Bengaluru: ಜೀವನದಲ್ಲಿ ಎಂಜಾಯ್ ಮಾಡೋಕೆ 2 ಕೋಟಿ ನೀಡಿ ತಂದೆಯನ್ನೇ ಹತ್ಯೆ ಮಾಡಿಸಿದ ಮಗ!

By Gowthami K  |  First Published May 21, 2023, 3:16 PM IST

ನನ್ನ ತಂದೆ ರಾಗಿ ಮುದ್ದೆ ತಿಂದು ಇನ್ನೂ ಗಟ್ಟಿ ಮುಟ್ಟಾಗಿ ಇದ್ದಾನೆ. ಇನ್ನೂ ಇಪ್ಪತ್ತು ವರ್ಷ ಅತ ಸಾಯುತ್ತಿರಲಿಲ್ಲ ಖರ್ಚಿಗೆ ಹಣವೂ ಕೊಡ್ತಿರಲಿಲ್ಲ ಎಂದು ತಂದೆಯನ್ನು 2 ಕೋಟಿ ಡೀಲ್ ಕೊಟ್ಟು ಕೊಲ್ಲಿಸಿದ್ದ ಮಗ


ಬೆಂಗಳೂರು (ಮೇ.21):  ಆಸ್ತಿ ವಿಚಾರಕ್ಕೆ ಮಗನಿಂದಲೇ ತಂದೆಯ ಹತ್ಯೆಗೆ ಸುಪಾರಿ ಕೊಟ್ಟ ಪ್ರಕರಣದಲ್ಲಿ ಪೊಲೀಸರ ಚಾರ್ಜ್ ಶೀಟ್ ನಲ್ಲಿ ಬಯಲಾಗಿದೆ ಭಯಾನಕ ವಿಚಾರ. ತಂದೆ ಹತ್ಯೆಗೆ ಅಸಲಿ ಕಾರಣವನ್ನು ತನಿಖೆ ವೇಳೆ ಆರೋಪಿ ಮಣಿಕಂಠ ಬಾಯ್ಬಿಟ್ಟಿದ್ದು ವಿಚಾರ ಕೇಳಿದ ಪೊಲೀಸರೇ ಶಾಕ್ ಆಗಿದ್ದಾರೆ. ನನ್ನ ತಂದೆ ರಾಗಿ ಮುದ್ದೆ ತಿಂದು ಇನ್ನೂ ಗಟ್ಟಿ ಮುಟ್ಟಾಗಿ ಇದ್ದಾನೆ. ಇನ್ನೂ ಇಪ್ಪತ್ತು ವರ್ಷ ಅತ ಸಾಯುತ್ತಿರಲಿಲ್ಲ ಖರ್ಚಿಗೆ ಹಣವೂ ಕೊಡ್ತಿರಲಿಲ್ಲ. 20 ವರ್ಷದ ನಂತರ ನನ್ನ ಜೀವನದಲ್ಲಿ ಎಂಜಾಯ್ ಮಾಡೋಕೆ ಏನಿರುತ್ತೆ? ಹಾಗಾಗಿ ಕೊಲೆ ಮಾಡಿದ್ರೆ ನಾನೇ ಆರಾಮವಾಗಿ ಲೈಫ್ ಎಂಜಾಯ್ ಮಾಡಬಹುದು ಎಂದಿದ್ದಾರೆ. ಮಣಿಕಂಠನ ಮಾತು ಕೇಳಿ ಮಾರತಹಳ್ಳಿ ಪೊಲೀಸರು ಶಾಕ್ ಆಗಿದ್ದಾರೆ.

