ಟ್ರೈಲರ್ ಸಿಕ್ಕಾಪಟ್ಟೆ  ಬಿಸಿಯಿದೆ! ಸಿಕ್ಸ್ ಹೊಡೆಯೋಕೆ ಹೋಗಿ ಔಟ್ ಆಗ್ತೀರಾ!

By Web DeskFirst Published Jan 1, 2019, 8:08 PM IST
Highlights

ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಚಿತಾ ರಾಮ್ ಅಭಿನಯದ ಐ ಲವ್ ಯು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಇದೆ ಚಿತ್ರಕ್ಕೆ ಸಂಬಂಧಿಸಿದ್ದು ಎನ್ನಲಾದ ಫೋಟೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ನಿರ್ದೇಶಕ ಆರ್‌. ಚಂದ್ರು ಮತ್ತು ಉಪೇಂದ್ರ ಜೋಡಿಯಾಗಿ ಕನ್ನಡ ಸಿನಿ ಪ್ರೇಮಿಗಳಿಗೆ ವಿಭಿನ್ನ ಕತೆಯ ಅನಾವರಣ ಮಾಡಲು ಮುಂದಾಗಿದ್ದಾರೆ. ಚಿತ್ರದ ಟ್ರೈಲರ್‌ಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜತೆಗೆ ಟ್ರೈಲರ್‌ ನಲ್ಲಿ ಕಂಡುಬರುವ ಹಸಿ ಬಿಸಿ ದೃಶ್ಯದ ತುಣುಕು ಸದ್ದು ಮಾಡುತ್ತಿದೆ.

ರೆಬಲ್ ಸ್ಟಾರ್ ಅವರೊಂದಿಗೆ ಉಪೇಂದ್ರ ಸ್ನೇಹ ಹೇಗಿತ್ತು?

ಹಿಂದೆ ಬ್ರಹ್ಮ ಚಿತ್ರವನ್ನು ಉಪೇಂದ್ರ ಮತ್ತು ಚಂದ್ರು ಜೋಡಿ ಕನ್ನಡಕ್ಕೆ ನೀಡಿತ್ತು. ಇದೀಗ ಮತ್ತೆ ಒಂದಾಗಿದೆ. ಸಂಭಾಷಣೆ ಸಹ ಡಿಫರೆಂಟಾಗಿದೆ. ಉಪೇಂದ್ರ ಮೂರು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು ಐ ಲವ್ ಯು ಚಿತ್ರಕ್ಕೆ ’ನಿನ್ನೇ ಪ್ರೀತಿಸ್ತೀನಿ’ ಎನ್ನುವ ಟ್ಯಾಗ್ ಲೈನ್ ಕೊಡಲಾಗಿದೆ.

 

click me!