Bengaluru: ನಾಗರಭಾವಿಯಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್‌ ಹೊಸ ಶೋರೂಂ ಆರಂಭ

ಮಲಬಾರ್ ಗೋಲ್ಡ್ & ಡೈಮಂಡ್ಸ್ ಬೆಂಗಳೂರಿನ ನಾಗರಭಾವಿಯಲ್ಲಿ ಹೊಸ ಶೋರೂಂ ತೆರೆದಿದೆ. ಇದು ಬೆಂಗಳೂರಿನಲ್ಲಿ 21ನೇ ಮತ್ತು ಕರ್ನಾಟಕದಲ್ಲಿ 41ನೇ ಶೋರೂಂ ಆಗಿದೆ. ನಟಿ ರಚಿತಾ ರಾಮ್ ಅವರು ಶೋರೂಂ ಅನ್ನು ಉದ್ಘಾಟಿಸಿದರು.

Malabar Gold Diamonds Nagarbhavi Bengaluru Showroom Launch san

ಬೆಂಗಳೂರು (ಏ.2): ಹೆಸರಾಂತ ಚಿನ್ನಾಭರಣ ಸಂಸ್ಥೆಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಬೆಂಗಳೂರಿನ ನಾಗರಭಾವಿಯಲ್ಲಿ ಹೊಸ ಶೋರೂಂ ಆರಂಭ ಮಾಡಿದೆ. ನಾಗರಭಾವಿಯ 80 ಫೀಟ್‌ ಮುಖ್ಯರಸ್ತೆಯ 2ನೇ ಹಂತದಲ್ಲಿ ಈ ಶೋರೂಂ ನಿರ್ಮಾಣವಾಗಿದೆ.  ಈ ಶೋರೂಂ ಸುತ್ತಮುತ್ತಲಿನ ಗ್ರಾಹಕರಿಗೆ ಅಭೂತಪೂರ್ವ ಶಾಪಿಂಗ್ ಅನುಭವವನ್ನು ಇದು ನೀಡಲಿದೆ. ಇಲ್ಲಿನ ವಿಸ್ತಾರವಾದ ಶ್ರೇಣಿಯ ಚಿನ್ನಾಭರಣಗಳ ಸಂಗ್ರಹವು ಗ್ರಾಹಕರನ್ನು ಸೆಳೆಯಲಿವೆ. ಈ ಮೈಲಿಗಲ್ಲು ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಬ್ರ್ಯಾಂಡ್‌ನ ನಿರಂತರ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

ಇದು ಬೆಂಗಳೂರಿನಲ್ಲಿ ಮಲಬಾರ್ ಗೋಲ್ಡ್‌ನ 21ನೇ ಮತ್ತು ಕರ್ನಾಟಕದ 41ನೇ ಶೋರೂಂ ಆಗಿದೆ. ಕಳೆದ ಮಾರ್ಚ್‌ 28 ರಂದು ಈ ಶೋರೂಂ ಅನ್ನು ನಟಿ ರಚಿತಾ ರಮ್ ಉದ್ಘಾಟಿಸಿದರು. ಈ ವೇಳೆ ಮಲಬಾರ್ ಗೋಲ್ಡ್ & ಡೈಮಂಡ್ಸ್‌ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥರಾದ ಫಿಲ್ಸರ್ ಬಾಬು ಮತ್ತು ಸಂಸ್ಥೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 

Latest Videos

ಭಾರತ, ಮಧ್ಯಪ್ರಾಚ್ಯ, ಯುಎಸ್‌ಎ, ಯುಕೆ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ವಿಶ್ವದಾದ್ಯಂತ 13 ದೇಶಗಳಲ್ಲಿ 375 ಕ್ಕೂ ಹೆಚ್ಚು ಶೋರೂಂಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ ವಿಸ್ತಾರವಾದ ಆಕರ್ಷಕ ಮತ್ತು ಗುಣಮಟ್ಟದ ಚಿನ್ನಾಭರಣಗಳಿಗೆ ಹಾಗೂ ಗ್ರಾಹಕ ಕೇಂದ್ರಿತ ವಿಧಾನಗಳಿಗೆ ಹೆಸರುವಾಸಿಯಾಗಿದೆ. 22 ಸಾವಿರಕ್ಕೂ ಹೆಚ್ಚು ಬದ್ಧತೆಯ ಸಿಬ್ಬಂದಿ 26 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಶ್ವದಾದ್ಯಂತ 15 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ ತನ್ನ ಸೇವೆಯನ್ನು ನೀಡಿದೆ. 

