Anil Kumble  

(Search results - 136)
 • <p>Anil Kumble, Tsunami</p>

  Cricket3, Aug 2020, 12:14 PM

  2004ರ ಸುನಾಮಿ ಅಲೆಯಿಂದ ಪಾರಾಗಿದ್ದ ಅನಿಲ್ ಕುಂಬ್ಳೆ!

  2004ರ ಸುನಾಮಿ ಸೃಷ್ಟಿಸಿದ ಭೀಕರತೆಯನ್ನು ಯಾರ ಮರೆತಿಲ್ಲ. ದಕ್ಷಿಣ ಭಾರತದಲ್ಲಿ ಸುನಾಮಿ ಅಬ್ಬರಕ್ಕೆ ಸಾವಿರಕ್ಕೂ ಹೆಚ್ಚು ಕುಟುಂಬಗಳು ನಲುಗಿ ಹೋಗಿತ್ತು. ಏನಾಗುತ್ತಿದೆ ಅನ್ನುವಷ್ಟರಲ್ಲಿ ಜನ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಈ ಸುನಾಮಿ ಅಲೆಯಿಂದ ಅನಿಲ್ ಕುಂಬ್ಳೆ ಹಾಗೂ ಕುಟುಂಬ ಪಾರಾಗಿತ್ತು. ಈ ಭೀಕರತೆಯನ್ನು ಅನಿಲ್ ಕುಂಬ್ಳೆ ವಿವರಿಸಿದ್ದಾರೆ.

 • <p>Anil Kumble</p>

  Karnataka Districts11, Jun 2020, 9:01 PM

  ಶೃಂಗೇರಿ ಶಾರದಾಂಬೆಗೆ ನಮಿಸಿದ ಸ್ಪಿನ್ ಮಾಂತ್ರಿಕ,  ಸುಮಧುರ ಗಾಯಕ

  ಕ್ರಿಕೆಟ್ ಜರ್ಸಿಯಲ್ಲಿ ಇಂಡಿಯನ್ ಕ್ಯಾಪ್ ಹೊತ್ತ ಅನಿಲ್ ಕುಂಬ್ಳೆ ಅವರನ್ನು ಕಂಡಿದ್ದೇವೆ. ಸೂಟು ಬೂಟು ಧರಿಸಿ ಮೈಕ್ ಮುಂದೆ ಮೈಮರೆಯುವ ವಿಜಯ್ ಪ್ರಕಾಶ್ ಅವರನ್ನು ಕಂಡಿದ್ದೇವೆ.  ಪಂಚೆ ಉಟ್ಟು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮತ್ತು ದಿಗ್ಗಜ ಗಾಯಕ ವಿಜಯ್ ಪ್ರಕಾಶ್ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದಿದ್ದಾರೆ. 

 • Cricket27, May 2020, 5:53 PM

  ಬೆಂಗಳೂರು ಪೊಲೀಸರ ನೆರವಿಗೆ ನಿಂತ ಕ್ರಿಕೆಟಿಗ ಅನಿಲ್ ಕುಂಬ್ಳೆ

  ಕೊರೋನಾ ವಾರಿಯರ್ಸ್‌ಗಳಾದ ಪೊಲೀಸರ ನೆರವಿಗೆ ಜಂಬೋ ಖ್ಯಾತಿಯ ಅನಿಲ್ ಕುಂಬ್ಳೆ ಧಾವಿಸಿದ್ದಾರೆ. ಯುವ ಎಂಬ NGO ಜೊತೆಗೂಡಿ ಪೊಲೀಸರಿಗೆ ಒಂದು ಸಾವಿರ ಸೇಫ್ಟಿ ಕಿಟ್ ವಿತರಿಸುವ ಮೂಲಕ ತಮ್ಮ ಬದ್ಧತೆ ಮೆರೆದಿದ್ದಾರೆ.

  ಕನ್ನಡಿಗ ಅನಿಲ್ ಕುಂಬ್ಳೆ ಹಿಂದೆ ಸಾಕಷ್ಟು ಬಾರಿ ಕೊರೋನಾ ಕುರಿತಾಗಿ ಸಾಕಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕವು ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಲ್ಲೇ ಸುರಕ್ಷಿತವಾಗಿರಿ ಎನ್ನುವ ಸಂದೇಶವನ್ನು ರವಾನಿಸಿದ್ದರು. ಇದೀಗ ಮಾಜಿ ಲೆಗ್‌ಸ್ಪಿನ್ನರ್ ಕುಂಬ್ಳೆ ಪೊಲೀಸರಿಗೆ ನೆರವಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿದ್ದಾರೆ. 
   

