ನಟ ಇರ್ಫಾನ್ ಇನ್ನಿಲ್ಲ: ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟಿಗರು

Suvarna News   | Asianet News
Published : Apr 29, 2020, 03:25 PM IST
ನಟ ಇರ್ಫಾನ್ ಇನ್ನಿಲ್ಲ: ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟಿಗರು

ಸಾರಾಂಶ

ಭಾರತ ಚಲನಚಿತ್ರ ದಿಗ್ಗಜ ಇರ್ಫಾನ್ ಖಾನ್ ಮುಂಬೈ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇರ್ಫಾನ್ ಖಾನ್ ನಿಧನಕ್ಕೆ ಭಾರತ ಕ್ರಿಕೆಟ್ ತಂಡದ ಆಟಗಾರರು ಕಂಬನಿ ಮಿಡಿದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಏ.29): ದಿಗ್ಗಜ ನಟ ಇರ್ಫಾನ್ ಖಾನ್ ಮುಂಬೈನ ಆಸ್ಪತ್ರೆಯಲ್ಲಿಂದು(ಏ.29) ಕೊನೆಯುಸಿರೆಳೆದ ಸುದ್ದಿ ಕೇಳಿ ಟೀಂ ಇಂಡಿಯಾ ಕ್ರಿಕೆಟಿಗರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಿದ್ದಾರೆ. ಇರ್ಫಾನ್‌ಗೆ ಕೇವಲ 53 ವರ್ಷಗಳು ವಯಸಾಗಿತ್ತು.

ಕೊಲೊನ್ ಇನ್‌ಫೆಕ್ಷನ್(ಕರುಳಿನ ಸೋಂಕು) ಕಾಣಿಸಿಕೊಂಡ ಬೆನ್ನಲ್ಲೇ 'ಅಂಗ್ರೇಜಿ ಮೀಡಿಯಂ' ನಟ ಕೋಕಿಲಬೆನ್ ಧೀರೂಬಾಯಿ ಆಸ್ಪತ್ರೆಗೆ ದಾಖಲಾಗಿತ್ತು.ಮೂರು ದಿನಗಳ ಹಿಂದಷ್ಟೇ ಇರ್ಫಾನ್ ಖಾನ್ ಅವರ 95 ವರ್ಷದ ತಾಯಿ ಕೊನೆಯುಸಿರೆಳೆದಿದ್ದರು. ಇರ್ಫಾನ್ ಖಾನ್ ಕೊನೆಯುಸಿರೆಳೆದ ಆಘಾತಕಾರಿ ಸುದ್ದಿ ಹೊರಬೀಳುತ್ತಿದ್ದಂತೆ ಭಾರತ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ನುಡಿನಮನ ಸಲ್ಲಿಸಿದ್ದಾರೆ.

ಬಾಲಿವುಡ್ ಖ್ಯಾತ‌ ನಟ ಇರ್ಫಾನ್‌ ಖಾನ್‌ ನಿಧನ!

ಕ್ರಿಕೆಟ್ ಲೆಜೆಂಡ್ ತೆಂಡುಲ್ಕರ್, ಇರ್ಫಾನ್ ಖಾನ್ ಮೃತಪಟ್ಟ ಸುದ್ದಿಕೇಳಿ ಬೇಸರವಾಯಿತು. ಅವರು ನನ್ನ ನೆಚ್ಚಿನ ನಟರಲ್ಲಿ ಒಬ್ಬರಾಗಿದ್ದರು. ಅವರ ನಟನೆಯ ಬಹುತೇಕ ಎಲ್ಲಾ ಚಿತ್ರಗಳನ್ನು ನೋಡಿದ್ದೇನೆ. ಕೊನೆಯ ಚಿತ್ರ ಅಂಗ್ರೇಜಿ ಮೀಡಿಯಂನಲ್ಲಿಯೂ ಇರ್ಫಾನ್ ಅದ್ಭುತವಾಗಿ ನಟಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಆಪ್ತರಿಗೆ ದುಃಖ ಮರೆಸುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಅದ್ಭುತ ಪ್ರತಿಭಾನ್ವಿತ ನಟನಿಗೆ ನಮನಗಳು ಎಂದು ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದರೆ, ಅದ್ಭುತ ನಟನನ್ನು ಕಳೆದುಕೊಂಡ ವಿಚಾರ ತಿಳಿದು ಬೇಸರವಾಯಿತು ಎಂದು ಕನ್ನಡಿಗ ಕುಂಬ್ಳೆ ಟ್ವೀಟ್ ಮಾಡಿದ್ದಾರೆ.

ಇನ್ನುಳಿದಂತೆ ಸುರೇಶ್ ರೈನಾ, ಇಶಾಂತ್ ಶರ್ಮಾ, ಶಿಖರ್ ಧವನ್ ಮುಂತಾದವರು ಟ್ವೀಟ್ ಮೂಲಕ ಅಗಲಿದ ನಟನಿಗೆ ಸಂತಾಪ ಸೂಚಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಮಿನಿ ಹರಾಜು: ಮೊದಲ ಸುತ್ತಿನಲ್ಲೇ ದೊಡ್ಡ ಮೊತ್ತಕ್ಕೆ ಬಿಡ್ ಆಗಿ ದಾಖಲೆ ಬರೆದ ಕ್ಯಾಮರೋನ್ ಗ್ರೀನ್
ಪತ್ನಿ ಜೊತೆ ಪ್ರೇಮಾನಂದ ಮಹಾರಾಜ್ ಭೇಟಿಯಾದ ಕೊಹ್ಲಿ, ಕಣ್ಣೀರಿಟ್ಟ ಅನುಷ್ಕಾ