ಯೂಟ್ಯೂಬರ್‌ ಎಲ್ವಿಶ್‌ ಯಾದವ್‌ ಮೇಲೆ ಅಕ್ರಮ ಹಣ ವರ್ಗಾವಣೆ ಕೇಸ್‌ ದಾಖಲಿಸಿದ ED

By Santosh NaikFirst Published May 4, 2024, 3:20 PM IST
Highlights


Elvish Yadav: ರೇವ್‌ ಹಾಗೂ ಎಂಟರ್‌ಟೇನ್‌ಮೆಂಟ್‌ ಪಾರ್ಟಿಯನ್ನು ಆಯೋಜಿಸುವ ಸಲುವಾಗಿ ಅಕ್ರಮವಾಗಿ ಹಣವನ್ನು ವರ್ಗಾವಣೆ ಮಾಡಿಕೊಂಡಿದ್ದರು ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.
 

ಲಖನೌ (ಮೇ.4): ತಮ್ಮ ಆಯೋಜನೆಯ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಮನರಂಜನಾ ಔಷಧವಾಗಿ ಬಳಸಿದ ಆರೋಪದಡಿಯಲ್ಲಿ ಯೂಟ್ಯೂಬರ್ ಸಿದ್ಧಾರ್ಥ್ ಯಾದವ್ ಅಲಿಯಾಸ್ ಎಲ್ವಿಶ್ ಯಾದವ್ ಮತ್ತು ಇತರ ಕೆಲವರ ವಿರುದ್ಧ ಜಾರಿ ನಿರ್ದೇಶನಾಲಯವು ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿದೆ ಎಂದು ಅಧಿಕೃತ ಮೂಲಗಳು ಶನಿವಾರ ತಿಳಿಸಿವೆ. ಕಳೆದ ತಿಂಗಳು ಉತ್ತರ ಪ್ರದೇಶದ ಗೌತಮ್ ಬುದ್ಧ ನಗರ (ನೋಯ್ಡಾ) ಜಿಲ್ಲಾ ಪೊಲೀಸರು ಅವರು ಮತ್ತು ಆತನೊಂದಿಗೆ ಸಂಬಂಧ ಹೊಂದಿರುವ ಇತರರ ವಿರುದ್ಧ ಎಫ್‌ಐಆರ್ ಮತ್ತು ಚಾರ್ಜ್ ಶೀಟ್ ದಾಖಲಿಸಿದ ನಂತರ ಕೇಂದ್ರೀಯ ಸಂಸ್ಥೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪ ಹೊರಿಸಿದೆ.ರೇವ್ ಅಥವಾ ಮನರಂಜನಾ ಪಾರ್ಟಿಗಳನ್ನು ಆಯೋಜಿಸಲು ಅಪರಾಧ ಮತ್ತು ಅಕ್ರಮ ನಿಧಿಯ ಬಳಕೆ ಮಾಡಿಕೊಳ್ಳಲಾಗಿದೆ ಎಂದು ಇಡಿ ಆರೋಪ ಮಾಡಿದೆ. ಯಾದವ್ ಮತ್ತು ಪ್ರಕರಣಕ್ಕೆ ಸಂಬಂಧಿಸಿದ ಕೆಲವರನ್ನು ತನಿಖೆಯ ಭಾಗವಾಗಿ ವಿಚಾರಣೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಯಾದವ್ ಆಯೋಜಿಸಿದ್ದ ಪಾರ್ಟಿಗಳಲ್ಲಿ ಹಾವಿನ ವಿಷವನ್ನು ಮನರಂಜನಾ ಔಷಧವಾಗಿ ಬಳಸಿರುವ ಶಂಕೆಯ ತನಿಖೆಗೆ ಸಂಬಂಧಿಸಿದಂತೆ ನೋಯ್ಡಾ ಪೊಲೀಸರು ಮಾರ್ಚ್ 17 ರಂದು ಅವರನ್ನು ಬಂಧಿಸಿದ್ದರು. ರಿಯಾಲಿಟಿ ಶೋ ಬಿಗ್ ಬಾಸ್ OTT 2 ರ ವಿಜೇತರೂ ಆಗಿರುವ 26 ವರ್ಷದ ಯೂಟ್ಯೂಬರ್ ವಿರುದ್ಧ ನೋಯ್ಡಾ ಪೋಲೀಸ್,  ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (NDPS) ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ (IPC) ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲು ಮಾಡಿದೆ. ಕಳೆದ ವರ್ಷ ನವೆಂಬರ್ 3 ರಂದು ನೋಯ್ಡಾದ ಸೆಕ್ಟರ್ 49 ಪೊಲೀಸ್ ಠಾಣೆಯಲ್ಲಿ ಪ್ರಾಣಿ ಹಕ್ಕುಗಳ ಎನ್‌ಜಿಒ ಪೀಪಲ್ ಫಾರ್ ಅನಿಮಲ್ಸ್ (ಪಿಎಫ್‌ಎ) ಪ್ರತಿನಿಧಿ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಆರು ಜನರಲ್ಲಿ ಎಲ್ವಿಶ್‌ ಯಾದವ್‌ ಹೆಸರು ಕೂಡ ಸೇರಿದೆ.

