2023ರಲ್ಲಿ ಪ್ಲೇ ಆಫ್‌ಗೇರಿದ ಎಲ್ಲಾ ತಂಡ ಈ ಬಾರಿ ಔಟ್, ಈ ಬಾರಿ 4 ರ ಪೈಕಿ ಆರ್‌ಸಿಬಿಗೆ ಹೆಚ್ಚು ಚಾನ್ಸ್!

Published : May 20, 2024, 06:28 PM ISTUpdated : May 20, 2024, 06:32 PM IST
2023ರಲ್ಲಿ ಪ್ಲೇ ಆಫ್‌ಗೇರಿದ ಎಲ್ಲಾ ತಂಡ ಈ ಬಾರಿ ಔಟ್, ಈ ಬಾರಿ 4 ರ ಪೈಕಿ ಆರ್‌ಸಿಬಿಗೆ ಹೆಚ್ಚು ಚಾನ್ಸ್!

ಸಾರಾಂಶ

ಐಪಿಎಲ್ ಲೀಗ್ ಹಂತದ ಪಂದ್ಯಗಳ ಮುಕ್ತಾಯ ಗೊಂಡಿದೆ. ಇನ್ನೇನಿದ್ದರು ಪ್ಲೇಆಫ್ ಹೋರಾಟ. 2023ರಲ್ಲಿ ಪ್ಲೇ ಆಫ್ ಪ್ರವೇಶಿಸಿದ ಎಲ್ಲಾ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿಯ 4 ತಂಡಗಳ ಪೈಕಿ ಆರ್‌ಸಿಬಿಗೆ ಹೆಚ್ಚು ಚಾನ್ಸ್.  

ಬೆಂಗಳೂರು(ಮೇ.20) ಐಪಿಎಲ್ 2024 ಟೂರ್ನಿ ಅಂತಿಮ ಘಟ್ಟ ತಲುಪಿದೆ. ಆರ್‌ಸಿಬಿ ಅಂತಿಮ ಕ್ಷಣದಲ್ಲಿ ಪ್ಲೇ ಆಫ್ ಪ್ರವೇಶಿಸಿ ಇತಿಹಾಸ ರಚಿಸಿದೆ. ಇದೀಗ ಪ್ಲೇ ಆಫ್ ಸುತ್ತಿನ ಪಂದ್ಯದಳು ಮೇ.21ರಿಂದ ಆರಂಭಗೊಳ್ಳುತ್ತಿದೆ. ಕೆಕೆಆರ್, ಎಸ್‌ಆರ್‌‌ಹೆಚ್, ಆರ್‌ಆರ್ ಹಾಗೂ ಆರ್‌ಸಿಬಿ ಅಖಾಡದಲ್ಲಿದೆ. ಈ ನಾಲ್ಕು ತಂಡಗಳ ಪೈಕಿ ಮೂರು ತಂಡಗಳು ಈಗಾಗಲೇ ಐಪಿಎಲ್ ಟ್ರೋಫಿ ಗೆದ್ದಿದೆ. ಆರ್‌ಸಿಬಿಗೆ ಟ್ರೋಫಿ ಭಾಗ್ಯ ಸಿಕ್ಕಿಲ್ಲ. ಆದರೆ 2024ರಲ್ಲಿ ಟ್ರೋಫಿ ಗೆಲ್ಲಲು ಅತೀ ಹೆಚ್ಚಿನ ಚಾನ್ಸ್ ಆರ್‌ಸಿಬಿ ಪಾಲಿಗಿದೆ.

ಲೀಗ್ ಹಂತದ ಪಂದ್ಯ, ಪ್ರದರ್ಶನ, ಅಂಕದ ಲೆಕ್ಕಾಚಾರದಲ್ಲಿ ಆರ್‌ಸಿಬಿ ಪರ್ಸೆಂಟೇಜ್ ಕಡಿಮೆ ಇರಬಹುದು. ಆದರೆ ಅಂತಿಮ 7 ಪಂದ್ಯದಲ್ಲಿ ನೀಡಿದ ಪ್ರದರ್ಶನ ನೋಡಿದರೆ ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದು ಅಭಿಮಾನಿಗಳು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. 2023ರಲ್ಲಿ ಪ್ಲೇ ಆಫ್ ಪ್ರವೇಶಿಸಿದ 4 ತಂಡಗಳು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಈ ಬಾರಿ ಹೊಸ ನಾಲ್ಕು ತಂಡಗಳು ಪ್ಲೇಫ್ ಸುತ್ತಿಗೇರಿದೆ. ಮೇ.21ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕೆಕೆಆರ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಲಿದೆ. ಇನ್ನು ಮೇ22ರಂದು ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ಹೋರಾಟ ನಡೆಸಲಿದೆ. 

