ಕೇವಲ ₹5 ಲಕ್ಷದೊಳಗೆ ಫ್ಯಾಮಿಲಿಗೆ ಸೂಪರ್ ಮೈಲೇಜ್ ಕಾರುಗಳು!

By Gowthami K  |  First Published Nov 1, 2024, 8:36 PM IST

ಈ ದೀಪಾವಳಿಗೆ ಫ್ಯಾಮಿಲಿ ಜೊತೆ ಸಂಭ್ರಮಿಸಲು ₹5 ಲಕ್ಷದ ಒಳಗೆ ಸೂಪರ್ ಮೈಲೇಜ್, ಕಡಿಮೆ ನಿರ್ವಹಣೆ ಮತ್ತು ಸ್ಟೈಲಿಶ್ ಡಿಸೈನ್ ಇರುವ ಕಾರುಗಳು ಸಿಗುತ್ತಿವೆ. ಆಲ್ಟೊ K10, ಟಿಯಾಗೊ, ಕ್ವಿಡ್, S-ಪ್ರೆಸ್ಸೊ, ಸ್ಯಾಂಟ್ರೊ ಹೀಗೆ ಹಲವು ಕಾರುಗಳು ಚೆನ್ನಾಗಿವೆ.


ಈ ದೀಪಾವಳಿಗೆ ಇಡೀ ಫ್ಯಾಮಿಲಿ ಸಂಭ್ರಮಿಸೋಕೆ ₹5 ಲಕ್ಷ ರೂ ಕ್ಕಿಂತ ಕಡಿಮೆ ಬೆಲೆಯ ಸೂಪರ್ ಕಾರುಗಳು ಮಾರುಕಟ್ಟೆಗೆ ಬಂದಿವೆ. ಕಡಿಮೆ ಬಜೆಟ್‌ನಲ್ಲಿ ಒಳ್ಳೆ ಕಾರು ತಗೊಳ್ಳೋಕೆ ಇದು ಸೂಕ್ತ ಸಮಯ. ಸೂಪರ್ ಮೈಲೇಜ್, ಕಡಿಮೆ ನಿರ್ವಹಣೆ ಮತ್ತು ಸ್ಟೈಲಿಶ್ ಡಿಸೈನ್ ಇರುವ ಕೆಲವು ಸಖತ್ ಕಾರುಗಳ ಬಗ್ಗೆ ನೋಡೋಣ.

ಮಾರುತಿ ಸುಜುಕಿ ಆಲ್ಟೊ K10
ಬೆಲೆ: ₹4 - ₹5.35 ಲಕ್ಷ (ಎಕ್ಸ್‌ -ಶೋರೂಮ್)
ಮೈಲೇಜ್: 33.85 kmpl ವರೆಗೆ
ಎಂಜಿನ್: 1.0 ಲೀಟರ್ ಪೆಟ್ರೋಲ್
ಆಲ್ಟೊ K10 ಪರ್ಫಾರ್ಮೆನ್ಸ್ ಮತ್ತು ಸ್ಟೈಲಿಶ್ ಡಿಸೈನ್‌ಗೆ ಫೇಮಸ್. ಟ್ರಾಫಿಕ್‌ನಲ್ಲಿ ಸಲೀಸಾಗಿ ಓಡಾಡೋಕೆ ಈ ಪುಟ್ಟ, ಮೈಲೇಜ್ ಕಾರು ಸೂಕ್ತ. ಸಿಟಿ ಡ್ರೈವಿಂಗ್‌ಗೆ ಬೆಸ್ಟ್. ವಿಶಾಲವಾದ ಒಳಭಾಗ ಮತ್ತು ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ, ಕಡಿಮೆ ಬಜೆಟ್ ಇರುವ ಫ್ಯಾಮಿಲಿಗೆ ಮತ್ತು ಮೊದಲ ಬಾರಿಗೆ ಕಾರು ತಗೊಳ್ಳೋರಿಗೆ ಇದು ಒಳ್ಳೆಯ ಆಯ್ಕೆ.

Tap to resize

Latest Videos

undefined

ಗೂಗಲ್‌ ವಿರುದ್ಧ ಜಗತ್ತಿನ ಅತ್ಯಂತ ದೊಡ್ಡ ದಂಡ ವಿಧಿಸಿದ ರಷ್ಯಾ!

ಟಾಟಾ ಟಿಯಾಗೊ
ಬೆಲೆ: ಸುಮಾರು ₹5 ಲಕ್ಷ (ಎಕ್ಸ್‌ -ಶೋರೂಮ್)
ಮೈಲೇಜ್: 28.06 kmpl ವರೆಗೆ
ಎಂಜಿನ್: 1.2 ಲೀಟರ್ ಪೆಟ್ರೋಲ್

ಸೇಫ್ಟಿ ಫೀಚರ್ಸ್ ಮತ್ತು ಸ್ಟ್ರಾಂಗ್ ಬಿಲ್ಡ್ ಕ್ವಾಲಿಟಿ ಇರುವ ಟಾಟಾ ಟಿಯಾಗೊ ಸ್ಟೈಲ್‌ನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಇದು ಮೈಲೇಜ್ ಕೊಡುವ ಎಂಜಿನ್ ಹೊಂದಿದೆ. ವಿಶಾಲವಾದ ಒಳಭಾಗ ಮತ್ತು ಉತ್ತಮ ಪರ್ಫಾರ್ಮೆನ್ಸ್ ಕೊಡುತ್ತದೆ.

