(ಸಿನಿಮಾ ವಿಮರ್ಶೆ) ಒಳ್ಳೇ ಅಪ್ಪ, ಒಳ್ಳೇ ಮಗ, ಒಳ್ಳೊಳ್ಳೆ ಜೀವನ: ಹೀಗಿದೆ ನೋಡಿ ರಾಜಕುಮಾರ

Published : Mar 25, 2017, 03:19 AM ISTUpdated : Apr 11, 2018, 12:42 PM IST
(ಸಿನಿಮಾ ವಿಮರ್ಶೆ) ಒಳ್ಳೇ ಅಪ್ಪ, ಒಳ್ಳೇ ಮಗ, ಒಳ್ಳೊಳ್ಳೆ ಜೀವನ: ಹೀಗಿದೆ ನೋಡಿ ರಾಜಕುಮಾರ

ಸಾರಾಂಶ

ಛಾಯಾಗ್ರಹಣ: ವೆಂಕಟೇಶ್‌ ಅಂಗುರಾಜ್‌ ಚಿಕ್ಕಂದಿನಲ್ಲಿ ನಾವು ಕೇಳುತ್ತಿದ್ದ ಕತೆಯೊಂದು ಹೀಗೆ ಸಾಗುತ್ತದೆ: ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ತನ್ನ ರಾಜ್ಯ, ಪ್ರಜೆಗಳೆಂದರೆ ಪಂಚ­ಪ್ರಾಣ. ಸಾಮಾನ್ಯ ಜನರ ನೆಮ್ಮದಿಯೇ ತನ್ನ ಜೀವನದ ಪರಮ ಗುರಿ. ಪ್ರಜೆಗಳೂ ರಾಜನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ರಾಜನ ಈ ಔದಾರ್ಯವನ್ನು ಸಹಿಸದ ಆತನ ಮಂತ್ರಿ ಕುತಂತ್ರ ಮಾಡಿ ರಾಜನನ್ನು ಸಾಯಿಸುತ್ತಾನೆ. ಆದರೆ ರಾಜನ ಕನಸು ಸಾಯುವುದಿಲ್ಲ. ಅಪ್ಪನ ಅದರ್ಶಗಳನ್ನೆಲ್ಲ ಮೈಗೂಡಿಸಿಕೊಂಡ ಪುಟ್ಟರಾಜಕುಮಾರ ಬರುತ್ತಾನೆ. ಅಪ್ಪನ ಪರೋಪಕಾರವನ್ನು ಮುಂದುವರೆಸುತ್ತಾನೆ. ದೇವರಂಥ ರಾಜನನ್ನು ಕೊಂದವರನ್ನೂ ಶಿಕ್ಷಿಸುತ್ತಾನೆ. ಮಗನ ಕರ್ತವ್ಯ, ಅಪ್ಪನ ಕನಸುಗಳನ್ನು ಈಡೇರಿಸುತ್ತದೆ. ಕತೆ ಅಲ್ಲಿಗೆ ಮುಗಿಯುತ್ತದೆ. ರಾಜ, ಮಂತ್ರಿ, ಪ್ರಜೆ­ಗಳು, ರಾಜನ ಮಗ... ಈ ನಾಲ್ಕು ಪಾತ್ರಗಳಲ್ಲಿ ಎಷ್ಟೊಂದು ಮೌಲ್ಯಗಳಿವೆ, ಅದರ್ಶ­ಗಳಿವೆ ಎಂಬು­ದನ್ನು ಪ್ರತ್ಯೇಕವಾಗಿ ಹೇಳಬೇ­ಕಿಲ್ಲ. ಈ ಕಾಲ್ಪನಿಕ ಕತೆಗೆ ಈಗ ರಾಜನಾಗಿ ಶರತ್‌ಕುಮಾರ್‌, ಮಂತ್ರಿ­ಯಾಗಿ ಪ್ರಕಾಶ್‌ ರೈ, ರಾಜನ ಮಗನಾಗಿ ಪುನೀತ್‌ರಾಜ್‌ಕುಮಾರ್‌, ಪ್ರೇಕ್ಷಕರ ಪಾತ್ರದಲ್ಲಿ ಪೊಲೀಯೋ ಲಸಿಕೆ ಹಗರಣದಲ್ಲಿ ಸತ್ತ ಮಕ್ಕಳು, ಅವರ ಪೋಷಕರನ್ನು ನಿಲ್ಲಿಸಿದರೆ ಹೇಗಿತ್ತದೆ? ಕುತೂಹಲ ಇದ್ದವರು ‘ರಾಜಕುಮಾರ' ಸಿನಿಮಾ ನೋಡಬಹುದು.

