ಸದ್ದಿಲ್ಲದೇ ಬಿಡುಗಡೆಯಾದ 2021 ಜಾಗ್ವಾರ್ ಎಕ್ಸ್ ಎಫ್ !

By Suvarna NewsFirst Published Oct 27, 2021, 4:40 PM IST
Highlights

ಗರಿಷ್ಠ ಸುರಕ್ಷತೆ, ಶಕ್ತಿಶಾಲಿ ಹಾಗೂ ಐಷಾರಾಮಿ ಕಾರುಗಳನ್ನು ಉತ್ಪಾದಿಸುವ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಸದ್ದಿಲ್ಲದೇ 2021 ಜಾಗ್ವಾರ್ ಎಕ್ಸ್ಎಫ್ ಲಾಂಚ್ ಮಾಡಿದೆ. ಕಾರಿನ ಸೌಂದರ್ಯವನ್ನು ಹೆಚ್ಚಿಸುವುದಕ್ಕಾಗಿ ಲಘು ರೀತಿಯಲ್ಲಿ ಹಲವು ವಿನ್ಯಾಸಗಳನ್ನು ಮಾಡಿರುವುದನ್ನು ಗುರುತಿಸಬಹುದಾಗಿದೆ.

ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ವಿಶಿಷ್ಟವಾದ ಫೀಚರ್‌ಗಳು, ಐಷಾರಾಮಿ ಅನುಕೂಲಗಳು, ಪವರ್‌ಫುಲ್ ಹಾಗೂ ಗರಿಷ್ಠ ಸುರಕ್ಷತೆಯ ಕಾರಣಕ್ಕಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಕಾರುಗಳು ಹೆಚ್ಚು ಪ್ರಸಿದ್ಧಪಡಿದಿವೆ. ಟಾಟಾ ಮೋಟರ್ಸ್ ಒಡೆತದನ ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ (Jaguar Land Rover India) ಸದ್ದೇ ಇಲ್ಲದೇ 2021 ಜಾಗ್ವಾರ್ ಎಕ್ಸ್‌ಎಫ್ (Jaguar XF) ಕಾರ್ ಲಾಂಚ್ ಮಾಡಿದೆ.

ಎಂಟ್ರಿ ಕೊಟ್ಟ ಪಂಚ್, ಈ ಕಾರಿಗೆ ಅತಿ ಹೆಚ್ಚು ಬುಕ್ಕಿಂಗ್! 

ಭಾರತೀಯ ವಾಹನ ಮಾರುಕಟ್ಟೆಗೆ, ಜಾಗ್ವಾರ್ ಲ್ಯಾಂಡ್ ರೋವರ್ ಇಂಡಿಯಾ (Jaguar Land Rover India) ಪೆಟ್ರೋಲ್ ಹಾಗೂ ಡೀಸೆಲ್ ಮಾದರಿ ಜಾಗ್ವಾರ್ ಎಕ್ಸ್ಎಫ್ (Jaguar XF) ಕಾರುಗಳನ್ನು ಬಿಡುಗಡೆ ಮಾಡಿದೆ. ಈ ವಾಹನಗಳ ಬೆಲೆ ಕ್ರಮವಾಗಿ 71.60 ಲಕ್ಷ ಮತ್ತು 76 ಲಕ್ಷ ರೂಪಾಯಿ ಇದೆ. ಇದು ಎಕ್ಸ್‌ಶೋರೂಂ ಬೆಲೆಯಾಗಿದ್ದು, ಬೇರೆ ಬೇರೆ ರಾಜ್ಯಗಳಲ್ಲಿ ಈ ಬೆಲೆಯಲ್ಲಿ ವ್ಯತ್ಯಾಸವಾಗಲಿದೆ. 