ತಂದೆ ಹತ್ಯೆಗೆ ಸುಫಾರಿ ಕೊಡುವಾಗ್ಲೂ 2 ರೀತಿಯಲ್ಲಿ ಮಣಿಕಂಠ ಪ್ಲಾನ್ ಮಾಡಿದ್ದ. ಈ ಹಿಂದೆ ಮೊದಲನೇ ಹೆಂಡ್ತಿ ಕೊಲೆ ಮಾಡಿ ಮಣಿಕಂಠ ಜೈಲು ಸೇರಿದ್ದ. ಆ ವೇಳೆ ಜೈಲಿನಲ್ಲಿ ಮಣಿಕಂಠನಿಗೆ ನಡವತ್ತಿ ಶಿವು ಗ್ಯಾಂಗ್ ಪರಿಚಯವಾಗಿತ್ತು. ನಡವತ್ತಿ ಶಿವು ಗ್ಯಾಂಗ್ ನಾವು ಕೊಲೆ ಮಾಡೊಲ್ಲ ಆದ್ರೆ ಸರೆಂಡರ್ ಅಗ್ತೀವಿ. ನಮಗೆ ಜೈಲಿನಲ್ಲಿದ್ದು ಅಭ್ಯಾಸವಿದೆ ನೀನು ಬೇರೆಯವರ ಬಳಿ ಕೊಲೆ ಮಾಡಿಸು ಅಂದಿದ್ದ. ಅದರಂತೆ ಚಿಟ್ಟಿ ಬಾಬುಗೆ ಮಣಿಕಂಠ ಕೊಲೆಯ ಸುಫಾರಿ ಕೊಟ್ಟಿದ್ದ. ಚಿಟ್ಟಿ ಬಾಬು ಕೊಲೆ ಮಾಡ್ತಿದ್ದಂತೆ  ನಡುವತ್ತಿ ಶಿವು ಗ್ಯಾಂಗ್ ಪೊಲೀಸ್ ಠಾಣೆಗೆ ಬಂದು ಶರಣಾಗಿತ್ತು. ಅದ್ರೆ ಚಿಟ್ಟಿ ಬಾಬು ಜೊತೆ ಬೈಕ್ ನಲ್ಲಿ ಬಂದಿದ್ದವನಿಗೆ ಈ ಸರೆಂಡರ್ ಪ್ಲಾನ್ ಗೊತ್ತಿರಲಿಲ್ಲ. ತನಿಖೆ ವೇಳೆ ಈತ ಕೊಟ್ಟ ಮಾಹಿತಿ ಆಧಾರದ ಮೇಲೆ ಅಸಲಿ ಸತ್ಯ ಹೊರ ಬಂತು.

Latest Videos

undefined

ಕಳೆದ ಫೆಬ್ರವರಿ ನಡೆದಿದ್ದ ಘಟನೆ: ಕಳೆದ ಫೆಬ್ರವರಿ ನಡೆದಿದ್ದ ಈ ಕೊಲೆಯಲ್ಲಿ ಆಸ್ತಿಯನ್ನು ಸೊಸೆ ಹೆಸರಿಗೆ ಬರೆದಿದ್ದಕ್ಕೆ ಕೋಪಗೊಂಡು 2 ಕೋಟಿ ಸುಪಾರಿ ನೀಡಿ ವೃದ್ಧ ತಂದೆಯನ್ನೇ ಕೊಲೆ ಮಾಡಿಸಿದ್ದಕ್ಕೆ ಮಣಿಕಂಠ ಸೇರಿ ಮೂವರನ್ನು ಮಾರತಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದರು.

ಕಾವೇರಪ್ಪ ಬಡಾವಣೆ 2ನೇ ಕ್ರಾಸ್‌ ಇಂದ್ರಪ್ರಸ್ಥ ಅಪಾರ್ಚ್‌ಮೆಂಟ್‌ ನಿವಾಸಿ ಮಣಿಕಂಠ ಅಲಿಯಾಸ್‌ ಮಣಿ (36), ಈತನ ಸ್ನೇಹಿತರಾದ ಹೊಸಕೋಟೆಯ ದೊಡ್ಡದುನ್ನಸಂದ್ರ ನಿವಾಸಿ ಟಿ.ಆದರ್ಶ ಅಲಿಯಾಸ್‌ ಬೆಂಕಿ (26) ಮತ್ತು ಹೊಸಕೊಟೆ ತಾಲೂಕು ನಡುವತ್ತಿ ಗ್ರಾಮದ ಎನ್‌.ಎಂ.ಶಿವಕುಮಾರ್‌ ಅಲಿಯಾಸ್‌ ನಡುವತ್ತಿ ಶಿವ (24) ನನ್ನು ಬಂಧಿಸಲಾಗಿತ್ತು. ಆರೋಪಿ ಮಣಿಕಂಠನಿಂದ ಸುಪಾರಿ ಪಡೆದಿದ್ದ ಈ ಇಬ್ಬರು ಆರೋಪಿಗಳು ಫೆ.13ರಂದು ಇಂದ್ರಪ್ರಸ್ಥ ಅಪಾರ್ಚ್‌ಮೆಂಟ್‌ ಬಳಿ ಮಣಿಕಂಠನ ತಂದೆ ನಾರಾಯಣಸ್ವಾಮಿ (70) ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು.

