ಕೆಂಪಕ್ಕಿ vs ಬಿಳಿ ಅಕ್ಕಿ: ಬೇಗ ಹಾಳಾದ್ರೂ ಇದ್ರಲ್ಲಿ ಸಿಗೋ ಫೈಬರ್ ಅಷ್ಟಿಷ್ಟಲ್ಲ!

By Suvarna NewsFirst Published Oct 3, 2024, 5:19 PM IST
Highlights

ಕೆಂಪಕ್ಕಿ ಮತ್ತು ಬಿಳಿ ಅಕ್ಕಿ ಎರಡೂ ಒಂದೇ ತಳಿಯ ಭತ್ತದಿಂದ ಬಂದರೂ, ಅವುಗಳ ಪೌಷ್ಟಿಕಾಂಶದ ಮೌಲ್ಯದಲ್ಲಿ ಗಮನಾರ್ಹ ವ್ಯತ್ಯಾಸಗಳಿವೆ. ಕೆಂಪಕ್ಕಿಯಲ್ಲಿ ಹೆಚ್ಚಿನ ಫೈಬರ್, ಖನಿಜಗಳು ಮತ್ತು ಜೀವಸತ್ವಗಳಿದ್ದು, ಇದು ಹೃದ್ರೋಗ, ಮಧುಮೇಹ ಮತ್ತು ಇತರ ಜೀವನಶೈಲಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಅತ್ಯಧಿಕ ಫೈಬರ್ ಹಾಗೂ ಪೋಷಕಾಂಶಗಳು ಅಧಿಕವಾಗಿರೋ ಕೆಂಪಕ್ಕಿಯನ್ನೇನೂ ವಿಶೇಷವಾಗಿ ಮಾಡಿರೋಲ್ಲ. ನಾರ್ಮಲ್ ಆಗಿಯೇ ಬೆಳೆಯೋ ಅಕ್ಕಿಗೆ ಸ್ವಲ್ಪ ಕಡಿಮೆ ಪಾಲಿಶ್ ಕೊಡಿಸಲಾಗುತ್ತದೆ ಅಷ್ಟೇ. ಮತ್ತೊಂದು ಲೇಯರ್ ತೆಗೆದರೆ ಅದು ಬಿಳಿ ಅಕ್ಕಿಯೇ ಆಗಿಬಿಡುತ್ತೆ. ಆದರೆ, ಅಕ್ಕಿಯ ಒಂದು ಲೇಯರ್ ಹೆಚ್ಚು ತೆಗೆಯೋದ್ರಿಂದ ಅಕ್ಕಿಯಲ್ಲಿರುವ ಎಲ್ಲ ಸತ್ವಗಳೂ ಕಳೆದು ಹೋಗುತ್ತದೆ ಎಂಬುವುದು ಮಾತ್ರ ಅತ್ಯಂತ ದುಃಖದ ವಿಷಯ. 

ಬಿಳಿ ಅಕ್ಕಿ ದುಬಾರಿ ಮಾತ್ರವಲ್ಲ, ಹೆಚ್ಚು ಕಾಲ ಸಂಗ್ರಹಿಸಲು ಯೋಗ್ಯ ಮತ್ತು ಮಾಡುವುದು ಸುಲಭ ಎಂಬ ಕಾರಣಕ್ಕೆ ಜನರು ಇದನ್ನು ಹೆಚ್ಚು ಪ್ರಿಫರ್ ಮಾಡುತ್ತಾರಾದಾರೂ, ಕೆಂಪಕ್ಕಿ ತಿನ್ನೋರಲ್ಲಿ ಹೃದ್ರೋಗ, ಅಧಿಕ ರಕ್ತದೊತ್ತಡ, ಮಧುಮೇಹದಂತೆ ಜೀವನಶೈಲಿ ಸಂಬಂಧಿ ರೋಗಗಳು ಕಾಣಿಸಿಕೊಳ್ಳುವುದೇ ಇಲ್ಲವೆಂಬುವುದೂ ಅಷ್ಟೇ ಸತ್ಯ. 

Latest Videos

ಕೆಂಪಕ್ಕಿ ತಯಾರಿಸೋದು ಹೇಗೆ? 
ಏಷ್ಯನ್ ಕೃಷಿ ಅಕ್ಕಿ ಎಂದು ಸಾಮಾನ್ಯವಾಗಿ ಕರೆಯಲ್ಪಡುವ ಒರಿಜಾ ಸಟಿವಾ ಎಂಬ ಭತ್ತದ ತಳಿ ಭಾರತದಲ್ಲಿ ಬೆಳೆಯೋದು ಕಾಮನ್. ಇದರಲ್ಲಿ  ಗ್ಲಾಬೆರಿಮಾ, ಆಫ್ರಿಕನ್ ಅಕ್ಕಿ ಎಂಬ ಬೇರೆ ಬೇರೆ ತಳಿಗಳೂ ಇವೆ. ಇದನ್ನು13,500 ರಿಂದ 8,200 ವರ್ಷಗಳ ಹಿಂದೆಯೇ ಚೀನಾದ ಯಾಂಕ್ಟಿ ನದಿಯ ಜಲಾನಯನ ಪ್ರದೇಶದಲ್ಲಿ ಬೆಳೆಯಲಾಗುತ್ತಿತ್ತು.

ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಆಹಾರ, ಶುಗರ್ ಪೇಷೆಂಟ್ಸ್‌ಗೆ ಡಯಟ್ ಟಿಪ್ಸ್!

ಈ ಒರಿಜಾ ಸಟಿವಾ ತಳಿಯಿಂದಲೇ ಬಿಳಿ ಹಾಗೂ ಕೆಂಪಕ್ಕಿ ಎರಡನ್ನೂ ತಯಾರಿಸುತ್ತಾರೆ. ಕಟಾವು ಆದ ಭತ್ತವನ್ನು ಅಕ್ಕಿ ಮಾಡಿಸುತ್ತಾರೆ. ಅಲ್ಲಿಯೇ ಈ ಬೇರೆ ಬೇರೆ ಬಣ್ಣದ ಅಕ್ಕಿಗಳು ತಯರಾಗೋದು. ಮಿಲ್ಲಿಂಗ್ ಪ್ರಕ್ರಿಯೆ ವಿಭಿನ್ನವಾಗಿರೋದರಿಂದ ಬಣ್ಣದ ಜೊತೆ, ಅದರ ಕ್ವಾಲಿಟಿ, ರುಚಿ ಹಾಗೂ ಪೋಷಕಾಂಶಗಳ ಕಾರಣದಿಂದ ವಿಭಿನ್ನ ರುಚಿ ಪಡೆದುಕೊಳ್ಳುತ್ತದೆ. 

ಭತ್ತದ ಹೊರಗಿನ ಒಂದು ಲೇಯರ್ ಮಾತ್ರ ತೆಗೆದಾಗ ಬ್ರೌನ್ ರೈಸ್ ಅಂದ್ರೆ ಕೆಂಪಕ್ಕಿಯಾಗುತ್ತದೆ. ಆದರೆ, ಭತ್ತದಲ್ಲಿ ಮತ್ತೊಂದು ಲೇಯರ್ ತೆಗೆದರೂ ಅಕ್ಕಿ ಬಣ್ಣವೇ ಬೇರೆ ಆಗುವುದರೊಂದಿಗೆ ಭತ್ತದ ಬ್ರೌನ್ ಪದರದಲ್ಲಿರುವ ಫೈಬರ್, ಖನಿಜಾಂಶ ಸೇರಿ ಪೋಷಕಾಂಶಗಳೇ ಮಾಯವಾಗುತ್ತದೆ. ಅದಕ್ಕೆ ಪೌಷ್ಠಿಕಾಂಶಗಳ ಆಗರವಾಗಿರುವ ಕೆಂಪಕ್ಕಿಯೇ ಆರೋಗ್ಯಕ್ಕೆ ಒಳ್ಳೇದು. ಅಕ್ಕಿಯ ಮೇಲ್ಪದರವನ್ನು ಬಿಳಿ ಅಕ್ಕಿ ಮಾಡಲು ತೆಗೆಯುವುದರಿಂದ ನೋಡಲು ಚಂದ ಅನಿಸಿದರೂ ಇರಬೇಕಾದ ಸತ್ವವೂ ಹೊರಟು ಹೋಗುತ್ತದೆ. 

 

