ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ಸಮಂತಾ ನೋಡಿ ಬೆರಗಾದ ಅಭಿಮಾನಿಗಳು

By Shruiti G KrishnaFirst Published Apr 1, 2022, 11:17 AM IST
Highlights

ನಟಿ ಸಮಂತಾ ರುತ್ ಪ್ರಭು ಹೊಸ ಫೋಟೋ ಶೂಟ್ ಮೂಲಕ ಮತ್ತೆ ಸದ್ದು ಮಾಡುತ್ತಿದ್ದಾರೆ. ಪ್ರಸಿದ್ಧ ನಿಯತಕಾಲಿಕೆಯ ಕವರ್ ಪೇಜ್ ಗಾಗಿ ಸಮಂತಾ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಸಮಂತಾ ಅವರ ಹೊಸ ಲುಕ್ ಬೋಲ್ಡ್ ಲುಕ್ ಅಭಿಮಾನಿಗಳ ಗಿದ್ದೆ ಗೆಡಿಸಿದೆ. 

ತೆಲುಗಿನ ಸ್ಟಾರ್ ನಟಿ ಸಮಂತಾ ರುತ್ ಪ್ರಭು(Samantha Ruth Prabhu) ಇದೀಗ ದೇಶದಾದ್ಯಂತ ಸದ್ದು ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುವ ಸಮಂತಾ ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಸದ್ಯ ಸಮಂತಾ ಶೇರ್ ಮಾಡಿರುವ ಹಾಟ್ ಫೋಟೋ ಅಭಿಮಾನಿಗಳ ನಿದ್ದಿ ಗೆಡಿಸಿದೆ. ಸಮಂತಾ ಹೊಸ ಫೋಟೋಶೂಟ್(Samantha Hot Photo Shoot) ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಸಿದ್ಧ ನಿಯತಕಾಲಿಕೆ ಕಾಸ್ಮೋಪಾಲಿಟನ್ ಗಾಗಿ ಸಮಂತಾ ನೀಡಿದ ಪೋಸ್ ಎಲ್ಲರ ಹುಬ್ಬೇರಿಸಿದೆ. ಅಂದಹಾಗೆ ಈ ಫೋಟೋವನ್ನು ಸಮಂತಾ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಸಮಂತಾ ಹೊಸ ಅವತಾರದ ಬಗ್ಗೆ ನಿಯತಕಾಲಿಗೆ ಪ್ರತಿಕ್ರಿಯೆ ನೀಡಿದ್ದು, 'ಸಮಂತಾ ಅತ್ಯಂತ ಪ್ರತಿಭೆ ಇರುವ ಶಕ್ತಿ. ಸಮಂತಾ ಅವರ ಕೆಲಸ ಅವರಿಗೆ ಕಮರ್ಷಿಯಲ್ ಮತ್ತು ವಿಮರ್ಶಾತ್ಮಕ ಮೆಚ್ಚುಗೆ ಗಳಿಸುವಂತೆ ಮಾಡಿದೆ. ನಟಿ, ಫ್ಯಾಷನ್ ಐಕಾನ್, ಫಿಟ್ ನೆಸ್ ಉತ್ಸಾಹಿ ಹೀಗೆ ಸಮಂತಾ ಅವರ ವ್ಯಕ್ತಿತ್ವ ಹಲವು ಅಂಶಗಳಿವು. ಈ ಎಲ್ಲವನ್ನು ಸಮಂತಾ ಸಮತೋಲನದಿಂದ ಕಾಪಾಡಿಕೊಂಡಿದ್ದಾರೆ' ಎಂದು ಹೇಳಿದೆ.

Latest Videos

ಸ್ಟೈಲ್ ಐಕಾನ್ ಸಮಂತಾ ರಾಹುಲ್ ಮಿಶ್ರ ಅವರು ಡಿಸೈನ್ ಮಾಡಿರುವ ಸ್ಕರ್ಟ್ ಮತ್ತು ಬ್ರಾಲೆಟ್ ಧರಿಸಿ ಸಖತ್ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದರು. ಸಮಂತಾ ಮಾದಕ ಲುಕ್ ಪಡ್ಡೆಹುಡುಗರ ಹೃದಯ ಗೆದ್ದಿದೆ. ಈ ಪೋಸ್ ಗೆ ಸಿಕ್ಕಾಪಟ್ಟೆ ಲೈಕ್ಸ್ ಮತ್ತು ಕಾಮೆಂಟ್ ಹರಿದುಬರುತ್ತಿದೆ.

