History Of Laundry : ರಾಜ,ಮಹಾರಾಜರ ಕಾಲದಲ್ಲಿ ಬಟ್ಟೆ ಹೇಗೆ ಕ್ಲೀನ್ ಮಾಡ್ತಿದ್ದರು ಗೊತ್ತಾ?

By Contributor Asianet  |  First Published Feb 19, 2022, 4:21 PM IST

ಯಂತ್ರಗಳು ನಮ್ಮ ಕೆಲಸವನ್ನು ಸುಲಭಗೊಳಿಸಿವೆ. ಹಾಗೆಯೇ ನಮಗೆ ಆಯ್ಕೆ ಹೆಚ್ಚಿದೆ. ಬಟ್ಟೆ ಕ್ಲೀನ್ ಮಾಡಲು ಸಾಕಷ್ಟು ಸೋಪ್ ಗಳು ಲಭ್ಯವಿದೆ. ಆದ್ರೆ ಹಿಂದಿನ ಕಾಲದಲ್ಲಿ ಜನರು ಬಟ್ಟೆ ಕ್ಲೀನ್ ಮಾಡಲು ಯಾವ ಸೋಪ್ ಬಳಸ್ತಾ ಇದ್ದರು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. 
 


ಸೋಪ್ (Soap),ಸೋಪಿನ ಪುಡಿ,ಯಾವುದೇ ಸೋಪ್ ಜೆಲ್ (Gel) ಇಲ್ಲದೆ ಹೋದ್ರೆ ಬಟ್ಟೆ (Clothes) ಹೇಗೆ ತೊಳೆಯುತ್ತೀರಾ? ಬರೀ ನೀರಿನಲ್ಲಿ ಬಟ್ಟೆ ವಾಶ್ ಮಾಡೋದು ಅಸಾಧ್ಯ ಅಲ್ವಾ? ಬಟ್ಟೆ ಕ್ಲೀನ್ ಆಗೋದು ಹೇಗೆ?. ಇಂದು ಮಾರುಕಟ್ಟೆಯಲ್ಲಿ ಬಗೆ ಬಗೆ ಸೋಪ್ ಗಳು ಬಂದಿವೆ. ಸೋಪ್ ಕಂಪನಿಗಳು ಮಾರಾಟ ಹೆಚ್ಚಿಸಲು ಸಾಕಷ್ಟು ಜಾಹೀರಾತು (Advertising)ಗಳನ್ನು ನೀಡ್ತಿವೆ. ತಮ್ಮದು ಉತ್ತಮ ಸೋಪ್ ಎಂದು ಪ್ರಚಾರ ಮಾಡ್ತಿವೆ. ನಾವು ನಮಗಿಷ್ಟವಾದ ಸೋಪ್ ಬಳಸ್ತೇವೆ. ಪ್ರವಾಸಕ್ಕೆ ಹೋದ ಸಂದರ್ಭದಲ್ಲಿ ಒಂದು ದಿನ ಬಟ್ಟೆ ವಾಶ್ ಮಾಡಲು ಸೋಪ್ ಸಿಗದೆ ಹೋದ್ರೆ ನಮಗೆ ಕಿರಿಕಿರಿ ಎನ್ನಿಸುತ್ತದೆ. ಹೇಗೆ ಬಟ್ಟೆ ತೊಳೆಯುವುದು ಎಂಬ ಚಿಂತೆ ಶುರುವಾಗುತ್ತದೆ. ಆದ್ರೆ ಹಳೆ ಕಾಲದಲ್ಲಿ,ಸೋಪ್ ಕಂಡು ಹಿಡಿಯದ ಸಮಯದಲ್ಲಿ ಯಾವುದ್ರಿಂದ ಬಟ್ಟೆ ವಾಶ್ ಮಾಡ್ತಿದ್ದರು ಎಂಬುದು ನಿಮಗೆ ಗೊತ್ತಾ? ರಾಜ-ರಾಣಿಯರ ಬಟ್ಟೆಗಳನ್ನು ತೊಳೆಯಲು ಏನು ಬಳಸ್ತಾ ಇದ್ದರು ಎಂಬುದು ನಿಮಗೆ ತಿಳಿದಿದ್ಯಾ? ಇಂದು ನಾವು ಇದ್ರ ಬಗ್ಗೆ ಮಾಹಿತಿಯನ್ನು ನೀಡ್ತೇವೆ.