ಐಶ್ವರ್ಯಾ ರೈಗೆ 'ಮಿಸೆಸ್ ಬಚ್ಚನ್' ಅಂದ್ರು, ವಿಮಾನ ನಿಲ್ದಾಣದಲ್ಲಿ ಶಾಕ್ ಆದ್ರು!

ರೆನಾಲ್ಟ್ ಕ್ವಿಡ್
ಬೆಲೆ: ₹4.7 - ₹5.5 ಲಕ್ಷ (ಎಕ್ಸ್‌ -ಶೋರೂಮ್)
ಮೈಲೇಜ್: ಸುಮಾರು 22 kmpl
ಎಂಜಿನ್: 0.8 ಅಥವಾ 1.0 ಲೀಟರ್ ಪೆಟ್ರೋಲ್

ಈ ಕಾಂಪ್ಯಾಕ್ಟ್ SUV ಮಾದರಿಯ ಹ್ಯಾಚ್‌ಬ್ಯಾಕ್, ಟಚ್‌ಸ್ಕ್ರೀನ್ ಸಿಸ್ಟಮ್ ಮತ್ತು ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಜೊತೆಗೆ ಸ್ಟೈಲಿಶ್ ಆಗಿದೆ. ಇದರ ಹೈ ಗ್ರೌಂಡ್ ಕ್ಲಿಯರೆನ್ಸ್ ಭಾರತದ ರಸ್ತೆಗಳಿಗೆ ಸೂಕ್ತವಾಗಿದೆ. ಇದರ ಬೆಲೆಗೆ ತಕ್ಕಂತೆ ಹಲವು ಫೀಚರ್ಸ್‌ಗಳನ್ನು ನೀಡುತ್ತದೆ. ಈ ಹಬ್ಬದ ಸೀಸನ್‌ನಲ್ಲಿ ಇದು ಒಳ್ಳೆಯ ಆಯ್ಕೆ.

ಮಾರುತಿ ಸುಜುಕಿ S-ಪ್ರೆಸ್ಸೊ
ಬೆಲೆ: ₹4.26 - ₹5.22 ಲಕ್ಷ (ಎಕ್ಸ್‌ -ಶೋರೂಮ್)
ಮೈಲೇಜ್: 32.73 kmpl ವರೆಗೆ
ಎಂಜಿನ್: 1.0 ಲೀಟರ್ ಪೆಟ್ರೋಲ್

S-ಪ್ರೆಸ್ಸೊ ತನ್ನ SUV ಲುಕ್ ಮತ್ತು ಉತ್ತಮ ಪರ್ಫಾರ್ಮೆನ್ಸ್‌ನಿಂದ ಗಮನ ಸೆಳೆಯುತ್ತದೆ. ಸಿಟಿ ಮತ್ತು ಕಿರಿದಾದ ರಸ್ತೆಗಳಿಗೆ ಸೂಕ್ತ. ಮೈಲೇಜ್ ಕೊಡುತ್ತದೆ ಮತ್ತು ಹೈ ಸೀಟಿಂಗ್ ಪೊಸಿಷನ್ ಹೊಂದಿದೆ. ಯುವಜನರಿಗೆ ಇದು ಸ್ಟೈಲಿಶ್ ಮತ್ತು ಬಜೆಟ್ ಫ್ರೆಂಡ್ಲಿ ಆಯ್ಕೆ.

ಹ್ಯುಂಡೈ ಸ್ಯಾಂಟ್ರೊ
ಬೆಲೆ: ಸುಮಾರು ₹4.87 ಲಕ್ಷ (ಎಕ್ಸ್‌ -ಶೋರೂಮ್)
ಮೈಲೇಜ್: ಸುಮಾರು 30.48 kmpl
ಎಂಜಿನ್: 1.1 ಲೀಟರ್ ಪೆಟ್ರೋಲ್

ಸ್ಯಾಂಟ್ರೊ ರಿಲಯಬಿಲಿಟಿ, ಉತ್ತಮ ಒಳಾಂಗಣ ಮತ್ತು ಸೂಪರ್ ಮೈಲೇಜ್ ನೀಡುತ್ತದೆ. ಟ್ರಸ್ಟ್‌ವರ್ದಿ ಬ್ರ್ಯಾಂಡ್‌ನಿಂದ ಬಂದಿರುವ ಈ ಕಾರು ಒಳ್ಳೆಯ ಆಯ್ಕೆ. ಸಿಟಿ ಮತ್ತು ಹೈವೇ ಎರಡರಲ್ಲೂ ಉತ್ತಮ ಮೈಲೇಜ್ ಕೊಡುತ್ತದೆ.

ಈ ದೀಪಾವಳಿಗೆ ಫ್ಯಾಮಿಲಿಗೆ ಖುಷಿ ಕೊಡಲು ಈ ಕಾರುಗಳನ್ನು ಖರೀದಿಸಬಹುದು. ಸಣ್ಣ ಫ್ಯಾಮಿಲಿ ಮತ್ತು ಕಡಿಮೆ ಬಜೆಟ್ ಇರುವವರಿಗೆ ಈ ಕಾರುಗಳು ಒಳ್ಳೆಯ ಆಯ್ಕೆ.

click me!