ಕೊಹ್ಲಿ ಮೊದಲ ಕಾರು ಯಾವುದು? SUV ಖರೀದಿಸಿ ಪೆಟ್ರೋಲ್ ಪಂಪ್‌ನಲ್ಲಿ ಎಡವಟ್ಟು ಮಾಡಿದ್ದ ಕಿಂಗ್!

2023ರ ಪ್ಲೇ ಆಫ್ ತಂಡ: ಗುಜರಾತ್ ಟೈಟಾನ್, ಚೆನ್ನೈ ಸೂಪರ್ ಕಿಂಗ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್
2024ರ ಪ್ಲೇ ಆಫ್ ತಂಡ: ಕೋಲ್ಕತಾ ನೈಟ್ ರೈಡರ್ಸ್, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ ಇತಿಹಾಸದಲ್ಲಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಗಳಲ್ಲಿದ್ದು, ಬಳಿಕ ಒಂದೇ ಸಮನೆ ಫೀನಿಕ್ಸ್‌ನಂತೆ ಎದ್ದು ಬಂದು ಪ್ಲೇ ಆಫ್ ಪ್ರವೇಶಿಸಿ ಟ್ರೋಫಿ ಗೆದ್ದ ತಂಡಗಳೇ ಹೆಚ್ಚು. ಮುಂಬೈ ಇಂಡಿಯನ್ಸ್ , ಚೆನ್ನೈ ಸೂಪರ್ ಕಿಂಗ್ಸ್ ಇದೇ ರೀತಿ ಟ್ರೋಫಿ ಗೆದ್ದುಕೊಂಡಿದೆ. ಈ ಬಾರಿ ಈ ಅವಕಾಶ ಆರ್‌ಸಿಬಿ ತಂಡಕ್ಕಿದೆ.

ಕಳೆದ 5 ವರ್ಷದಲ್ಲಿ ಆರ್‌ಸಿಬಿ 4 ಬಾರಿ ಪ್ಲೇ ಆಫ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಮೂಲಕ ಆರ್‌ಸಿಬಿ ನಿರಂತವಾಗಿ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. 

2020:  ಆರ್‌ಸಿಪಿ ಪ್ಲೇ ಆಪ್ ಪ್ರವೇಶ
2021:  ಆರ್‌ಸಿಪಿ ಪ್ಲೇ ಆಪ್ ಪ್ರವೇಶ
2022:  ಆರ್‌ಸಿಪಿ ಪ್ಲೇ ಆಪ್ ಪ್ರವೇಶ
2024:  ಆರ್‌ಸಿಪಿ ಪ್ಲೇ ಆಪ್ ಪ್ರವೇಶ 

ಮತ್ತೆ ಮತ್ತೆ ನೋಡಬೇಕೆನಿಸುವ ಆರ್‌ಸಿಬಿ ಗೆಲ್ಲಿಸಿದ ಆ ಒಂದು ಓವರ್‌..! ಇಲ್ಲಿದೆ ವಿಡಿಯೋ

ಮತ್ತೊಂದು ವಿಶೇಷ ಅಂದರೆ ಈ ಬಾರಿ ಆರ್‌ಸಿಬಿ ಗೆದ್ದರೆ ತಂಡಕ್ಕೆ ಮೊದಲ ಟ್ರೋಫಿ, ಸನ್‌ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಗೆದ್ದರೆ ತಂಡಕ್ಕೆ 2ನೇ ಟ್ರೋಫಿ, ಕೆಕೆಆರ್ ಗೆದ್ದರೆ ತಂಡಕ್ಕೆ ಮೂರನೇ ಟ್ರೋಫಿ. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಹಾರ್ದಿಕ್ ಪಾಂಡ್ಯ ನಾಯಕತ್ವದ ತಂತ್ರಗಳನ್ನು ಟ್ರೋಲ್ ಮಾಡಿದ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ!
ಜಸ್ಪ್ರೀತ್ ಬುಮ್ರಾಗೆ ಇದೇನಾಯ್ತು? 5 ಮ್ಯಾಚ್, 122 ಎಸೆತ ಆದ್ರೆ ಒಂದೇ ಒಂದು ವಿಕೆಟ್ ಇಲ್ಲ! ಇಲ್ಲಿದೆ 3 ಇಂಟ್ರೆಸ್ಟಿಂಗ್ ಕಾರಣಗಳು