ಝೆರೋಧಾ ಖಾತೆ ಕ್ಲೋಸ್ ಮಾಡಿ, ಗ್ರಾಹಕನ ಇಮೇಲ್‌ಗೆ ನಿತಿನ್ ಕಾಮತ್ ನೀಡಿದ ಉತ್ತರವೇನು?

ಝೆರೋಧ ಖಾತೆ ಈಗಲೇ ಕ್ಲೋಸ್ ಮಾಡಿ, ಪತಿ ಕೆಲಸಕ್ಕೆ ಸೇರಲು ಈ ಸೂಚನೆ ಪಾಲಿಸುವುದು ಅನಿವಾರ್ಯವಾಗಿತ್ತು ಎಂದು ಗ್ರಾಹಕನ ಇಮೇಲ್‌ಗೆ ಝೆರೋದಾ ಸಿಇಒ ನಿತಿನ್ ಕಾಮತ್ ತಕ್ಷಣ ಸ್ಪಂದಿಸಿದ್ದಾರೆ. ಮುಂದೇನಾಯ್ತು? 

Delete Zerodha account CEO Nithin kamath quick response wins Bengaluru customer trust

ಬೆಂಗಳೂರು(ಮಾ.23) ಝೆರೋಧಾ ವಿಶ್ವಾಸಕ್ಕೆ ಯೋಗ್ಯವಲ್ಲ, ತಕ್ಷಣವೇ ಖಾತೆ ಕ್ಲೋಸ್ ಮಾಡಿ. ಹೂಡಿಕೆ ಬ್ಯಾಂಕ್ ಸೂಚನೆಯನ್ನು ಝೆರೋಧಾ ಸಿಇಒ ನಿತಿನ್ ಕಾಮತ್‌ಗೆ ಗ್ರಾಹಕನೊಬ್ಬ ಇಮೇಲ್ ಮಾಡಿದ್ದಾನೆ. ಇದಕ್ಕೆ ತಕ್ಷವೇ ನಿತಿನ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ, ಇಷ್ಟೇ ಅಲ್ಲ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ನಿತಿನ್ ಕಾಮತ್ ನೀಡಿದ ಉತ್ತರ 2 ಬಿಲಿಯನ್‌ ಡಾಲರ್ ಮೊತ್ತದ ಪಾಠ ಕಲಿಸಿದೆ ಎಂದು ಬೆಂಗಳೂರಿನ ಗ್ರಾಹಕ ಹೇಳಿಕೊಂಡಿದ್ದಾರೆ. ಇದೀಗ ಬೆಂಗಳೂರು ಗ್ರಾಹಕನ ಪೋಸ್ಟ್ ಕುರಿತು ಚರ್ಚೆ ನಡೆಯುತ್ತಿದೆ. ಅಷ್ಟಕ್ಕೂ ಏನಿದು ಘಟನೆ?

ಬೆಂಗಳೂರಿನ ಪ್ರಾಡಕ್ಟ್ ಮ್ಯಾನೇಜರ್ ಸಚಿನ್ ಝಾ ಈ ಘಟನೆ ಕುರಿತು ಬೆಳಕು ಚೆಲ್ಲಿದ್ದಾರೆ. ಸಚಿನ್ ಝಾ ಪತ್ನಿ ಹೂಡಿಕೆ ಬ್ಯಾಂಕ್‌ನಲ್ಲಿ ನೌಕರಿ ಗಿಟ್ಟಿಸಿಕೊಂಡಿದ್ದರು. ಕೆಲಸಕ್ಕೆ ಹಾಜರಾಗುವ ವೇಳೆ ಪತಿಯ ಝೆರೋಧ ಖಾತೆ ಸಮಸ್ಯೆಯಾಗಿ ಪರಿಣಿಮಿಸಿತು. ಪತ್ನಿ ಕೆಲಸ ಗಿಟ್ಟಿಸಿಕೊಂಡ ಬ್ಯಾಂಕ್ ಸೂಚನೆ ಆಘಾತ ತಂದಿತ್ತು. ಕಾರಣ ಝೆರೋಧಾ ಖಾತೆಯನ್ನು ತಕ್ಷಣ ಕ್ಲೋಸ್ ಮಾಡುವಂತೆ ಬ್ಯಾಂಕ್ ಸೂಚಿಸಿತ್ತು. ಕಾರಣ ಈ ಝೆರೋಧ ವಿಶ್ವಾಸಾರ್ಹ ಬ್ರೋಕ್ರೇಜ್ ಸಂಸ್ಥೆಯಲ್ಲ. ಝೆರೋಧ ಸಂಸ್ಥೆಗೆ ಯಾವುದೇ ಬ್ಯಾಂಕ್ ಶಾಖೆಗಳಿಲ್ಲ. ಎಲ್ಲವೂ ಡಿಜಿಟಲ್ ವಹಿವಾಟು. ಇದರಿಂದ ಜೆರೋಧ ವಿಶ್ವಾಸಕ್ಕೆ ಯೋಗ್ಯವಲ್ಲ. ತಕ್ಷಣವೆ ಖಾತೆ ಡಿಲೀಟ್ ಮಾಡುವಂತೆ ಸೂಚಿಸಿತ್ತು ಎಂದು ಸಚಿನ್ ಜಾ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದಾರೆ. 

Latest Videos

ಕರ್ನಾಟಕದ ಟಾಪ್ 5 ಆಗರ್ಭ ಶ್ರೀಮಂತರು ಯಾರು ಗೊತ್ತಾ?

