
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ (Reliance Industries Chairman Mukesh Ambani) ಕಿರಿಯ ಮಗ ಅನಂತ್ ಅಂಬಾನಿ (Anant Ambani) ಪಾದಯಾತ್ರೆ ಸದ್ಯ ಸುದ್ದಿಯಲ್ಲಿದೆ. ಅನಂತ್ ಅಂಬಾನಿ ಜಾಮ್ನಗರದಿಂದ ದ್ವಾರಕಾಗೆ 140 ಕಿಲೋಮೀಟರ್ ನಡೆದು ಹೋಗ್ತಿದ್ದಾರೆ. ಈಗಾಗಲೇ ಅವರ ಪಾದಯಾತ್ರೆ ಬಹುದೂರ ಸಾಗಿದೆ. ಪಾದಯಾತ್ರೆ ಆರನೇ ದಿನಕ್ಕೆ ಕಾಲಿಟ್ಟಿದ್ದು, ಸೋಶಿಯಲ್ ಮೀಡಿಯಾದಲ್ಲಿ ಅನಂತ್ ಅಂಬಾನಿ ಪಾದಯಾತ್ರೆ ವಿಡಿಯೋಗಳು ವೈರಲ್ ಆಗ್ತಿವೆ. ಈ ಮಧ್ಯೆ ಅನಂತ್ ಅಂಬಾನಿ ತಮ್ಮ ಪ್ರಾಣಿ ಪ್ರೀತಿಯನ್ನು ಮತ್ತೆ ತೋರಿಸಿದ್ದಾರೆ. ಪಾದಯಾತ್ರೆ ಸಂದರ್ಭದಲ್ಲಿ ಅನಂತ್ ಅಂಬಾನಿ, ಕೋಳಿಗಳನ್ನು ಖರೀದಿ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅನಂತ್ ಅಂಬಾನಿ ದುಪ್ಪಟ್ಟು ಬೆಲೆ ನೀಡಿ ಸುಮಾರು 250 ಕೋಳಿಗಳನ್ನು ಖರೀದಿಸಿದ್ದಾರೆ. ಖರೀದಿಸಿದ ಕೋಳಿಯೊಂದನ್ನು ಕೈನಲ್ಲಿ ಹಿಡಿದು, ಅನಂತ್ ಅಂಬಾನಿ ತಮ್ಮ ಪಾದಯಾತ್ರೆ ಮುಂದುವರೆಸಿರೋದನ್ನು ನೀವು ಕಾಣ್ಬಹುದು.
ಅಂಬಾನಿಯ 15 ಸಾವಿರ ಕೋಟಿಯ ಆ್ಯಂಟಿಲಿಯಾ ಮನೆಯ ಮೊದಲ ಕರೆಂಟ್ ಬಿಲ್ ಎಷ್ಟಿತ್ತು?
250 ಕೋಳಿ ಖರೀದಿಸಿದ ಅನಂತ್ ಅಂಬಾನಿ : ಪಾದಯಾತ್ರೆ ಸಂದರ್ಭದಲ್ಲಿ ಅನಂತ್ ಅಂಬಾನಿಗೆ ಕೋಳಿಗಳನ್ನು ತುಂಬಿದ್ದ ವಾಹನ ಕಾಣಿಸಿದೆ. ಅದ್ರಲ್ಲಿ 250 ಕೋಳಿಗಳಿದ್ದವು. ಅದನ್ನು ಮಾರಾಟಕ್ಕೆ ತೆಗೆದುಕೊಂಡು ಹೋಗಲಾಗ್ತಿತ್ತು. ತಮ್ಮ ಉದ್ಯೋಗಿಗಳಿಗೆ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದ ಅನಂತ್ ಅಂಬಾನಿ, ಕೋಳಿ ಮಾಲೀಕರು ಮತ್ತು ವಾಹನ ಚಾಲಕನ ಜೊತೆ ಮಾತುಕತೆ ನಡೆಸಿದ್ದಾರೆ. ಕೋಳಿಗಳ ಬೆಲೆಗಿಂತ ಎರಡು ಪಟ್ಟು ಬೆಲೆ ನೀಡಿ ಕೋಳಿಗಳನ್ನು ಬಿಡುಗಡೆ ಮಾಡಿದ್ದಾರೆ. ಇದಾದ್ಮೇಲೆ ಅನಂತ್ ಕೋಳಿಯನ್ನು ಕೈಯಲ್ಲಿ ಹಿಡಿದುಕೊಂಡು ನಡೆಯುತ್ತಿರುವುದು ಕಂಡುಬಂದಿದೆ.
ಅನಂತ್ ಅಂಬಾನಿ ಏಪ್ರಿಲ್ 10 ರಂದು ತಮ್ಮ 30ನೇ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ, ಭರ್ಜರಿ ಪಾರ್ಟಿ ಮೂಲಕ ಆಚರಿಸುವ ಬದಲು ಅನಂತ್ ಭಿನ್ನವಾಗಿ ಆಲೋಚನೆ ಮಾಡಿದ್ದಾರೆ. ಧಾರ್ಮಿಕ ಕಾರ್ಯಕಗಳನ್ನು ಮಾಡುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಂಕಲ್ಪ ಮಾಡಿದ್ದಾರೆ. ಅದರಂತೆ ಅನಂತ್ ತಮ್ಮ ಮನೆಯಿಂದ ದ್ವಾರಕೆಗೆ ಪಾದಯಾತ್ರೆ ಕೈಗೊಂಡಿದ್ದಾರೆ.
