ನಟಿ ಗೀತಾ ನೆನಪಿದ್ಯಲ್ಲ ನಿಮಗೆ? ಅಮೆರಿಕಾದಿಂದ ಬಂದು ಈಗ ಮತ್ತೆ ಸಿನಿಮಾದಲ್ಲಿ ನಟಿಸ್ತಿರೋದ್ಯಾಕೆ..?

By Shriram Bhat  |  First Published Apr 30, 2024, 1:57 PM IST

ಸದ್ಯಕ್ಕೆ ನಟಿ ಗೀತಾ ಪಾಲಿಗೆ ಬಂದ ಎಲ್ಲ ಪಾತ್ರಗಳನ್ನು ಹಿಂದುಮುಂದು ನೋಡದೇ ಒಪ್ಪಿಕೊಳ್ಳುತ್ತಿಲ್ಲ. ತಮ್ಮ ವಯಸ್ಸು, ಮನಸ್ಸು ಒಪ್ಪಿಕೊಳ್ಳುವ ಜತೆಗೆ ತಮ್ಮನ್ನು ಈಗಿನ ಸ್ಥಿತಿಯಲ್ಲಿ ಪ್ರೇಕ್ಷಕರು ಒಪ್ಪಿಕೊಳ್ಳುವಂಥ ಪಾತ್ರಗಳನ್ನು ಮಾತ್ರ ಅಳೆದೂ ತೂಗಿ..


ನಟಿ ಗೀತಾ (Geetha)ಹೆಸರು ಕೇಳದವರು ತುಂಬಾ ಕಡಿಮೆ ಎನ್ನಬಹುದು. ಡಾ ರಾಜ್‌ಕುಮಾರ್, ಡಾ ವಿಷ್ಣುವರ್ಧನ್ ಮೊದಲಾದ ಘಟಾನುಘಟಿ ನಟರೊಂದಿಗೆ ತೆರೆ ಹಂಚಿಕೊಂಡಿದ್ದ ನಟಿ ಗೀತಾ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಸೇರಿದಂತೆ, ತಮಿಳು, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲೂ ನಟಿಸಿರುವ ಗೀತಾ, ಚಿತ್ರರಂಗದಲ್ಲಿ ಯಾವುದೇ ಕಾಂಟ್ರೋವರ್ಸಿಗೆ ಒಳಗಾದವರಲ್ಲ. ಡಾ ರಾಜ್‌ಕುಮಾರ್ ಜೋಡಿಯಾಗಿ 'ಅನುರಾಗ ಅರಳಿತು', ಆಕಸ್ಮಿಕ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಹೆಣ್ಣಿನ ಸೇಡು, ದೇವರ ಆಟ, ಆಶಾ ಕಿರಣ, ಎರಡು ರೇಖೆಗಳು, ಪ್ರಚಂಡ ಕುಳ್ಳ, ಅರುಣರಾಗ ಹೀಗೆ ಸಾಕಷ್ಟು ಚಿತ್ರಗಳಲ್ಲಿ ನಟಿ ಗೀತಾ ನಟಿಸಿದ್ದಾರೆ. ಮನಮೆಚ್ಚು ನಟನೆ, ಮುಗ್ಧ-ಸ್ನಿಗ್ಧ  ಸೌಂದರ್ಯದಿಂದ ಸಿನಿಮಾ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ ನಟಿ ಗೀತಾ ಅವರಿಗೆ ಅಂದಿನ ಕಾಲದಲ್ಲಿ ಬಹಳಷ್ಟು ಅಭಿಮಾನಿಗಳಿದ್ದರು. ಈಗಿನಂತೆ ಆಗ ಸೋಷಿಯಲ್ ಮೀಡಿಯಾಗಳು ಇರಲಿಲ್ಲ. ಈ ಕಾರಣಕ್ಕೆ ನಟಿ ಗೀತಾರಂಥವರ ಫ್ಯಾನ್ಸ್‌ಗಳ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿರಲಿಲ್ಲ ಅಷ್ಟೇ. ಈಗಲೂ ನಟಿ ಗೀತಾ ಅಭಿನಯದ ಚಿತ್ರಗಳು ಟಿವಿಯಲ್ಲಿ ಬಂದಾಗ ಖುಷಿಯಿಂದ ನೋಡುವವರ ಸಂಖ್ಯೆ ದೊಡ್ಡದಿದೆ. 