ಬ್ರೌನ್ ರೈಸ್ ಎಂಬ ಮುಗಿಯದ ಕೌತುಕ
-  ಈ ಬ್ರೌನ್ ರೈಸ್ ಅನ್ನು 9,000 ವರ್ಷಗಳಿಗೂ ಹೆಚ್ಚು ಕಾಲದಿಂದಲೂ ಬೆಳೆಯುತ್ತಿದ್ದು, ವರ್ಷಗಳಿಂದಲೂ ದಿನನಿತ್ಯ ಆಹಾರದ ಭಾಗವಾಗಿದೆ.
- ಒಂದು ಕಪ್ ಕೆಂಪಕ್ಕಿಯಲ್ಲಿ 3.5 ಗ್ರಾಂ ಫೈಬರ್ ಇದ್ದರೆ,  ಬಿಳಿ ಅಕ್ಕಿಯಲ್ಲಿ ಒಂದು ಗ್ರಾಂ ಗಿಂತ ಕಡಿಮೆ ಫೈಬರ್ ಇರುತ್ತದೆ.
- ಕೈಗಾರಿಕಾ ಕ್ರಾಂತಿ ವೇಳೆ ಮಾತ್ರ ಶುದ್ಧೀಕರಣ ಪ್ರಕ್ರಿಯೆ ಅಭಿವೃದ್ಧಿಗೊಂಡು, ಅಕ್ಕಿ ಬಣ್ಣವೇ ಬದಲಾಗಲು ಶುರುವಾಯಿತು.
-  ಸತ್ವ ಹೆಚ್ಚಿರೋ ಕೆಂಪಕ್ಕಿ ಬೇಗ ಹಾಳಾಗುವುದು ಹೌದಾದರೂ, ಸರಿಯಾಗಿ ಸಂಗ್ರಹಿಸಿಟ್ಟರೆ ಹೆಚ್ಚು ಕಾಲ ಬರುತ್ತದೆ ಅನ್ನೋದ್ರಲ್ಲಿ ಡೌಟಿಲ್ಲ. 
-  ಕೆಂಪಕ್ಕಿ ಅನ್ನ, ಗಂಜಿ ಮಾಡೋದು ತುಸು ಕಷ್ಟ. ಆದರೆ, ರುಚಿ ಮಾತ್ರ ಯಾವುದಕ್ಕೂ ಸಮಾನವಲ್ಲ. 
- ಊಟ ಮಾಡಿದ ಮೇಲೆ ಹಿತ ಎನಿಸುವ ಫೀಲ್ ಆಗುವುದಾದರೆ ಅದು ಕೆಂಪಕ್ಕಿ ಅನ್ನ ತಿಂದರೆ ಮಾತ್ರ. 
 - ಬ್ರೌನ್ ರೈಸಲ್ಲಿ  ಬಿಳಿ ಅಕ್ಕಿಗಿಂತ 80% ಹೆಚ್ಚು ಪೋಷಕಾಂಶಗಳಿವೆ. ಅದಕ್ಕೇ ಇದು ಆರೋಗ್ಯಕರ.  
- ಒಂದು ಕಪ್ ಬ್ರೌನ್ ರೈಸ್ ಸೇವಿಸಿದರೆ ನಮ್ಮ ಶರೀರಕ್ಕೆ ಅಗತ್ಯ ಖನಿಜ ಮ್ಯಾಂಗನೀಸ್ ಸಿಗುತ್ತದೆ. 
- ಮೂಳೆಯನ್ನು ಗಟ್ಟಿಯಾಗಿಡಲು, ಜೀರ್ಣಕ್ರಿಯೆಗೆ ಮ್ಯಾಂಗನೀಸ್ ಅತ್ಯಗತ್ಯ.
- ಕೆಂಪಕ್ಕಿ ರೋಗನಿರೋಧಕ ಶಕ್ತಿ ಹೆಚ್ಚಿಸಿ, ಒಟ್ಟಾರೆ ಶರೀರವನ್ನು ಆರೋಗ್ಯವಾಗಿಡುತ್ತದೆ.
- ಗ್ಲುಟನ್ ಅಂಶವಿಲ್ಲದ ಕೆಂಪಕ್ಕಿ ಹೊಟ್ಟೆ ಸಂಬಂಧಿ ಸಮಸ್ಯೆ ಇರೋರಿಗೆ ತುಂಬಾ ಒಳ್ಳೆಯದು. 
- ಆಹಾರ ಅಲರ್ಜಿ ಇರೋರಿಗೂ ಕೂಡ ಇದೇ ಬೆಸ್ಟ್.

ಅಕ್ಕಿ ಸೇವಿಸಿಯೂ ಕ್ಯಾಲೊರಿ ಕಂಟ್ರೋಲ್ ಮಾಡುವುದು ಹೇಗೆ?

ಬ್ರೌನ್ ರೈಸ್ ವಿಭಿನ್ನ ತಳಿಗಳಲ್ಲಿಯೂ ಲಭ್ಯ. ಪ್ರತಿಯೊಂದು ರೀತಿಯ ಧಾನ್ಯದ ಆಕಾರ, ರುಚಿ ಭಿನ್ನ. ತಿನ್ನಲು ಸುಲಭವಾಗಿ, ಸ್ವಲ್ಪ ಸ್ವಲ್ಪ ಅಂಟಿಕೊಳ್ಳೋದ್ರಿಂದ ಹಿಡಿದು ಒಣಗಿರೋವರೆಗೂ ಹಲವು ರೀತಿಯಲ್ಲಿವೆ. ಬ್ರೌನ್ ಪದರಗಳಿಂದ ಈ ಅಕ್ಕಿ ಬೇಯಲು ಟೈಂ ತೆಗೆದುಕೊಳ್ಳುವುದು ಹೌದು. ಸಾಮಾನ್ಯವಾಗಿ ಬ್ರೌನ್ ರೈಸ್ ಬೇಯಲು 45 ನಿಮಿಷದಿಂದ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತದೆ. ಅದೇ ಬಿಳಿ ಅಕ್ಕಿ ಕೇವಲ 15 ರಿಂದ 20 ನಿಮಿಷಗಳಲ್ಲಿ ಬೇಯಿಸಬಹುದು. 

click me!