45 ದಿನದ ಕುಂಭಮೇಳ ಅವಧಿಯಲ್ಲಿ 2.8 ಲಕ್ಷ ಕೋಟಿ ರೂ. ವಹಿವಾಟು
ಪಾದಯಾತ್ರೆಯಲ್ಲಿ ಅನಂತ್ ಅಂಬಾನಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದಾರೆ. ಅವರ ಜೊತೆ ಬೆಂಬಲಿಗರನ್ನು ಕಾಣ್ಬಹುದು. ಆದ್ರೆ ಅಂಬಾನಿ ಕುಟುಂಬದ ಮತ್ತ್ಯಾವ ಸದಸ್ಯರೂ ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ.
ಅನಂತ್ ಅಂಬಾನಿ ಪಾದಯಾತ್ರೆ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಯಾವುದೇ ಕೆಲಸವನ್ನು ಪ್ರಾರಂಭಿಸುವ ಮೊದಲು ನಾನು ಯಾವಾಗಲೂ ದ್ವಾರಕಾಧೀಶನನ್ನು ನೆನಪಿಸಿಕೊಳ್ಳುತ್ತೇನೆ. ಈ ನಡಿಗೆ ಜಾಮ್ನಗರದಲ್ಲಿರುವ ನಮ್ಮ ಮನೆಯಿಂದ ದ್ವಾರಕೆಗೆ. ಇದು ಕಳೆದ 5 ದಿನಗಳಿಂದ ನಡೆಯುತ್ತಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ನಾವು ದ್ವಾರಕಾ ತಲುಪುತ್ತೇವೆ ಎಂದಿದ್ದಾರೆ.
ಪಾದಯಾತ್ರೆಯನ್ನು ನಾವು ಮುಂದುವರೆಸುತ್ತಿದ್ದೇವೆ. ದ್ವಾರಕಾಧೀಶ ನಮ್ಮನ್ನು ಆಶೀರ್ವದಿಸಲಿ. ಯಾವುದೇ ಕೆಲಸ ಮಾಡುವ ಮೊದಲು ಯುವಕರು ದ್ವಾರಕಾಧೀಶನಲ್ಲಿ ನಂಬಿಕೆ ಇಡಬೇಕು ಮತ್ತು ದ್ವಾರಕಾಧೀಶರನ್ನು ಸ್ಮರಿಸಬೇಕು ಎಂಬುದು ನನ್ನ ಅಭಿಪ್ರಾಯ. ಆ ಕೆಲಸ ಯಾವುದೇ ಅಡೆತಡೆಯಿಲ್ಲದೆ ಖಂಡಿತವಾಗಿಯೂ ಪೂರ್ಣಗೊಳ್ಳುತ್ತದೆ. ದೇವರು ಇರುವಾಗ ಚಿಂತೆ ಮಾಡೋದು ಏನೂ ಇಲ್ಲ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.
ಅನಂತ್ ಅಂಬಾನಿ ತೂಕ ಹೆಚ್ಚಿರುವ ಕಾರಣ, ಅವರಿಗೆ ಪಾದಯಾತ್ರೆಗೆ ದಿನದ ಮಿತಿ ಹೇರಲಾಗಿದೆ. ಮಾರ್ಚ್ 8ರಂದು ಅನಂತ್ ಅಂಬಾನಿ ದೇವಸ್ಥಾನ ತಲುಪುವ ಸಾಧ್ಯತೆ ಇದ್ದು, ನಂತ್ರ ಪತ್ನಿ ರಾಧಿಕಾ ಜೊತೆ ದೇವರ ದರ್ಶನ ಪಡೆಯಲಿದ್ದಾರೆ ಎಂದು ಮೂಲಗಳು ಹೇಳಿವೆ. ಅನಂತ್ ಅಂಬಾನಿ ಪಾದಯಾತ್ರೆಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಝೆಡ್ ಪ್ಲಸ್ ಭದ್ರತೆ ಒದಗಿಸಲಾಗಿದೆ. ಸೂಕ್ತ ಹೊಟೇಲ್ ಇಲ್ಲದ ಕಾರಣ, ರಾತ್ರಿ ಜಾಮ್ ನಗರಕ್ಕೆ ವಾಪಸ್ ಆಗುವ ಅನಂತ್ ಅಂಬಾನಿ ಮರುದಿನ ಪಾತಯಾತ್ರೆ ಬಿಟ್ಟ ಸ್ಥಳದಿಂದ ತಮ್ಮ ಯಾತ್ರೆ ಮುಂದುವರೆಸುತ್ತಿದ್ದಾರೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.