Apr 3, 2025, 9:21 PM IST
Kannada Entertainment Live: ಚೆನ್ನೈ ಸಮುದ್ರ ದಡದಲ್ಲಿ ಸಿಕ್ಕಳು ಜಾನು; ಬಯಲಾಗುತ್ತಾ ಸೈಕೋ ಜಯಂತ್‌ನ ಅಸಲಿ ಮುಖ?
ಇಡೀ ದೇಶವೇ ಕಾಂತಾರಾ ಚಾಪ್ಟರ್ 1ಗಾಗಿ ಕಾಯುತ್ತಿದೆ. ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ಅಭಿನಯದ ಕಾಂತಾರ 1 ಸಿನಿಮಾ ಬಿಡುಗಡೆ ಕೂಡ ಮುಂದೂಡಲಾಗಿದೆ ಅನ್ನೋ ಮಾತುಗಳು ಕೇಳಿಬಂದಿತ್ತು. ಈ ಕುರಿತ ಕೆಲ ಪೋಸ್ಟ್‌ಗಳು ವೈರಲ್ ಆಗಿತ್ತು. ಈ ಸಂಬಂಧ ಚಿತ್ರತಂಡ ಮಹತ್ವದ ಅಪ್‌ಡೇಟ್ ನೀಡಿದೆ. ಮತ್ತೊಂದೆಡೆ ಕಿರುತೆರೆಯಲ್ಲಿ ಹೊಸ ಧಾರಾವಾಹಿಗಳ ಎಂಟ್ರಿ ಆಗುತ್ತಿದೆ. ಲಕ್ಷೀ ಬಾರಮ್ಮ ಸೀರಿಯಲ್ ಮುದ್ದುಸೊಸೆಗೆ ದಾರಿ ಮಾಡಿಕೊಟ್ಟಿದೆ. ಮತ್ತೊಂದೆಡೆ ಕರ್ಣ ಸೀರಿಯಲ್ ಪ್ರೋಮೋ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಆದ್ರೆ ಕರ್ಣನಿಗಾಗಿ ಯಾವ ಧಾರಾವಾಹಿ ಕೊನೆಯಾಗುತ್ತೆ ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಸುಧಾರಾಣಿ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಕೊನೆಯಾಗಲಿದೆ ಎಂದು ಹೇಳಲಾಗುತ್ತಿದೆ.
9:21 PM
ಚೆನ್ನೈ ಸಮುದ್ರ ದಡದಲ್ಲಿ ಸಿಕ್ಕಳು ಜಾನು; ಬಯಲಾಗುತ್ತಾ ಸೈಕೋ ಜಯಂತ್‌ನ ಅಸಲಿ ಮುಖ?
Lakshmi Nivasa Serial: ಸೈಕೋ ಗಂಡನಿಂದ ಬೇಸತ್ತ ಜಾನು ಸಮುದ್ರಕ್ಕೆ ಹಾರಿದ್ದಳು. ಜಯಂತ್ ಅವಳನ್ನು ಹುಡುಕಿದರೂ ಸಿಗಲಿಲ್ಲ. ಆದರೆ, ಮುಂದಿನ ಸಂಚಿಕೆಯಲ್ಲಿ ಜಾನು ಬದುಕಿರುವುದು ತಿಳಿದುಬಂದಿದೆ.
ಪೂರ್ತಿ ಓದಿ4:54 PM
ನನಗೂ ಸಹಾಯ ಬೇಕಿದೆ ನನ್ನ ಪರ ಯಾರೂ ನಿಲ್ಲುತ್ತಿಲ್ಲ; ಬೇಸರ ಹೊರ ಹಾಕಿದ ಸಲ್ಮಾನ್ ಖಾನ್
ಯಾಕೆ ಸಲ್ಮಾನ್ ಖಾನ್ ಸಿನಿಮಾ ಕೂಡ ಫ್ಲಾಪ್ ಆಗುತ್ತಿದೆ? ಬಾಯ್‌ಗೆ ಸಪೋರ್ಟ್ ಬೇಕಾ ಅಂತ ಯಾರೂ ಯಾಕೆ ಕೇಳಿಲ್ಲ?