ಕಿಕ್ ಇಳಿಸಿದ್ರಾ ಪೊಲೀಸ್ರು: ಪಾರ್ಟಿಗೆ ಹಾವಿನ ವಿಷ ಪೂರೈಸಿದ್ದು ನಿಜ ಎಂದು ಒಪ್ಪಿಕೊಂಡ ಬಿಗ್‌ಬಾಸ್ ಸ್ಪರ್ಧಿ

ಹಾವಾಡಿಗರಾದ ಇತರ ಐವರನ್ನು ಕಳೆದ ವರ್ಷದ ನವೆಂಬರ್‌ನ್ಲಿ ಬಂಧಿಸಲಾಗಿತ್ತು. ಬಳಿಕ ಸ್ಥಳೀಯ ಕೋರ್ಟ್‌ ಅವರಿಗೆ ಜಾಮೀನು ನೀಡಿತ್ತು. ಕಳೆದ ವರ್ಷ ನವೆಂಬರ್ 3 ರಂದು ನೋಯ್ಡಾದ ಬ್ಯಾಂಕ್ವೆಟ್ ಹಾಲ್‌ನಿಂದ ಐದು ಹಾವಾಡಿಗರನ್ನು ಬಂಧಿಸಲಾಗಿತ್ತು. ಅವರಲ್ಲಿದ್ದ ಐದು ನಾಗರಹಾವು ಸೇರಿದಂತೆ ಒಂಬತ್ತು ಹಾವುಗಳನ್ನು ರಕ್ಷಿಸಲಾಯಿತು ಮತ್ತು 20 ಮಿಲಿ ಶಂಕಿತ ಹಾವಿನ ವಿಷವನ್ನು ಸಹ ವಶಪಡಿಸಿಕೊಳ್ಳಲಾಗಿತ್ತು.
ಪೊಲೀಸರ ಪ್ರಕಾರ, ಆಗ ಯಾದವ್ ಬ್ಯಾಂಕ್ವೆಟ್ ಹಾಲ್‌ನಲ್ಲಿ ಇರಲಿಲ್ಲ. ಏಪ್ರಿಲ್‌ನಲ್ಲಿ ನೋಯ್ಡಾ ಪೊಲೀಸರು ಪ್ರಕರಣದಲ್ಲಿ 1,200 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಹಾವು ಕಳ್ಳಸಾಗಣೆ, ಸೈಕೋಟ್ರೋಪಿಕ್ ವಸ್ತುಗಳ ಬಳಕೆ ಮತ್ತು ರೇವ್ ಪಾರ್ಟಿಗಳನ್ನು ಆಯೋಜಿಸುವುದು ಸೇರಿದಂತೆ ಆರೋಪಗಳನ್ನು ಒಳಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಯೂಟ್ಯೂಬರ್‌, ಬಿಗ್‌ಬಾಸ್‌ ವಿನ್ನರ್‌ ಎಲ್ವಿಶ್‌ ಯಾದವ್‌ ಬಂಧನ

click me!