ಬಿಳಿ ಬ್ರಾ ತಯಾರಾಗಿದ್ದು ಹೇಗೆ? ಒಳ ಉಡುಪು ಕೊಳ್ಳೋ ಮುನ್ನ ಗೊತ್ತಿರಬೇಕಾದ ವಿಷಯ

By Suvarna NewsFirst Published May 9, 2024, 6:47 PM IST
Highlights

ಬಣ್ಣ ಬಣ್ಣದ ಬ್ರಾ ಈಗ ಮಾರುಕಟ್ಟೆಯಲ್ಲಿದೆ. ಬಿಳಿ ಬ್ರಾ ಸ್ವಲ್ಪ ಆಕರ್ಷವಾಗಿ ಕಾಣೋದು ಸತ್ಯವಾದ್ರೂ ಎಲ್ಲ ಬಟ್ಟೆಗೆ ಇದು ಹೊಂದಿಕೊಳ್ಳೋದಿಲ್ಲ. ಬಿಳಿ ಬ್ರಾ ಧರಿಸುವ ಮೊದಲು ಅದಕ್ಕೆ ಸಂಬಂಧಿಸಿದ ಕೆಲ ಮಾಹಿತಿ ನಿಮಗೆ ತಿಳಿದಿರಲಿ.
 

ಬ್ರಾ, ಮಹಿಳೆಯರ ದೈನಂದಿನ ಜೀವನದ ಒಂದು ಭಾಗವಾಗಿದೆ. ಪ್ರತಿ ದಿನ ಮಹಿಳೆಯರು ಬ್ರಾ ಧರಿಸುತ್ತಾರೆ. ಅವರ ಡ್ರೆಸ್ ಗೆ ತಕ್ಕಂತೆ ಅವರು ಬ್ರಾ ಖರೀದಿ ಮಾಡ್ತಾರೆ. ಬ್ರಾ ವಿರೋಧಿ ಸಂಘ ಕೂಡ ನಮ್ಮಲ್ಲಿದೆ. ಕೆಲವರು ಬ್ರಾ ಧರಿಸೋದನ್ನು ವಿರೋಧಿಸೋದಲ್ಲದೆ ತಾವು ಬ್ರಾ ಇಲ್ಲದೆ ಬಟ್ಟೆ ಧರಿಸೋದಾಗಿ ವಾದಿಸುತ್ತಾರೆ. ಅದನ್ನು ಧರಿಸೋದು ಬಿಡೋದು ಅವರವರ ಆಯ್ಕೆಗೆ ಬಿಟ್ಟಿದ್ದು.

ಮಾರುಕಟ್ಟೆ (Market) ಯಲ್ಲಿ ಈಗ ವೆರೈಟಿ ಬ್ರಾ (Bra)  ಬಂದಿರೋದಂತೂ ಸುಳ್ಳಲ್ಲ. ನೀವು ಸ್ಪೋರ್ಟ್ ಗೆ ಬೇರೆ ಬ್ರಾ, ಡಾನ್ಸ್ ಗೆ ಬೇರೆ ಬ್ರಾ, ಸಾರಿಗೆ ಬೇರೆ ಬ್ರಾ ಹೀಗೆ ನಿಮ್ಮ ಆಯ್ಕೆಗೆ ತಕ್ಕಂತೆ ಬ್ರಾ ಖರೀದಿ ಮಾಡಬಹುದು. ನಾನಾ ಬಣ್ಣದಲ್ಲೂ ನಿಮಗೆ ಬ್ರಾ ಲಭ್ಯವಿದೆ. ಆದ್ರೆ ಈ ಬ್ರಾ ಮೊದಲ ಬಾರಿ ಬಿಳಿ (White) ಬಣ್ಣದಲ್ಲಿ ಬಂದಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. 

ಪಾರ್ವತಿ ದೇವಿಯಾಗಿ ಫೇಮ್ ಆದ ಈ ನಟಿ ಎದೆ ಸೀಳಲ್ಲ, ಎದೆಯನ್ನೇ ತೋರಿಸಿದ ವೀಡಿಯೋ ವೈರಲ್!

