ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸುವ ಮೂಲಕ ಪ್ರತಿಪಕ್ಷ ಬಿಜೆಪಿ ಜನಾಕ್ರೋಶದ ಕಹಳೆ ಮೊಳಗಿಸಿದೆ. ಹಾಲು, ಮೊಸರು, ವಿದ್ಯುತ್, ಡೀಸೆಲ್ ದರ, ಕಸ ತೆರಿಗೆ ಹೀಗೆ ಒಂದರ ಹಿಂದೆ ಒಂದರಂತೆ ದರ ಏರಿಕೆಗೆ ಪ್ರತಿಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಸನಗೌಡ ಪಾಟೀಲ್ ಯತ್ನಾಳ್ ಅವರ ವಜಾದಿಂದ ನಮ್ಮ ಹೋರಾಟ ನಿಲ್ಲಲ್ಲ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಹೇಳಿದ್ದಾರೆ. ಮತ್ತೊಂದೆಡೆ ನಾನೇ ಮುಂದಿನ ಸಿಎಂ ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಇಂದಿನ ರಾಜ್ಯ ರಾಜಕೀಯಕ್ಕೆ ಸಂಬಂಧಿಸಿದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ

09:31 PM (IST) Apr 03
ಚಿತ್ರದುರ್ಗದಲ್ಲಿ ಕಳಪೆ ನಿರ್ವಹಣೆಯಿಂದ ವಿದ್ಯುತ್ ತಂತಿ ತಗುಲಿ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ. ಸಿಎಂ ಸಾಹೇಬ್ರೇ, ಜಾರ್ಜ್ ಅವರೇ ಅಮಾಯಕ ತಾಯಿ, ಮಗು ವಿದ್ಯುತ್ ಸ್ಪರ್ಶಿಸಿ ಸತ್ತರಲ್ಲ, ಯಾರನ್ನ ಹೊಣೆ ಮಾಡ್ತೀರೀ?
ಪೂರ್ತಿ ಓದಿ07:42 PM (IST) Apr 03
ಬೆಂಗಳೂರು ಜಲಮಂಡಳಿಯಿಂದ 'ಸಂಚಾರಿ ಕಾವೇರಿ' ಯೋಜನೆ ಆರಂಭವಾಗಿದ್ದು, ಆನ್‌ಲೈನ್ ಮೂಲಕ ಶುದ್ಧ ಕುಡಿಯುವ ನೀರನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು. ಖಾಸಗಿ ಟ್ಯಾಂಕರ್‌ಗಳ ದರ ಏರಿಕೆಯ ಸಮಸ್ಯೆಗೆ ಪರಿಹಾರ ನೀಡುವ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ.
ಪೂರ್ತಿ ಓದಿ07:10 PM (IST) Apr 03
ಚಿಕ್ಕಪ್ಪನಿಂದ ಮಾರಾಟವಾಗಿ ವೇಶ್ಯಾವಾಟಿಕೆಯಲ್ಲಿ ನರಳಿದ ಮಹಿಳೆ, ಅಲ್ಲಿಂದ ಮುಕ್ತಿ ಪಡೆದು ಕೊನೆಗೂ ಮನೆಗೆ ಹೋಗುತ್ತಾಳೆ. ಆಕೆಯ ಕುಟುಂಬಸ್ಥರು ಸ್ವೀಕರಿಸುತ್ತಾರಾ? ಇಲ್ಲವೋ?
ಪೂರ್ತಿ ಓದಿ06:20 PM (IST) Apr 03
2030ರೊಳಗಡೆ ಯಾವ ಉದ್ಯಮ ಅವನತಿ ಕಾಣುವುದು? ಯಾವ ಉದ್ಯಮ ಉನ್ನತ ಮಟ್ಟಕ್ಕೆ ಹೋಗುವುದು?