ಈ ಹೊಸ ಶೋರೂಂನಲ್ಲಿ ಆಕರ್ಷಕವಾದ ಚಿನ್ನ, ವಜ್ರ, ಪ್ಲಾಟಿನಂ ಮತ್ತು ಜೆಮ್‌ಸ್ಟೋನ್ ಆಭರಣಗಳ ಸಂಗ್ರಹವಿದ್ದು, ಪ್ರತಿಯೊಬ್ಬ ಗ್ರಾಹಕರ ಅಭಿರುಚಿ ಮತ್ತು ಕಾಲಮಾನಕ್ಕೆ ತಕ್ಕಂತೆ ಇವೆ. ಸಾಂಪ್ರದಾಯಿಕ ವಿನ್ಯಾಸಗಳು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವುದರಿಂದ ಹಿಡಿದು ಸಮಕಾಲೀನ ಸ್ಟೈಲ್‌ ಆಭರಣಗಳು ಆಧುನಿಕ ಶೈಲಿಯನ್ನು ಪ್ರತಿಬಿಂಬಿಸುತ್ತಿವೆ. ಹೀಗೆ ಎಲ್ಲಾ ಕಾಲಮಾನಕ್ಕೂ ಹೊಂದಿಕೊಳ್ಳುವಂತಹ ಆಭರಣಗಳ ಸಂಗ್ರಹವನ್ನು ಈ ಶೋರೂಂ ಒಳಗೊಂಡಿದೆ. ಇದಲ್ಲದೇ, ಶೋರೂಂ ಉದ್ಘಾಟನೆಯ ಅಂಗವಾಗಿ ಮಲಬಾರ್ ಸಂಸ್ಥೆಯು ತನ್ನ ಗ್ರಾಹಕರಿಗೆ  ಚಿನ್ನದ ತೂಕಕ್ಕೆ ಸರಿಸಮಾನವಾದ ಉಚಿತ ಬೆಳ್ಳಿಯನ್ನು ಕೊಡುಗೆಯಾಗಿ ನೀಡಲಿದೆ. ಈ ಕೊಡುಗೆ ಏಪ್ರಿಲ್ 6 ರವರೆಗೆ ಲಭ್ಯವಿದೆ.
 
ಈ ಹೊಸ ಶೋರೂಂ ಉದ್ಘಾಟನೆ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಮಲಬಾರ್ ಗ್ರೂಪ್‌ನ ಅಧ್ಯಕ್ಷ ಎಂ.ಪಿ.ಅಹ್ಮದ್ 'ಬೆಂಗಳೂರಿನ ನೆರೆಹೊರೆಯ ಜನತೆಗಾಗಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಅನ್ನು ಪರಿಚಯಿಸುತ್ತಿರುವುದಕ್ಕೆ ನಮಗೆ ಸಂತೋಷವಾಗುತ್ತಿದೆ. ಇದು ನಗರದ ಶ್ರೀಮಂತ ಸಂಸ್ಕೃತಿ ಮತ್ತು ಕರಕುಶಲತೆಯ ಸಂಪ್ರದಾಯವನ್ನು ಹೆಚ್ಚಿಸುತ್ತದೆ. ಬೆಂಗಳೂರಿನ ಜನರಿಗೆ ಅತ್ಯುತ್ತಮವಾದ ವಿನ್ಯಾಸಗಳು, ಅಸಾಧಾರಣ ಕೆಲಸಗಾರಿಕೆ ಮತ್ತು ನೈಜವಾದ ವಿಶ್ವದರ್ಜೆಯ ಶಾಪಿಂಗ್ ಅನುಭವವನ್ನು ನೀಡುವ ನಮ್ಮ ಧ್ಯೇಯದಲ್ಲಿ ಈ ವಿಸ್ತರಣೆಯು ಹೆಮ್ಮೆಯ ಹೆಜ್ಜೆಯಾಗಿದೆ. ಸಂಪ್ರದಾಯ ಮತ್ತು ಆಧುನಿಕತೆಗಳು ಸರಾಗವಾಗಿ ಬೆರೆಯುವ ಮತ್ತು ನಮ್ಮ ನಂಬಿಕೆ, ಪಾರದರ್ಶಕತೆ ಹಾಗೂ ಗ್ರಾಹಕರ ತೃಪ್ತಿಯ ಮೌಲ್ಯಗಳಿಗೆ ಬದ್ಧವಾಗಿರುವ ಸಮುದಾಯದ ಭಾಗವಾಗುವುದನ್ನು ಕಾಣಲು ನಾವು ಉತ್ಸುಕರಾಗಿದ್ದೇವೆ. ಬೆಂಗಳೂರಿನ ಜನರಿಂದ ಆತ್ಮೀಯ ಸ್ವಾಗತ ದೊರೆಯುತ್ತಿರುವುದು ಮತ್ತು ನಿರಂತರ ಬೆಂಬಲ ನೀಡುತ್ತಿರುವುದಕ್ಕೆ ನಾವು ಕೃತಜ್ಞರಾಗಿದ್ದೇವೆ’’ ಎಂದರು.


