ಥೈಲ್ಯಾಂಡ್‌-ಮಯನ್ಮಾರ್‌ ಭೂಕಂಪದ Impact: ಗುಜರಾತ್‌ಗೆ ಆಗಲಿದೆ ಬೆಟ್ಟದಷ್ಟು ನಷ್ಟ!

ಮಯನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿನ ಭೂಕಂಪದಿಂದ ಗುಜರಾತ್ ಮೂಲದ ಕಂಪನಿಗಳ ರಫ್ತಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಜವಳಿ, ಔಷಧ, ರಾಸಾಯನಿಕ ರಫ್ತುಗಳಿಗೆ ಹಾನಿಯಾಗುವ ಸಾಧ್ಯತೆ ಇದ್ದು, ಸಾಗಣೆ ಮತ್ತು ಪಾವತಿಗಳ ಮೇಲೆ ಪರಿಣಾಮ ಬೀರಬಹುದು.

thailand myanmar earthquake Indian businesses may suffer losses worth crores san

ಮುಂಬೈ (ಮಾ.28): ಮಯನ್ಮಾರ್‌ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪವು ಭಾರತೀಯ ಕಂಪನಿಗಳಲ್ಲಿ ಅದರಲ್ಲೂ ವಿಶೇಷವಾಗಿ ಗುಜರಾತ್‌ ಮೂಲದ ಕಂಪನಿಗಳಿಗೆ ರಫ್ತಿನ ಕಳವಳವನ್ನು ಹೆಚ್ಚಿಸಿದೆ. ಈ ದೇಶಗಳೊಂದಿಗೆ ಗುಜರಾತ್ ಬಲವಾದ ವ್ಯಾಪಾರ ಸಂಬಂಧವನ್ನು ಹೊಂದಿದ್ದು, ಔಷಧಗಳು, ಜವಳಿ ಮತ್ತು ರಾಸಾಯನಿಕಗಳ ವ್ಯವಹಾರಗಳ ಮೇಲೆ ಭೂಕಂಪ ಪರಿಣಾಮ ಬೀರುವ ಸಾಧ್ಯತೆ ಇದೆ. ಭೂಕಂಪದಿಂದಾಗಿ ಮೂಲಸೌಕರ್ಯ ಹಾನಿ ಮತ್ತು ಸಂವಹನ ಸವಾಲುಗಳಿಂದಾಗಿ ಸಾಗಣೆ ಮತ್ತು ಪಾವತಿಗಳ ಮೇಲೆ ಪರಿಣಾಮ ಬೀರಬಹುದು ಎನ್ನಲಾಗಿದೆ.

ಮಾರ್ಚ್ 28 ರಂದು ಮಯನ್ಮಾರ್‌ ಮತ್ತು ಥೈಲ್ಯಾಂಡ್ ಅನ್ನು ಅಪ್ಪಳಿಸಿದ ಭಾರಿ ಭೂಕಂಪವು ಭಾರತದ ವ್ಯಾಪಾರ ಸಮುದಾಯದಲ್ಲಿ, ವಿಶೇಷವಾಗಿ ಗುಜರಾತ್‌ನಲ್ಲಿ, ಆತಂಕ ಮೂಡಿಸಿದೆ,  ಗುಜರಾತ್, ಮಯನ್ಮಾರ್‌ ಮತ್ತು ಥೈಲ್ಯಾಂಡ್ ಜೊತೆ ದೀರ್ಘಕಾಲದ ಆರ್ಥಿಕ ಸಂಬಂಧವನ್ನು ಹೊಂದಿದ್ದು, ಪ್ರಮುಖ ರಫ್ತುಗಳು ಜವಳಿ, ಔಷಧಗಳು ಮತ್ತು ರಾಸಾಯನಿಕಗಳನ್ನು ಒಳಗೊಂಡಿವೆ. ಗುಜರಾತ್ ಅಸೋಸಿಯೇಷನ್ ​​ಪ್ರಕಾರ, ರಾಜ್ಯದ ಜವಳಿ ಉದ್ಯಮವು ವಾರ್ಷಿಕವಾಗಿ ₹600 ಕೋಟಿ ಮೌಲ್ಯದ ಉಡುಪುಗಳು ಮತ್ತು ಗ್ರೇ ಫ್ಯಾಬ್ರಿಕ್‌ಅನ್ನು ಈ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ.