ಕಾವೇರಪ್ಪ ಬಡಾವಣೆಯಲ್ಲಿ ಇಂದ್ರಪ್ರಸ್ಥ ಅಪಾರ್ಚ್‌ಮೆಂಟ್‌ ಮಾಲಿಕ ನಾರಾಯಣಸ್ವಾಮಿ ದಂಪತಿಗೆ ನಾಲ್ವರು ಹೆಣ್ಣು ಮಕ್ಕಳು ಹಾಗೂ ಒಂದು ಗಂಡು ಸೇರಿ ಒಟ್ಟು ಐವರು ಮಕ್ಕಳಿದ್ದಾರೆ. ಈ ಪೈಕಿ ನಾಲ್ವರು ಹೆಣ್ಣು ಮಕ್ಕಳನ್ನು ಮದುವೆ ಮಾಡಲಾಗಿದೆ. ನಾರಾಯಣಸ್ವಾಮಿ ದಂಪತಿ ಪುತ್ರ ಮಣಿಕಂಠನ ಜತೆಗೆ ನೆಲೆಸಿದ್ದರು. ಮಣಿಕಂಠ ಕೌಟುಂಬಿಕ ಕಲಹದಿಂದ ಮೊದಲ ಪತ್ನಿಯನ್ನು ಕೊಲೆ ಮಾಡಿದ ಆರೋಪದಡಿ 2013ರಲ್ಲಿ ಜೈಲು ಸೇರಿದ್ದ. ನ್ಯಾಯಾಲಯದಲ್ಲಿ ನಿರಾಪರಾಧಿ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಎಂಟು ವರ್ಷದ ಹಿಂದೆ ಮಾಲೂರು ಮೂಲದ ಅರ್ಚನಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ದಂಪತಿಗೆ ಒಂದು ಹೆಣ್ಣು ಮಗುವಿದೆ. ಆದರೂ ಮಣಿಕಂಠ ಪರಸ್ತ್ರೀ ಜತೆಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ. ಈ ವಿಚಾರ ಅರ್ಚನಾಗೆ ಗೊತ್ತಾಗಿ ಮಗಳೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. 

ಸೊಸೆಗೆ ಕೆಲ ಆಸ್ತಿ ನೀಡಿದ್ದ ಮಾವ:
ಈ ನಡುವೆ 2022ರ ಆಗಸ್ಟ್‌ನಲ್ಲಿ ಮಣಿಕಂಠ ಪತ್ನಿ ಅರ್ಚನಾಳ ಮೇಲೆ ಮಾರಕಾಸ್ತ್ರದಿಂದ ಹಲ್ಲೆಗೈದು ಕೊಲೆಗೆ ಯತ್ನಿಸಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿದ್ದ. ಬಳಿಕ ಜಾಮೀನು ಪಡೆದು ಹೊರಬಂದಿದ್ದ ಮಣಿಕಂಠನಿಗೆ ಪತ್ನಿ ಅರ್ಚನಾ ವಿಚ್ಛೇದನ ಬಯಸಿ ನ್ಯಾಯಾಲಯದಿಂದ ನೋಟಿಸ್‌ ಕೊಡಿಸಿದ್ದಳು. ಆಗ ಮಧ್ಯಪ್ರವೇಶಿಸಿದ್ದ ಮಾವ ನಾರಾಯಣಸ್ವಾಮಿ ಹಾಗೂ ಹಿರಿಯರು ವಿಚ್ಛೇದನ ಪಡೆಯುವುದು ಬೇಡ ಎಂದು ಮನವೊಲಿಸಲು ಯತ್ನಿಸಿದ್ದರು.

