ಎಂಟು ದಿನಗಳ ಬಳಿಕ ಇಳಿಕೆಯಾದ ಚಿನ್ನದ ಬೆಲೆ; ಇಂದಿನ ದರಗಳು ಇಲ್ಲಿವೆ!

Gold And Silver Price Today: ಭಾರತದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 22 ಮತ್ತು 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ

ಚಿನ್ನ ಖರೀದಿಸಬೇಕು ಅನ್ನೋದು ಬಹುತೇಕ ಎಲ್ಲರ ಕನಸು ಆಗಿರುತ್ತದೆ. ಆದ್ರೆ ಚಿನ್ನದ ಬೆಲೆ ಮಾತ್ರ ದಿನದಿಂದ ದಿನಕ್ಕೆ ಗಗನಕ್ಕೇರುತ್ತಲೇ ಇರುತ್ತದೆ. ಗುಡ್ ರಿಟರ್ನ್ಸ್ ವರದಿ ಪ್ರಕಾರ ಭಾರತದಲ್ಲಿ ಎಂಟು ದಿನಗಳ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. 

ಕೊನೆಯ ಬಾರಿ 25ನೇ ಮಾರ್ಚ್ 2025ರಂದು ಚಿನ್ನದ ಬೆಲೆಯಾಗಿತ್ತು. ಕಳೆದ ಏಳು ದಿನಗಳಿಂದ ಚಿನ್ನದ ಬೆಲೆ ಸ್ವಲ್ಪ ಸ್ವಲ್ವವೇ ಏರಿಕೆಯಾಗುತ್ತಾ ದಾಖಲೆ ಬರೆದಿತ್ತು. ಆದ್ರೆ ಇಂದು ಚಿನ್ನದ ಬೆಲೆ ಕಡಿಮಯಾಗಿದ್ದು, ದರ ಎಷ್ಟಿದೆ ಎಂದು ನೋಡೋಣ ಬನ್ನಿ


ದೇಶದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,509 ರೂಪಾಯಿ
8 ಗ್ರಾಂ: 68,072 ರೂಪಾಯಿ
10  ಗ್ರಾಂ: 85,090 ರೂಪಾಯಿ
100 ಗ್ರಾಂ: 8,50,900 ರೂಪಾಯಿ

ದೇಶದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,283 ರೂಪಾಯಿ
8 ಗ್ರಾಂ: 74,264 ರೂಪಾಯಿ
10  ಗ್ರಾಂ: 92,830 ರೂಪಾಯಿ
100 ಗ್ರಾಂ: 9,28,300 ರೂಪಾಯಿ

ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 85,090 ರೂಪಾಯಿ, ಮುಂಬೈ: 85,090 ರೂಪಾಯಿ, ದೆಹಲಿ: 85,240 ರೂಪಾಯಿ, ಕೋಲ್ಕತ್ತಾ: 85,090 ರೂಪಾಯಿ, ಬೆಂಗಳೂರು: 85,090 ರೂಪಾಯಿ, ಹೈದರಾಬಾದ್: 85,090 ರೂಪಾಯಿ, ಕೇರಳ: 85,090 ರೂಪಾಯಿ

ದೇಶದಲ್ಲಿ ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. 
10 ಗ್ರಾಂ: 1,049 ರೂಪಾಯಿ
100 ಗ್ರಾಂ:  10,490 ರೂಪಾಯಿ
1000 ಗ್ರಾಂ: 1,04,900 ರೂಪಾಯಿ

ಎಷ್ಟು ದರ ಇಳಿಕೆ?
ಇಂದು 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂಪಾಯಿಗಳಷ್ಟು ಇಳಿಕೆಯಾಗಿದೆ. ಹಾಗೆ 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಇಳಿಕೆಯಾಗಿದೆ. 

Latest Videos

click me!