Latest Videos

ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಗ್ಯಾಂಗ್‌, ನಕಲಿ ವೈದ್ಯನ ಫಾರ್ಮ್ ಹೌಸ್‌ನಲ್ಲಿ ಹೂತಿಟ್ಟ ಭ್ರೂಣಗಳು ವಶಕ್ಕೆ

By Gowthami KFirst Published Jun 16, 2024, 1:41 PM IST
Highlights

ರಾಜ್ಯದ ಮತ್ತೊಂದು ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರ ತನಿಖೆ ವೇಳೆ ಹೂತು ಹಾಕಿದ್ದ ಮೂರು ಭ್ರೂಣಗಳು ಪತ್ತೆಯಾಗಿದೆ.

ಬೆಳಗಾವಿ (ಜೂ.16): ರಾಜ್ಯದ ಮತ್ತೊಂದು ಜಿಲ್ಲೆಯಲ್ಲಿ ಭ್ರೂಣ ಹತ್ಯೆ ಪ್ರಕರಣ ಬೆಳಕಿಗೆ ಬಂದಿದ್ದು, ಜನರನ್ನು ಬೆಚ್ಚಿ ಬೀಳಿಸಿದೆ. ಪೊಲೀಸರ ತನಿಖೆ ವೇಳೆ ಹೂತು ಹಾಕಿದ್ದ ಮೂರು ಭ್ರೂಣಗಳು ಪತ್ತೆಯಾಗಿದೆ.

ಮಕ್ಕಳ ಮಾರಾಟ ಜಾಲದಲ್ಲಿ ಸಿಕ್ಕಿ ಬಿದ್ದಿರುವ ನಕಲಿ ವೈದ್ಯ ಅಬ್ದುಲ್  ಗಫಾತ್ ಲಾಡಖಾನ್‌ನ ಮತ್ತೊಂದು ಕರಾಳ ಮುಖ ಅನಾವರಣವಾಗಿದ್ದು, ಮಕ್ಕಳ ಮಾರಾಟ ಜಾಲದ ಪ್ರಕರಣವನ್ನು ಬೆನ್ನತ್ತಿರುವ ಬೆಳಗಾವಿ ಪೊಲೀಸರಿಗೆ ಬೆಚ್ಚಿಬಿಳಿಸುವ ಮಾಹಿತಿ‌ ಲಭ್ಯವಾಯ್ತು. ನಕಲಿ ವೈದ್ಯ ಅಬ್ದುಲ್ ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದಲ್ಲಿ ಹಲವು ಭ್ರೂಣ ಹತ್ಯೆ ಮಾಡಿರುವುದು ಬೆಳಕಿಗೆ ಬಂತು. ಮಾತ್ರವಲ್ಲ  ಭ್ರೂಣ ಹತ್ಯೆಗೈದು ತನ್ನ ಫಾರ್ಮ್ ಹೌಸ್‌ನಲ್ಲಿ ಹೂತು ಹಾಕಿದ್ದ.

ಬೆಳಗಾವಿಯಲ್ಲಿ ಭ್ರೂಣ ಹತ್ಯೆ ಜಾಲ ಪತ್ತೆ..ತನಿಖೆ ವೇಳೆ ನಕಲಿ ವೈದ್ಯನ ಕರಾಳ ಮುಖ ಬಯಲು!

ಡಿಸಿ ನಿತೇಶ ಪಾಟೀಲ್ ಸೂಚನೆ ಮೇರೆಗೆ ಪರಿಶೀಲನೆಗೆ ತಂಡ ರಚನೆ ಮಾಡಲಾಗಿದ್ದು, ಪೊಲೀಸರು, ಆರೋಗ್ಯ ಇಲಾಖೆ, ಎಫ್ ಎಸ್ ಎಲ್ ತಂಡ ಕಿತ್ತೂರು ತಾಲೂಕಿನ ತಿಗಡೊಳ್ಳಿ ಗ್ರಾಮದ ಬಳಿ ಇರೋ ನಕಲಿ ವೈದ್ಯನ ಫಾರ್ಮ್ ಹೌಸ್ ಗೆ ಭೇಟಿ  ನೀಡಿ ಹೂತು ಹಾಕಲಾಗಿದ್ದ ಮೂರು ಭ್ರೂಣಗಳನ್ನು ವಶಕ್ಕೆ ಪಡೆದಿದ್ದಾರೆ.