4:18 PM
ʼನನಗೆ ರಾಜೇಶ್ ಕೃಷ್ಣನ್ ಸರ್ ಮೇಲೆ ಲವ್ ಆಗಿದೆʼ- ʼಸೀತಾರಾಮʼ ನಟಿ ರಮೋಲ ಅಚ್ಚರಿಕೆ ಹೇಳಿಕೆ!
ʼನನಗೆ ರಾಜೇಶ್ ಕೃಷ್ಣನ್ ಮೇಲೆ ಲವ್ ಆಗಿದೆʼ ಎಂದು ರಿಯಾಲಿಟಿ ಶೋನಲ್ಲಿ ಹೇಳಿ ರಮೋಲ ಅವರು ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ.
3:20 PM
ಅತ್ತ ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿ; ಇತ್ತ ರಾಜಸ್ಥಾನದ ಸೌಂದರ್ಯ ಸವಿಯುತ್ತಿರೋ ಪತ್ನಿ ವಿಜಯಲಕ್ಷ್ಮೀ!
ರಾಜಸ್ಥಾನದಲ್ಲಿ ನಟ ದರ್ಶನ್ ತೂಗುದೀಪ ಅವರು ʼದಿ ಡೆವಿಲ್ʼ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಡೆ ವಿಜಯಲಕ್ಷ್ಮೀ ಅವರು ರಾಜಸ್ಥಾನದ ಸೌಂದರ್ಯವನ್ನು ಸವಿಯುತ್ತಿದ್ದಾರೆ.
2:31 PM
ಪೋಷಕರ ತಲೆಕೆಡಿಸುತ್ತಿರುವ ಟ್ರೆಂಡ್ ಸೆಟರ್ ವೆಬ್ ಸಿರೀಸ್ ಅಡಾಲಸೆನ್ಸ್ ಕತೆ ಏನು?
ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿರುವ 'ಅಡಾಲಸೆನ್ಸ್' ವೆಬ್ ಸರಣಿಯು 13 ವರ್ಷದ ಬಾಲಕನೊಬ್ಬನ ಕೊಲೆ ಆರೋಪದ ಸುತ್ತ ತೆರೆದುಕೊಳ್ಳುತ್ತದೆ.
ಪೂರ್ತಿ ಓದಿ2:02 PM
ಹೂಗುಚ್ಛ ಹಿಡಿದು ನಿಂತ ನೆನಪಿರಲಿ ಪ್ರೇಮ್ ಪುತ್ರಿ; ಹುಡುಗ ಸಿಕ್ಕಿರುವ ಸೂಚನೆ ಕೊಟ್ರಾ?
ಅಮೃತಾ ಪ್ರೇಮ್ ಕೈಯಲ್ಲಿ ಹೂ ನೋಡಿ ಶಾಕ್ ಆದ ನೆಟ್ಟಿಗರು. ಹುಡುಗ ಸಿಕ್ಕಿದಾನಾ ಅಥವಾ ಮದ್ವೆ ಫಿಕ್ಸ್ ಆಯ್ತಾ ಅಂತ ಕೇಳ್ತಿದ್ದಾರೆ.
1:22 PM
20 ವರ್ಷದಲ್ಲಿ 13 ಮಹಿಳೆಯರ ಹತ್ಯೆ, 9 ಮಹಿಳೆಯರ ರೇ*ಪ್, 7 ಮಕ್ಕಳ ಮರ್ಡರ್! ಎದೆನಡುಗಿಸುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ
20 ವರ್ಷಗಳಲ್ಲಿ 13 ಮಹಿಳೆಯರ ಹತ್ಯೆ, 9 ಅತ್ಯಾಚಾರ, 7 ಮಕ್ಕಳ ಕೊಲೆ ನಡೆದ ನೈಜ ಘಟನೆ ಆಧಾರಿತ ಚಿತ್ರವಿದು. ಇಬ್ಬರು ಶಿಕ್ಷಕಿಯರು ಮನೆಗೆ ಭೇಟಿ ನೀಡಿದಾಗ ಭಯಾನಕ ಸತ್ಯಗಳು ಬಯಲಾಗುತ್ತವೆ.
