ಮಾರುತಿ ಸುಜುಕಿ ಸಂಸ್ಥೆಯ ಮೊದಲ 5 ಸ್ಟಾರ್ ಸೇಫ್ಟಿ ಕಾರು ಅನ್ನೋ ಹೆಗ್ಗಳಿಗೆ ಬಿಡುಗಡೆಗೆ ಸಜ್ಜಾಗಿರುವ ಮಾರುತಿ ಸ್ವಿಫ್ಟ್ ಡಿಝೈರ್ ಕಾರು ಪಾತ್ರವಾಗಿದೆ. ಅತ್ಯಾಕರ್ಷಕ ವಿನ್ಯಾಸ ಹಾಗೂ ಫೀಚರ್ಸ್‌ನಲ್ಲಿ ಕಾರು ಬಿಡುಗಡೆಯಾಗಿದೆ. ವಿಶೇಷ ಅಂದರೆ ಕೈಗೆಟುವು ಬೆಲೆಯಲ್ಲಿ ಲಭ್ಯವಿದೆ.
ನವದೆಹಲಿ(ನ.08) ಮಾರುತಿ ಸುಜುಕಿ ಕಾರುಗಳು ಕಡಿಮೆ ಬೆಲೆ, ಕಡಿಮೆ ನಿರ್ವಹಣೆ ವೆಚ್ಚ ಹಾಗೂ ಗರಿಷ್ಠ ಮೈಲೇಜ್‌ಗೆ ಹೆಸರುವಾಸಿ. ಆದರೆ ಸುರಕ್ಷತೆ ವಿಚಾರದಲ್ಲಿ ಹಿಂದೆ ಬಿದ್ದಿತ್ತು. ಮಾರುತಿ ಸುಜುಕಿಯ ಇದುವರೆಗಿನ ಯಾವುದೇ ಕಾರುಗಳು ಕ್ರಾಶ್ ಪರೀಕ್ಷೆಯಲ್ಲಿ ಸುರಕ್ಷತಾ ಮಾನದಂಡ ಪಾಸ್ ಆಗಿಲ್ಲ. ಆದರೆ ಇದೇ ಮೊದಲ ಬಾರಿಗೆ ಅತ್ಯಾಕರ್ಷಕ ಹೊಚ್ಚ ಹೊಸ ಮಾರುತಿ ಸ್ವಿಫ್ಟ್ ಡಿಝೈರ್ ಕಾರು 5 ಸ್ಟಾರ್ ರೇಟಿಂಗ್ಸ್ ಪಡೆದಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟಿಂಗ್‌ನಲ್ಲಿ ಹೊಸ ಮಾರುತಿ ಸ್ವಿಫ್ಟ್ ಡಿಝೈರ್ 5 ಸ್ಟಾರ್ ಸುರಕ್ಷಾತ ರೇಟಿಂಗ್ಸ್ ಪಡೆದುಕೊಂಡಿದೆ.
ಹೊಚ್ಚ ಹೊಸ ಮಾರುತಿ ಸ್ವಿಫ್ಟ್ ಡಿಝೈರ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಅತ್ಯಾಕರ್ಷಕ ವಿನ್ಯಾಸ ಎಲ್ಲರ ಕಣ್ಣು ಕುಕ್ಕುತ್ತಿದೆ. ಹೋಂಡಾ ಅಮೇಜ್ ಮೀರಿಸುವ ರೀತಿಯ ವಿನ್ಯಾಸದಲ್ಲಿ ಹೊಸ ಡಿಸೈರ್ ಕಾರು ಮಿಂಚುತ್ತಿದೆ. ಫೀಚರ್ಸ್, ಹೊಸ ಶೈಲಿ ಸೇರಿದಂತೆ ಹಲವು ವಿಶೇಷತೆಗಳು ಈ ಕಾರಿನಲ್ಲಿದೆ. ಇನ್ನು ಮಾರುತಿ ಸುಜುಕಿ ಕಾರಣ ಬೆಲೆಯೂ ಕೂಡ ಕೈಗೆಟುವ ರೇಂಜ್‌ನಲ್ಲಿರುತ್ತದೆ. ಈ ಎಲ್ಲಾ ಕುತೂಹಲದ ನಡುವೆ ಕ್ರಾಶ್ ಟೆಸ್ಟ್ ರೇಟಿಂಗ್ ಬಿಡುಗಡೆಯಾಗಿದೆ.
ಕೇವಲ 6 ಲಕ್ಷ ರೂ ಗೆ ಹೊಸ ಆವೃತ್ತಿ ಮಾರುತಿ ಸ್ವಿಫ್ಟ್ ಕಾರು, 40 ಕಿ.ಮಿ ಮೈಲೇಜ್!