 • Cricket19, May 2020, 5:17 PM

  ಕೊರೋನಾ ಭೀತಿ; ಚೆಂಡಿಗೆ ಎಂಜಲು ಬಳಕೆ ನಿಷೇಧಿಸಲು ಕುಂಬ್ಳೆ ನೇತೃತ್ವದ ಐಸಿಸಿ ಸಮಿತಿ ಶಿಫಾರಸು

  ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ಸೇರಿದ ಸಮಿತಿ, ಮುಂಬರುವ ದಿನಗಳಲ್ಲಿ ಎಂಜಲು ಬಳಕೆ ನಿಷೇಧಕ್ಕೆ ಬರವಂತೆ ಶಿಫಾರಸು ಮಾಡಿದೆ. ಆದರೆ ಇದೇ ವೇಳೆ ಬೆವರು ಹಚ್ಚುವ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿಲ್ಲ. ಅಂದರೆ ಬೌಲರ್‌ಗಳು ಚೆಂಡಿಗೆ ಬೆವರನ್ನು ಹಚ್ಚಿ ಹೊಳಪನ್ನು ಕಾಯ್ದುಕೊಳ್ಳಬಹುದಾಗಿದೆ.

 • Cricket4, May 2020, 4:51 PM

  ಸಾರ್ವಕಾಲಿಕ ಕನಸಿನ ಭಾರತ ತಂಡ ಹೆಸರಿಸಿದ ಗಂಭೀರ್, 3 ಕನ್ನಡಿಗರಿಗೆ ಸ್ಥಾನ..!

  ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಬಿಜೆಪಿ ಹಾಲಿ ಸಂಸದ ಗೌತಮ್ ಗಂಭೀರ್ ತಮ್ಮ ಸಾರ್ವಕಾಲಿಕ ಕನಸಿನ ಭಾರತ ತಂಡವನ್ನು ಪ್ರಕಟಿಸಿದ್ದು, ಕನ್ನಡಿಗ ಅನಿಲ್ ಕುಂಬ್ಳೆಗೆ ನಾಯಕತ್ವ ಪಟ್ಟ ನೀಡಿದ್ದಾರೆ.

  ಇನ್ನು ಸದಾ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಮೇಲೆ ಕಿಡಿಕಾರುವ ಗಂಭೀರ್ ಈ ಇಬ್ಬರಿಗೂ ತಂಡದಲ್ಲಿ ಅವಕಾಶ ನೀಡಿದ್ದಾರೆ. ಆದರೆ ನಾಯಕನ ಪಟ್ಟ ನೀಡಿಲ್ಲ. ಇನ್ನುಳಿದಂತೆ ಗಂಭೀರ್ ತಂಡದಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • gutam

  Cricket4, May 2020, 1:05 PM

  ಟೀಂ ಇಂಡಿಯಾದ ಈ ಮಾಜಿ ನಾಯಕನಿಗಾಗಿ ಪ್ರಾಣ ನೀಡಲು ಸಿದ್ದವೆಂದ ಗೌತಮ್ ಗಂಭೀರ್..!

  2 ವಿಶ್ವಕಪ್ ಫೈನಲ್ ಪಂದ್ಯದ ಹೀರೋ, ಕ್ರಿಕೆಟಿಗ ಕಂ ಸಂಸದ ಗೌತಮ್ ಗಂಭೀರ್ ತಾವಾಡಿದ ನಾಯಕರಲ್ಲಿ ಶ್ರೇಷ್ಠ ನಾಯಕ ಯಾರು ಎನ್ನುವುದರನ್ನು ಹೆಸರಿಸಿದ್ದಾರೆ. ಮುಂದುವರೆದು ಅವರಿಗೆ ತನ್ನ ಪ್ರಾಣ ನೀಡಲು ರೆಡಿ ಎಂದು ಗೌತಿ ಹೇಳಿದ್ದಾರೆ.

  ಕೇವಲ 14 ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರೂ ಅವರ ನಾಯಕತ್ವ ಗುಣ ಗಂಭೀರ್ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ. ಡೆಲ್ಲಿ  ಕ್ರಿಕೆಟಿ ಕನ್ನಡದ ನಾಯಕನಿಗೆ ಮನಸೋತಿದ್ದಾರೆ. ಯಾರು ಆ ಕ್ರಿಕೆಟಿಗ? ಗಂಭೀರ್ ಹೇಳಿದ್ದೇನು ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್. 

