
ಬೆಂಗಳೂರು (ಮೇ.06): 50 ವರ್ಷದ ಇತಿಹಾಸ ಹೊಂದಿದ್ದ, ಬೆಂಗಳೂರಿನ ಅತಿದೊಡ್ಡ ಚಿತ್ರಮಂದಿರಗಳಲ್ಲಿ ಒಂದಾಗಿದ್ದ ಸ್ಯಾಂಕಿ ರಸ್ತೆಯ ಕಾವೇರಿ ಚಿತ್ರಮಂದಿರ ಶಾಶ್ವತವಾಗಿ ಬಾಗಿಲು ಮುಚ್ಚಿದೆ. ಬದಲಾದ ಕಾಲಕ್ಕೆ ಮತ್ತೊಂದು ಐತಿಹಾಸಿಕ ಚಿತ್ರಮಂದಿರ ಬಲಿಯಾಗಿದೆ. 1974ರ ಜನವರಿ 11ರಂದು ಡಾ. ರಾಜ್‌ಕುಮಾರ್ ನಟನೆಯ 'ಬಂಗಾರದ ಪಂಜರ' ಸಿನಿಮಾ ಪ್ರದರ್ಶನದ ಮೂಲಕಈ ಚಿತ್ರಮಂದಿರ ಆರಂಭವಾಗಿತ್ತು. ಈ ವರ್ಷದ ಜನವರಿ 11ರಂದು 50 ವರ್ಷ ಪೂರೈಸಿದ್ದು, ಗೋಲ್ಡನ್ ಜ್ಯುಬಿಲಿ ಸಂಭ್ರಮಾಚರಣೆ ನಡೆದಿತ್ತು.
ಓಟಿಟಿ, ಮಲ್ಟಿಪ್ಲೆಕ್ ಇತ್ಯಾದಿ ಕಾರಣಗಳಿಂದ ಇತ್ತೀಚೆಗೆ ಚಿತ್ರಮಂದಿರದ ಕಲೆಕ್ಷನ್ ತುಂಬಾ ಕಡಿಮೆಯಾಗಿದ್ದು, ಇನ್ನು ಮುಂದೆ ಚಿತ್ರಮಂದಿರ ನಡೆಸುವುದು ಕಷ್ಟ ಎಂಬ ಕಾರಣಕ್ಕೆ ಮಾಲೀಕರು ಚಿತ್ರಮಂದಿರ ನಿಲ್ಲಿಸಿದ್ದಾರೆ. ಆ ಜಾಗದಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣವಾಗಲಿದೆ ಎನ್ನಲಾಗಿದೆ. ಮೆಜೆಸ್ಟಿಕ್‌ನ ಕಪಾಲಿ ಚಿತ್ರಮಂದಿರದ ನಂತರ ಅತಿ ಹೆಚ್ಚು ಸೀಟಿಂಗ್ ವ್ಯವಸ್ಥೆ ಇದ್ದ ಈ ಚಿತ್ರಮಂದಿರ ಆರಂಭವಾಗಿದ್ದಾಗ 1300ರಷ್ಟು ಸೀಟುಗಳ ವ್ಯವಸ್ಥೆ ಇತ್ತು, ಜೊತೆಗೆ ಮಿನಿ ಬಾಲ್ಕನಿ ಇದ್ದ ಕೆಲವೇ ಚಿತ್ರಮಂದಿರಗಳಲ್ಲಿ ಇದೂ ಒಂದಾಗಿತ್ತು ಎಂದು ಚಿತ್ರರಂಗದ ಹಿರಿಯರು ಮಾಹಿತಿ ನೀಡುತ್ತಾರೆ.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲಿನ ವಿಶೇಷತೆಯಾಗಿತ್ತು. ಎಲ್ಲಾ ಭಾಷೆಗಳ ಸಿನಿಮಾ ಪ್ರದರ್ಶನ ನಡೆಯುತ್ತಿದ್ದು, ಉತ್ತರ ಬೆಂಗಳೂರಿಗರಿಗೆ ಇದೊಂದು ಸಾಂಸ್ಕೃತಿಕ ಸ್ಥಳವೇ ಆಗಿತ್ತು. ಅನೇಕ ಸಿನಿಪ್ರೇಮಿಗಳು ಇಲ್ಲಿ ಕನ್ನಡ, ಹಿಂದಿ, ತಮಿಳು, ತೆಲುಗು ಭಾಷೆಗಳ ಸೂಪರ್‌ಹಿಟ್ ಸಿನಿಮಾಗಳನ್ನು ನೋಡಿದ ನೆನಪನ್ನು ಹಂಚಿಕೊಳ್ಳುತ್ತಾರೆ. 'ಬಂಗಾರದ ಪಂಜರ, 'ಶಂಕರಾಭರಣಂ', 'ದಿಲ್‌ವಾಲೆ ದುಲನಿಯಾ ಲೇ ಜಾಯೆಂಗೆ' ಸಿನಿಮಾಗಳು ಇಲ್ಲಿ 25 ವಾರ ಪ್ರದರ್ಶನ ಕಂಡಿದ್ದವು.
ಪೆಟ್ರೋಲ್ ದರದಲ್ಲಿ ಸ್ಥಿರತೆ ಹೊಂದಲು ನೆರವಾದ ಭಾರತ ಸರ್ಕಾರದ ಸ್ಥಿರ ವಿದೇಶಾಂಗ ನೀತಿಗಳು
ಚಿತ್ರಮಂದಿರದ ಸಿಬ್ಬಂದಿ ಎಂದು ನೆನಪಿಸಿಕೊಳ್ಳುತ್ತಾರೆ. ಪ್ರಸ್ತುತ ಬದಲಾದ ಕಾಲಘಟ್ಟದಲ್ಲಿ ಚಿತ್ರಮಂದಿರ ನಡೆಸಿಕೊಂಡು ಹೋಗುವುದೇ ಸವಾಲಾಗಿರುವಾಗ ವಿಶಾಲವಾದ ಜಾಗದಲ್ಲಿ ಇದ್ದ ದೊಡ್ಡ ಚಿತ್ರಮಂದಿರ ಉಳಿಸಿಕೊಳ್ಳುವುದು ಮಾಲೀಕರಿಗೆ ಸಾಧ್ಯವಾಗಲಿಲ್ಲ. ಆ ಕಾರಣದಿಂದ ಚಿತ್ರರಂಗ ತನ್ನದೊಂದು ಅಮೂಲ್ಯ ಆಸ್ತಿಯನ್ನು ಕಳೆದುಕೊಂಡಿದೆ. ಉತ್ತರ ಮತ್ತು ಕೇಂದ್ರ ಬೆಂಗಳೂರಿನ ಸಿನಿಮಾ ಪ್ರೇಮಿಗಳು ಒಂದು ಅಪರೂಪದ ಕೇಂದ್ರವನ್ನು ಕಳೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.