ಪೂರ್ತಿ ಓದಿ11:46 AM
ಸೈಕಲ್ ಏರಿದ ಭಾಗ್ಯಾ! ಕಾರ್ ಏನಾಯ್ತು? ಸುಷ್ಮಾಗೆ ಅವಮಾನ ಮಾಡ್ಬೇಡಿ ಎಂದ ವೀಕ್ಷಕರು
ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಎಲ್ಲ ಹೋಗಿ ಈಗ ಸೈಕಲ್ ಬಂದಿದೆ. ಭಾಗ್ಯ ಸೈಕಲ್ ನಲ್ಲಿ ಡಬ್ಬಾ ಸರ್ವೀಸ್ ಮಾಡ್ತಿರೋದನ್ನು ನೋಡಿದ ಫ್ಯಾನ್ಸ್, ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
11:32 AM
ಇನ್ಮುಂದೆ ತಮಿಳು ನಟ ವಿಜಯ್‌ಗೆ ʼದಳಪತಿʼ ಎನ್ನಬೇಡಿ! ಹೊಸ ಹೆಸರು ಕೊಟ್ಟ TVK!
ಬಹಳ ಸಮಯದಿಂದ ದಳಪತಿ ವಿಜಯ್‌ಅವರು ರಾಜಕೀಯಕ್ಕೆ ಬರುತ್ತಾರೆ ಎನ್ನಲಾಗಿತ್ತು. ಕೊನೆಗೂ ಅವರು ರಾಜಕೀಯಕ್ಕೆ ಬಂದಿದ್ದಾರೆ. ಈಗ ಇವರು ಹೆಸರು ಬದಲಾಗಿದ್ಯಾ? ಯಾರು ಹೆಸರಿಟ್ಟರು?
ಪೂರ್ತಿ ಓದಿ11:15 AM
ಸರ್ವೇಜನ ಸುಖಿನೋ ಭವಂತು ಅಷ್ಟೇ...; ನಂಜುಡೇಶ್ವರನ ದರ್ಶನ ಪಡೆದ ಮೀನಾ ತೂಗುದೀಪ
ಮಗನ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ರೆ ತಾಯಿ ದೇವರ ದರ್ಶನ್ ಮಾಡುವುದಲ್ಲಿ ಬ್ಯುಸಿಯಾಗಿದ್ದಾರೆ.
ಪೂರ್ತಿ ಓದಿ10:49 AM
ಏಪ್ರಿಲ್ 14- ದೊಡ್ಡ ಗುಡ್‌ನ್ಯೂಸ್ ಕೊಡಲಿರೋ ನಟ ಕಿಚ್ಚ ಸುದೀಪ್! ಏನದು?
ಕಿಚ್ಚ ಸುದೀಪ್ ಅವರು ಫಿಟ್‌ನೆಸ್ ಕುರಿತ ಪೋಸ್ಟ್ ಹಂಚಿಕೊಂಡಿದ್ದು, ಏಪ್ರಿಲ್ 14ಕ್ಕೆ ಗುಡ್‌ನ್ಯೂಸ್ ಕೊಡುವ ರೀತಿ ಕಾಣ್ತಿದೆ.
ಪೂರ್ತಿ ಓದಿ10:39 AM
ಕೊನೆಗೂ ಗುಡ್ ನ್ಯೂಸ್ ಕೊಟ್ಟ ಬಿಗ್ ಬಾಸ್ ಧರ್ಮ ಕೀರ್ತಿರಾಜ್; ಪಕ್ಕದಲ್ಲಿರುವ ಹುಡುಗಿ ಮೇಲೆ ನೆಟ್ಟಿಗರ ಕಣ್ಣು!
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಧರ್ಮ ಕೀರ್ತಿರಾಜ್ ಹೊಸ ಫೋಟೋ. ಪಕ್ಕದಲ್ಲಿ ಇರುವ ಹುಡುಗಿ ನೋಡಿ ಎಲ್ಲರೂ ಶಾಕ್....
ಪೂರ್ತಿ ಓದಿ