ಡಯಟ್​, ವರ್ಕ್​ಔಟ್​ನಿಂದ ತೂಕ ಕಡಿಮೆ ಆಗ್ಲಿಲ್ಲ... ಅಸಲಿ ವಿಷಯವೇ ಬೇರೆ ಇತ್ತು: ವಿದ್ಯಾ ಬಾಲನ್​ ಓಪನ್​ ಮಾತು

By Suchethana D  |  First Published Oct 29, 2024, 6:58 PM IST

ಡಯಟ್​, ವರ್ಕ್​ಔಟ್ ಏನೇ ಮಾಡಿದರೂ ತೂಕ ಕಡಿಮೆ ಆಗುತ್ತಿರಲಿಲ್ಲ ಎಂದು ಚಿಂತೆಗೊಳಗಾಗಿದ್ದ ವಿದ್ಯಾ ಬಾಲನ್​ ಅವರಿಗೆ ಅಸಲಿ ವಿಷಯ ತಿಳಿದು ಅಚ್ಚರಿಗೊಂಡಿದ್ದರು!
 


ನಟಿಯರು ಎಂದರೆ ತೆಳ್ಳಗೆ, ಬೆಳ್ಳಗೆ ಇರಬೇಕು ಎನ್ನುವ ಕಲ್ಪನೆ ಇದೆ. ಇದೇ ಕಾರಣಕ್ಕೆ ತಮ್ಮ ದೇಹವನ್ನು ಮೆಂಟೇನ್​ ಮಾಡಲು, ಸಿನಿ ಇಂಡಸ್ಟ್ರಿಯಲ್ಲಿ ತಮ್ಮತನವನ್ನು ಕಾಪಾಡಿಕೊಳ್ಳಲು ತಾರೆಯರು ಮಾಡುವ ಸರ್ಕಸ್​ ಅಷ್ಟಿಷ್ಟಲ್ಲ. ಸ್ವಲ್ಪ ತೂಕದಲ್ಲಿ ಏರಿಕೆ ಆದರೂ ಸಾರ್ವಜನಿಕ ಸ್ಥಳಗಳಲ್ಲಿ ಬಾಡಿ ಷೇಮಿಂಗ್​ ಎದುರಿಸುವುದು ಒಂದೆಡೆಯಾದರೆ, ಸಿನಿಮಾಗಳಲ್ಲಿ ಅವಕಾಶಗಳು ಕಡಿಮೆಯಾಗುತ್ತಾ ಹೋಗುತ್ತವೆ. ಆದರೆ ದಿಢೀರ್​ ತೂಕ ಏರಿಸಿಕೊಂಡರೂ ಬಾಲಿವುಡ್​ ನಟಿ ವಿದ್ಯಾ ಬಾಲನ್​ ಅವರಿಗೆ ಅವಕಾಶಗಳೇನೂ ಕಡಿಮೆಯಾಗಿಲ್ಲ. ಆದರೆ ತಾವು ತೂಕ ಇಳಿಸಿಕೊಳ್ಳಲು ಜೀವನಪೂರ್ತಿ ಹೇಗೆ ಹೆಣಗಾಡಿದ್ದೆವು ಎನ್ನುವ ಬಗ್ಗೆ ಇದೀಗ ನಟಿ ಸಂದರ್ಶನವೊಂದರಲ್ಲಿ ರಿವೀಲ್​ ಮಾಡಿದ್ದಾರೆ.
 
ತೂಕವನ್ನು ಕಡಿಮೆ ಮಾಡಲು  ಜೀವಮಾನದ ಹೋರಾಟ ಮಾಡಿದೆ ಎಂದಿದ್ದಾರೆ ನಟಿ. “ನಿಮಗೆ ಗೊತ್ತಾ, ನನ್ನ ಜೀವನದುದ್ದಕ್ಕೂ, ನಾನು ತೆಳ್ಳಗಾಗಲು ಹೆಣಗಾಡಿದ್ದೇನೆ. ನಾನು ಹುಚ್ಚಿಯಂತೆ ಡಯಟ್ ಮಾಡಿದ್ದೇನೆ, ವ್ಯಾಯಾಮ ಮಾಡಿದ್ದೇನೆ ಮತ್ತು ಆ ಸಮಯದಲ್ಲಿ ಕೆಲವೊಮ್ಮೆ ನಾನು ತೂಕವನ್ನು ಕಳೆದುಕೊಂಡರೂ ಮತ್ತೆ ದಪ್ಪಗಾಗುತ್ತಿದ್ದೆ.  ಈ ವರ್ಷದ ಆರಂಭದಲ್ಲಿ ಅವರು ಚೆನ್ನೈನಲ್ಲಿರುವ ಅಮುರಾ ಹೆಲ್ತ್ ಎಂಬ ಪೌಷ್ಟಿಕಾಂಶದ ಗುಂಪಿನೊಂದಿಗೆ ಸಂಪರ್ಕ ಸಾಧಿಸಿದಾಗ ಅಸಲಿ ವಿಷಯ ಏನು ಎನ್ನುವುದು ಗೊತ್ತಾಯಿತು. ನನ್ನಲ್ಲಿರುವ ಸಮಸ್ಯೆ ಡಯೆಟ್​, ವ್ಯಾಯಾಮ, ವರ್ಕ್​ಔಟ್​ ಯಾವುದರಿಂದಲೂ ಸಾಧ್ಯವಿಲ್ಲ ಎನ್ನುವುದು ತಿಳಿಯಿತು. ನನ್ನ ಸಮಸ್ಯೆಗೆ ಕಾರಣವಾಗಿದ್ದು  ಹೆಚ್ಚುವರಿ ಕೊಬ್ಬು ಅಲ್ಲವೇ ಅಲ್ಲ, ಬದಲಿಗೆ  ಉರಿಯೂತ. ಆದರೆ ನಾನು ಕೊಬ್ಬನ್ನು ಇಳಿಸಿಕೊಳ್ಳಲು ವರ್ಕ್​ಔಟ್​ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.

