ಐಪಿಎಲ್ ವೀಕ್ಷಿಸಲು ಜಿಯೋ ಹಾಟ್‌ಸ್ಟಾರ್ ಉಚಿತ ಸಬ್‌ಸ್ಕ್ರಿಪ್ಶನ್, ಉಚಿತ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಸೌಲಭ್ಯಗಳನ್ನೊಳಗೊಂಡ ಪ್ಲಾನ್ ವಿಐ ಘೋಷಿಸಿದೆ. 101 ರೂಪಾಯಿಯಿಂದ ಈ ಪ್ಲಾನ್ ಆರಂಭಗೊಳ್ಳುತ್ತಿದೆ.
ನವದೆಹಲಿ(ಮಾ.23) ಐಪಿಎಲ್ ಕ್ರಿಕೆಟ್ ಆರಂಭಗೊಂಡಿದೆ. ಜಿಯೋ ಹಾಟ್‌ಸ್ಟಾರ್ ಮೂಲಕ ಲೈವ್ ಸ್ಟ್ರೀಮ್ ವೀಕ್ಷಿಸಲು ಇದೀಗ ದುಬಾರಿ ರೀಚಾರ್ಜ್ ಮಾಡಬೇಕಿಲ್ಲ. ಹಲವು ಟೆಲಿಕಾಂ ಸಂಸ್ಥೆಗಳು ಆಫರ್ ಘೋಷಿಸಿದೆ. ಇದೀಗ ವೋಡಾಫೋನ್ ಐಡಿಯಾ ಅತೀ ಕಡಿಮೆ ಬೆಲೆಯಲ್ಲಿ ಐಪಿಎಲ್ ಲೈವ್ ಸ್ಟ್ರೀಮ್ ಉಚಿತ ಸಬ್‌ಸ್ಕ್ರಿಪ್ಶನ್, ಉಚಿತ ಡೇಟಾ, ಅನ್‌ಲಿಮಿಟೆಡ್ ಕಾಲ್, ಎಸ್ಎಂಎಸ್ ಸೇರಿದಂತೆ ಹಲವು ಸೌಲಭ್ಯಗಳು ವೋಡಾಫೋನ್ ಐಡಿಯಾ ಘೋಷಿಸಿದೆ. ವಿಐ ಹೊಸ ರೀಚಾರ್ಜ್ ಪ್ಲಾನ್ ಕೇವಲ 101 ರೂಪಾಯಿಯಿಂದ ಆರಂಭಗೊಳ್ಳುತ್ತದೆ.
ಟಿ20 ಲೀಗ್ ನ ರೋಚಕ ಪಂದ್ಯಗಳನ್ನು ವೀಕ್ಷಿಸಲು ಸಿದ್ಧರಾಗಿರುವ ಅಭಿಮಾನಿಗಳಿಗೆ ನಿರಂತರವಾಗಿ ಸುಗಮವಾಗಿ ಪಂದ್ಯ ವೀಕ್ಷಿಸಲು ಸಾಕಷ್ಟು ಹೈಸ್ಪೀಡ್ ಡೇಟಾ ಅಗತ್ಯವಿದೆ. ಅದಕ್ಕೆ ವಿಐ ಸಂಸ್ಥೆ ಸೂಕ್ತ ವ್ಯವಸ್ಥೆ ಮಾಡಿದ್ದು, ಇದೀಗ ವಿ ಪ್ರೀಪೇಯ್ಡ್ ಗ್ರಾಹಕರು ಈ ಪಂದ್ಯಗಳ ಪ್ರತೀ ಕ್ಷಣವನ್ನು ಅತ್ಯುತ್ತಮ ಡೇಟಾ ವ್ಯವಸ್ಥೆಯೊಂದಿಗೆ ಮತ್ತು ಉಚಿತ ಜಿಯೋ ಹಾಟ್‌ಸ್ಟಾರ್ ಸಬ್ ಸ್ಕ್ರಿಪ್ಷನ್ ಮೂಲಕ ಆನಂದಿಸಬಹುದು.