ಹೂಡಿಕೆ ಬ್ಯಾಂಕ್ ಸೂಚನೆ ಕಾರಣದಿಂದ ಅನಿವಾರ್ಯವಾಗಿ ಜೆರೋಧ ಖಾತೆ ಡಿಲೀಟ್ ಮಾಡಬೇಕಾಯಿತು ಎಂದು ಸಚಿನ್ ಝಾ ಹೇಳಿದ್ದರೆ. ಕೊನೆಯದಾಗಿ ಒಂದು ಪ್ರಯತ್ನ ಮಾಡೋಣ ಎಂದು ಝೆರೋದಾ ಸಿಇಒ ನಿತಿನ್ ಕಾಮತ್‌ಗೆ ಇಮೇಲ್ ಮೂಲಕ ಈ ಮಾಹಿತಿಯನ್ನು ಸಚಿನ್ ಝಾ ತಲುಪಿಸಿದ್ದಾರೆ. ಇಮೇಲ್ ಮಾಡಿದ 10 ನಿಮಿಷದಲ್ಲಿ ನಿತಿನ್ ಕಾಮತ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರತಿಕ್ರಿಯೆ 2 ಬಿಲಿಯನ್ ಡಾಲರ್‌ನಷ್ಟು ಮೊತ್ತದ ಪಾಠಕ್ಕೆ ಸಮ ಎಂದು ಸಚಿನ್ ಝಾ ಹೇಳಿದ್ದಾರೆ

ಗ್ರಾಹಕ ಸಚಿನ್ ಝಾ ಇಮೇಲ್ ನೋಡಿದ ತಕ್ಷಣ ನಿತಿನ್ ಕಾಮತ್ ಸೇಲ್ಸ್ ಟೀಮ್ ಜೊತೆ ಈ ಕುರಿತು ಚರ್ಚಿಸಿದ್ದಾರೆ.  ಬಳಿಕ ಸಚಿನ್ ಝಾಗೆ ಪ್ರತಿಕ್ರಿಯಿಸಿದ್ದಾರೆ. ಸೇಲ್ಸ್ ತಂಡದ ಸದಸ್ಯರೊಬ್ಬರು ನಿಮ್ಮನ್ನು ಸಂಪರ್ಕಿಸುತ್ತಾರೆ. ಅವರಿಗೆ ಅಗತ್ಯ ಮಾಹಿತಿಗಳನ್ನು ನೀಡಿ. ನಿಮ್ಮ ಕಂಪನಿ ಮಾಹಿತಿ ತಿಳಿಸಿ, ಈ ಕೂಡಲೇ ಕಂಪನಿ ಜೊತೆ ಚರ್ಚಿಸುತ್ತೇವೆ ಎಂದು ನಿತಿನ್ ಕಾಮತ್ ಇಮೇಲ್‌ಗೆ ಪ್ರತಿಕ್ರಿಯೆ ನೀಡಿದ್ದರು.

ಬಳಿಕ ಝೆರೋಧಾ ಕಂಪನಿ ಸದಸ್ಯರು ಸಚಿನ್ ಝಾ ಸಂಪರ್ಕಿಸಿದ್ದಾರೆ. ಬಳಿಕ ಸಚಿನ್ ಝಾ ಪತ್ನಿ ಕೆಲಸ ಮಾಡುವ ಕಂಪನಿ ಮಾಹಿತಿ ಕೇಳಿದ್ದಾರೆ. ಕಂಪನಿ ಜೊತೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದಾರೆ. ಬಳಿಕ ಎಲ್ಲಾ ಸಮಸ್ಯೆಗಳ ಮಾಹಿತಿ ಪಡೆದುಕೊಂಡು ಸಚಿನ್ ಝಾ ಪತ್ನಿ ಕೆಲಸ ಮಾಡುತ್ತಿದ್ದ ಕಂಪನಿ ಸಂಪರ್ಕಿಸಿದ್ದಾರೆ. ಕಂಪನಿಯ ರೋಡ್ ಮ್ಯಾಪ್ ಕುರಿತು ಮಾಹಿತಿ ನೀಡಿದ್ದಾರೆ.  ಕೆಲ ಕ್ಷೇತ್ರಗಳಲ್ಲಿ ಎದುರಾಗುತ್ತಿರು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಪರಿಹರಿಸುವ ಕೆಲಸ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಝೆರೋಧ ಕಂಪನಿಯ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಸಚಿನ್ ಝಾ ಹೇಳಿದ್ದಾರೆ.

ಇದೇ ಪೋಸ್ಟ್‌ನಲ್ಲಿ ಸಚಿನ್ ಝಾ, ತಮ್ಮ ಜೆರೋಧಾ ಖಾತೆ ಮತ್ತೆ ತೆರೆದಿಲ್ಲ. ಡಿಲೀಟ್ ಮಾಡಿದ್ದು ಹಾಗೇ ಇದೆ. ಆದರೆ ಝೆರೋಧಾ ನನ್ನ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಭಾರಿ ಚರ್ಚೆಗೆ ಕಾರಣವಾಗಿದೆ.

ಭಾರತೀಯರು ಶ್ರೀಮಂತರನ್ನು ದ್ವೇಷ ಮಾಡೋದೇಕೆ? ಜೀರೋಧಾ ಸಂಸ್ಥಾಪಕ ನಿತಿನ್‌ ಕಾಮತ್‌ ಉತ್ತರ ಇದು!
 

vuukle one pixel image
click me!