ಇಂಗ್ಲೆಂಡ್‌ನಲ್ಲಿ ಅಪರೂಪದ ದುಂಡಗಿನ ಮೊಟ್ಟೆಯೊಂದು 46000 ರೂಪಾಯಿಗೆ ಹರಾಜಾಗಿದೆ. ಅಲಿಸನ್ ಗ್ರೀನ್ ಎಂಬುವವರಿಗೆ ಸಿಕ್ಕ ಈ ಮೊಟ್ಟೆಯನ್ನು ಹರಾಜಿನ ಮೂಲಕ ಬಂದ ಹಣವನ್ನು ಚಾರಿಟಿಗೆ ನೀಡಲಾಗಿದೆ.
ಜಗತ್ತಿನ ಅಪರೂಪದ ಮೊಟ್ಟೆ: 'ಅಂಡೆ ಕಾ ಫಂಡಾ' ಅಂತಾರಲ್ಲ, ಇದು ಸಾಮಾನ್ಯ ಅಲ್ಲ ಮಾರಾಯ್ರೇ! ಈ ಮೊಟ್ಟೆ ಹರಾಜಿನಲ್ಲಿ 420 ಪೌಂಡ್‌ಗೆ, ಅಂದ್ರೆ ಸುಮಾರು 46000 ರೂಪಾಯಿಗೆ ಮಾರಾಟವಾಗಿದೆ. ಇದರಲ್ಲಿ ಅಂಥದ್ದೇನಿದೆ ಅಂತೀರಾ? ಬನ್ನಿ ಹೇಳ್ತೀವಿ.
ಎಲ್ಲಿ ಸಿಕ್ತು ಈ ವಿಚಿತ್ರ ಮೊಟ್ಟೆ?
ಇಂಗ್ಲೆಂಡ್‌ನ ಸಮರ್‌ಸೆಟ್ ಮತ್ತು ಡೆವೊನ್ ಗಡಿಯ ಬಳಿಯ ಫೆಂಟನ್ ಫಾರ್ಮ್‌ನಲ್ಲಿ ಅಲಿಸನ್ ಗ್ರೀನ್ ಎಂಬುವವರಿಗೆ ಡಿಸೆಂಬರ್ 2024ರಲ್ಲಿ ಈ ವಿಚಿತ್ರ ಮೊಟ್ಟೆ ಸಿಕ್ಕಿದೆ. ಅಲಿಸನ್ ಪ್ರಕಾರ, ಅವರು 4.2 ಕೋಟಿ ಮೊಟ್ಟೆಗಳನ್ನ ನೋಡಿದ್ದಾರೆ. ಆದರೆ, ಈ ಎಲ್ಲ ಮೊಟ್ಟೆಗಳಲ್ಲಿ ಇದುವರೆಗೆ ಇಂಥದ್ದೊಂದು ಮೊಟ್ಟೆ ಸಿಕ್ಕಿರಲಿಲ್ಲ. ಈ ಮೊಟ್ಟೆಯ ವಿಶೇಷ ಎಂದರೆ ಇದರ ದುಂಡಗಿನ ಆಕಾರ. ಸಾಮಾನ್ಯವಾಗಿ ಮೊಟ್ಟೆಗಳು ಓವಲ್ ಶೇಪ್‌ನಲ್ಲಿ ಇರ್ತವೆ, ಆದರೆ ಇದು ಪೂರ್ತಿ ದುಂಡಗಿದೆ.