ಗ್ರಾಹಕರಿಗೆ ಪ್ರೀಮಿಯಂ ಶಾಪಿಂಗ್ ಅನುಭವವನ್ನು ನೀಡುವ ಉದ್ದೇಶದಿಂದ ಮತ್ತು ಆ ಗುರಿಯೊಂದಿಗೆ ಈ ಶೋರೂಂ ಅನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿನ ಆಕರ್ಷಕ ಆಭರಣಗಳು ಮತ್ತು ಗ್ರಾಹಕರಿಗೆ ಪರಿಪೂರ್ಣವಾದ ಆಭರಣಗಳನ್ನು ಆಯ್ಕೆ ಮಾಡಲೆಂದೇ ಮಾರ್ಗದರ್ಶನ ನೀಡುವ ತರಬೇತಿ ಹೊಂದಿದ ತಂಡವಿದೆ. ಮಲಬಾರ್ ಗೋಲ್ಡ್ & ಡೈಮಂಡ್ಸ್ ತನ್ನ `ಮಲಬಾರ್ ಭರವಸೆಗಳು’ ಮೂಲಕ ಗ್ರಾಹಕರಿಗೆ  ತೃಪ್ತಿಯ ಶಾಪಿಂಗ್ ಅನುಭವ ನೀಡುವ ಬದ್ಧತೆಗೆ ಹೆಸರುವಾಸಿಯಾಗಿದೆ. 