ಲಾಡಖಾನ್ ಗೆ ಸೇರಿದ ತಿಗಡೊಳ್ಳಿಯ ಎಂಟು ಎಕರೆ ಪ್ರದೇಶದಲ್ಲಿನ ತೋಟಕ್ಕೆ  ಡಿಎಚ್ಒ ಡಾ.ಮಹೇಶ ಕೋಣಿ, ಎಸಿ ಪ್ರಭಾವತಿ ಫಕೀರಪುರ, ಬೈಲಹೊಂಗಲ ಡಿವೈಎಸ್‌ಪಿ ರವಿ ನಾಯಕ್, ಮೂವರು ಸಿಪಿಐ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯ್ತು. 

ಸ್ಕ್ಯಾನಿಂಗ್ ಸುಳಿವು ನಿಗೂಢ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಹತ್ಯೆ ನಿರಂತರ

ಭ್ರೂಣಗಳನ್ನ ತಂದು ಹೂತಿದ್ದ ನಕಲಿ ವೈದ್ಯನ ಸಹಾಯಕ  ರೋಹಿತ್ ಕುಪ್ಪಸಗೌಡರ್ ವಶಕ್ಕೆ ಪಡೆದ ಪೊಲೀಸರು, ಆತ ತೋರಿಸಿದ ಸ್ಥಳದಲ್ಲಿ ಹೂತಿದ್ದ ಮೂರು ಭ್ರೂಣಗಳನ್ನು ವಶಕ್ಕೆ ಪಡೆದರು. ಸದ್ಯ ಸಿಕ್ಕಿರುವ ಮೂರು ಭ್ರೂಣಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ.

ಕಾರ್ಯಾಚರಣೆ ಕುರಿತು ಡಿಎಚ್‌ಒ ಡಾ. ಮಹೇಶ ಕೋಣಿ ಪ್ರತಿಕ್ರಿಯೆ ನೀಡಿ,  ಫಾರ್ಮ್ ಹೌಸ್‌ನ ನಾಲ್ಕು ಕಡೆಗೆ ಅಗೆಯಲಾಗಿದ್ದು, ಮೂರು ಭ್ರೂಣಗಳ ಅವಶೇಷಗಳು ಪತ್ತೆಯಾಗಿವೆ. ನಕಲಿ ವೈದ್ಯನ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ, ಆತ‌ನ ಪ್ರಮಾಣ ಪತ್ರ ಪರಿಶೀಲಿಸಲಾಗುತ್ತಿದೆ. ಕಾರ್ಯಾಚರಣೆ ಕುರಿತು ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುವುದು. ನಕಲಿ ವೈದ್ಯನ ವಿರುದ್ಧ ಕ್ರಮ ಜರುಗಿಸದ ಟಿಎಚ್‌ಒ ಎಸ್‌ಎಸ್‌ ಸಿದ್ದಣ್ಣವರಗೆ ನೋಟಿಸ್ ನೀಡಲಾಗುವುದು ಎಂದರು.

ಜೂನ್ 10 ರಂದು ಮಾಳಮಾರುತಿ ಠಾಣೆ ಪೊಲೀಸರು ಮಕ್ಕಳ ಮಾರಾಟ ಜಾಲದಲ್ಲಿ ನಕಲಿ ವೈದ್ಯ ಸೇರಿ ಐವರನ್ನು ಬಂಧಿಸಿದ್ದರು. ಪ್ರಕರಣ ಬೆನ್ನತ್ತಿರುವ ಬೆಳಗಾವಿ ಪೊಲೀಸರಿಗೆ ಬೆಚ್ಚಿಬಿಳಿಸುವ ಮಾಹಿತಿ‌ ಲಭ್ಯವಾಯ್ತು. ಬೆಳಗಾವಿ ಜಿಲ್ಲೆಯ ಕಿತ್ತೂರು ಪಟ್ಟಣದ ತನ್ನ ಕ್ಲಿನಿಕ್‌ನಲ್ಲಿ ಹಲವು ಭ್ರೂಣ ಹತ್ಯೆ ಮಾಡಿದ್ದ ನಕಲಿ ವೈದ್ಯ ಅಬ್ದುಲ್ ಲಾಡಖಾನ್. ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದ. 