ಮಾರುತಿ ಸ್ವಿಫ್ಟ್ ಡಿಝೈರ್ ಕಾರು ಗ್ಲೋಬಲ್ NCAP ಪರೀಕ್ಷೆಯಲ್ಲಿ ವಯಸ್ಕರ ಪ್ರಯಾಣ ಸುರಕ್ಷತೆಯಲ್ಲಿ 34 ಅಂಕಗಳ ಪೈಕಿ 31.24 ಅಂಕ ಪಡೆದುಕೊಂಡಿದೆ. ಇನ್ನು ಮಕ್ಕಳ ಸುರಕ್ಷತೆಯಲ್ಲಿ 49ರ ಪೈಕಿ 39.20 ಅಂಕ ಪಡೆದುಕೊಂಡಿದೆ. ಈ ಮೂಲಕ ಒಟ್ಟಾರೆ 5 ಸ್ಟಾರ್ ರೇಟಿಂಗ್ ಪಡೆದಿದೆ. ಗ್ಲೋಬಲ್ NCAP ಕ್ರಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಗರಿಷ್ಠ ಸುರಕ್ಷತೆ ರೇಟಿಂಗ್ ಆಗಿದೆ. ಟಾಟಾದ ಬಹುತೇಕ ಎಲ್ಲಾ ಕಾರು, ಮಹೀಂದ್ರ ಸೇರಿದಂತೆ ಕೆಲ ಕಾರುಗಳು ಭಾರತದಲ್ಲಿ 5 ಸ್ಟಾರ್ ರೇಟಿಂಗ್ ಪಡೆದುಕೊಂಡಿದೆ. ಇದೀಗ ಈ ಸಾಲಿಗೆ ಮಾರುತಿ ಸ್ವಿಫ್ಟ್ ಡಿಝೈರ್ ಕಾರು ಸೇರಿಕೊಂಡಿದೆ. ಇದು ಮಾರುತಿಯ ಮೊದಲ 5 ಸ್ಟಾರ್ ರೇಟಿಂಗ್ ಕಾರಾಗಿದೆ.
ಹೊಸ ಮಾರುತಿ ಡಿಝೈರ್ ಕಾರು ನವೆಂಬರ್ 11 ರಂದು ಬಿಡುಗಡೆಯಾಗಲಿದೆ. ಇದೀಗ ಕುತೂಹಲ ಮತ್ತಷ್ಟು ಹೆಚ್ಚಾಗಿದೆ. ಪೆಟ್ರೋಲ್ ಹಾಗೂ ಸಿಎನ್‌ಜಿ ಎಂಜಿನ್‌ನಲ್ಲಿ ಕಾರು ಲಭ್ಯವಿದೆ. ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಆಯ್ಕೆಗಳು ಲಭ್ಯವಿದೆ. 1.2 ಲೀಟರ್ 3 ಸಿಲಿಂಡರ್ ಎಂಜಿನ್ ಹೊಂದಿದೆದೆ. ಪೆಟ್ರೋಲ್ ಕಾರು 82 PS ಪವರ್ ಹಾಗೂ 112 Nm ಟಾರ್ಕ್ ಉತ್ಪಾದಿಸಲಿದೆ. ಇನ್ನು ಸಿಎನ್‌ಜಿ ವೇರಿಯೆಂಟ್ ಕಾರು 70 PS ಪವರ್ ಹಾಗೂ 102 Nm ಟಾರ್ಕ್ ಉತ್ಪಾದಿಸಲಿದೆ.
ಪೆಟ್ರೋಲ್ ಮ್ಯಾನ್ಯುಯೆಲ್ ಕಾರು ಒಂದು ಲೀಟರ್‌ಗೆ 24.79 ಕಿ.ಮಿ ಮೈಲೇಜ್ ನೀಡಲಿದೆ ಇನ್ನು ಆಟೋಮ್ಯಾಟಿಕ್ ಕಾರು 25.71 ಕಿ.ಮಿ ಮೈಲೇಜ್ ನೀಡಲಿದೆ. ಇತ್ತ ಸಿಎನ್‌ಜಿ ವೇರಿಯೆಂಟ್ ಕಾರು ಒಂದು ಕೆಜಿಗೆ 33 ಕಿ.ಮಿ ಮೈಲೇಜ್ ನೀಡಲಿದೆ. ಇದರ ಆರಂಭಿಕ ಬೆಲೆ 6.70 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮಾರುತಿ ಸುಜುಕಿಯಿಂದ 550ಕಿ.ಮಿ ಮೈಲೇಜ್ ಎಲೆಕ್ಟ್ರಿಕ್ ಕಾರು ಅನಾವರಣ, ಕೈಗೆಟುಕುವ ದರ!
ಅತ್ಯಾಧುನಿಕ ಫೀಚರ್ಸ್ ಈ ಕಾರಿನಲ್ಲಿದೆ. ಎಲ್ಲಾ ಎಲ್‌ಇಡಿ ಲೈಟ್ಸ್ ನೀಡಲಾಗಿದೆ. 9 ಇಂಚಿನ ಟಚ್‌ಸ್ಕ್ರೀನ್, 15 ಇಂಚಿನ ಅಲೋಯ್ ವ್ಹೀಲ್, ವೈಯರ್‌ಲೆಸ್ ಫೋನ್ ಚಾರ್ಜರ್, ಡ್ರೈವರ್ ಡಿಸ್‌ಪ್ಲೆ, ಕ್ರೂಸ್ ಕಂಟ್ರೋಲ್ ಸೇರಿದಂತೆ ಹಲವು ಫೀಚರ್ಸ್ ಲಭ್ಯವಿದೆ. ಇನ್ನು ಸುರಕ್ಷತೆಗೆ ಆದ್ಯತೆ ನೀಡಿರುವ ಮಾರುತಿ, 6 ಏರ್‌ಬ್ಯಾಗ್, 360 ಡಿಗ್ರಿ ಕ್ಯಾಮೆರಾ, ಟೈಯರ್ ಪ್ರಶರ್ ಮಾನಿಟರಿಂಗ್ ಸೇರಿದಂತೆ ಹಲವು ಫೀಚರ್ಸ್ ಇದರಲ್ಲಿದೆ.