 • Cricket29, Apr 2020, 3:25 PM

  ನಟ ಇರ್ಫಾನ್ ಇನ್ನಿಲ್ಲ: ಕಂಬನಿ ಮಿಡಿದ ಟೀಂ ಇಂಡಿಯಾ ಕ್ರಿಕೆಟಿಗರು

  ಮೂರು ದಿನಗಳ ಹಿಂದಷ್ಟೇ ಇರ್ಫಾನ್ ಖಾನ್ ಅವರ 95 ವರ್ಷದ ತಾಯಿ ಕೊನೆಯುಸಿರೆಳೆದಿದ್ದರು. ಇರ್ಫಾನ್ ಖಾನ್ ಕೊನೆಯುಸಿರೆಳೆದ ಆಘಾತಕಾರಿ ಸುದ್ದಿ ಹೊರಬೀಳುತ್ತಿದ್ದಂತೆ ಭಾರತ ಕ್ರಿಕೆಟ್ ಆಟಗಾರರು ಸಾಮಾಜಿಕ ಜಾಲತಾಣಗಳಲ್ಲಿ ನುಡಿನಮನ ಸಲ್ಲಿಸಿದ್ದಾರೆ.

 • Cricket13, Apr 2020, 4:32 PM

  'Big Brother'ಅನಿಲ್ ಕುಂಬ್ಳೆ ಸಹಾಯವನ್ನು ಸ್ಮರಿಸಿಕೊಂಡ ಪಾಕ್ ಸ್ಪಿನ್ ಲೆಜೆಂಡ್..!

  ಇಡೀ ಜಗತ್ತೇ ಕೊರೋನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನದ ಸ್ಪಿನ್ ಲೆಜೆಂಡ್ ಸಕ್ಲೈನ್ ಮುಷ್ತಾಕ್ 'ಬಿಗ್ ಬ್ರದರ್' ಅನಿಲ್ ಕುಂಬ್ಳೆ ಮಾಡಿದ ಸಹಾಯವನ್ನು ಸ್ಮರಿಸಿಕೊಂಡಿದ್ದಾರೆ. 

 • Cricket25, Mar 2020, 5:46 PM

  ಒಂದು ಕಂಡೀಷನ್ ಮೇಲೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ ದಿಗ್ಗಜ ಅನಿಲ್ ಕುಂಬ್ಳೆ!

  ಈ ವರ್ಷ ಯುಗಾದಿ ಹಬ್ಬಕ್ಕಿಂತ ಕೊರೋನಾ ವೈರಸ್ ಅಬ್ಬರವೇ ಹೆಚ್ಚಾಗಿದೆ. ಭಾರತವೇ ಲಾಕ್‌ಡೌನ್ ಆಗಿರುವುದರಿಂದ ಎಲ್ಲರು ಜೊತೆಸೇರುವ ಸಂಭ್ರಮಕ್ಕೆ ಬ್ರೇಕ್ ಬಿದ್ದಿದೆ. ಆದರೂ ಕೆಲವರೂ  ಕದ್ದು ಮುಚ್ಚಿ ಅತ್ತಿಂದಿತ್ತ ಹೋಗುತ್ತಿದ್ದಾರೆ. ಕುಟುಂಬದವರ ಜೊತೆ ಸೇರಿ ಹಬ್ಬ ಆಚರಿಸುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಕೋಚ್ ಅನಿಲ್ ಕುಂಬ್ಳೆ ಕನ್ನಡದಲ್ಲಿ ಯುಗಾದಿ ಹಬ್ಬಕ್ಕೆ ಶುಭಕೋರಿದ್ದಾರೆ. ಆದರೆ ಒಂದು ಕಂಡೀಷನ್ ಕೂಡ ಹಾಕಿದ್ದಾರೆ.

 • Kumble

  Small Screen4, Mar 2020, 6:38 PM

  ಇದ್ದಕ್ಕಿದ್ದಂತೆ ಕುಂಬ್ಳೆ ಮನೆಗೆ ಶೈನ್ ಶೆಟ್ಟಿ, ಹೊಸಾ ಪ್ರಾಜೆಕ್ಟ್ ಇನ್ನೇನು ಗಟ್ಟಿ?

  ಬಿಗ್ ಬಾಸ್ ನಲ್ಲಿ ಗೆದ್ದು ಬೀಗಿದ ಶೈನ್ ಶೆಟ್ಟಿ ದಿಢೀರ್ ಎಂದು ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಮನೆಗೆ ಭೇಟಿ ನೀಡಿದ್ದಾರೆ. ಭೇಟಿ ನೀಡಿ ಆತಿಥ್ಯ ಸ್ವೀಕರಿಸಿದ್ದಾರೆ. ಅಲ್ಲದೇ ಸಂಭ್ರಮವನ್ನು ಸೋಶಿಯಲ್ ಮೀಡಿಯಾ ಮುಖೇನ ಹಂಚಿಕೊಂಡಿದ್ದಾರೆ.