ಚಿತ್ರ: ರಾಜಕುಮಾರ ತಾರಾಗಣ: ಪುನೀತ್‌ರಾಜ್‌ಕುಮಾರ್‌, ಪ್ರಿಯಾ ಆನಂದ್‌, ಶರತ್‌ ಕುಮಾರ್‌, ವಿಜಯ್‌ ಲಕ್ಷ್ಮಿಸಿಂಗ್‌, ರಂಗಾಯಣ ರಘು, ಅಚ್ಯುತ್‌ ಕುಮಾರ್‌, ಚಿಕ್ಕಣ್ಣ, ಸಾಧು ಕೋಕಿಲ, ಪ್ರಕಾಶ್‌ ರೈ, ಅಶೋಕ್‌, ಅವಿನಾಶ್‌, ದತ್ತಣ್ಣ

ನಿರ್ದೇಶನ: ಸಂತೋಷ್‌ ಆನಂದ್‌ರಾಮ್‌

ನಿರ್ಮಾಣ: ವಿಜಯ್‌ ಕಿರಗಂದೂರು

ಸಂಗೀತ: ವಿ ಹರಿಕೃಷ್ಣ

ಛಾಯಾಗ್ರಹಣ: ವೆಂಕಟೇಶ್‌ ಅಂಗುರಾಜ್‌ ಚಿಕ್ಕಂದಿನಲ್ಲಿ ನಾವು ಕೇಳುತ್ತಿದ್ದ ಕತೆಯೊಂದು ಹೀಗೆ ಸಾಗುತ್ತದೆ: ಒಂದೂರಲ್ಲಿ ಒಬ್ಬ ರಾಜ ಇದ್ದ. ಅವನಿಗೆ ತನ್ನ ರಾಜ್ಯ, ಪ್ರಜೆಗಳೆಂದರೆ ಪಂಚ­ಪ್ರಾಣ. ಸಾಮಾನ್ಯ ಜನರ ನೆಮ್ಮದಿಯೇ ತನ್ನ ಜೀವನದ ಪರಮ ಗುರಿ. ಪ್ರಜೆಗಳೂ ರಾಜನನ್ನು ದೇವರೆಂದು ಪೂಜಿಸುತ್ತಾರೆ. ಆದರೆ ರಾಜನ ಈ ಔದಾರ್ಯವನ್ನು ಸಹಿಸದ ಆತನ ಮಂತ್ರಿ ಕುತಂತ್ರ ಮಾಡಿ ರಾಜನನ್ನು ಸಾಯಿಸುತ್ತಾನೆ. ಆದರೆ ರಾಜನ ಕನಸು ಸಾಯುವುದಿಲ್ಲ. ಅಪ್ಪನ ಅದರ್ಶಗಳನ್ನೆಲ್ಲ ಮೈಗೂಡಿಸಿಕೊಂಡ ಪುಟ್ಟರಾಜಕುಮಾರ ಬರುತ್ತಾನೆ. ಅಪ್ಪನ ಪರೋಪಕಾರವನ್ನು ಮುಂದುವರೆಸುತ್ತಾನೆ. ದೇವರಂಥ ರಾಜನನ್ನು ಕೊಂದವರನ್ನೂ ಶಿಕ್ಷಿಸುತ್ತಾನೆ. ಮಗನ ಕರ್ತವ್ಯ, ಅಪ್ಪನ ಕನಸುಗಳನ್ನು ಈಡೇರಿಸುತ್ತದೆ. ಕತೆ ಅಲ್ಲಿಗೆ ಮುಗಿಯುತ್ತದೆ. ರಾಜ, ಮಂತ್ರಿ, ಪ್ರಜೆ­ಗಳು, ರಾಜನ ಮಗ... ಈ ನಾಲ್ಕು ಪಾತ್ರಗಳಲ್ಲಿ ಎಷ್ಟೊಂದು ಮೌಲ್ಯಗಳಿವೆ, ಅದರ್ಶ­ಗಳಿವೆ ಎಂಬು­ದನ್ನು ಪ್ರತ್ಯೇಕವಾಗಿ ಹೇಳಬೇ­ಕಿಲ್ಲ. ಈ ಕಾಲ್ಪನಿಕ ಕತೆಗೆ ಈಗ ರಾಜನಾಗಿ ಶರತ್‌ಕುಮಾರ್‌, ಮಂತ್ರಿ­ಯಾಗಿ ಪ್ರಕಾಶ್‌ ರೈ, ರಾಜನ ಮಗನಾಗಿ ಪುನೀತ್‌ರಾಜ್‌ಕುಮಾರ್‌, ಪ್ರೇಕ್ಷಕರ ಪಾತ್ರದಲ್ಲಿ ಪೊಲೀಯೋ ಲಸಿಕೆ ಹಗರಣದಲ್ಲಿ ಸತ್ತ ಮಕ್ಕಳು, ಅವರ ಪೋಷಕರನ್ನು ನಿಲ್ಲಿಸಿದರೆ ಹೇಗಿತ್ತದೆ? ಕುತೂಹಲ ಇದ್ದವರು ‘ರಾಜಕುಮಾರ' ಸಿನಿಮಾ ನೋಡಬಹುದು.