ದಾವಣಗೆರೆಯಲ್ಲಿ ಅಪ್ರಾಪ್ತೆಯನ್ನು ಮದುವೆಯಾಗುವಂತೆ ಪೀಡಿಸಿದ

ಮಾತುಕತೆ ವೇಳೆ ನಾರಾಯಣಸ್ವಾಮಿ ಅವರ ಸ್ವಯಾರ್ಜಿತ ಆಸ್ತಿ ಪಣತೂರು ಗ್ರಾಮದ ವಿಎಸ್‌ಎಸ್‌ ಕಾಲೋನಿಯ 60/40 ವಿಸ್ತೀರ್ಣದ ಮನೆ, ಚೌರಾಸಿಯಾ ಮ್ಯಾನರ್‌ ಅಪಾರ್ಚ್‌ಮೆಂಟ್‌ನ ಮೂರು ಬಿಎಚ್‌ಕೆ ಪ್ಲ್ಯಾಟ್‌, .15 ಲಕ್ಷ ನಗದು ಹಾಗೂ ಹೊಸಕೋಟೆ ತಾಲೂಕಿನಲ್ಲಿರುವ 1 ಎಕರೆ 7 ಗುಂಟೆ ಜಮೀನನ್ನು ಸೊಸೆ ಅರ್ಚನಾಳಿಗೆ ನೀಡಲು ಮಾತುಕತೆಯಾಗಿತ್ತು. ಅದರಂತೆ ಫ್ಲ್ಯಾಟ್‌ ಹೊರತುಪಡಿಸಿ ಉಳಿದ ಆಸ್ತಿಗಳನ್ನು ಅರ್ಚನಾ ಹೆಸರಿಗೆ ಪರಭಾರೆ ಮಾಡಿದ್ದರು. ಈ ವಿಚಾರವಾಗಿ ಮಣಿಕಂಠ ಹಾಗೂ ತಂದೆ ನಾರಾಯಣಸ್ವಾಮಿ ನಡುವೆ ಗಲಾಟೆಯಾಗಿತ್ತು.

ಬೆಂಗಳೂರಿನ ರೌಡಿಶೀಟರ್ ಅಲ್ಯೂಮಿನಿಯಂ ಬಾಬು ತಮಿಳುನಾಡಿನಲ್ಲಿ ಭೀಕರ ಹತ್ಯೆ!

ಪಾರ್ಕಿಂಗ್‌ ಸ್ಥಳದಲ್ಲೇ ಕೊಚ್ಚಿ ಕೊಲೆ
ನಾರಾಯಣಸ್ವಾಮಿ ಅವರು ಸೊಸೆ ಹೆಸರಿಗೆ ಪ್ಲ್ಯಾಟ್‌ ನೋಂದಣಿ ಮಾಡುವ ಸಲುವಾಗಿ ಫೆ.13ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಕೆ.ಆರ್‌.ಪುರ ಉಪ ನೋಂದಣಾಧಿಕಾರಿ ಕಚೇರಿಗೆ ತೆರಳಲು ಮಣಿಕಂಠನ ಜತೆಗೆ ಅಪಾರ್ಚ್‌ಮೆಂಟ್‌ನ ಪಾರ್ಕಿಂಗ್‌ ಸ್ಥಳಕ್ಕೆ ಬಂದಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ನಾರಾಯಣಸ್ವಾಮಿ ಮೇಲೆ ದಾಳಿ ನಡೆಸಿ ಕೊಲೆಗೈದು ಪರಾರಿಯಾಗಿದ್ದರು. ಈ ವೇಳೆ ಮಣಿಕಂಠ ಘಟನೆಗೂ ನನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ವರ್ತಿಸಿದ್ದ. ನಂತರ ಈತನ ವರ್ತನೆಯಲ್ಲಾದ ಬದಲಾವಣೆ ಕಂಡು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಸುಪಾರಿ ಕೊಲೆ ರಹಸ್ಯ ಬಯಲಾಗಿತ್ತು.

click me!