ಬ್ರಾ ಇತಿಹಾಸ ಈಗಿನದ್ದಲ್ಲ. 500 ವರ್ಷಗಳ ಹಿಂದೆಯೇ ಇದನ್ನು ಬಳಕೆ ಮಾಡಲಾಗುತ್ತಿತ್ತು. ಮಹಿಳೆಯರು ಚರ್ಮದಿಂದ ತಯಾರಿಸಿದ ಬ್ರಾ ಧರಿಸುತ್ತಿದ್ದರು. ಈಜಿಪ್ಟ್ ಮಹಿಳೆಯರು ಮೊದಲು ಬ್ರಾ ಧರಿಸಲು ಶುರು ಮಾಡಿದ್ರು ಎನ್ನುವ ದಾಖಲೆಯೂ ಇದೆ. ಆದ್ರೆ ಚರ್ಮದಿಂದ ತಯಾರಿಸಿದ ಬ್ರಾ ಈಗಿನಂತೆ ಹಗುರವಾಗಿರಲಿಲ್ಲ. ಅದು ಭಾರವಾಗಿದ್ದ ಕಾರಣ ಅದನ್ನು ಧರಿಸೋದು ಮಹಿಳೆಯರಿಗೆ ಹಿಂಸೆಯಾಗುತ್ತಿತ್ತು. ಆದ್ರೆ ಈ ಬ್ರಾ ಮಹಿಳೆಯರ ದೇಹಕ್ಕೆ ಸರಿಯಾದ ಆಕಾರ ನೀಡಲು ನೆರವಾಗಿತ್ತು ಎಂಬ ಮಾತೂ ಇದೆ.

ನಿಧಾನವಾಗಿ ಜನರು ಅಪ್ಡೇಟ್ ಆಗ್ತಾ ಹೋದ್ರು. 17 ಮತ್ತು 18ನೇ ಶತಮಾನದಲ್ಲಿ ಬಿಳಿ ಬಣ್ಣದ ಒಳ ಉಡುಪನ್ನು ತಯಾರಿಸಲಾಯ್ತು. ಆದ್ರೆ ಈ ಒಳ ಉಡುಪುಗಳು ಈಗಿನ ಬ್ರಾದಂತೆ ಇರಲಿಲ್ಲ. ಬಿಳಿ ಬಣ್ಣದ್ದಾಗಿದ್ದರೂ ಶರ್ಟ್ ರೀತಿಯಲ್ಲಿತ್ತು. 1890 ವೇಳೆಗೆ ಇದ್ರಲ್ಲಿ ಮತ್ತೊಂದು ಬದಲಾಣೆ ಕಾಣಿಸಿತು. ಮಹಿಳೆಯರು ಜಾಕೆಟ್ ನಂತೆ ಕಾಣುವ ಕಾರ್ಸೆಟ್ ಬಳಕೆ ಶುರು ಮಾಡಿದ್ರು. ಅದರ ಹಿಂದೆ ದಾರವೊಂದಿರುತ್ತಿತ್ತು. ಆ ದಾರವನ್ನು ಎಳೆದ್ರೆ ಕಾರ್ಸೆಟ್ ಬಿಗಿಯಾಗುತ್ತಿತ್ತು. 

1915ರಲ್ಲಿ ಈ ಬ್ರಾದಲ್ಲಿ ಮತ್ತೊಂದು ಮಹತ್ವದ ಬದಲಾವಣೆ ಕಾಣಿಸಿಕೊಂಡಿತು. ಸೆಮಿ ಬ್ರಾಗಳು ಮಾರುಕಟ್ಟೆಗೆ ಲಗ್ಗೆ ಇಟ್ಟವು. 1940ರ ದಶಕದಲ್ಲಿ ಬಾಲಿವುಡ್ ನಟಿಯರು (Bollywood Actress) ಈ ಬ್ರಾಗಳನ್ನು ಧರಿಸಲು ಶುರು ಮಾಡಿದ್ರು. 1950ರ ಸುಮಾರಿಗೆ ನೈಲಾನ್ ಬ್ರಾ ತಯಾರಿಕೆ ಆರಂಭವಾಯ್ತು. ಇದ್ರ ನಂತ್ರ ಬ್ರಾ ತೂಕ ಸಾಕಷ್ಟು ಹಗುರವಾಯ್ತು. 