ಪಕ್ಕಾ ಪುನೀತ್‌ರಾಜ್‌ಕುಮಾರ್‌ ಅವರಿಗೆ ಹೇಳಿ ಮಾಡಿಸಿದಂತಿರುವ ಕತೆ ಇದು. ಯಾಕೆಂದರೆ ಡಾ. ರಾಜ್‌ಕುಮಾರ್‌ ತಿಳಿಯದವರಿಲ್ಲ. ಹಾಗೇ ಅವರ ಸಿನಿಮಾಗಳು ಮತ್ತು ಅವುಗಳ ಮೌಲ್ಯಗಳೂ ಗೊತ್ತಿಲ್ಲದ್ದೇ­ನಲ್ಲ. ಗ್ರೇಟ್‌ನೆಸ್‌ ಮತ್ತು ಸಿಂಪ್ಲಿ­ಸಿಟಿಯ ರಾಜ್‌ಕುಮಾರ್‌ ಅವರ ನೆರಳಿನಲ್ಲಿ ಹುಟ್ಟಿಕೊಂಡ ಲವಲವಿ­ಕೆಯ ಮಗು ‘ರಾಜಕುಮಾರ' ಸಿನಿಮಾ. ಇಲ್ಲಿ ಒಂದೂರಿನಲ್ಲಿ ಒಬ್ಬ ರಾಜ ಮತ್ತು ರಾಜನ ಮಗನ ಈ ಕತೆಯಲ್ಲಿ ಮಗನಿಗೆ ಅಪ್ಪನೇ ಹೀರೋ. ಅಪ್ಪನಿಗೆ ಮಗನೇ ರಾಜಕುಮಾರ. ಅಪ್ಪ-ಮಕ್ಕಳ ಅದರ್ಶ ಬದುಕಿನ ಜತೆಗೆ ಒಂದು ಮೆಡಿಕಲ್‌ ಮಾಫಿಯಾ, ರಾಜಕುಮಾರಿಯ ಪ್ರೇಮ ಕತೆ, ಮುಪ್ಪಿನ ಕಾಲದಲ್ಲಿ­ರುವ ಹಿರಿಯ ಜೀವಗಳ ನಿರ್ಲಕ್ಷಿತ ಬದುಕು ಇಷ್ಟನ್ನು ಒಳಗೊಂಡಿರುವ ಈ ಸಿನಿಮಾ, ಒಂದು ಹಂತದಲ್ಲಿ ಈ ತಲೆಮಾರಿನ ‘ಕಸ್ತೂರಿ ನಿವಾಸ'ದಂತೆ ಭಾಸವಾಗು­ತ್ತದೆ. ಅನಿವಾಸಿ ಭಾರತೀಯನಿಗೆ ತನ್ನ ಸಂಪಾದನೆಯಲ್ಲಿ ಶೇ.40 ಭಾಗ­ವನ್ನು ಭಾರತದಲ್ಲಿ ಒಳ್ಳೆಯ ಕೆಲಸಗಳಿ­ಗಾಗಿ ಉಪಯೋಗಿಸುವ ಯೋಚನೆ. ಇಂಥ ವ್ಯಕ್ತಿ ವಿಮಾನದ ದುರಂತದಲ್ಲಿ ಕುಟುಂಬ ಸಮೇತರಾಗಿ ಸಾವಿಗೀಡಾಗುತ್ತಾನೆ. ಈತನ ಮಗ ಭಾರತಕ್ಕೆ ಹಿಂತಿರುಗುತ್ತಾನೆ.