ನೃತ್ಯ ಮಾಡುತ್ತಲೇ ವೇದಿಕೆ ಮೇಲೆ ಕುಸಿದು ಬಿದ್ದ ನಟಿ ವಿದ್ಯಾ ಬಾಲನ್​! ಶಾಕಿಂಗ್​ ವಿಡಿಯೋ ವೈರಲ್​

Tap to resize

Latest Videos

undefined

ಉರಿಯೂತದ ಸಮಸ್ಯೆಯನ್ನು ಕಡಿಮೆಗೊಳಿಸುವುದಕ್ಕಾಗಿ ನನಗೆ ಕೆಲವೊಂದು ಆಹಾರ ಪದ್ಧತಿಯನ್ನು ಹೇಳಲಾಗಿದೆ. ಅದನ್ನು ಫಾಲೋ ಮಾಡುತ್ತಿದ್ದೇನೆ. ಹಿಂದಿಗಿಂತಲೂ ತೂಕದಲ್ಲಿ ಕ್ರಮೇಣ ಕಡಿಮೆಯಾಗುತ್ತಿದ್ದೇನೆ ಎಂದರು.  ಜೀವಮಾನವಿಡೀ ನಾನು ಸಸ್ಯಾಹಾರಿಯೇ. ಆದರೆ ಪಾಲಕ್ ಮತ್ತು  ಸೋರೆಕಾಯಿಯಂತಹ ಆರೋಗ್ಯಕರ ತರಕಾರಿಗಳು ಸಹ ನನ್ನ ದೇಹಕ್ಕೆ ಪ್ರತಿಕೂಲವಾಗಬಹುದು ಎಂಬುದು ಆಗಲೇ ಅರಿತೆ ಎಂದಿದ್ದಾರೆ.  

ಈಗ ತೂಕ ಇಳಿಸಿಕೊಳ್ಳುವ ಪರಿಯೇ ಬದಲಾಗಿದೆ.  ಜಿಮ್‌, ವರ್ಕ್​ಔಟ್​ ಎಲ್ಲಾ ಬಿಟ್ಟಿದ್ದೇನೆ. ನನ್ನ ಉರಿಯೂತಕ್ಕೆ ಕಾರಣ ಕಂಡುಕೊಂಡು ಆಹಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದೇನೆ ಎಂದಿದ್ದಾರೆ. ಅಂದಹಾಗೆ, ಉರಿಯೂತವೆಂದರೆ ದೇಹದೊಳಗಡೆ ನಡೆಯುವಂತಹ ನಮಗೆ ಕಾಣಸದೆ ಇರುವಂತಹ ಕ್ರಿಯೆ. ಉರಿಯೂತವು ಹಲವಾರು ಕಾರಣಗಳಿಂದಾಗಿ ದೇಹದಲ್ಲಿ ಉಂಟಾಗುವುದು.   ಹೊಟ್ಟೆ ಉಬ್ಬರ, ಹೊಟ್ಟೆ ನೋವು, ಗಂಟು ನೋವು ಮತ್ತು ಸ್ನಾಯುಗಳಲ್ಲಿನ ಊತದಿಂದಾಗಿ ಉರಿಯೂತವು ಬರುವುದು ಸಾಮಾನ್ಯವಾಗಿದೆ. ಆರೋಗ್ಯಕಾರಿ ಆಹಾರ ಕ್ರಮ ಪಾಲಿಸಿಕೊಂಡು, ಉರಿಯೂತ ನಿವಾರಣೆ ಮಾಡುವಂತಹ ಆಹಾರವನ್ನು ಸೇವನೆ ಮಾಡಿದರೆ, ಅದರಿಂದ ಉರಿಯೂತವು ಕಡಿಮೆ ಆಗುವುದು. ಸಂಸ್ಕರಿತ ಆಹಾರ ಮತ್ತು ಕೆಲವು ಆರೋಗ್ಯಕಾರಿ ಅಭ್ಯಾಸಗಳಿಂದಲೂ ಉರಿಯೂತ ಹೆಚ್ಚಾಗಬಹುದು. ನಮ್ಮ ದೇಹಕ್ಕೆ ಆಗದ ಪದಾರ್ಥಗಳ ಸೇವನೆಯಿಂದಲೂ ಇದು ಕಾರಣವಾಗಬಲ್ಲದು. ಇದನ್ನು ಅರಿತು ಆಹಾರ ಕ್ರಮಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. 

ಕಾಸ್ಟಿಂಗ್​ ಕೌಚ್​, ಲೈಂಗಿಕ ದೌರ್ಜನ್ಯದ ಅನುಭವ ಹೇಳುವ ನಟಿಯರಿಗೆ ವಿದ್ಯಾ ಬಾಲನ್ ತಿರುಗೇಟು! ಭಾರಿ ಚರ್ಚೆ

click me!