
ಬೆಂಗಳೂರು(ಜೂ.03): ಕ್ರಿಕೆಟ್ ಕಮೆಂಟರಿ, ವಿಶ್ಲೇಷಣೆ, ಸಲಹೆ ಸೇರಿದಂತೆ ಕ್ರಿಕೆಟ್ ಕುರಿತು ಕಾರ್ಯಕ್ರಮ, ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಳ್ಳುವ ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ವೆಂಕಟೇಶ್ ಪ್ರಸಾದ್ ಇದೀಗ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಜನರಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯ ಮೂಡಿಸಲು ಪ್ರಸಾದ್, ತುಳಸಿದಾಸರ ಶ್ರೀರಾಮ ಸ್ತುತಿ ಜಪಿಸಿದ್ದಾರೆ.
ಪಾಕ್ ಬ್ಯಾಟ್ಸ್‌ಮನ್ ಮಾತ್ರವಲ್ಲ, ಪತ್ರಕರ್ತನಿಗೂ ತಿರುಗೇಟು ನೀಡಿದ ವೆಂಕಟೇಶ್ ಪ್ರಸಾದ್!.
16ನೇ ಶತಕಮಾನದಲ್ಲಿ ಗೋಸ್ವಾಮಿ ತುಳಸಿದಾಸ್ ಬರೆದ ಶ್ರೀರಾಮ ಸ್ತುತಿ ಕೆಲ ಚರಣಗಳನ್ನು ಸ್ವತಃ ಹಾಡಿ ಅದರ ಅರ್ಥಗಳನ್ನೂ ಹೇಳಿದ್ದಾರೆ. ಈ ವಿಡಿಯೋವನ್ನು ವೆಂಕಟೇಶ್ ಪ್ರಸಾದ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದ ಮೊದಲ ಭಾಗದಲ್ಲಿ ಗೋಸ್ವಾಮಿ ತುಳಸಿದಾಸ್ 16ನೇ ಶತಮಾನದಲ್ಲಿ ಬರೆದ ಶ್ರೀರಾಮ ಸ್ತುತಿಯ ಚರಣ ಹಾಗೂ ಅರ್ಥವನ್ನು ಹೇಳುತ್ತೇನೆ. ಇದನ್ನು ಖ್ಯಾತ ಹಿನ್ನಲೆ ಗಾಯಕಿ ಲತಾ ಮಂಗೇಶ್ಕರ್ ಅತ್ಯುತ್ತಮವಾಗಿ ಹಾಡಿದ್ದಾರೆ ಎಂದು ವೆಂಕಟೇಶ್ ಪ್ರಸಾದ್ ಸ್ತುತಿ ಆರಂಭಿಸಿದ್ದಾರೆ.
ಮೊದಲ ಚರಣ ಸ್ತುತಿಸಿದ ವೆಂಕಟೇಶ್ ಪ್ರಸಾದ್ ಅದರ ಅರ್ಥವನ್ನು ತಿಳಿಸಿದ್ದಾರೆ. ಓ ನನ್ನ ಮನಸ್ಸೆ, ಎಲ್ಲಾ ಭಯಗಳನ್ನು ನನ್ನಿಂದ ದೂರವಾಗಿಸು. ಕಮಲದ ಮೊಗ್ಗು ಅರ್ಧ ಅರಳಿದಂತಿರುವ, ಕರುಣಾಮಯಿ ಶ್ರೀರಾಮನ ಕಣ್ಣುಗಳು, ರಾಮನ ಬಾಯಿ , ಕೈಯಿ, ಪಾದ ಗುಲಾಬಿ ಬಣ್ಣಕ್ಕೆ ತಿರುಗಿದ ಕಮಲದಂತೆ ಎಂದು ಚರಣದ ಮಹತ್ವ ಹೇಳಿದ್ದಾರೆ.
ನೆನಪಿದ್ಯಾ ಇವರಿಬ್ಬರ ಜಂಗಿ ಕುಸ್ತಿ: ನೋಡಿ ಹೆಂಗೈತೆ ಇವ್ರ ದೋಸ್ತಿ!
ಭಗವಾನ್ ಶ್ರೀರಾಮ ಕಾಮದೇವನಂತೆ ಅತೀ ಸುಂದವರವಾಗಿ ಕಾಣಿಸಿಕೊಂಡಿದ್ದಾನೆ. ರಾಮನ ಮೈಬಣ್ಣ ತಿಳಿ ನೀಲಿ ಮೋಡದಂತೆ ಸುಂದರ. ಆತನ ಹಳದಿ ಬಟ್ಟೆ ಮಿಂಚಿನಂತೆ ನನ್ನನ್ನು ಬೆರಗುಗೊಳಿಸುತ್ತಿದೆ. ಈ ಸಂದರ್ಭದಲ್ಲಿ ನಾನು ನಾನು ಜನಕ ಮಗಳು ಸೀತಾ ಎಂಬ ಸದ್ಗುಣಶೀಲ ವಧು-ವರನನ್ನು ಗೌರವಿಸುತ್ತೇನೆ ಎಂದು ಎರಡೇ ಚರಣ ಹಾಡಿ ಅರ್ಥ ಹೇಳಿದ್ದಾರೆ.
ಗೋಸ್ವಾಮಿ ತುಳಸಿದಾಸ್ 16ನೇ ಶತಮಾನದಲ್ಲಿ ಬರೆದ ಶ್ರೀರಾಮಚಂದ್ರ ಕೃಪಾಲು ಅಥವಾ ಶ್ರೀರಾಮ ಸ್ತುತಿ ಅತ್ಯಂತ ಜನಪ್ರಿಯವಾಗಿ ಬಾಗೂ ಭಕ್ತಿ ಪರವಶೆಯ ಸ್ತುತಿಯಾಗಿದೆ. ಸಂಸ್ಕೃತ ಹಾಗೂ ಅವಧಿ ಭಾಷೆಗಳ ಮಿಶ್ರಣದಲ್ಲಿ ರಚಿಸಲ್ಪಟ್ಟಿರುವ ಶ್ರೀರಾಮ ಪ್ರಾರ್ಥನೆಯಲ್ಲಿ ಆಯೋಧ್ಯಾ ಶ್ರೀರಾಮಚಂದ್ರನ್ನು ವೈಭವೀಕರಿಸಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.