Tap to resize

Latest Videos

ಸಿನಿಮಾರಂಗದಲ್ಲಿ ಪೀಕ್‌ನಲ್ಲಿ ಇರುವಾಗಲೇ, ಚಾರ್ಟೆಡ್ ಅಕೌಂಟೆಟ್ ವಾಸನ್ ಎನ್ನುವವರ ಜತೆ ಲವ್‌ನಲ್ಲಿ ಬಿದ್ದು, 1997ರಲ್ಲಿ ಮುದುವೆಯಾಗಿ ಅಮೆರಿಕಾಗೆ ಹೋಗಿ ಅಲ್ಲಿ ಸೆಟ್ಲ್ ಆಗಿದ್ದರು ನಟಿ ಗೀತಾ. ಆದರೆ ತಾಯಿನಾಡಿದ ಸೆಳೆತ ಎಂದಿಗೂ ಬಿಡುವುದಿಲ್ಲ ಎಂಬ ಮಾತಿನಂತೆ, ಮತ್ತೆ ಬೆಂಗಳೂರಿಗೆ ಬಂದು ಈಗ ಕೆಲವು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ ಗೀತಾ. ಅಷ್ಟು ಸುಲಭವಾಗಿ ಬಣ್ಣದ ನಂಟು ಕಲಾವಿದರನ್ನು ಬಿಟ್ಟು ಹೋಗುವುದಿಲ್ಲ ಎಂಬ ಮಾತಿಗೆ ಪಕ್ಕಾ ಸಾಕ್ಷಿ ಎಂಬಂತೆ ನಟಿ ಗೀತಾ ಲೈಫ್ ನಡೆಯುತ್ತಿದೆ ಎಂದರೆ ತಪ್ಪಲ್ಲ. 

ಸದ್ಯಕ್ಕೆ ನಟಿ ಗೀತಾ ಪಾಲಿಗೆ ಬಂದ ಎಲ್ಲ ಪಾತ್ರಗಳನ್ನು ಹಿಂದುಮುಂದು ನೋಡದೇ ಒಪ್ಪಿಕೊಳ್ಳುತ್ತಿಲ್ಲ. ತಮ್ಮ ವಯಸ್ಸು, ಮನಸ್ಸು ಒಪ್ಪಿಕೊಳ್ಳುವ ಜತೆಗೆ ತಮ್ಮನ್ನು ಈಗಿನ ಸ್ಥಿತಿಯಲ್ಲಿ ಪ್ರೇಕ್ಷಕರು ಒಪ್ಪಿಕೊಳ್ಳುವಂಥ ಪಾತ್ರಗಳನ್ನು ಮಾತ್ರ ಅಳೆದೂ ತೂಗಿ ಒಪ್ಪಿಕೊಂಡು ನಟಿಸುತ್ತಿದ್ದಾರೆ. ನಟ ಅನಂತ್‌ ನಾಗ ಜತೆ ಗೀತಾ ನಟಿಸಿದ 'ಅರುಣರಾಗ' ಚಿತ್ರವನ್ನಂತೂ ಯಾರೂ ಮರೆಯಲು ಅಸಾಧ್ಯ. 

ಕಾರಣ, ಅದರಲ್ಲಿನ ಗೀತಾರ ಮನಮುಟ್ಟುವ ಅಭಿನಯ, ಹಾಡಿನಲ್ಲಿ ಅವರು ಭಾವಪೂರ್ಣವಾಗಿ ನಟಿಸಿದ ರೀತಿ ಎಲ್ಲವೂ ಪ್ರೆಕ್ಷಕರನ್ನು ಮಂತ್ರಮುಗ್ಧರನ್ನಾಗಿ ಮಾಡಿತ್ತು. ಇಂದಿಗೂ ಕೂಡ ಕನ್ನಡ ಸಿನಿಪ್ರೇಕ್ಷಕರು ನಟಿ ಗೀತಾ ಅವರನ್ನು ಅವರ ನಟನೆ, ಸಿನಿಮಾಗಳ ಕಾರಣಕ್ಕೆ ನೆನಪು ಮಾಡಿಕೊಳ್ಳುತ್ತಲೇ ಇರುತ್ತಾರೆ. 

click me!