 • kumble delhi match 2

  Cricket7, Feb 2020, 12:09 PM

  ಅನಿಲ್ ಕುಂಬ್ಳೆ ಪರ್ಫೆಕ್ಟ್ 10 ವಿಕೆಟ್‌ಗೆ 21 ವರ್ಷದ ಸಂಭ್ರಮ..!

  ಪಾಕಿಸ್ತಾನ ವಿರುದ್ಧ ಎರಡು ಟೆಸ್ಟ್ ಪಂದ್ಯಗಳ ಸರಣಿಯ 2ನೇ ಟೆಸ್ಟ್ ಪಂದ್ಯಕ್ಕೆ ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಆತಿಥ್ಯ ವಹಿಸಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಕುಂಬ್ಳೆ ಎಲ್ಲಾ 10 ವಿಕೆಟ್ ಕಬಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಬೌಲರ್ ಎನ್ನುವ ವಿಶ್ವದಾಖಲೆ ಬರೆದಿದ್ದರು.

 • modi kumble

  Cricket23, Jan 2020, 1:41 PM

  ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಮಾಜಿ ನಾಯಕ ಅನಿಲ್ ಕುಂಬ್ಳೆ!

  ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರು, ಕನ್ನಡಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್‌ರನ್ನು ಉಲ್ಲೇಖಿಸಿದ್ದರು. ಪ್ರೇರಣೆ ಹಾಗೂ ಸಕರಾತ್ಮಕ ಚಿಂತನೆ ಕುರಿತು ಮಕ್ಕಳಿಗೆ ಮೋದಿ ಹೇಳಿದ ಪಾಠ ಹಾಗೂ ತನ್ನ ಊದಾಹರಣೆ ನೀಡಿದ ಮೋದಿಗೆ ಅನಿಲ್ ಕುಂಬ್ಳೆ ಧನ್ಯವಾದ ಹೇಳಿದ್ದಾರೆ.  

 • Anil Kumble

  Karnataka Districts22, Jan 2020, 7:37 AM

  ರಂಗನತಿಟ್ಟಿನಲ್ಲಿ ಅನಿಲ್ ಕುಂಬ್ಳೆ ದೋಣಿ ವಿಹಾರ

  ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ರಂಗನತಿಟ್ಟಿನಲ್ಲಿ ದೋಣಿ ವಿಹಾರ ನಡೆಸಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ಕ್ಯಾಮೆರಾ ಮೂಲಕ ಪಕ್ಷಿಗಳ, ಮೊಸಳೆಗಳ ಫೋಟೋಗಳನ್ನು ಕ್ಲಿಕ್ಕಿಸಿ ಖುಷಿಪಟ್ಟಿದ್ದಾರೆ.

 • PM Modi will talk to school students on January 20 kps

  Cricket20, Jan 2020, 8:27 PM

  ಪರೀಕ್ಷಾ ಪೇ ಚರ್ಚಾ: ಮಕ್ಕಳಿಗೆ ದ್ರಾವಿಡ್-ಕುಂಬ್ಳೆ ಸ್ಫೂರ್ತಿ ಎಂದ ಪ್ರಧಾನಿ ಮೋದಿ!

  ಮಕ್ಕಳನ್ನು ಪರೀಕ್ಷಾ ಭಯದ ವಾತಾವರಣದಿಂದ ಮುಕ್ತರಾಗಿಸಿ, ಅವರಲ್ಲಿ ಆತ್ಮವಿಶ್ವಾಸ ಹಾಗೂ ಉತ್ಸಾಹ ತುಂಬುವ ಪ್ರಧಾನಿ ಮೋದಿಯ ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರಾದ ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷಣ್ ಹೋರಾಟದ ಕತೆ ಹೇಳಿದ್ದಾರೆ. ಮೋದಿ ಮಕ್ಕಳಿಗೆ ವಿವರಿಸಿದ ಸ್ಫೂರ್ತಿಯ ಕತೆ ಇಲ್ಲಿದೆ.

 • Anil kumble
  Video Icon

  Cricket13, Dec 2019, 6:50 PM

  ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ ಅನಿಲ್ ಕುಂಬ್ಳೆ!

  ಬೆಂಗಳೂರು(ಡಿ.12): ಹೃದಯ ಸಂಬಂಧಿ ಕಾಯಿಲೆಯಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದತೆ ರಾಜಕೀಯ ಮುಖಂಡರು ಚೇತರಿಸಿಕೊಳ್ಳುತ್ತಿರುವ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದ್ದಾರೆ. ಇದೀಗ ಟೀಂ  ಇಂಡಿಯಾ ಮಾಜಿ ನಾಯಕ ಅನಿಲ್ ಕುಂಬ್ಳೆ ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯ ಆರೋಗ್ಯ ವಿಚಾರಿಸಿದರು.