ಬಿಳಿ ಬ್ರಾ ಖರೀದಿ ಮುನ್ನ ಇದನ್ನು ತಿಳಿದಿರಿ : ಕೆಲವೊಂದು ಡ್ರೆಸ್ ಕೆಳಗೆ ನೀವು ಬಿಳಿ ಬಣ್ಣದ ಬ್ರಾ ಧರಿಸೋದು ಅನಿವಾರ್ಯ. ಆದ್ರೆ ಈ ಬಿಳಿ ಬಣ್ಣದ ಬ್ರಾ ಖರೀದಿ ಮಾಡಿದ ನಂತ್ರ ನಿಮಗೆ ಕೆಲವೊಂದು ಸಮಸ್ಯೆ ಕಾಡುತ್ತದೆ. 

ಅವುಗಳನ್ನು ಸ್ವಚ್ಛವಾಗಿಡುವುದು ತುಂಬಾ ಕಷ್ಟ. ಬಿಳಿ ಬ್ರಾ ಧರಿಸಿದ ತಕ್ಷಣ ಅದು ಕೊಳಕಾದಂತೆ ಕಾಣಿಸುತ್ತದೆ.  ಅದನ್ನು ಮತ್ತೆ ತೊಳೆದರೂ ಮೊದಲಿನಷ್ಟು ಸ್ವಚ್ಛವಾಗಿ ಕಾಣೋದಿಲ್ಲ. ನೀವು ಸ್ವಚ್ಛತೆ ನೆಪದಲ್ಲಿ ಅದನ್ನು ಹೆಚ್ಚು ಉಜ್ಜಿದಾಗ ಅದು ಬೇಗ ಹಾಳಾಗುತ್ತದೆ.  

ಮೆಟ್‌ ಗಾಲಾಗೆ ಐಸ್‌ನಿಂದ ಮಾಡಿದ ಪರ್ಸ್ ಹಿಡಿದುಕೊಂಡ ಬಂದ ಖ್ಯಾತ ಸೆಲೆಬ್ರಿಟಿ

ನಿಮ್ಮ ಬಳಿ ಬಿಳಿ ಬಣ್ಣದ ಬ್ರಾ ಇದ್ದು ಅದನ್ನು ಕಪ್ಪು ಮತ್ತು ತಿಳಿ ಬಣ್ಣದ ಬಟ್ಟೆಗಳ ಕೆಳಗೆ ಹಾಕಿದ್ರೆ ನಿಮ್ಮ ಬ್ರಾ ಎದ್ದು ಕಾಣಿಸುತ್ತದೆ. ಹಾಗಾಗಿ ನೀವು ಈ ಬಣ್ಣದ ಬಟ್ಟೆ ಕೆಳಗೆ ಎಂದೂ ಬಿಳಿ ಬ್ರಾ ಧರಿಸಬೇಡಿ.  ಫ್ಯಾಷನ್ ಮತ್ತು ಒಳ ಉಡುಪು ಉದ್ಯಮದಲ್ಲಿ (Fashion Innerwear Industry) ಬಿಳಿ ಬಣ್ಣವನ್ನು ಫ್ಯಾಶನ್ ಬಣ್ಣವೆಂದು ಪರಿಗಣಿಸಲಾಗುತ್ತದೆಯೇ ವಿನಃ ಅದನ್ನು ಮೂಲ ಬಣ್ಣವೆಂದು ಪರಿಗಣಿಸುವುದಿಲ್ಲ. ಹಾಗಾಗಿ ಅದನ್ನು ಕಡಿಮೆ ಪ್ರಮಾಣದಲ್ಲಿ ತಯಾರಿಸುತ್ತಾರೆ. ನೀವು ಬಿಳಿ ಬಣ್ಣದ ಬ್ರಾವನ್ನು ಮಾತ್ರ ಧರಿಸುವವರಾಗಿದ್ದರೆ ನಿಮಗೆ ಆಯ್ಕೆ ತುಂಬಾ ಚಿಕ್ಕದಾಗಿರುತ್ತದೆ. 

click me!