ಆರ್‌ಸಿಬಿ ಸ್ಟಾರ್ ಕಿಂಗ್ ಕೊಹ್ಲಿ ಬಳಿ ಆಡಿಯ ಹಲವು ಸೀರಿಸ್ ಕಾರುಗಳಿವೆ. ಇದರ ಜೊತೆಗೆ ಇತರ ಕೆಲ ಲಕ್ಷುರಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಕೊಹ್ಲಿ ಖರೀದಿಸಿದ ಮೊದಲು ಕಾರು ಯಾವುದು? ಕಾರು ಖರೀದಿಸಿ ಎಡವಟ್ಟು ಮಾಡಿದ್ದ ಕೊಹ್ಲಿ.
ಬೆಂಗಳೂರು(ಮೇ.20) ಆರ್‌ಸಿಬಿ ತಂಡದ ಕೀ ಪ್ಲೇಯರ್ ವಿರಾಟ್ ಕೊಹ್ಲಿ ಇದೀಗ ಪ್ಲೇ ಆಫ್ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಇದರ ನಡುವೆ ವಿರಾಟ್ ಕೊಹ್ಲಿಯ ಮೊದಲ ಕಾರು ಯಾವುದು ಅನ್ನೋದು ಬಹಿರಂಗವಾಗಿದೆ. ಸದ್ಯ ಕೊಹ್ಲಿ ಆಡಿ ಬ್ರ್ಯಾಂಡ್ ರಾಯಭಾರಿಯಾಗಿದ್ದಾರೆ. ಇಷ್ಟೇ ಅಲ್ಲ ಆಡಿಯ ಹಲವು ಸೀರಿಸ್ ಕಾರುಗಳು ವಿರಾಟ್ ಕೊಹ್ಲಿ ಬಳಿ ಇದೆ. ಆದರೆ ವಿರಾಟ್ ಕೊಹ್ಲಿ ಮೊದಲು ಖರೀದಿಸಿದ್ದು ಇಂಡಿಯನ್ ಬ್ರ್ಯಾಂಡ್ ಟಾಟಾ ಸಫಾರಿ ಕಾರು. ಹಳೇ ಸಫಾರಿ ಕಾರು ಇದಾಗಿದ್ದು, ರಸ್ತೆಯಲ್ಲಿ ಮಸ್ಕುಲರ್ ಫೀಲ್ ಇರಬೇಕು ಎಂದು ಈ ಕಾರು ಖರೀದಿಸಿದ್ದರು.
ಕೊಹ್ಲಿ ಕಾರಿನ ಮಾಹಿತಿಯನ್ನು ಇತ್ತೀಚೆಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಯ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಟಾಟಾದ ಹಳೇ ಸಫಾರಿ ಕಾರು ಗಾತ್ರದಲ್ಲಿ ಮಾತ್ರವಲ್ಲ, ಪರ್ಫಾಮೆನ್ಸ್‌ನಲ್ಲೂ ಸರಿಸಾಟಿಯಿಲ್ಲ. ರೋಡಿನಲ್ಲಿ ಸಫಾರಿ ಕಾರು ಸಂಚರಿಸುತ್ತಿದ್ದರೆ ಎಲ್ಲರೂ ಒಂದು ಸಾರಿ ನೋಡುತ್ತಿದ್ದರು. ಕಾರಣ ಹಳೇ ಸಫಾರಿ ಕಾಲದಲ್ಲಿ ಈ ಮಟ್ಟದ ಎಸ್‌ಯುವಿ ಕಾರುಗಳೇ ಇರಲಿಲ್ಲ. ಇದೇ ಕಾರಣಕ್ಕೆ ಕೊಹ್ಲಿ ರೋಡ್ ಪ್ರೆಸನ್ಸ್ ಇರಬೇಕು ಅನ್ನೋ ಕಾರಣಕ್ಕೆ ಟಾಟಾ ಸಫಾರಿ ಡಿಕೋರ್ ಕಾರು ಖರೀದಿಸಿದ್ದರು.
undefined
ಆರ್‌ಸಿಬಿ ಗೆಲುವಿನ ಬಳಿಕ ಕೊಹ್ಲಿ-ಅನುಷ್ಕಾ ಕೈ ಸನ್ನೆ ಮಾತುಕತೆಯ ಕ್ಯೂಟ್ ವಿಡಿಯೋ!
