ಟೀ ಮಾಡಲು ಪುಡಿಯೊಂದಿಗೆ ಹಾಕಲು ಅನೇಕ ರೀತಿಯ ಮಸಾಲೆಗಳಿವೆ. ಮತ್ತಷ್ಟು ವಿಭಿನ್ನ ಎನಿಸೋ ಟೀ ರೆಸಿಪಿ ಇಲ್ಲಿವೆ.
ಶುಂಠಿ, ಎಲಕ್ಕಿ ಹಾಕಿ ಮಾಡುವ ಮಸಾಲೆ ಟೀ ರುಚಿ ಎಲ್ಲರಿಗೂ ಗೊತ್ತು. ಆದರೆ, ವಿಭಿನ್ನವಾದ ಮತ್ತೊಂದಿಷ್ಟು ರುಚಿ ಸವಿಯಲು ಇಲ್ಲಿವೆ ರೆಸಿಪಿ. ಎಲ್ಲವುಕ್ಕಿಂತ ವಿಭಿನ್ನವಾದ ಸೊಗಸಾದ ಪರಿಮಳದೊಂದಿಗೆ ರುಚಿ ನೀಡುವ ಟೀ ರೆಸಿಪಿಯೊಂದನ್ನು ಇಲ್ಲಿ ಹೇಳುತ್ತಿದ್ದೇವೆ.
ಮಲ್ಲಿಗೆ ಹೂವಿನ ಚಹಾ ಅಥವಾ ಜಾಸ್ಮಿನ್ ಟೀ ಬಗ್ಗೆ ಕೇಳಿದ್ದೀರಾ? ಒಣಗಿಸಿದ ಮಲ್ಲಿಗೆ ಹೂವಿನ ಪುಡಿಯನ್ನು ಇದಕ್ಕಾಗಿ ಬಳಸಬಹುದು. ಈ ಹೂವಿನ ಚಹಾ ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಕಡಿಮೆಯೇನಲ್ಲ. ಹೃದಯದ ಆರೋಗ್ಯಕ್ಕೂ ಒಳ್ಳೆ ಫ್ಲೇವನಾಯ್ಡ್ ಮತ್ತು ಆಂಟಿಆಕ್ಸಿಡೆಂಟ್ ಅಂಶ ಹೊಂದಿದೆ ಮಲ್ಲಿಗೆ ಹೂವಿನ ಚಹಾ. ಈ ಚಹಾ ಕುಡಿಯುವವರಲ್ಲಿ ಹೃದ್ರೋಗ ಬರುವ ಸಾಧ್ಯತೆ ಕಡಿಮೆ ಎಂದು ಅಧ್ಯಯನಗಳು ಹೇಳುತ್ತವೆ. ಈಗ ಮಲ್ಲಿಗೆ ಚಹಾವನ್ನು ಹೇಗೆ ತಯಾರಿಸುವುದು ಎಂದು ನೋಡೋಣ.
ನೀವು ಪಾಸ್ತಾ ಪ್ರಿಯರಾಗಿದ್ರೆ ಒಮ್ಮೆಯಾದ್ರೂ ಈ 7 ಪಾಸ್ತಾಗಳ ರುಚಿ ನೋಡಲೇಬೇಕು
undefined
ಬೇಕಾಗುವ ಸಾಮಗ್ರಿಗಳು
ಒಣಗಿಸಿದ ಮಲ್ಲಿಗೆ ಹೂವು 100 ಗ್ರಾಂ
ಚಹಾ ಪುಡಿ 1 ಚಮಚ
ನೀರು 2 ಗ್ಲಾಸ್
ಸಕ್ಕರೆ / ಜೇನುತುಪ್ಪ 2 ಚಮಚ
ಪಾಲಕ್ ಸೊಪ್ಪಿನ ಹಲವು ಅದ್ಭುತ ಆರೋಗ್ಯ ಪ್ರಯೋಜನಗಳಿವು
ತಯಾರಿಸುವ ವಿಧಾನ
ಚೆನ್ನಾಗಿ ಒಣಗಿಸಿದ ಮಲ್ಲಿಗೆ ಹೂವು ಮಾರುಕಟ್ಟೆಯಲ್ಲಿ ಸಿಗುತ್ತವೆ. ಇಲ್ಲದಿದ್ದರೆ ನಾವು ಸಾಮಾನ್ಯ ಮಲ್ಲಿಗೆ ಹೂವನ್ನು ಚೆನ್ನಾಗಿ ಒಣಗಿಸಿಕೊಳ್ಳಬಹುದು. ಪರಿಮಳ ಹೋಗದೆ, ಅದರ ಸುವಾಸನೆ ಕಡಿಮೆಯಾಗದಂತೆ ಏರ್ ಟೈಟ್ ಮುಚ್ಚಳ ಇರೋ ಡಬ್ಬಿಯಲ್ಲಿಡಬೇಕು. ಹೀಗೆ ಖರೀದಿಸಿದ ಮಲ್ಲಿಗೆ ಹೂವಿನಿಂದ ಸ್ವಲ್ಪ ಹೂಗಳನ್ನು ನೀರಿಗೆ ಹಾಕಿ 5 ನಿಮಿಷ ಮುಚ್ಚಿಟ್ಟು, ನಂತರ ಚೆನ್ನಾಗಿ ಕುದಿಸಿ. ಅದಕ್ಕೆ ಚಹಾ ಪುಡಿ ಸೇರಿಸಿ. ನಂತರ ಸಕ್ಕರೆ ಅಥವಾ ಜೇನುತುಪ್ಪ ಸೇರಿಸಿ ಚೆನ್ನಾಗಿ ಕುಲಕಿ. ನಂತರ ಶೋಧಿಸಿ ಕುಡಿಯಬಹುದು.