ಜನರು ಹೊಸ ಹೊಸ ಪ್ರಯೋಗಗಳನ್ನು ಮಾಡ್ತಿರುತ್ತಾರೆ. ಈಗ ಬಿಯರ್ ಮೇಲೆ ಮತ್ತೊಂದು ಪ್ರಯೋಗವಾಗಿದೆ. ಅದ್ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಬಿಯರ್ ಟ್ಯಾನಿಂಗ್ ಸದ್ದು ಮಾಡ್ತಿದೆ.
ಗೋವಾ ಬೀಚಿನಲ್ಲಿ ಬಿಯರ್ ಕುಡಿದು, ಬಿಸಿಲಿಗೆ ಮೈ ಒಡ್ಡಿ, ಕುಳಿತುಕೊಳ್ಳುವ ಜನರ ಸಂಖ್ಯೆ ಸಾಕಷ್ಟಿದೆ. ಬರೀ ಗೋವಾ ಬೀಚ್ ಮಾತ್ರವಲ್ಲ ವಿಶ್ವದ ಅನೇಕ ಬೀಚ್‌ಗಳಲ್ಲಿ ಕುಳಿತುಕೊಳ್ಳುವ ಜನರು ಬಿಯರ್ ಹೀರ್ತಾ ಮಜಾ ಮಾಡ್ತಾರೆ. ಬೀಚ್‌ನಲ್ಲಿ ಕುಳಿತುಕೊಳ್ಳೋರಿಗೆ ಮುಖ್ಯವಾಗಿ ಕಾಡುವ ಭಯವೆಂದ್ರೆ ಟ್ಯಾನಿಂಗ್. ಬೀಚ್‌ಗಳಲ್ಲಿ ಮೈತುಂಬಾ ಬಟ್ಟೆ ಹಾಕಿಕೊಂಡು ಹೋಗಲು ಸಾಧ್ಯವಿಲ್ಲ. ತುಂಡುಡಿಗೆ ಧರಿಸಿದ್ರೆ ಟ್ಯಾನ್ ಗ್ಯಾರಂಟಿ. ಹಾಗಾಗಿ ಬೀಚಿಗೆ ಹೋಗುವ ಮುನ್ನ ಸನ್ ಸ್ಕ್ರೀನ್ ಬ್ಯಾಗಿನಲ್ಲಿ ಇರಲೇಬೇಕು ಎನ್ನುವ ಬಂದಿ ಬಹಳಷ್ಟಿದ್ದಾರೆ.
ಇನ್ಮುಂದೆ ನೀವು ಬೀಚ್ (Beach) ಗೆ ಹೋಗುವಾಗ ಸನ್ ಸ್ಕ್ರೀನ್ (Sun Screen) ಮರೆತ್ರೂ ಚಿಂತೆ ಮಾಡ್ಬೇಕಾಗಿಲ್ಲ. ಕೈನಲ್ಲಿ ಬಿಯರ್ (Beer) ಇದ್ರೆ ಸಾಕು. ಯಾಕೆ ಅಂತೀರಾ? ಬಿಯರನ್ನೇ ನೀವು ಸನ್ ಸ್ಕ್ರೀನ್ ತರ ಹಚ್ಚಿಕೊಳ್ಳಬಹುದು. ಹಾಗಂತ ನಾವು ಹೇಳ್ತಿಲ್ಲ ಸ್ವಾಮಿ. ಟಿಕ್ ಟಾಕ್ ವಿಡಿಯೋಗಳಲ್ಲಿ ಹೇಳಲಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈಗ ಈ ಟ್ರೆಂಡ್ ಶುರುವಾಗಿದೆ. ಇದ್ರಲ್ಲಿ ಜನರು ಬಿಯರ್ ಕುಡಿಯೋ ಬದಲು ಮೈ ಮೇಲೆ ಹಾಕಿಕೊಳ್ತಾರೆ. ಅದನ್ನು ಬಿಯರ್ ಟ್ಯಾನಿಂಗ್ ಅಂತಾ ಕರೆಯಲಾಗುತ್ತೆ. ನಾವಿಂದು ಸದ್ಯ ಪ್ರಸಿದ್ಧಿ ಪಡೆದಿರುವ ಬಿಯರ್ ಟ್ಯಾನಿಂಗ್ ಬಗ್ಗೆ ನಿಮಗೊಂದಿಷ್ಟು ಮಾಹಿತಿ ನೀಡ್ತೇವೆ.
undefined
ಬಾಳೆಹಣ್ಣಿಗೆ ಒಲಿಯುವ ಗಣಪ, ಮನೆ, ತೋಟದಲ್ಲಿ ಇಲಿ ಕಾಟವಿದ್ರೆ ಇಲ್ಲಿ ಹರಕೆ ಹೇಳಿದ್ರೆ ಸಾಕು
ಬಿಯರ್ ಟ್ಯಾನಿಂಗ್ ಅಂದ್ರೇನು? : ಹೆಸರೇ ಹೇಳುವಂತೆ ಬಿಯರ್ ಮೂಲಕ ಟ್ಯಾನ್ ತಪ್ಪಿಸೋದು. ಬಿಯರನ್ನು ಸನ್‌ಸ್ಕ್ರೀನ್‌ನಂತೆ, ದೇಹಕ್ಕೆ ಹಚ್ಚಿಕೊಳ್ಳೋದು. ನಂತರ ಬಿಸಿಲಿನಲ್ಲಿ ಕುಳಿತುಕೊಳ್ಳೋದು. ಹೀಗೆ ಮಾಡುವುದ್ರಿಂದ ನಾನಾ ಲಾಭವಿದೆ ಎನ್ನುತ್ತಾರೆ ಬಳಕೆದಾರರು. ದೇಹಕ್ಕೆ ನೀವು ಬಿಯರ್ ಹಚ್ಚಿಕೊಂಡಾಗ ಚರ್ಮದ ವರ್ಣದ್ರವ್ಯವಾದ ಮೆಲನಿನ್ ಕ್ರಿಯಾಶೀಲವಾಗಿ ಚರ್ಮ ಕಪ್ಪಾಗುವುದನ್ನು ತಡೆಯುತ್ತದೆಯಂತೆ.