ನಮ್ಮ ಟಾಟಾ ಸಫಾರಿ ಕಾರಿನಲ್ಲಿ ತೆರಳುತ್ತಿದ್ದರೆ ಎಲ್ಲರು ದಾರಿ ಬಿಡುತ್ತಿದ್ದರು. ಕಾರಿನಲ್ಲಿ ಹೋಗುವಾಗ ನಮ್ಮ ಹೆಮ್ಮೆ ಆಗುತ್ತಿತ್ತು ಎಂದು ಕೊಹ್ಲಿ ಹೇಳಿದ್ದಾರೆ. ಇದೇ ವೇಳೆ ಎಸ್‌ಯುವಿ ಕಾರು ಖರೀದಿಸಿ ಎಡವಟ್ಟು ಮಾಡಿಕೊಂಡಿದ್ದರು. ಕೊಹ್ಲಿ ಹಾಗೂ ಕೊಹ್ಲಿ ಸಹೋದರ ಕಾರಿನಲ್ಲಿ ತೆರಳಿದ್ದಾರೆ. ಬಳಿ ಪೆಟ್ರೋಲ್ ಪಂಪ್‌ಗೆ ತೆರಳಿ ಇಂಧನ ಹಾಕಲು ಹೇಳಿದ್ದಾರೆ. ಬಳಿಕ ಕೆಲ ದೂರ ಹೋದ ಬೆನ್ನಲ್ಲೇ ಕಾರು ನಿಂತಿದೆ. ಈ ವೇಳೆ ತಾವು ಡೀಸೆಲ್ ಬದಲು ಪೆಟ್ರೋಲ್ ಹಾಕಿರುವುದಾಗಿ ಅರಿವಿಗೆ ಬಂದಿದೆ. ಬಳಿಕ ರೀಪೇರಿ ಮಾಡಲು ಸಾಹಸ ಮಾಡಬೇಕಾಯಿತು ಎಂದು ಕೊಹ್ಲಿ ಹೇಳಿದ್ದಾರೆ.
ಇದಾದ ಬಳಿಕ ಆಡಿ ಆರ್8 ಸ್ಪೋರ್ಟ್ಸ್ ಕಾರು, ಸೇರಿದಂತೆ ಹಲವು ಕಾರುಗಳನ್ನು ಖರೀದಿಸಿದ್ದೇನೆ. ಸ್ಪೋರ್ಟ್ಸ್ ಕಾರಿನ ಮೇಲೆ ನನಗೆ ಅತೀವ ವ್ಯಾಮೋಹ ಇತ್ತು. ಹೀಗಾಗಿ ಸ್ಪೋರ್ಟ್ಸ್ ಕಾರುಗಳನ್ನೇ ಖರೀದಿಸಿದ್ದೆ. ಆದರೆ ಈಗ ಸಮಯ ಬದಲಾಗಿದೆ, ಆಸಕ್ತಿ, ಅವಶ್ಯಕತೆ ಬದಲಾಗಿದೆ. ಈಗ ಸ್ಪೋರ್ಟ್ಸ್ ಕಾರುಗಳು ನನ್ನ ಮನಸ್ಸಿನಲ್ಲಿ ಮೂಡುವುದೇ ಇಲ್ಲ. ಇದೀಗ ಫ್ಯಾಮಿಲಿ ಕಾರು. ಅದರಲ್ಲೂ ಮಗುವಿನ ಸೀಟು ಇರಬೇಕು. ಕುಟುಂಬ ಪ್ರಯಾಣಿಸಲು ಆರಾಮವಾಗಿರಬೇಕು, ಸುರಕ್ಷಿತವಾಗಿರಬೇಕು. ಇದು ಸದ್ಯ ಮನಸ್ಸಿನಲ್ಲಿ ಮೂಡುವ ಚಿತ್ರಣ ಎಂದು ಕೊಹ್ಲಿ ಹೇಳಿದ್ದಾರೆ.
ಚೆನ್ನೈ ಎದುರು ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ಆನಂದ ಭಾಷ್ಪ ಸುರಿಸಿದ ವಿರುಷ್ಕಾ ಜೋಡಿ..! ವಿಡಿಯೋ ವೈರಲ್
ಕೊಹ್ಲಿ ಬಳಿ ಆಡಿ ಆರ್8, ಲ್ಯಾಂಡ್ ರೋವರ್ ರೇಂಜ್ ರೋವರ್, ಬೆಂಟ್ಲೆ ಕಾಂಟಿನೆಂಟಲ್ ಜಿಟಿ, ಬೆಂಟ್ಲೇ ಫ್ಲೇಯಿಂಗ್ ಸ್ಪರ್, ಪೊರ್ಶೆ ಪನಾಮೆರಾ ಸೇರಿದಂತೆ ಹಲವು ಕಾರುಗಳಿವೆ. ಇದರ ಜೊತೆ ಟೊಯೋಟಾ ಫಾರ್ಚುನರ್ ಹಾಗೂ ರೆನಾಲ್ಟ್ ಡಸ್ಟರ್ ಕಾರನ್ನು ಹೊಂದಿದ್ದಾರೆ.