ವಾಟ್ಸ್​ಆ್ಯಪ್​ ಹ್ಯಾಕ್ ಆಗಿದೆಯಂದ ಸ್ವರಾ ಭಾಸ್ಕರ್, ಇಬ್ರೂ ಸೇರಿ ಪೇಜರ್ ಬಳಸಿ ಎನ್ನೋದಾ ಕಮೆಂಟಿಗರು?

By Suchethana D  |  First Published Sep 19, 2024, 5:42 PM IST

ತಮ್ಮ ವಾಟ್ಸ್​ಆ್ಯಪ್​ ಹ್ಯಾಕ್ ಆಗಿದೆಯೆಂದು ಬಾಲಿವುಡ್​ ನಟಿ ಸ್ವರಾ ಭಾಸ್ಕರ್ ದುಃಖ ತೋಡಿಕೊಂಡ್ರೆ ಗಂಡ-ಹೆಂಡ್ತಿ ಇಬ್ರೂ ಸೇರಿ ಪೇಜರ್ ಬಳಸಿ ಎನ್ನೋದಾ ಕಮೆಂಟಿಗರು? ಇನ್ನೇನೇನು ಹೇಳಿದ್ದಾರೆ ನೋಡಿ
 


ಸದ್ಯ ಎಲ್ಲೆಲ್ಲೂ ಪೇಜರ್​ದ್ದೇ ಸದ್ದು. ತನ್ನ ಶತ್ರುಗಳನ್ನು ಸದೆಬಡಿಸಲು ಇಸ್ರೇಲ್ ಬಳಸಿದ ಮಾರ್ಗ ಕಂಡು ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಈ ಮೂಲಕ ಇರಾನ್, ಇಸ್ರೇಲ್, ಹಿಜ್ಬುಲ್ಲಾ ಮತ್ತು ಹಮಾಸ್ ಭಯೋತ್ಪಾದಕರ ಕದನಕ್ಕೆ  ತಂತ್ರಜ್ಞಾನ ಸಾಕ್ಷಿಯಾಗಿದೆ.  ಅಣುಬಾಂಬ್, ಯುದ್ಧ ವಿಮಾನ, ಕ್ಷಿಪಣಿ ಯಾವುದೂ ಇಲ್ಲದೇ ಅತಿಬುದ್ಧಿವಂತಿಕೆಯಲ್ಲಿ ಬಳಸುತ್ತಿದ್ದ ಪೇಜರ್​ ಜೀವಕ್ಕೆ ಕುತ್ತು ತಂದಿದೆ. ಇದರಿಂದಾಗ ಜನರು ತಮ್ಮ ಇಡೀ ಶರೀರವನ್ನೇ ನಂಬದ ಸ್ಥಿತಿಗೆ ಬಂದು ತಲುಪಿದೆ ಜಗತ್ತು. ಹೀಗೆ ಪೇಜರ್​ ಸೌಂಡ್​ ಮಾಡುತ್ತಿದ್ದರೆ, ಬಾಲಿವುಡ್​ ನಟಿ ಸ್ವರಾ ಭಾಸ್ಕರ್​ಗೂ ಪೇಜರ್​ ಲಿಂಕ್​ ಮಾಡೋದಾ ನೆಟ್ಟಿಗರು!

ಹೌದು. ನಟಿ ಸ್ವರಾ ಭಾಸ್ಕರ್​ ತಮ್ಮ ವಾಟ್ಸ್​ಆ್ಯಪ್​ ಹ್ಯಾಕ್​ ಆಗಿರೋ ಸಾಧ್ಯತೆ ಇದೆ. ಯಾರೂ ದಯವಿಟ್ಟು ನನ್ನ ನಂಬರ್​ನಿಂದ ಬರುವ ಮೆಸೇಜ್​ಗಳಿಗೆ ರಿಪ್ಲೈ ಮಾಡಬೇಡಿ, ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಕೊಡಬೇಡಿ. ಆ ನಂಬರ್​ನಿಂದ ಏನಾದ್ರೂ ಸಂದೇಶ ಬಂದರೆ ಬ್ಲಾಕ್​ ಮಾಡಿಬಿಡಿ ಎಂದು ರಿಕ್ವೆಸ್ಟ್​ ಮಾಡಿಕೊಂಡಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಬಂದಿವೆ. ಆದರೆ ವಾಟ್ಸ್​ಆ್ಯಪ್​ ಹ್ಯಾಕ್​ ಆಗಿದ್ರೆ ಪೇಜರ್​ ಬಳಸಿ, ಒಬ್ರೇ ಬಳಸಬೇಡಿ ಮತ್ತೆ, ಗಂಡ-ಹೆಂಡತಿ ಸೇರಿಯೇ ಬಳಸಿ ಅಂತೆಲ್ಲಾ ನೆಟ್ಟಿಗರು ಕಮೆಂಟ್​ ಮಾಡೋದಾ? ಮತ್ತೆ ಕೆಲವರು ನಿಮ್ಮ ಗಂಡನಿಗೆ ನಿಮ್ಮ ಮೇಲೆ ಡೌಟ್​ ಬಂದಿರಬೇಕು, ಅದಕ್ಕೇ ಈ ರೀತಿ ಮಾಡಿದ್ದಾರೆ ಎಂದೂ ತರ್ಲೆ ಕಮೆಂಟ್​ ಹಾಕುತ್ತಿದ್ದಾರೆ. 