ನಿರಂತರ ಮತ್ತು ಸುಗಮ ಕ್ರಿಕೆಟ್ ಅನುಭವಕ್ಕಾಗಿ ವಿ ಗ್ರಾಹಕರಿಗೆ ಹಲವು ಪ್ಯಾಕ್ ಗಳನ್ನು ಪರಿಚಯಿಸಲಾಗಿದೆ. ಈ ಸೀಸನ್ ಗಾಗಿ ವಿಶೇಷವಾಗಿ ವಿ ಸಂಸ್ಥೆಯು 3 ಹೊಸ ರೀಚಾರ್ಜ್ ಪ್ಯಾಕ್ ಗಳನ್ನು ಪರಿಚಯಿಸಿದೆ, ಇವು ಗ್ರಾಹಕರಿಗೆ ಉತ್ತಮ ಮೌಲ್ಯ ಮತ್ತು ಪ್ರಯೋಜನಗಳನ್ನು ಒದಗಿಸುತ್ತವೆ:
1) 101 ರೂಪಾಯಿ ರೀಚಾರ್ಜ್: 3 ತಿಂಗಳ ಜಿಯೋ ಹಾಟ್ ಸ್ಟಾರ್ (ಮೊಬೈಲ್) ಸಬ್‌ಸ್ಕ್ರಿಪ್ಷನ್ ಜೊತೆಗೆ 5ಜಿಬಿ ಡೇಟಾ ದೊರೆಯುತ್ತದೆ.
2) 399 ರೂಪಾಯಿ ರೀಚಾರ್ಜ್: ಅನಿಯಮಿತ ಕರೆಗಳು + ಮಧ್ಯರಾತ್ರಿ 12ರಿಂದ ಮಧ್ಯಾಹ್ನ 12ರವರೆಗೆ ಅನಿಯಮಿತ ಡೇಟಾ + ಪ್ರತಿದಿನ ಹೆಚ್ಚುವರಿ 2 ಜಿಬಿ ಡೇಟಾ ಮತ್ತು ಜಿಯೋ ಹಾಟ್ ಸ್ಟಾರ್ ಮೊಬೈಲ್ ಸಬ್‌ಸ್ಕ್ರಿಪ್ಷನ್, 28 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ.
3) 239 ರೂಪಾಯಿ ರೀಚಾರ್ಜ್: ಅನಿಯಮಿತ ಕರೆಗಳು + 2 ಜಿಬಿ ಡೇಟಾ ಮತ್ತು ಜಿಯೋ ಹಾಟ್ ಸ್ಟಾರ್ ಮೊಬೈಲ್ ಸಬ್‌ಸ್ಕ್ರಿಪ್ಷನ್, 28 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ.
4) 469 ರೂಪಾಯಿ ರೀಚಾರ್ಜ್: ಮಧ್ಯರಾತ್ರಿ 12- ಮಧ್ಯಾಹ್ನ 12 ಅನಿಯಮಿತ + 2.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 100 ಉಚಿತ ಎಸ್ಎಂಎಸ್, 3 ತಿಂಗಳು ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಿಪ್ಶನ್ ಹಾಗೂ 28 ದಿನಗಳ ವ್ಯಾಲಿಟಿಡಿ ಸಿಗಲಿದೆ.
5) 994 ರೂಪಾಯಿ ರೀಚಾರ್ಜ್:ಮಧ್ಯರಾತ್ರಿ 12-ಮಧ್ಯಾಹ್ನ 12 ಅನಿಯಮಿತ + 2 ಜಿಬಿ ಪ್ರತಿ ದಿನ ಡೇಟಾ, 84 ದಿನ ವ್ಯಾಲಿಟಿಡಿ, ಅನಿಯಮಿತ ಕರೆ, ಪ್ರತಿ ದಿನ 100 ಎಸ್ಎಂಎಸ್ ಉಚಿತ ಹಾಗೂ 3 ತಿಂಗಳು ಜಿಯೋ ಹಾಟ್‌ಸ್ಟಾರ್ ಸಬ್‌ಸ್ಕ್ರಪ್ಶನ್.
ಮುಕೇಶ್ ಅಂಬಾನಿಯನ್ನು ಸೋಲಿಸಿದ ವೊಡಾಫೋನ್; ಇತ್ತ ಏರ್‌ಟೆಲ್‌ಗೂ ಶಾಕ್!