2021 ಜಾಗ್ವಾರ್ XF ಕಾರನ್ನು ಪವರ್‌ಟ್ರೇನ್ ಆಯ್ಕೆಗಳಲ್ಲಿ R-ಡೈನಾಮಿಕ್ S ಟ್ರಿಮ್‌ನಲ್ಲಿ ಮಾತ್ರ ನೀಡಲಾಗುತ್ತದೆ. ಈ ಕಾರುಗಳ ಬಾಹ್ಯ ಮತ್ತು ಒಳಾಂಗಣಕ್ಕೆ ಸೂಕ್ಷ್ಮವಾದ ಕೆಲವು ವಿನ್ಯಾಸಗಳನ್ನು ಬದಲಿಸುವ ಮೂಲಕ ಒಟ್ಟು ಕಾರಿನ ಆಕರ್ಷಕವನ್ನು ಹೆಚ್ಚಿಸಲಾಗಿದೆ. 

2021ರ ಎಡಿಷನ್‌ನೊಂದಿಗೆ, ಜಾಗ್ವಾರ್ ಎಕ್ಸ್ ಎಫ್ (Jaguar XF) ಫೇಸ್‌ಲಿಫ್ಟ್ ಕಾರನ್ನು ಮೈಲ್ಡ್-ಹೈಬ್ರಿಡ್ ಪವರ್‌ಟ್ರೇನ್‌ ಹಾಗೂ ಡೀಸೆಲ್ ಎಂಜಿನ್‌ನೊಂದಿಗೆ ಕಂಪನಿಯು ಮರು-ಪರಿಚಯಿಸಲಾಗಿದೆ. ಈ ಜಾಗ್ವಾರ್ XF, ಮರ್ಸಿಡೇಸ್ ಬೆಂಜ್ ಇ ಕ್ಲಾಸ್ (Mercedes-Benz E-Class), ಬಿಎಂಡಬ್ಲ್ಯೂ 5 ಸೀರೀಸ್ (BMW 5 Sereis), ಆಡಿ ಎ 6 (Audi A6) ಮತ್ತು ವೋಲ್ವೋ ಎಸ್90 (Volvo S90)  ಕಾರುಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ ಎಂದು ಹೇಳಲಾಗುತ್ತಿದೆ. 

ಥಾರ್ ಪೂರ್ತಿ ಬಚ್ಚನ್ ಸಿನಿಮಾಗಳ ಡೈಲಾಗ್, ಡ್ಯಾಶ್‌ಬೋರ್ಡ್ ಮೇಲೆ ಅಮಿತಾಭ್ ಆಟೋಗ್ರಾಫ್ 

ಈ ಜಾಗ್ವಾರ್ ಎಕ್ಸ್‌ಎಫ್ ಕಾರಿನ ಸೌಂದರ್ಯ ಹೆಚ್ಚಿಸುವುದಕ್ಕಾಗಿ ಹಲವು ವಿನ್ಯಾಸಗಳನ್ನ ಅಪ್‌ಗ್ರೇಡ್ ಮಾಡಲಾಗಿದೆ. ಈ ಪೈಕಿ ಕ್ರೈಮ್ ಔಟ್‌ಲೈನ್‌ನೊಂದಿಗೆ ಸ್ಟಡ್ ಟೈಪ್ ವಿನ್ಯಾಸದೊಂದಿಗೆ ಬೃಹತ್ ಫ್ರಂಟ್ ಗ್ರಿಲ್ ಗಮನ ಸೆಳೆಯುತ್ತದೆ. ಅದೇ ರೀತಿ, J ಆಕೃತ್ತಿಯ ರೀತಿಯಲ್ಲಿ ಹೆಡ್‌ಲ್ಯಾಂಪ್‌ಗಳನ್ನು ಮರು ವಿನ್ಯಾಸಗೊಳಿಸಲಾಗಿದೆ. ಇನ್ನು ಫ್ರಂಟ್ ಹಾಗೂ ರಿಯರ್ ಬಂಪರ್‌ಗಳನ್ನು ಮರು ರೂಪಿಸಲಾಗಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿರುವ ಈ ಜಾಗ್ವಾರ್ ಎಕ್ಸ್ಎಫ್‌ ಹಿಂಭಾಗದ ವಿನ್ಯಾಸವನ್ನು ಅಪ್‌ಗ್ರೇಡ್ ಮಾಡಲಾಗಿದೆ. ಉದಾಹರಣೆಗೆ ಸ್ಲೀಕರ್ ಎಲ್ಇಡಿ ಟೈಲ್ ಲ್ಯಾಂಪ್ ಘಟಕವು ಈಗ ಹೊಸ ವಿನ್ಯಾಸದೊಂದಿಗೆ ಆಕರ್ಷಕವಾಗಿದೆ. ಜಾಗ್ವಾರ್ ಲ್ಯಾಂಡ್ ರೋವರ್ ಕಾರಿನ ಚಕ್ರಗಳ ಸೆಟ್ ಅನ್ನು ದೊಡ್ಡದಾದ, ಚುಂಕಿಯರ್ ಮಿಶ್ರಲೋಹಗಳಿಗೆ ನವೀಕರಿಸಲಾಗಿದೆ. 