Tap to resize

Latest Videos

undefined

ಲೆಬನಾನ್, ಸಿರಿಯಾ ದೇಶದಲ್ಲಿ ಹಿಜ್ಜುಲ್ಲಾ ಉಗ್ರರ ಪೇಜರ್‌ಗಳು ಏಕಕಾಲಕ್ಕೆ ಬ್ಲಾಸ್ಟ್: ಏನಿದು ಪೇಜರ್ ದಾಳಿ?

ಅಷ್ಟಕ್ಕೂ ಸ್ವರಾ ಭಾಸ್ಕರ್​ ವಿರುದ್ಧ ಈ ರೀತಿಯ ನೆಗೆಟಿವ್​ ಕಮೆಂಟ್ಸ್​ ಬರಲು ಕಾರಣವೂ ಇದೆ. ಅದೇನೆಂದರೆ, ಸದಾ ನಟಿ ವಿವಾದಗಳಿಂದಲೇ ಸುತ್ತುವರೆದಿದ್ದಾರೆ. ಈಚೆಗೆ ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ(JNU) ಹಳೆಯ ವಿದ್ಯಾರ್ಥಿ ಮತ್ತು 2020ರಲ್ಲಿ ನಡೆದ ದೆಹಲಿ ಗಲಭೆ ಪಿತೂರಿ ಪ್ರಕರಣದಲ್ಲಿ ಹಲವು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ಅವರಂಥ ಮುಸ್ಲಿಂ ಯುವಕರ ಪರವಾಗಿ ಬಹಿರಂಗವಾಗಿ ದನಿಯೆತ್ತಿದ್ದ ಸ್ವರಾ ವಿರುದ್ಧ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಇಂಥ ವಿವಾದಾತ್ಮಕ ಹೇಳಿಕೆ ಹೆಚ್ಚಾಗಿದ್ದು, ನಟಿ,  ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar Ahmad) ಅವರೊಂದಿಗೆ ವಿವಾಹವಾದ ಬಳಿಕ.  ಇದೀಗ ಹೆಣ್ಣುಮಗುವಿನ ಪೋಷಕರಾಗಿದ್ದರೂ ನಟಿಯನ್ನು ಟೀಕಿಸುತ್ತಲೇ ಇದ್ದಾರೆ ನೆಟ್ಟಿಗರು.  

ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.  ಆದರೆ ಸ್ವರಾ (Swara Bhaskar) ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಮದುವೆಯಾದ ಆರು ತಿಂಗಳಿಗೆ ತಾವು ಗರ್ಭಿಣಿ ಎನ್ನುವ ಫೋಟೋ ಶೇರ್​ ಮಾಡಿಕೊಂಡಿದ್ದರು. ಆಗ ಮಗುವಿನ ಹೆಸರು ಹಿಂದೂ ಇಟ್ಟರೆ ನೀವು ಹೇಳಿದಂತೆ ಕೇಳುತ್ತೇವೆ ಎಂದಿದ್ದರು. ಆದರೆ ಮಗಳಿಗೆ  ರಬಿಯಾ ಎಂದು ಹೆಸರು ಇಡುವ ಮೂಲಕ  ಮುಸ್ಲಿಮರ ಹೆಸರೇ ಇಟ್ಟದ್ದರಿಂದ ಮತ್ತಷ್ಟು ಟ್ರೋಲ್​ಗೆ ಒಳಗಾಗಿದ್ದರು. ಇದಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ, ಉಗ್ರರ ಪರವಾಗಿ ದನಿ ಎತ್ತುವ ಮೂಲಕ ಸದಾ ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇತ್ತೀಚಿಗಷ್ಟೇ ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ವಿಡಿಯೋ ಮಾತನಾಡಿದ್ದ ಅವರು, 'ಕಳೆದ ನಾಲ್ಕು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್ ಪ್ರಕರಣವನ್ನು ಆಲಿಸಲು ನ್ಯಾಯಾಧೀಶರಿಗೆ ಸಮಯವಿಲ್ಲ, ಆದರೆ ಸಿಜೆಐ ಚಂದ್ರಚೂಡ್ ಅವರಿಗೆ ಪ್ರಧಾನಿ ಮೋದಿ ಅವರೊಂದಿಗೆ ಗಣೇಶ ಪೂಜೆ ಮಾಡಲು ಸಮಯವಿದೆಯೇ ಇದರ ಬಗ್ಗೆ ಉತ್ತರ ಕೊಡಿ ಎಂದು ನ್ಯಾಯಾಧೀಶರ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. 

ಹೆಣ್ಣಾದ ಮೇಲೆ ದೇವರನ್ನು, ಗಂಡಸರನ್ನು ನೋಡುವಂತಿಲ್ಲ... ಹಾಲು- ಹುಂಜ ಮುಟ್ಟೋಹಾಗಿಲ್ಲ ಮತ್ತು...

Persist. Persevere. Prevail.. is what makes “a woman for all seasons!”
Love the caption
💛✨😎 pic.twitter.com/T9y6YoMZHu

— Swara Bhasker (@ReallySwara)
click me!