ಬಾಲಿವುಡ್ ನಟಿ ಜಾನ್ವಿ ಕಪೂರ್ ಸಿನಿಮಾಗಳಿಗಿಂತ ಸೋಷಿಯಲ್ ಮೀಡಿಯಾದಲ್ಲಿಯೇ ಒಂದಿಲ್ಲೊಂದು ಕಾರಣಕ್ಕೆ ವೈರಲ್ ಆಗುತ್ತಿರುತ್ತಾರೆ. ಬೋಲ್ಡ್ ಎನಿಸುವ, ಮಾದಕ ಭಾವ ಭಂಗಿಯ ಫೋಟೋಗಳ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. ಇದೀಗ ಮಿನಿ ಸ್ಕರ್ಟ್‌ನಲ್ಲಿ ಮಿಂಚಿದ್ದಾರೆ.
ಬಾಲಿವುಡ್ ನಟಿ ಜಾನ್ವಿ ಕಪೂರ್ ಯಾವಾಗಲೂ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಗ್ಲಾಮರಸ್ ಲುಕ್‌ಗೂ ಸೈ ಎನ್ನುವ ಈ ನಟಿ ಸಾಂಪ್ರದಾಯಿಕ ದಿರಿಸಿನಲ್ಲೂ ಅಷ್ಟೇ ಚೆಂದ.
ಈಗ ಇದೇ ನಟಿ ಮಹಡಿಯ ಮೆಟ್ಟಿಲ ಮೇಲೆ ಮಿನಿ ಸ್ಕರ್ಟ್ ಧರಿಸಿ ಪೋಸ್ ನೀಡಿದ್ದಾರೆ. ಎದೆ ಸೀಳು ಕಾಣುವ ರೀತಿಯಲ್ಲಿ ಪೋಸ್ ನೀಡಿರುವ ಜಾಹ್ವಿ, ಈ ಸರಣಿ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಈ ಮಿನಿ ಉಡುಗೆಯ ನೆಕ್‌ಲೈನ್, ಉಬ್ಬಿದ ತೋಳುಗಳು, ಬಾಡಿಕನ್ ಫಿಟ್ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ. ಈ ಪುಟ್ಟ ಉಡುಗೆಯಲ್ಲಿ ಮಾದಕ ನೋಟ ಬೀರಿದ್ದಾರೆ. ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ನೆರವಿನನಿಂದ ಒಂದು ಜೋಡಿ ಮುತ್ತು ಸ್ಟಡ್ ಕಿವಿಯೋಲೆ, ಡೈಮಂಡ್ ಸ್ಟೇಟ್ಮೆಂಟ್ ಚೈನ್ ನೆಕ್ಲೆಸ್, ಬಿಳಿ ಪಂಪ್ ಹೀಲ್ಸ್ ಧರಿಸಿದ್ದಾರೆ.
ನಟಿಯ ಈ ಹಾಟ್ ಫೋಟೋಗಳಿಗೆ ಸಾವಿರಾರು ಕಾಮೆಂಟ್‌ಗಳು ಹರಿದು ಬಂದಿವೆ. ಅಂದ ವರ್ಣಿಸುವ ಭರದಲ್ಲಿ ಪೋಲಿ ಪ್ರತಿಕ್ರಿಯೆಗಳೇ ತುಂಬಿವೆ. ಅಂದಹಾಗೆ, ಈ ಮಿನಿ ಉಡುಗೆಯ ಬೆಲೆಯೂ ಅಷ್ಟೇ ಕಾಸ್ಟ್ಲೀ. ಡಿಸೈನರ್ ಬ್ರಾಂಡ್ ಅಲೆಸ್ಸಾಂಡ್ರಾ ರಿಚ್ ಅವರ ಈ ಉಡುಗೆಯ ಬೆಲೆ ಬರೋಬ್ಬರಿ 1 ಲಕ್ಷ 86 ಸಾವಿರ ರೂಪಾಯಿಗಳು.
ಸದ್ಯ ಪ್ಯಾನ್ ಇಂಡಿಯಾ ಸ್ಟಾರ್ ಜೂನಿಯರ್ ಎನ್ಟಿಆರ್ಗೆ ಜಾನ್ವಿ ಕಪೂರ್ ಹೀರೋಯಿನ್ ಆಗಿದ್ದು, ದೇವರ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗಿದೆ. ದೇವರ ಸಿನಿಮಾದಲ್ಲಿ ನಟಿಯ ಫಸ್ಟ್ ಲುಕ್ ರಿಲೀಸ್ ಆಗಿದೆ. ಜಾನ್ವಿ ತಂಗಂ ಎನ್ನುವ ಪಾತ್ರದಲ್ಲಿ ನಟಿಸಲಿದ್ದಾರೆ.
ಈ ಸಿನಿಮಾ ಹೊರತಾಗಿ ಜಾನ್ವಿಗೆ ತೆಲುಗಿನಲ್ಲಿ ಮತ್ತೊಂದು ಆಫರ್ ಬಂದಿದೆಯಂತೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ನಿರ್ದೇಶಕ ಬುಚ್ಚಿಬಾಬು ಸನಾ ನಿರ್ದೇಶನದ ಚಿತ್ರಕ್ಕೆ ನಾಯಕಿಯಾಗಿ ಜಾನ್ವಿ ಕಪೂರ್ ಆಯ್ಕೆ ಆಗಿದ್ದಾರೆ ಎನ್ನಲಾಗ್ತಿದೆ.