ಝಗಮಗಿಸುತ್ತಿತ್ತು ರಾಜ-ರಾಣಿಯರ ಬಟ್ಟೆ :  ರಾಜ-ಮಹಾರಾಜ ಅಥವಾ ಶ್ರೀರಾಮ ಮತ್ತು ಕೃಷ್ಣನ ಕಾಲದಲ್ಲಿ ಅವರ ಬಟ್ಟೆಗಳು ಹೊಳೆಯುತ್ತಿದ್ದವು. ಕೊಳಕಿರುತ್ತಿರಲಿಲ್ಲ. ಶುದ್ಧ ಮತ್ತು ರೋಗಾಣು ಮುಕ್ತವಾಗಿತ್ತು. ಆ ಕಾಲದಲ್ಲಿ ಸಾಬೂನಿನಂಥ ಡಿಟರ್ಜೆಂಟ್ ಇರಲಿಲ್ಲ. ಬಟ್ಟೆ ಒಗೆಯಲು ಹಣ್ಣನ್ನು ಬಳಸುತ್ತಿದ್ದರು. ಯಸ್, ಶ್ರೀಕೃಷ್ಣ ಮತ್ತು ಶ್ರೀರಾಮನ ಕಾಲದಲ್ಲಿ ಬಟ್ಟೆ ಒಗೆಯುವವರು ಅದೇ ಹಣ್ಣಿನಿಂದ ಬಟ್ಟೆ ಒಗೆಯುತ್ತಿದ್ದರು ಎಂಬುದು ನಿಜ. ಈ ಕಾರಣದಿಂದಾಗಿ ಅವು ಇಂದಿನ ಮಾರ್ಜಕಗಳು ಮತ್ತು ಸಾಬೂನುಗಳಿಗಿಂತ ಹೆಚ್ಚು ಶುದ್ಧ ಮತ್ತು ಸೋಂಕುರಹಿತವಾಗಿರುತ್ತಿದ್ದವು.

Latest Videos

undefined


 
ಬಟ್ಟೆ ತೊಳೆಯಲು ಬಳಸ್ತಿದ್ದ ಹಣ್ಣು ಯಾವ್ದು? :  ಸಸ್ಯ ಮತ್ತು ಆಯುರ್ವೇದದಲ್ಲಿ ದೇಶ ಯಾವಾಗಲೂ ಸಮೃದ್ಧವಾಗಿದೆ. ತ್ರೇತಾಯುಗಕ್ಕಿಂತ ಹಳೆಯ ಕಾಲದಿಂದಲೂ ಅಂಟುವಾಳ ಗಿಡ ನಮ್ಮಲ್ಲಿದೆ.  ಬಟ್ಟೆಗಳನ್ನು ಸ್ವಚ್ಛಗೊಳಿಸಲು ಅಂಟುವಾಳವನ್ನು ಬಳಸಲಾಗುತ್ತಿತ್ತು. ಶ್ರೀರಾಮ ಮತ್ತು ಕೃಷ್ಣನ ಕಾಲದಲ್ಲಿ ದುಬಾರಿ ರೇಷ್ಮೆ ಬಟ್ಟೆಗಳನ್ನು ಈ ಅಂಟುವಾಳದಿಂದ ಸ್ವಚ್ಛಗೊಳಿಸಲಾಗುತ್ತಿತ್ತು. ಅಂಟುವಾಳದಿಂದ ಬಟ್ಟೆ ಒಗೆಯುವ ಪದ್ಧತಿ ಕ್ರಿ.ಶ.16ರವರೆಗೆ ಮುಂದುವರೆಯಿತು. ಆದಾಗ್ಯೂ, ದುಬಾರಿ ರೇಷ್ಮೆ ಬಟ್ಟೆಗಳನ್ನು ಸೂಕ್ಷ್ಮಾಣು ಮುಕ್ತ ಮತ್ತು ಸ್ವಚ್ಛವಾಗಿಸಲು ಅಂಟುವಾಳ ಇನ್ನೂ ಅತ್ಯುತ್ತಮ ಸಾವಯವ ಉತ್ಪನ್ನವಾಗಿದೆ. ಇದನ್ನು ಇಂದಿಗೂ ಬಳಸಲಾಗುತ್ತಿದೆ.

Lifestyle Tips : ನಿಮ್ಮ ಅಂದ ಹೆಚ್ಚಿಸುವ ಡ್ರೆಸ್ಸಿಂಗ್ ರೂಮಿಗೂ ಬೇಕು ಮೇಕಪ್!

