೂಡ್​ ಬೇರೆಯದ್ದೇ ಆಗಿರುತ್ತದೆ. ಆದ್ದರಿಂದ ಯಾರನ್ನೂ ನಾನು ಅನುಕರಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ. 

ಚಿನ್ನದ ವಿಷ್ಯದಲ್ಲಿ ಶಿವಣ್ಣ-ಅಪ್ಪು ಸೇರಿ ಜನರನ್ನು ಕನ್‌ಫ್ಯೂಸ್‌ ಮಾಡ್ತಿದ್ದಾರಾ? ಶಾಕಿಂಗ್‌ ಪ್ರಶ್ನೆಗೆ ನಟ ಹೇಳಿದ್ದೇನು?

click me!