ಪ್ರತಿಯೊಂದು ಆಭರಣದಲ್ಲೂ ಬೆಲೆಯ ವಿವರವಿರಲಿದೆ. ಈ ಮೂಲಕ ಪಾರದರ್ಶಕ ಬೆಲೆ ನಿಗದಿ, ಎಲ್ಲಾ ಜಾಗತಿಕ ಶೋರೂಂಗಳಲ್ಲಿ ಲಭ್ಯವಿರುವ ಜೀವಿತಾವಧಿಯ ಉಚಿತ ನಿರ್ವಹಣಾ ಸೇವೆಗಳು, ಹಳೆಯ ಚಿನ್ನ, ವಜ್ರಗಳಿಗೆ ಶೇ.100 ರಷ್ಟು ವಿನಿಮಯ ಮೌಲ್ಯದ ಖಾತರಿಯನ್ನು ನೀಡಲಾಗುತ್ತದೆ. ಕಂಪನಿಯು ಎಲ್ಲಾ ಆಭರಣಗಳು ಶೇ.100 ರಷ್ಟು ಎಚ್‌ಯುಐಡಿ- ಪಾಲನೆಯನ್ನು ಖಚಿತಪಡಿಸುತ್ತದೆ. ಇದಲ್ಲದೇ, ಎಲ್ಲವೂ ಪಾರದರ್ಶಕ ಮತ್ತು ಅಧಿಕೃತ ಆಭರಣಗಳನ್ನು ನೀಡುತ್ತದೆ. ಇದಕ್ಕೂ ಮುನ್ನ ಪ್ರತಿ ಆಭರಣವನ್ನೂ 28 ಹಂತದ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಗುತ್ತದೆ ಮತ್ತು ಪ್ರತಿ ಆಭರಣಕ್ಕೂ ಒಂದು ವರ್ಷದ ಉಚಿತ ವಿಮಾ ಸೌಲಭ್ಯವಿರುತ್ತದೆ. ಇದರ ಜೊತೆಗೆ ವಿಸ್ತರಿತ ಕವರೇಜ್ ಮತ್ತು ವಾರಂಟಿಯ ಅವಕಾಶವನ್ನೂ ಕಲ್ಪಿಸಲಾಗುತ್ತದೆ. ಅಧಿಕೃತ ಮೂಲಗಳಿಂದಲೇ ಚಿನ್ನವನ್ನು ಖರೀದಿ ಮಾಡುತ್ತದೆ ಎಂಬುದನ್ನು ಖಚಿತಪಡಿಸುವ ಕಂಪನಿಯು ಈ ಮೂಲಕ ತನ್ನ ಪೂರೈಕೆ ಜಾಲದಾದ್ಯಂತ ತತ್ವಾದರ್ಶನಗಳ ವಿಧಾನಗಳನ್ನು ಅನುಸರಿಸುತ್ತದೆ ಎಂಬ ಭರವಸೆಯನ್ನೂ ನೀಡುತ್ತದೆ.

ನೈತಿಕ ಅಭ್ಯಾಸಗಳು ಮತ್ತು ಸುಸ್ಥಿರತೆಗೆ ತನ್ನನ್ನು ತಾನು ಸಮರ್ಪಿಸಿಕೊಂಡಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ಎಲ್ಲಾ ಚಿನ್ನವನ್ನು ಅಧಿಕೃತ ಮಾರ್ಗಗಳ ಮೂಲಕ ಜವಾಬ್ದಾರಿಯುತವಾಗಿ ಪಡೆಯುವುದನ್ನು ಖಾತರಿಪಡಿಸುತ್ತದೆ. ಇದಲ್ಲದೇ, ಮಲಬಾರ್ ಗ್ರೂಪ್ ತನ್ನ ಲಾಭದ ಶೇ.5 ರಷ್ಟು ಹಣವನ್ನು ತನ್ನ ಸಿಎಸ್‌ಆರ್ ಉಪಕ್ರಮಗಳಡಿ ಆರೋಗ್ಯ, ವಸತಿ, ಶಿಕ್ಷಣ, ಪರಿಸರ ಸುಸ್ಥಿರತೆ, ಹಸಿವು ನಿರ್ಮೂಲನೆ ಮತ್ತು ಮಹಿಳಾ ಸಬಲೀಕರಣದಂತಹ ಕಾರ್ಯಕ್ರಮಗಳಿಗೆ ವಿನಿಯೋಗ ಮಾಡುತ್ತಿದೆ.

ಈ ಶೋರೂಂ ಉದ್ಘಾಟನೆಯು ಮಲಬಾರ್ ಗೋಲ್ಡ್ & ಡೈಮಂಡ್ಸ್ನ ವಿಶ್ವದ ಅತ್ಯಂತ ಆದ್ಯತೆಯ ಆಭರಣ ವ್ಯಾಪಾರಿ ಸಂಸ್ಥೆಯಾಗುವ ದಿಸೆಯಲ್ಲಿ ಇನ್ನೊಂದು ಹೊಸ ಹೆಜ್ಜೆಯಾಗಿದೆ. ಸಾಂಪ್ರದಾಯಿಕ ಕರಕುಶಲತೆಯನ್ನು ಆಧುನಿಕ ನಾವೀನ್ಯತೆಯೊಂದಿಗೆ ಸಂಯೋಜನೆ ಮಾಡುವುದು ಮತ್ತು ಸುಸ್ಥಿರತೆ ಹಾಗೂ ಸಾಮಾಜಿಕ ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಂಸ್ಥೆಯಾಗಿದೆ.
 

vuukle one pixel image
click me!