ಜೂನಿಯರ್ ಎನ್‌ಟಿಆರ್, ಪ್ರಿಯಾಮಣಿ, ಮಮತಾ ಮೋಹನ್ ದಾಸ್ ಹೀರೋ, ಹೀರೋಯಿನ್ ಆಗಿ ರಾಜಮೌಳಿ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ ಯಮದೊಂಗ. ಈ ಸಿನಿಮಾದಲ್ಲಿ ದೊಂಗನಾಗಿ ಎನ್‌ಟಿಆರ್ ಮಾಸ್ ಕ್ಯಾರೆಕ್ಟರ್‌ನಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಕಂಪ್ಲೀಟ್ ಆಗಿ ಸೆಂಟಿಮೆಂಟ್ ಬೇಸ್ ಆಗಿ ಆಕ್ಷನ್ ಸೀನ್ಸ್‌ನಿಂದ ಡೆಕೋರೇಟ್ ಮಾಡಿದ ಸಿನಿಮಾ ಇದು. ಈ ಮೂವಿಯಲ್ಲಿ ಹೀರೋ ಆದಮೇಲೆ ಅಷ್ಟೇ ಇಂಪಾರ್ಟೆನ್ಸ್ ಇರುವ ಮತ್ತೊಂದು ಪಾತ್ರ ಯಮ. ಈ ಎರಡು ಕ್ಯಾರೆಕ್ಟರ್ಸ್ ನಡುವೆ ನಡೆಯುವ ಅದ್ಭುತ ಸನ್ನಿವೇಶಗಳು ಸಿನಿಮಾಕ್ಕೆ ಪ್ರಾಣ ತುಂಬಿದವು ಅಂತ ಹೇಳಬಹುದು. ಯಮನ ಪಾತ್ರದಲ್ಲಿ ಕೆಲವು ಹೊಸ ವೇರಿಯೇಷನ್ಸ್‌ಗಳನ್ನು ಮೋಹನ್ ಬಾಬು ಮೂಲಕ ರಾಜಮೌಳಿ ತೋರಿಸಿದ್ದಾರೆ.