ಆರ್ಸಿಬಿ ಭರ್ಜರಿ ಗೆಲುವು ಸಾಧಿಸುತ್ತಿದ್ದಂತೆಯೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪರವಾಗಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಅಭಿಮಾನಿಗಳು ನಿನ್ನೆಅಂದರೆ ಮೇ 19 ಸಂಭ್ರಮದಲ್ಲಿ ಅಕ್ಷರಶಃ ತೇಲಾಡಿದ ದಿನ. ಮೊದಲು ಎಂಟು ಪಂದ್ಯಗಳಲ್ಲಿ ಏಳು ಪಂದ್ಯಗಳನ್ನು ಸೋತ ಆರ್ಸಿಬಿ, ಬಳಿಕ ಆರು ಪಂದ್ಯಗಳನ್ನು ಸತತವಾಗಿ ಗೆದ್ದು ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿದೆ. ಈ ಗೆಲುವು ಪುನೀತ್ ರಾಜ್‌ಕುಮಾರ್ ಅಭಿಮಾನಿಗಳಿಗಂತಲೂ ಇನ್ನಷ್ಟು ಉತ್ಸಾಹ ತುಂಬಿದ್ದು, ಗೆಲುವಿನ ಸಂಭ್ರಮದಲ್ಲಿ ತೇಲಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪುನೀತ್ ಅವರ ಪತ್ನಿ ಅಶ್ವಿನಿ ಅವರ ಪರವಾದ ಹೇಳಿಕೆಗಳ ಸುರಿಮಳೆಯಾಗುತ್ತಿದ್ದು, ಇವರು ನಮ್ಮ ಅದೃಷ್ಟ ದೇವತೆ ಎಂದು ಶ್ಲಾಘಿಸಲಾಗುತ್ತಿದೆ. ಆರ್ಸಿಬಿ ತಂಡ ಜಯಶೀಲವಾಗುತ್ತಿದ್ದಂತೆಯೇ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Punneth Rajkumar) ಅವರ ಫೋಟೋಗಳು ಟ್ರೆಂಡಿಂಗ್ನಲ್ಲಿದ್ದು, ಅಭಿಮಾನಿಗಳು ಅಭಿನಂದನೆಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ಅಷ್ಟಕ್ಕೂ ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಐಪಿಎಲ್ ಶುರುವಾದಾಗ ಪ್ರತಿ ವರ್ಷವೂ ಆರ್ಸಿಬಿ ಪಂದ್ಯಗಳನ್ನು ವೀಕ್ಷಿಸಲು ಮೈದಾನಕ್ಕೆ ಹೋಗಿ ಚಿಯರ್ ಮಾಡುತ್ತಿದ್ದರು ಪುನೀತ್ ರಾಜ್‌ಕುಮಾರ್. ಇದು ಈ ತಂಡದ ರಾಯಭಾರಿಯೂ ಆಗಿದ್ದರು. ತಮ್ಮ ಬಿಜಿ ಶೆಡ್ಯೂಲ್ ನಡುವೆಯೂ ಆರ್ಸಿಬಿ ಪರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಪುನೀತ್ ಮಾತ್ರವಲ್ಲದೇ ಅವರ ಪತ್ನಿ ಅಶ್ವಿನಿ ಕೂಡ ಅಪ್ಪಟ್ಟ ಆರ್ಸಿಬಿ ಅಭಿಮಾನಿ. ಸದಾ ಬೆಂಬಲ ನೀಡುವ ಅಶ್ವಿನಿ, ಇತ್ತೀಚಿಗೆ ಆರ್ಸಿಬಿ ಅನ್ಬಾಕ್ಸ್ ಈವೆಂಟ್ಗೆ ಭಾಗಿಯಾಗಿದ್ದರು. ಆದರೆ ಸತತವಾಗಿ ಆರ್ಸಿಬಿ ಸೋತ ಹಿನ್ನೆಲೆಯಲ್ಲಿ ಅದಕ್ಕೆ ಅಶ್ವಿನಿ ಅವರೇ ಕಾರಣ ಎಂಬಂತೆ ಕೆಲವು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರು. ಇದು ಅಪ್ಪು ಅಭಿಮಾನಿಗಳಿಗೆ ತೀವ್ರ ನೋವು ತರಿಸಿತ್ತು.