ಪ್ರಾಚೀನ ಭಾರತದ ಸೂಪರ್ ಸೋಪ್ ಎಂದು ಅಂಟವಾಳವನ್ನು ಕರೆಯಲಾಗುತ್ತಿತ್ತು. ಅದರ ಸಿಪ್ಪೆಗಳು ನೊರೆಯನ್ನು ಉತ್ಪತ್ತಿ ಮಾಡುತ್ತವೆ. ಅದನ್ನು ಬಟ್ಟೆ ಸ್ವಚ್ಛಗೊಳಿಸಲು ಬಳಸಲಾಗುತ್ತದೆ. ಅಂಟುವಾಳು ಸೋಂಕು ನಿವಾರಕವಾಗಿಯೂ ಕೆಲಸ ಮಾಡುತ್ತದೆ. ಪ್ರಾಚೀನ ಭಾರತದಲ್ಲಿ, ರಾಣಿಯರು ತಮ್ಮ ದೊಡ್ಡ ಕೂದಲನ್ನು ಇದರಿಂದ ತೊಳೆಯುತ್ತಿದ್ದರು. ಬಟ್ಟೆಗಳನ್ನು ಬಿಸಿ ನೀರಿನಲ್ಲಿ ಹಾಕಿ ಕುದಿಸಿ, ನಂತರ ಬಟ್ಟೆಗಳನ್ನು ಎರಡು ರೀತಿಯಲ್ಲಿ ಸ್ವಚ್ಛಗೊಳಿಸಲಾಗುತ್ತಿತ್ತು. ಸಾಮಾನ್ಯ ಜನರು ತಮ್ಮ ಬಟ್ಟೆಗಳನ್ನು ಬಿಸಿನೀರಿನಲ್ಲಿ ಹಾಕಿ ಕುದಿಸುತ್ತಿದ್ದರು. ನಂತರ ಅದನ್ನು ಹೊರಗೆ ತೆಗೆದ ನಂತರ ಸ್ವಲ್ಪ ಸಮಯ ತಣ್ಣಗಾದ ನಂತರ, ಕಲ್ಲುಗಳ ಮೇಲೆ ಹೊಡೆಯುತ್ತಿದ್ದರು. ಇದರಿಂದಾಗಿ ಬಟ್ಟೆಯಲ್ಲಿರುವ ಕೊಳಕು ಹೋಗುತ್ತಿತ್ತು. ದೊಡ್ಡ ಮಡಕೆಗಳು ಮತ್ತು ಕುಲುಮೆಗಳನ್ನು ಬಳಸಿ ಈ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಮಾಡಲಾಗುತ್ತಿತ್ತು. ದೊಡ್ಡ ನಗರಗಳಲ್ಲಿನ ಧೋಬಿ ಘಾಟ್‌ಗಳಲ್ಲಿ ಇಂದಿಗೂ ಈ ಸಂಪ್ರದಾಯ ಮುಂದುವರಿದಿದೆ.

Model Mammikka: ಕೂಲಿ ಮಾಡುತ್ತಿದ್ದ ಅರವತ್ತರ ಮಮ್ಮಿಕ್ಕಾ ಈಗ ಸೂಪರ್‌ ಮಾಡೆಲ್!

ಬಟ್ಟೆಗಳನ್ನು ಸ್ವಚ್ಛಗೊಳಿಸಲು ಇನ್ನೊಂದು ಮಾರ್ಗವಿತ್ತು. ಅದು ಬಹಳ ಜನಪ್ರಿಯವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ, ಖಾಲಿ ಭೂಮಿಯಲ್ಲಿ, ನದಿ-ಕೊಳದ ದಡದಲ್ಲಿ ಅಥವಾ ಹೊಲಗಳಲ್ಲಿ ಬಿಳಿ ಬಣ್ಣದ ಪುಡಿ ಕಂಡುಬರುತ್ತದೆ. ಇದನ್ನು 'ರೆಹ್' ಎಂದು ಕರೆಯಲಾಗುತ್ತದೆ. ಇದು ದೇಶದ ನದಿಗಳು ಮತ್ತು ಕೊಳಗಳ ಭೂ ದಡದಲ್ಲಿ ಹೇರಳವಾಗಿ ಕಂಡುಬರುತ್ತದೆ. ಅದಕ್ಕೆ ಬೆಲೆಯೇ ಇರಲಿಲ್ಲ. ಈ ಪುಡಿಯನ್ನು ನೀರಿನಲ್ಲಿ ಬೆರೆಸಿ ಬಟ್ಟೆಗಳನ್ನು ನೆನೆಯಲು ಬಳಸಲಾಗುತ್ತಿತ್ತು. ನಂತರ ಬಟ್ಟೆಗಳನ್ನು ಮರಗಳ ಬೇರುಗಳಿಂದ ಉಜ್ಜುವ ಮೂಲಕ ಸ್ವಚ್ಛಗೊಳಿಸಲಾಗುತ್ತಿತ್ತು.
 

click me!