ಟ್ಯಾನಿಂಗ್ ಒಳ್ಳೆಯದಲ್ಲ. ಬಿಸಿಲಿನಿಂದ ನಿಮ್ಮ ಚರ್ಮ ಕಪ್ಪಾಗುತ್ತದೆ. ಕೆಲ ದಿನಗಳ ನಂತ್ರ ಚರ್ಮದ ಕಪ್ಪಾದ ಭಾಗ ಸುಲಿಯಲು ಶುರುವಾಗುತ್ತದೆ. ಇದು ನೋಡಲು ಅಸಹ್ಯ ಮಾತ್ರವಲ್ಲ ಕೆಲ ಚರ್ಮದ ಖಾಯಿಲೆಗೆ ಕಾರಣವಾಗಬಹುದು. ಈ ಟ್ಯಾನಿಂಗ್ ತಪ್ಪಿಸಲು ಬಿಯರ್ ಗಿಂತ ಇದಕ್ಕಿಂತ ಉತ್ತಮವಾದ ಮಾರ್ಗವಿಲ್ಲ ಎಂದು ಕೆಲವರು ನಂಬುತ್ತಾರೆ. ಆದ್ರೆ ಇದು ಕೂಡ ಸುರಕ್ಷಿತವಲ್ಲ. ಇದರಿಂದ ಚರ್ಮದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ತಜ್ಞರು ಚ್ಚರಿಕೆಯನ್ನೂ ನೀಡಿದ್ದಾರೆ.
ಕುಚುಕು ಫ್ರೆಂಡ್ಸ್ ಜೊತೆ ಅಮೂಲ್ಯ, ವೈಷ್ಣವಿ… ನಿಮಗ್ಯಾವಾಗ ಮದ್ವೆ ಎಂದ ಫ್ಯಾನ್ಸ್
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ (Social Media Trend): ಸಾಮಾಜಿಕ ಜಾಲತಾಣದಲ್ಲಿ ಬಿಯರ್ ಟ್ಯಾನಿಂಗ್ ಬಗ್ಗೆ ಬಿಸಿ ಬಿಸಿ ಚರ್ಚೆಯಾಗ್ತಿದೆ . ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋ ವೈರಲ್ ಆಗಿದೆ. ಇದ್ರ ಮಧ್ಯೆ ಯೂಟ್ಯೂಬ್ ವಿಡಿಯೋವೊಂದು ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ಕಾಣುವ ವ್ಯಕ್ತಿ ಮೊದಲು ಅಗ್ಗದ ಬಿಯರ್ ಖರೀದಿಸುತ್ತಾನೆ. ನಂತರ ಒಂದು ಪೆಗ್ ಹಾಕಿ, ಉಳಿದ ಬಿಯರನ್ನು ತನ್ನ ಮೈಮೇಲೆ ಸುರಿದುಕೊಳ್ತಾನೆ. ನಂತ್ರ ಅದನ್ನು ಲೋಷನ್ ನಂತೆ ಉಜ್ಜುತ್ತಾನೆ. ಹೀಗೆ ಮಾಡುವುದರಿಂದ ಬಿಸಿಲಿನಲ್ಲಿ ಚರ್ಮ ಕಪ್ಪಾಗುವುದಿಲ್ಲ ಎಂಬುದು ಅವನ ನಂಬಿಕೆ.
ನಮ್ಮ ದೇಹದ ಮೇಲೆ ಮೆಲನಿನ್ ಪಾತ್ರವೇನು?: ಮೆಲನಿನ್ ಚರ್ಮದ ಬಣ್ಣದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ತೆಳ್ಳಗಿನ ತ್ವಚೆಯ ವ್ಯಕ್ತಿಯ ಚರ್ಮದ ಯಾವುದೇ ಭಾಗದ ಬಣ್ಣವು ಕಪ್ಪು ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ದೇಹದಲ್ಲಿ ಮೆಲನಿನ್ ಮಟ್ಟ ಹೆಚ್ಚಾಗಿದೆ ಎಂದು ಅರ್ಥ. ಮತ್ತೊಂದೆಡೆ ಬಣ್ಣವು ತುಂಬಾ ಬೆಳ್ಳಗಾದ್ರೆ ಮೆಲನಿನ್ ತುಂಬಾ ಕಡಿಮೆಯಾಗಿದೆ ಎಂದು ಅರ್ಥ. ಮೆಲನಿನ್ ಹೆಚ್ಚಳದಿಂದಾಗಿ ಚರ್ಮವು ಕಪ್ಪಾಗಿ ಕಾಣಿಸಿಕೊಂಡಾಗ ಪಿಗ್ಮೆಂಟೇಶನ್ ಸಂಭವಿಸುತ್ತದೆ. ಚರ್ಮದ ಬಣ್ಣವನ್ನು ಬೆಳ್ಳಗೆ ಮಾಡಲು ಜನರು ಔಷಧಿ, ಕ್ರೀಮ್ ಹಚ್ಚುತ್ತಾರೆ.