ವಿರಾಟ್-ಅನುಷ್ಕಾ ತಮ್ ಫೋನ್ನಲ್ಲಿ ಪರಸ್ಪರ ಹೆಸ್ರನ್ನು ಹೀಗೆ ಸೇವ್ ಮಾಡಿಕೊಂಡಿದ್ದಾರಂತೆ!
ಆದರೆ ಇದೀಗ ಆರ್ಸಿಬಿ ಗೆಲುವು ಸಾಧಿಸುತ್ತಿದ್ದಂತೆಯೇ ಅಶ್ವಿನಿಯವರು ನಮ್ಮ ಅದೃಷ್ಟ ದೇವತೆ ಎಂದು ಹೊಗಳುತ್ತಿದ್ದಾರೆ. ಅದೇ ರೀತಿ ಕಿರಿಕ್ ಕೀರ್ತಿಯವರೂ ಸೋಷಿಯಲ್ ಮೀಡಿಯಾದಲ್ಲಿ ಅಶ್ವಿನಿ ಪರವಾಗಿ ಮಾತನಾಡಿದ್ದಾರೆ. ನೋಡ್ರೋ... ನಮ್ಮಕ್ಕ ಅದೃಷ್ಟ ಕಣ್ರೋ.... ಅಪಶಕುನ ಅಲ್ಲ... ಎಂಬ ಶೀರ್ಷಿಕೆ ಕೊಟ್ಟು ಅಪ್ಪು ಪತ್ನಿಯವರನ್ನು ಅವರು ಹಾಡಿ ಹೊಗಳಿದ್ದಾರೆ. ಅದೇ ಇನ್ನೊಂದೆಡೆ, ಸಿಎಸ್‌ಕೆ ವಿರುದ್ಧ 27 ರನ್‌ಗಳಿಂದ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಂತೆಯೇ ಅಪ್ಪು ಫ್ಯಾನ್ಸ್ ಹಳೆಯದನ್ನು ನೆನಪಿಸಿಕೊಂಡಿದ್ದಾರೆ. ಅಂದು ಅತ್ತಿಗೆಯನ್ನು ಬೈದವರು ಎಲ್ಲಿದ್ದೀರಾ ಎಂದು ಕೇಳಿದ್ದಾರೆ. ಅಶ್ವಿನಿ ಪುನೀತ್ ರಾಜ್‌ಕುಮಾರ್ ಅದೃಷ್ಟ ದೇವತೆ. ಅದಕ್ಕೆ ಆರ್ ಸಿಬಿ ಸತತವಾಗಿ ಗೆದ್ದು ಪ್ಲೇಆಫ್‌ಗೆ ಪ್ರವೇಶಿಸಿದೆ ಎಂದು ತಿರುಗೇಟು ಕೊಟ್ಟಿದ್ದಾರೆ.
ನಟ ದರ್ಶನ್ ಅಭಿಮಾನಿಗಳ ಗಜಪಡೆ ಟ್ವಿಟರ್ ಪೇಜ್‌ನಿಂದ ಹಾಕಿದ್ದ ಅವಹೇಳನಕಾರಿ ಪೋಸ್ಟ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಆಗ ಪ್ರತಿಕ್ರಿಯೆ ನೀಡಿದ್ದರು. "ಬೇರೆ ಆಯ್ಕೆ ಇಲ್ಲ. ಜೀವನ ಸಾಗಲೇಬೇಕು. ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ" ಎಂದು ಹೇಳುವ ಮೂಲಕ ಇನ್ನೇನನ್ನೂ ಹೇಳಿರಲಿಲ್ಲ ಅವರು. ಅಂದಹಾಗೆ ಪೋಸ್ಟ್ ಈಗಾಗಲೇ ದೂರು ಕೂಡ ದಾಖಲಾಗಿದೆ.
51 ವರ್ಷವಾದ್ರೂ ಸಿತಾರಾ ಸಿಂಗಲ್ ಯಾಕೆ? ನಟಿಯ ಬದುಕಿನ ಆ ಕರಾಳ ಅಧ್ಯಾಯ ಬಹಿರಂಗ...