ಒಂದು Instagram ಪೋಸ್ಟ್‌ನಿಂದ ಇಷ್ಟೊಂದು ಸಂಪಾದನೆ ಮಾಡ್ತಾರಾ ನಟಿ Samantha

ತೆಲುಗು ನಟಿ ಸಮಂತಾ 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರಿಸ್ ಮೂಲಕ ದೇಶದಾದ್ಯಂತ ಸಂಚಲನ ಮೂಡಿಸಿದ್ದರು. ಸಮಂತಾ ಅವರ ಪಾತ್ರಕ್ಕೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿತ್ತು. ಈ ಸೀರಿಸ್ ಬಳಿಕ ಸಮಂತಾ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾದಲ್ಲಿ ಕಾಣಿಸಿಕೊಂಡರು. ಪುಷ್ಪ ಸಿನಿಮಾ ಐಟಂ ಹಾಡು ಸಮಂತಾ ಅವರಿಗೆ ಮತ್ತಷ್ಟು ಖ್ಯಾತಿ ತಂದುಕೊಟ್ಟಿತು. ಈ ಹಾಡು ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದು ಭಾರಿ ಮೆಚ್ಚುಗೆಗೆ ಪಾತ್ರವಾಯಿತು. ಸದ್ಯ ಸಮಂತಾ ಅವರಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಕೇವಲ ತೆಲುಗು ಮಾತ್ರವಲ್ಲದೆ ಸಮಂತಾಗೆ ಬಾಲಿವುಡ್ ನಿಂದಲೂ ಆಫರ್ಸ್ ಹೆಚ್ಚಾಗುತ್ತಿದೆ.

OTTಗೆ ಎಂಟ್ರಿ ಕೊಟ್ಟ Varun Dhawan; Priyanka Chopra ಜೊತೆ ನಟನೆ

ಸಮಂತಾ ಶಾಕುಂತಲಂ ಮತ್ತು ತಮಿಳಿನ ಕಾತುವಾಕುಲ ರೆಂಡು ಕಾದಲ್ ಸಿನಿಮಾದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ತಮಿಳು ಚಿತ್ರಕ್ಕೆ ವಿಘ್ನೇಶ್ ಶಿವನ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಯನತಾರಾ ಮತ್ತು ವಿಜಯ ಸೇತುಪತಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಈ ಸಿನಿಮಾದ ಚಿತ್ರೀಕರಣ ಮುಗಿಸಿದ್ದು, ಸಿನಿಮಾತಂಡ ಶೂಟಿಂಗ್ ಮುಗಿದ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಶಏರ್ ಮಾಡಿದ್ದರು. ಈ ಸಿನಿಮಾಗಳ ಜೊತೆಗೆ ಸಮಂತಾ ಯಶೋದಾ ಎನ್ನುವ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದಲ್ಲಿ ಸಮಂತಾ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೂಟಿಂಗ್ ಪ್ರಾರಂಭವಾಗಿದ್ದು, ಸಾಕಷ್ಟು ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಆಕ್ಷನ್ ದೃಶ್ಯಗಳನ್ನು ಡೈರೆಕ್ಟ್ ಮಾಡಲು ಹಾಲಿವುಡ್ ಸ್ಟಂಟ್ ಮಾಸ್ಟರ್ ಸಹ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿದೆ.

ದಕ್ಷಿಣ ಭಾರತದ ಸಿನಿಮಾಗಳ ಜೊತೆಗೆ ಸಮಂತಾ ಮತ್ತೆ ಬಾಲಿವುಡ್ ಗೆ ಹಾರಿದ್ದಾರೆ. ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕರ ಜೊತೆ ಸಮಂತಾ ಮತ್ತೆ ಕೆಲಸ ಮಾಡುತ್ತಿದ್ದಾರೆ. ರಾಜ್ ಮತ್ತು ಡಿಕೆ ನಿರ್ದೇಶನದ ಹೊಸ ವೆಬ್ ಸರಣಿಯಲ್ಲಿ ಸಮಂತಾ ನಟಿಸುತ್ತಿದ್ದು, ಈ ಸರಣಿಯಲ್ಲಿ ಬಾಲಿವುಡ್ ಸ್ಟಾರ್ ನಟ ವರುಣ್ ದವನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಾಗಚೈತನ್ಯ ಅವರಿಂದ ದೂರ ಆದ ಬಳಿಕ ಸಮಂತಾ ಸಂಪೂರ್ಣವಾಗಿ ಬಣ್ಣದ ಲೋಕದ ಕಡೆ ಗಮನ ಹರಿಸಿದ್ದಾರೆ.

 

click me!