ಇನ್ನು ಎಂಜಿನ್ ಬಗ್ಗೆ ಹೇಳುವುದಾರೆ, ಜಾಗ್ವಾರ್ ಎಕ್ಸ್ಎಫ್‌ನಲ್ಲಿ ನೀವು 2.0 ಲೀಟರ್ Ingenium ಪೆಟ್ರೋಲ್ ಹಾಗೂ ಡೀಸೆಲ್ ಎಂಜನ್ ಇರುವುದನ್ನು ಕಾಣಬಹುದು. ಪೆಟ್ರೋಲ್ ಎಂಜಿನ್ 247bhp ಶಕ್ತಿ ಉತ್ಪಾದಿಸಿದರೆ, ಗರಿಷ್ಠ 365Nm ಟಾರ್ಕ್ ಉತ್ಪಾದಿಸುತ್ತದೆ. ಅದೇ ರೀತಿ, ಡಿಸೇಲ್ ಎಂಜಿನ್ ಕೂಡ 201bhp ಮತ್ತು 430Nm ಟಾರ್ಕ್ ಉತ್ಪಾದಿಸುತ್ತವೆ. ಈ ಎರಡೂ ಆವೃತ್ತಿಯ ಕಾರುಗಳ ಎಂಜಿನ್‌ಗಳು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸಿಮಿಷನ್ ಸಿಸ್ಟಮ್ ಹೊಂದಿವೆ.

ಮಾರುತಿಯಿಂದ ಬಲೆನೋ ಆಧರಿತ SUV: ಇದು ಪಂಚ್‌ನ ಪ್ರತಿಸ್ಪರ್ಧಿ 

ಜಾಗ್ವಾರ್ ಎಕ್ಸ್‌ಎಫ್ ಒಳಾಂಗಣ ವಿನ್ಯಾಸ ಗಮನ ಸೆಲೆಯುತ್ತದೆ. 11.4 ಇಂಚ್ Pivi Pro ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಇದ್ದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋಗೆ ಸಪೋರ್ಟ್ ಮಾಡುತ್ತದೆ. ಗಿಯರ್ ಸೆಲೆಕ್ಟರ್ ಡಯಲ್ ನಿಮಗೆ ಹೆಚ್ಚು ಪ್ರೀಮಿಯಂ ಲುಕ್ ನೀಡುತ್ತದೆ. ಡಿಜಿಟಲ್ ಇನ್ಸ್‌ಟ್ರುಮೆಂಟ್ ಕ್ಲಸ್ಟರ್, ವೈರ್‌ಲೆಸ್ ಚಾರ್ಜಿಂಗ್ ಪ್ಯಾಡ್, ಏರ್ ಪ್ಯೂರಿಪೈರ್, ಆಂಬಿಯೆಂಟ್ ಲೈಟ್ ಸೇರಿದಂತೆ ಅನೇಕ  ಫೀಚರ್‌ಗಳನ್ನು ಈ ಕಾರಿನಲ್ಲಿ ಕಾಣಬಹುದಾಗಿದೆ.

click me!