ಹುಬ್ಬಳ್ಳಿಯಲ್ಲಿ ಮತ್ತೆ ಪುಂಡರ ಅಟ್ಟಹಾಸ; 500 ರೂಪಾಯಿಗಾಗಿ 5 ಬಾರಿ ಚಾಕುವಿನಿಂದ ಇರಿದ ಸ್ನೇಹಿತರು!

By Ravi Janekal  |  First Published Nov 17, 2024, 2:26 PM IST

ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಗೆಳೆಯನಿಗೆ ಮನಬಂದಂತೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿ ಆನಂದನಗರದಲ್ಲಿ ನಡೆದಿದೆ.


ಹುಬ್ಬಳ್ಳಿ (ನ.17): ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಗೆಳೆಯನಿಗೆ ಮನಬಂದಂತೆ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಹಳೇ ಹುಬ್ಬಳ್ಳಿ ಆನಂದನಗರದಲ್ಲಿ ನಡೆದಿದೆ.

ಮೊಹ್ಮದ್‌ ಗಾಯಗೊಂಡ ವ್ಯಕ್ತಿ.ಮೊರಬ.ಅಲ್ತಾಫ್, ಜಾಫರ್, ರಫೀಕ್, ರಿಜ್ಜು ಚಾಕು ಇರಿದ ಆರೋಪಿಗಳು. ಗಾಯಾಳು ಯುವಕನಿಗೆ ಕಿಮ್ಸ್ ದಾಖಲಿಸಿ ನೀಡಲಾಗುತ್ತಿದೆ.ದೇಹದ ವಿವಿಧೆಡೆ ಚಾಕು ಇರಿದಿರುವ ಪುಂಡರು.

Tap to resize

Latest Videos

undefined

ಘಟನೆ ಹಿನ್ನೆಲೆ:

ಗಾಯಾಳು ಯುವಕ ಮೊಹ್ಮದ್ ಹಾಗೂ ಅಲ್ತಾಫ್ ಸ್ನೇಹಿತರಾಗಿದ್ದಾರೆ. ಮೊಹ್ಮದ್ ಬಳಿ 500 ಸಾಲ ಪಡೆದಿದ್ದ ಅಲ್ತಾಫ್. ಕೊಟ್ಟ ಹಣ ವಾಪಸ್ ಮರಳಿಸಿರಲಿಲ್ಲ. ಹೀಗಾಗಿ ಮೊಹ್ಮದ್ ಕೊಟ್ಟಿದ್ದ 500 ಹಣ ಹಿಂದಿರುಗಿಸುವಂತೆ ಕೇಳಿದ್ದೇನೆ. ಇದರಿಂದ ಕೋಪಕೊಂಡಿದ್ದ ಆರೋಪಿ ಅಲ್ತಾಫ್.ರಾತ್ರಿ ಗೆಳೆಯರೆಲ್ಲರೂ ಒಟ್ಟಿಗೆ ಸೇರಿದಾಗ 500 ರೂಪಾಯಿ ವಿಚಾರವಾಗಿ ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗುತ್ತಿದ್ದ ಹಾಗೆ ಮೊಹ್ಮದ್‌ಗೆ ಅಲ್ತಾಫ್, ಜಾಫರ್, ರಫೀಕ್, ರಿಜ್ಜು ಸೇರಿ ಐದು ಜನರಿಂದ ಚಾಕುವಿನಿಂದ ಇರಿದು ಹತ್ಯೆಗೆ ಯತ್ನಿಸಿದ್ದಾರೆ. ದೇಹದ ಐದು ಕಡೆ ಮನಸೋಇಚ್ಚೆ ಇರಿದು ಗಾಯಗೊಳಿಸಿರುವ ಕಿರಾತಕರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೊಹ್ಮದ್‌ನನ್ನು ಸ್ಥಳೀಯರು ದಾವಿಸಿ ಬಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಘಟನೆ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ರಾಯಚೂರು: ಒಂದು ಕೋಣೆಗೆ 12 ಪ್ರಶ್ನೆ ಪತ್ರಿಕೆ, 24 ಅಭ್ಯರ್ಥಿಗಳು! ಪಿಡಿಒ ಪರೀಕ್ಷೆಯಲ್ಲಿ ಕೆಪಿಎಸ್ಸಿ ಮತ್ತೆ ಯಡವಟ್ಟು!

ಸ್ಥಳಕ್ಕೆ ಆಗಮಿಸಿದ ಡಿಸಿಪಿ ನಂದಗಾವಿ,ಎಸಿಪಿ ಚಿಕ್ಕಮಠ ಹಾಗೂ ಹಳೇ ಹುಬ್ಬಳ್ಳಿ ಠಾಣೆಯ ಇನ್ಸ್ಪೆಕ್ಟರ್ ಸುರೇಶ ಯಳ್ಳೂರ ಘಟನೆ ಕುರಿತು ಗಾಯಾಳು ಮೊಹ್ಮದ್ ಹಾಗೂ ಸ್ಥಳಿಯರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಸದ್ಯ 5 ಜನರ ವಿರುದ್ಡ ಕೊಲೆ ಯತ್ನ ಕೇಸ್ ದಾಖಲಿಸಿರುವ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

click me!