Latest Videos

ಔಷಧ ರಫ್ತು ಒಟ್ಟು ₹2,100 ಕೋಟಿಗಳಾಗಿದ್ದರೆ, ರಾಸಾಯನಿಕ ವಲಯವು ₹100 ಕೋಟಿಗಳ ಕೊಡುಗೆ ನೀಡುತ್ತದೆ, ಮುಖ್ಯವಾಗಿ ಡೈಗಳು ಮತ್ತು ಕೈಗಾರಿಕಾ ರಾಸಾಯನಿಕಗಳನ್ನು ರಫ್ತು ಮಾಡಲಾಗುತ್ತದೆ. ಪೀಠೋಪಕರಣ ತಯಾರಿಕೆಗೆ ಪ್ರಮುಖವಾದ ಟಿಂಬರ್‌ ಮತ್ತು ಮರದ ರಫ್ತುಗಳ ಮೇಲೂ ಪರಿಣಾಮ ಬೀರಬಹುದು.

ಮಾಜಿ PDEXCIL ಮುಖ್ಯಸ್ಥ ಭರತ್ ಛಾಜೆದ್‌ ಈ ಬಗ್ಗೆ ಮಾತನಾಡಿದ್ದು, ಮ್ಯಾನ್ಮಾರ್‌ನ ಕೈಗಾರಿಕಾ ಸಚಿವ ಡಾ. ಚಾರ್ಲಿ ಥಾನ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಹೇಳಿದರು. ಅವರು ಮಂಡಲೆಯಲ್ಲಿ ಗಮನಾರ್ಹ ಹಾನಿ ಆಗಿರುವುದನ್ನು ದೃಢಪಡಿಸಿದ್ದಾರೆ. ಅನೇಕ ದೂರವಾಣಿ ಮಾರ್ಗಗಳು ಕಾರ್ಯನಿರ್ವಹಿಸುತ್ತಿಲ್ಲ, ಇದರಿಂದಾಗಿ ಸಂವಹನ  ಕೂಡ ಕಷ್ಟವಾಗುತ್ತಿದೆ ಎಂದಿದ್ದಾರೆ.

ಫೋಟೋಗಳಲ್ಲಿ: ಮ್ಯಾನ್ಮಾರ್- ಥೈಲ್ಯಾಂಡ್‌ನಲ್ಲಿ ರಣಭೀಕರ ಭೂಕಂಪ: ಸಾವಿನ ಕೇಕೆ, ಆಸ್ಪತ್ರೆಯಲ್ಲಿ ಜಾಗವೇ ಇಲ್ಲ!

ರಫ್ತುದಾರರು ಸಾಗಣೆ ವಿಳಂಬ, ಪಾವತಿ ಅಡಚಣೆಗಳು ಮತ್ತು ಸಾಗಣೆ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಹಾನಿ ವ್ಯಾಪಕವಾಗಿದ್ದರೆ, ಈ ದೇಶಗಳಿಂದ ಬರುವ ಆರ್ಡ್‌ಗಳು ಕೂಡ ನಿಧಾನವಾಗಬಹುದು, ಪಾವತಿಗಳು ವಿಳಂಬವಾಗಬಹುದು ಮತ್ತು ಪೂರೈಕೆ ಸರಪಳಿಗಳು ತೊಂದರೆಗೊಳಗಾಗಬಹುದು ಎಂದು ಛಾಜೆದ್ ಎಚ್ಚರಿಸಿದ್ದಾರೆ.

Myanmar earthquake 2025: ಭೂಕಂಪಗಳು ಹೇಗೆ ಸಂಭವಿಸುತ್ತವೆ? ಅದರ ತೀವ್ರತೆ ಮತ್ತು ವಿನಾಶದ ಸಂಪೂರ್ಣ ವಿವರ ಇಲ್ಲಿದೆ

ಆರ್ಥಿಕ ನಷ್ಟವನ್ನು ತಗ್ಗಿಸಲು ಮತ್ತು ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಜೊತೆಗಿನ ವ್ಯಾಪಾರ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಪರಿಹಾರ ಕ್ರಮಗಳನ್ನು ಪರಿಚಯಿಸುವಂತೆ ವ್ಯಾಪಾರ ಗುಂಪುಗಳು ಸರ್ಕಾರವನ್ನು ಒತ್ತಾಯಿಸಿವೆ.
 

vuukle one pixel image
click me!