ರೇಪ್ ಮಾಡೋಕೆ ಬಂದವನ ಗುಪ್ತಾಂಗ ಕತ್ತರಿಸಿದ ಮಹಿಳೆ | ತನ್ನನ್ನು ರಕ್ಷಿಸಿಕೊಳ್ಳಲು ಕೃತ್ಯ
ಸಿಧಿ(ಮಾ.20): ಮಧ್ಯಪ್ರದೇಶದ ಸಿಧಿ ಜಿಲ್ಲೆಯ ತನ್ನ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ ವ್ಯಕ್ತಿಯ ಜನನಾಂಗ ಕತ್ತರಿಸಿದ ಘಟನೆ ಮಧ್ಯಪ್ರದೇಶದ ಸಿಧಿಯಲ್ಲಿ ನಡೆದಿದೆ.
ಜಿಲ್ಲಾ ಕೇಂದ್ರದಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಉಮರಿಹಾ ಗ್ರಾಮದಲ್ಲಿ ಗುರುವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
undefined
ಹೈವೆಗಳಲ್ಲಿ ರಾತ್ರಿ ರಾಬರಿ ಹೇಗ್ ನಡೆಯುತ್ತಾ ಗೊತ್ತಾ.? ನೋಡಿ ಕವರ್ ಸ್ಟೋರಿ ಕಾರ್ಯಾಚರಣೆ
ಮಹಿಳೆ ನೀಡಿದ ದೂರಿನ ಪ್ರಕಾರ, ಘಟನೆ ನಡೆದಾಗ ಪತಿ ಕೆಲಸಗಳಿಗಾಗಿ ಸ್ಥಳದಿಂದ ಹೊರಗೆ ಹೋಗಿದ್ದರು ಎಂದು ಖಡ್ಡಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಸ್‌ಐ ಧರ್ಮೇಂದ್ರ ಸಿಂಗ್ ರಜಪೂತ್ ತಿಳಿಸಿದ್ದಾರೆ.
ಆರೋಪಿ ಅವರ ಮನೆಗೆ ಪ್ರವೇಶಿಸಿದಾಗ ಮಹಿಳೆ ತನ್ನ 13 ವರ್ಷದ ಮಗನೊಂದಿಗೆ ಮನೆಯಲ್ಲಿದ್ದರು. ಕಳ್ಳ ನುಸುಳಿದ್ದಾನೆಂದು ಭಾವಿಸಿ, ಆಕೆಯ ಮಗ ಮನೆಯಿಂದ ಹೊರಗೆ ಸುರಕ್ಷಿತವಾಗಿ ಓಡಿಹೋಗಿದ್ದ ಎಂದು ಅವರು ಹೇಳಿದ್ದಾರೆ.
ಆನ್‌ಲೈನ್ ಕ್ಲಾಸ್ ಎಂದು ನೀಲಿ ಚಿತ್ರ ವೀಕ್ಷಣೆ: 12ರ ಬಾಲಕನಿಂದ ತಂಗಿಯ ರೇಪ್!...
ಇದಾದ ನಂತರ ಆರೋಪಿ ಮಹಿಳೆಯನ್ನು ಥಳಿಸಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ. ಮಹಿಳೆ 20 ನಿಮಿಷಗಳ ಕಾಲ ಆರೋಪಿಯ ಪ್ರಯತ್ನವನ್ನು ವಿರೋಧಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನದಲ್ಲಿ, ಮಹಿಳೆ ತನ್ನ ಹಾಸಿಗೆಯ ಕೆಳಗೆ ಇದ್ದ ಕತ್ತಿ ಎತ್ತಿಕೊಂಡು ಪುರುಷನ ಜನನಾಂಗಗಳನ್ನು ಕತ್ತರಿಸಿದ್ದಾಳೆ. ನಂತರ ಮಹಿಳೆ ಪೊಲೀಸ್ ಠಾಣೆ ತಲುಪಿದ್ದು, ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಆತನ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಪ್ಪಳ; ಒಂದು ಕೊಲೆ ನಿಗೂಢ ಪೆಟ್ಟಿಗೆ ರಹಸ್ಯ, ಡಬಲ್ ಆಕ್ಟಿಂಗ್ ಮರ್ಮ
ಪೊಲೀಸರು ಪ್ರಥಮ ಚಿಕಿತ್ಸೆಗಾಗಿ ಆರೋಪಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವ್ಯಕ್ತಿಯನ್ನು ಸಿಧಿ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರ ಸಲಹೆಯಂತೆ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ರೇವಾ ಜಿಲ್ಲೆಯ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 354, 456, 506 ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಕೂಡ ಮಹಿಳೆ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಕ್ತಿಯ ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 327 ರ ಅಡಿಯಲ್ಲಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.