ಪೂರ್ತಿ ಓದಿ06:15 PM (IST) Apr 03
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕದ್ದ ಮೊಬೈಲ್‌ಗಳೊಂದಿಗೆ ಇಬ್ಬರು ಯುವಕರನ್ನು ಕೆಎಸ್‌ಐಎಸ್‌ಎಫ್ ಸಿಬ್ಬಂದಿ ಬಂಧಿಸಿದ್ದಾರೆ. ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳು ಜಾರ್ಖಂಡ್ ಮೂಲದವರಾಗಿದ್ದಾರೆ.
ಪೂರ್ತಿ ಓದಿ06:13 PM (IST) Apr 03
ಅಪ್ರಾಪ್ತ ಬಾಲಕಿಯ ಮೇಲೆ ಬಲಾತ್ಕಾರ ಎಸಗಿ ಗಲ್ಫ್‌ಗೆ ಪರಾರಿಯಾಗಿದ್ದ ಆರೋಪಿಯನ್ನು ಕೇರಳ ಪೊಲೀಸರು ಇಂಟರ್‌ಪೋಲ್ ಸಹಾಯದಿಂದ ಬಂಧಿಸಿದ್ದಾರೆ. 2022ರಲ್ಲಿ ಅತ್ಯಾಚಾರವೆಸಗಿ ಸೌದಿ ಅರೇಬಿಯಾಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಒಂದೂವರೆ ವರ್ಷದ ಬಳಿಕ ಬಂಧಿಸಲಾಗಿದೆ.
ಪೂರ್ತಿ ಓದಿ03:57 PM (IST) Apr 03
ಶಿಕ್ಷಣ ಆಧಾರಿತ ಸಂಬಳ ಭಾರತದಲ್ಲಿ: ಕೇಂದ್ರ ಸರ್ಕಾರ ಹೊಸ ವೇತನ ಮಸೂದೆಯನ್ನು ತರಬಹುದು, ಇದರಲ್ಲಿ ಶಿಕ್ಷಣದ ಆಧಾರದ ಮೇಲೆ ವೇತನವನ್ನು ನಿರ್ಧರಿಸಲಾಗುತ್ತದೆ ಮತ್ತು ಪ್ರತಿ ವರ್ಷ ಸಂಬಳ ಹೆಚ್ಚಿಸುವ ಅವಕಾಶವೂ ಇರಬಹುದು. ಇದರ ಬಗ್ಗೆ ಸಂಪೂರ್ಣ ವಿವರಗಳನ್ನು ತಿಳಿಯಿರಿ.
ಪೂರ್ತಿ ಓದಿ03:02 PM (IST) Apr 03
ಮಂಡ್ಯ ಬಳಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ. ಎಕ್ಸಿಟ್ ಆಗುವಾಗ ಕಾರಿಗೆ ಹಿಂಬದಿಯಿಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಪೂರ್ತಿ ಓದಿ02:40 PM (IST) Apr 03
ಐಪಿಎಲ್ ಕ್ರೇಜ್ ಭಾರತದಲ್ಲಿ ಎಷ್ಟಿದೆ ಎನ್ನೋದನ್ನು ವಿಶೇಷವಾಗಿ ಹೇಳಬೇಕಿಲ್ಲ. ಇದು ನಿಜಕ್ಕೂ ರಾಷ್ಟ್ರೀಯ ಹೆಮ್ಮೆಯಾಗಿದೆ. ಈ ಒಂದು ಟೂರ್ನಿಯು ಭಾರತ, ಅಂತರರಾಷ್ಟ್ರೀಯ ಕ್ರಿಕೆಟಿಗರನ್ನು ಒಳಗೊಂಡಿದೆ. ಈಗ ಮಾರುಕಟ್ಟೆಗೆ ಐಪಿಎಲ್ ಸೀರೆಗಳು ಬಂದಿವೆ. ಹಾಗಾಗಿ ಇವುಗಳ ಬೆಲೆ ಎಷ್ಟು?
ಪೂರ್ತಿ ಓದಿ12:37 PM (IST) Apr 03
ನಟ ಅಹಿಂಸಾ ಚೇತನ್ ವಕ್ಫ್ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ, ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡಿರುವುದನ್ನು ಟೀಕಿಸಿದ್ದಾರೆ.
ಪೂರ್ತಿ ಓದಿ