ಯಾವ ಅನಾಥಶ್ರಮದಲ್ಲಿ ತಾನು ಬೆಳೆದನೋ ಅದೇ ಕಸ್ತೂರಿ ನಿವಾಸದೊಳಗೆ ಕಾಲಿಡುವ ಹೊತ್ತಿಗೆ ತನ್ನ ಸಾಕು ತಂದೆಯ ಒಳ್ಳೆಯ ಕನಸು ಇಲ್ಲಿ ರಾಜಕೀಯ ಸಂಚಿನ ದಾಳವಾಗಿದ್ದು ಗೋತ್ತಾಗುತ್ತದೆ. ಮುಂದೇನು ಎನ್ನುವುದನ್ನ ನೀವೇ ತೆರೆ ಮೇಲೆ ನೋಡಬೇಕು. ಸಾಮಾನ್ಯ ಜನರ ಬದುಕಿನ ಜತೆ ಆಟವಾಡುತ್ತಿರು­ವವರನ್ನು ಅಟ್ಟಾಡಿಸಿಕೊಂಡು ಹೊಡೆಯುವಾಗ ಪವರ್‌ ಸ್ಟಾರ್‌, ತಾನಿರುವ ಅಶ್ರಮದಲ್ಲಿನ ಹಿರಿಯ ಜೀವಗಳಿಗೆ ಮಗನಂತೆ ಕಾಣುವಾಗ ರಾಜಕುಮಾರ­ನಾಗಿ ನೋಡುಗರಿಗೆ ಆಪ್ತವಾಗುತ್ತಾರೆ ಪುನೀತ್‌ರಾಜ್‌ಕುಮಾರ್‌. ಮೊನ್ನೆ ಮೊನ್ನೆ ಬಂದ ‘ಹೆಬ್ಬುಲಿ' ಮತ್ತು ‘ರಾಜಕುಮಾರ' ಇಬ್ಬರೂ ಒಂದೇ ಮೌಲ್ಯವನ್ನು ಹೇಳುತ್ತಿದ್ದಾರೆ ಅಂತ ಕಂಡರೂ ಆಡಿಸುವವನು (ನಿರ್ದೇಶಕ) ಬೇರೆಯಾದ್ದರಿಂದ ಹೊಸದಾಗಿಯೇ ಕಾಣುತ್ತದೆ.

ನಿರ್ದೇಶಕರು ಇಲ್ಲಿ ಒಬ್ಬ ಮಹಾಪುರುಷನ ಗುಣಗಳ ಮೂಲಕ ಹೀರೋಗೆ ಇಮೇಜ್‌ ಕಟ್ಟುತ್ತಾ ಹೋಗುತ್ತಾರೆ. ಹಾಗಾಗಿ ಚಿತ್ರದ ಮೊದಲಿಂದ ಕೊನೇತನಕ ಶ್ರೇಷ್ಠ ವ್ಯಕ್ತಿ, ಆತನ ಪುತ್ರ, ಇಬ್ಬರ ಗುಣಗಳ ತುಲನೆಗಳೆಲ್ಲಾ ಮತ್ತೆ ಮತ್ತೆ ಪ್ರಸ್ತಾಪವಾಗುತ್ತಾ ಹೋಗುತ್ತದೆ. ಚಿತ್ರದಲ್ಲಿ ಮನರಂಜನೆ, ಸಂದೇಶಕ್ಕೆ ಕೊರತೆ ಇಲ್ಲ. ನಟನೆ, ಡ್ಯಾನ್ಸ್‌, ಫೈಟ್‌, ಸೆಂಟಿಮೆಂಟ್‌ ದೃಶ್ಯಗಳಲ್ಲಿ ಪುನೀತ್‌ರಾಜ್‌ಕುಮಾರ್‌ ತಮಗೆ ತಾವೇ ಸಾಟಿ ಎನ್ನುವಂತೆ ಪಾತ್ರವನ್ನು ನಿಭಾಯಿ­ಸಿದ್ದಾರೆ. ಉಳಿದವರದ್ದು ಮರದ ಬುಡವನ್ನು ಗಟ್ಟಿಯಾಗಿಸುವ ಬೇರುಗಳಂತೆ ನಾಯಕನ ಪಾತ್ರವನ್ನು ಗಟ್ಟಿಮಾಡುತ್ತ ಹೋಗುವ ಪಾತ್ರಗಳು. ವಿ ಹರಿಕೃಷ್ಣ ಸಂಗೀತ ಹೊಸದಾಗಿ ಕೇಳುತ್ತದೆ. ವೆಂಕಟೇಶ್‌ ಅಂಗುರಾಜ್‌ರ ಕ್ಯಾಮೆರಾ ಚಿತ್ರದ ಪ್ರತಿ ದೃಶ್ಯವನ್ನೂ ಕ್ಲಾಸಿಕ್‌ ಆಗಿಸಿದೆ.

-ಆರ್. ಕೇಶವಮೂರ್ತಿ, ಕನ್ನಡ ಪ್ರಭ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ದೃಷ್ಟಿಬೊಟ್ಟು' ಮೂಲಕ ಕನ್ನಡಿಗರ ಮನಗೆದ್ದ ಅರ್ಪಿತಾ ಮೋಹಿತೆ ಈಗ ತೆಲುಗು ಸೀರಿಯಲ್ ನಾಯಕಿ
ಕನ್ನಡ ಇಂಡಸ್ಟ್ರಿಗೆ ಪ್ರಾಣ ಕೊಟ್ಟರೂ ಚೆನ್ನಾಗಿ ನೋಡಿಕೊಂಡಿಲ್ಲ: ಕಣ್ಣೀರು ಹಾಕಿದ ತುಪ್ಪದ ಬೆಡಗಿ ರಾಗಿಣಿ ಹೇಳಿದ್ದೇನು?