ಗ್ಯಾಂಗ್ ಸಿಕ್ಕಿಬಿದ್ದಿದ್ದು ಹೇಗೆ?
ನಕಲಿ ವೈದ್ಯ ಅಬ್ದುಲ್ ಲಾಡಖಾನ್ ಗ್ಯಾಂಗ್ ಮದುವೆಯಾಗದೆ ಪ್ರಗ್ನೆಂಟ್ ಆಗೋ ಯುವತಿಯರನ್ನೇ ಟಾರ್ಗೆಟ್ ಮಾಡ್ತಿತ್ತು. ಗರ್ಭ ಧರಿಸಿ ಅಬಾರ್ಷನ್‌ಗೆ ಬರುವ ಜೋಡಿಗಳಿಗೆ ಅಬಾರ್ಷನ್‌ ಮಾಡಿಸಿ ಮಗು ಸತ್ತೋಯ್ತು ಅಂತ ಹೇಳ್ತಿದ್ದ ಖದೀಮ ನಂತರ ಆ ಮಕ್ಕಳನ್ನು ತಾನೇ  ಲಾಲನೆ ಪಾಲನೆ ಮಾಡಿ ನಂತರ ಹಣಕ್ಕಾಗಿ ಮಾರಾಟ ಮಾಡ್ತಿದ್ದ. 

ಈ ಲಾಡಖಾನ್ ಎಂಬ ನಕಲಿ ವೈದ್ಯನ ಬಳಿ ಮಹಾದೇವಿ ಜೈನ್ ಎಂಬಾಕೆ 60 ಸಾವಿರ ಕೊಟ್ಟು ಮಗು ಖರೀದಿ ಮಾಡಿ ಅದನ್ನು ಬೆಳಗಾವಿಗೆ ಬಂದು ಮಾರಾಟ ಮಾಡಬೇಕು ಎನ್ನುವಷ್ಟರಲ್ಲಿ ಆ ಸುದ್ದಿ ಮಕ್ಕಳ ರಕ್ಷಣಾ ಘಟಕ್ಕೆ ತಲುಪಿದೆ‌.‌ ಉಪಾಯ ಮಾಡಿ ಮಹಾದೇವಿಗೆ ಕರೆ ಮಾಡಿದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ತಮಗೆ ಮಕ್ಕಳು ಬೇಕು ಎಂದು ಮಹಾದೇವಿ ಬಳಿ ಕೇಳಿಕೊಂಡಿದ್ದಾರೆ. ಆಗ ಮಹಾದೇವಿ ಹಣದಾಸೆಗೆ ರಕ್ಷಣಾ ಘಟಕದ ಬಳಿಯೇ 1.40 ಲಕ್ಷ ರೂಗೆ ಬೇಡಿಕೆ ಇಟ್ಟಿದ್ದಾಳೆ. ಆಯ್ತು ಕೊಡ್ತಿವಿ ಬನ್ನಿ ಎಂದು ರಕ್ಷಣಾ ಘಟಕ ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಹಾದೇವಿಗೆ ಬರಲು ಬರಲು ತಿಳಸಿದೆ. ಆಕೆ ಬರ್ತಿದ್ದಂತೆ ಮಗುವಿನೊಂದಿಗೆ ಮಹಾದೇವಿ ಹಾಗೂ ಗ್ಯಾಂಗ್ ಅನ್ನು ರಕ್ಷಣಾ ಘಟಕವೇ ಹೆಡೆ ಮುರಿ ಕಟ್ಟಿದೆ. ನಕಲಿ ವೈದ್ಯ, ನಕಲಿ ನರ್ಸ್ ಸೇರಿ ಐವರನ್ನು ಬಂಧಿಸಿತ್ತು.

click me!