ಹರಾಜಿನ ಹಣ ಚಾರಿಟಿಗೆ ದಾನ: ಈ ಮೊಟ್ಟೆ ಹರಾಜಿನಲ್ಲಿ 420 ಪೌಂಡ್‌ಗೆ ಮಾರಾಟವಾಯ್ತು. ಆ ಹಣವನ್ನ 'ಡೆವೊನ್ ರೇಪ್ ಕ್ರೈಸಿಸ್' ಅನ್ನೋ ಸಂಸ್ಥೆಗೆ ದಾನ ಮಾಡಲಾಗಿದೆ. ಈ ಎನ್‌ಜಿಒ ಲೈಂಗಿಕ ದೌರ್ಜನ್ಯಕ್ಕೆ ಒಳಗಾದವರಿಗೆ ಸಹಾಯ ಮಾಡುತ್ತೆ. ಅಲಿಸನ್ ಗ್ರೀನ್ ಪ್ರಕಾರ, ಮೊಟ್ಟೆಗಳು ಓವಲ್ ಶೇಪ್‌ನಲ್ಲಿ (ಅಂಡಾಕಾರ) ಇರೋದ್ರಿಂದ ಉರುಳಾಡುತ್ತವೆ, ಆದರೆ ಇದು ದುಂಡಗಿರೋದ್ರಿಂದ ಒಂದೇ ಕಡೆ ಇರುತ್ತದೆ' ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹಲ್ಲಿ ಬಿದ್ದ ಆಹಾರ ವಿಷವಲ್ಲವೆಂದು ಹಲ್ಲಿಯ ಸಾಂಬರ್ ತಿಂದ ಸಂಶೋಧಕ ಗೌರಿಶಂಕರ್; ಬದುಕಿದ್ರಾ, ಸತ್ರಾ ನೀವೇ ನೋಡಿ!
ಎಲಾನ್ ಮಸ್ಕ್‌ಗೂ ಸಿಗಲ್ಲ ಇಂಥ ಮೊಟ್ಟೆ!
57 ವರ್ಷದ ಮೊಟ್ಟೆ ನಿರ್ವಾಹಕಿ ಅಲಿಸನ್ ಗ್ರೀನ್ ಅವರ ಪ್ರಕಾರ, ಎಲೋನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದರೂ, ಅವರ ಬಳಿಯೂ ಅಂತಹ ಅಪರೂಪದ ಮೊಟ್ಟೆ ಇರಲು ಸಾಧ್ಯವಿಲ್ಲ. ಈ ಮೊಟ್ಟೆಗೆ ಹರಾಜಿನಲ್ಲಿ ಬಿಡ್‌ಗಳು ಬಂದಾಗ, ನನ್ನ ಮಗು ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಿದಂತೆ ನನಗೆ ಭಾಸವಾಯಿತು ಎಂದು ಮಹಿಳೆ ಹೇಳಿಕೊಂಡಿದ್ದಾರೆ.
ಒಂದು ಬಿಲಿಯನ್‌ನಲ್ಲಿ ಒಂದು ದುಂಡಗಿನ ಮೊಟ್ಟೆ ಸಿಗುತ್ತದೆ: ಬೀರ್ನೆಸ್ ಹ್ಯಾಂಪ್ಟನ್ ಲಿಟಲ್‌ವುಡ್ಸ್ ಹರಾಜುದಾರ ಬ್ರಿಯಾನ್ ಗುಡಿಸನ್ ಪ್ರಕಾರ, ಗೋಳಾಕಾರದ ಕೋಳಿ ಮೊಟ್ಟೆಗಳು ಸಾಕಷ್ಟು ಅಪರೂಪ. ಇವು ಹಲವಾರು ಶತಕೋಟಿಗಳಲ್ಲಿ ಒಮ್ಮೆ ಮಾತ್ರ ಕಂಡುಬರುತ್ತವೆ. ಇದೇ ಕಾರಣಕ್ಕೆ ಜನರು ಇವುಗಳಿಗಾಗಿ ಹರಾಜಿನಲ್ಲಿ 100 ರಿಂದ 200 ರೂ. ಅಥವಾ ಕೆಲವೊಮ್ಮೆ ಇನ್ನೂ ಹೆಚ್ಚು ಖರ್ಚು ಮಾಡಲು ಸಿದ್ಧರಿರುತ್ತಾರೆ ಎಂದರು.
ಇದನ್ನೂ ಓದಿ: ಆನೇಕಲ್‌ನಲ್ಲಿ ಮದ್ದೂರಮ್ಮ ಜಾತ್ರೆಯ 100 ಅಡಿ ಎತ್ತರದ ರಥ ಬಿದ್ದ ರಹಸ್ಯ ಬಿಚ್ಚಿಟ್ಟ ಸ್ಥಳೀಯರು!