ಇನ್‌ಫ್ಲುಯೆನ್ಸ್ ಕುಶಾ ಕಪಿಲಾ ಅವರ ಜನಪ್ರಿಯ ಅಂಡರ್‌ನೀಟ್ ಬ್ರ್ಯಾಂಡ್ ಮೇಲೆ ಇದೀಗ ವಿಶ್ವದದ ಜನಪ್ರಿಯ ಫೈರ್‌ಸೈಡ್ ಹಾಗೂ ಮಾಮಾಅರ್ಥ್ ಹೂಡಿಕೆ ಮಾಡಿದೆ. ಬರೋಬ್ಬರಿ 8 ರಿಂದ 10 ಕೋಟಿ ರೂಪಾಯಿ ವರೆಗೆ ಸೀಡ್ ಫಂಡಿಂಗ್ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.
ನವದೆಹಲಿ(ಏ.02) ಡಿಜಿಟಲ್ ಕ್ರಿಯೇಟರ್ ಹಾಗೂ ಇನ್‌ಫ್ಲುಯೆನ್ಸರ್ ಕುಶಾ ಕಪಿಲ್ ಇದೀಗ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಈಗಾಗಲೇ ಕುಶಾ ಕಪಿಲ್ ಅವರ ಶೇಪ್‌ವೇರ್ ಅಂಡರ್‌ನೀಟ್ ಬ್ರ್ಯಾಂಡ್ ಹಲವು ಮೂಲಗಳಿಂದ ಫಂಡಿಂಗ್ ಆಕರ್ಷಿಸಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಕುಶಾ ಕಪಿಲಾ ಅವರ ಅಂಡರ್‌ನೀಟ್ ಬ್ರ್ಯಾಂಡ್ ಶೇಪ್‌ವೇರ್ ಫಿಂಡಿಂಗ್ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಎರಡು ಜನಪ್ರಿಯ ಕಂಪನಿಗಳು ಇದೀಗ ಕುಶಾ ಕಪಿಲಾ ಅವರ ಶೇಪ್‌ವೇರ್ ಬ್ರ್ಯಾಂಡ್ ಮೇಲೆ ಹೂಡಿಕೆ ಮಾಡಿದೆ. ಫೈರ್‌ಸೈಡ್ ವೆಂಚರ್ಸ್ ಹಾಗೂ ಮಾಮಾ ಅರ್ಥ್ ಸಹ ಸಂಸ್ಥಾಪಕ ಘಜಲ್ ಅಲಘ್ ಹೂಡಿಕೆ ಮಾಡಿದ್ದಾರೆ. ಸೀಡ್ ಫಂಡಿಂಗ್ ಮೂಲಕ ಈ ಬಾರಿ ಶೇಪ್‌ವೇರ್ ಬ್ರ್ಯಾಂಡ್ ಬರೋಬ್ಬರಿ 8 ರಿಂದ 10 ಕೋಟಿ ರೂಪಾಯಿ ವರೆಗೆ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 30 ರಂದು ಅಂಡರ್‌ನೀಟ್ ಬ್ರ್ಯಾಂಡ್ ಆರಂಭಿಸಿದ್ದರು. ಇದೀಗ 2 ದಿನದಲ್ಲಿ ಶೇಪ್‌ವೇರ್ ಅಂಡರ್‌ನೀಟ್ ಬರೋಬ್ಬರಿ 8 ರಿಂದ 10 ಕೋಟಿ ರೂಪಾಯಿ ಹೂಡಿಕೆ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು, ಸ್ಟಾರ್ಟ್ಅಪ್ ಇತಿಹಾಸದಲ್ಲಿ ಒಂದು ದಾಖಲೆಯಾಗಿದೆ. ವಿಶೇಷ ಅಂದರೆ ಎರಡೇ ದಿನಕ್ಕ ಶೇಪ್‌ವೇರ್ ಅಂಡರ್‌ನೀಟ್ ಬ್ರ್ಯಾಂಡ್ ಇನ್‌ಸ್ಟಾಗ್ರಾಂನಲ್ಲಿ ಬರೋಬ್ಬರಿ 1.76 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ. ಇನ್ನು ಕುಶಾ ಕಪಿಲ್ ಇನ್‌ಫ್ಲುಯೆನ್ಸರ್ ಆಗಿದ್ದು 4.1 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.
ಎಲಾನ್ ಮಸ್ಕ್ ಸ್ಪೆಸ್ ಎಕ್ಸ್ ಹೂಡಿಕೆದಾರನಿಂದ 5,160 ಕೋಟಿಗೆ ಹಲ್ದಿರಾಮ್ ಪಾಲು ಖರೀದಿ
ಕಿಮ್ ಕರ್ದಾಶಿಯನ್ ಬ್ರ್ಯಾಂಡ್‌ನಿಂದ ಪ್ರೇರಿತ
ಶೇಪ್‌ವೇರ್ ಅಂಡರ್‌ನೀಟ್ ಬ್ರ್ಯಾಂಡ್ ಹಲವು ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ವಿಶೇಷ ಈ ಬ್ರ್ಯಾಂಡ್ ಕುರಿತು ಅಂಡರ್‌ನೀಟ್‌ನ ಸಹ-ಸಂಸ್ಥಾಪಕ ವಿಮರ್ಶ ರಾಜ್‌ದಾನ್ ಪ್ರತಿಕ್ರಿಯಿಸಿದ್ದಾರೆ. ವಿಶೇಷ ಅಂದರೆ ಮಾಡೆಲ್ ಕಿಮ್ ಕರ್ದಾಶಿಯನ್ ಅವರ ಸ್ಕಿಮ್ಸ್ ಬ್ರ್ಯಾಂಡ್‌ನಿಂದ ಪ್ರೇರಿತವಾಗಿದೆ. ಅಂಡರ್‌ನೀಟ್ ಮಾಸ್ ಪ್ರೀಮಿಯಂ ಪ್ರೊಡಕ್ಟ್ ಆಗಿ ಮಾರುಕಟ್ಟೆ ಹಿಡಿದುಕೊಳ್ಳಲಿದೆ. 2019ರಲ್ಲಿ ಆರಂಭಗೊಂಡ ಕರ್ದಾಶಿಯನ್ ಅವರ ಸ್ಕಿಮ್ಸ್ ಸ್ಟಾರ್ಟ್ಅಪ್ ಬ್ರ್ಯಾಂಡ್ ಇದೀಗ 4 ಬಿಲಿಯನ್ ಡಾಲರ್‌ಗಿಂತಲೂ ಹೆಚ್ಚು ಮೌಲ್ಯದ ಕಂಪನಿಯಾಗಿ ಬೆಳೆದು ನಿಂತಿದೆ. ವಾರ್ಷಿಕವಾಗಿ 1 ಬಿಲಿಯನ್‌ಗಿಂತಲೂ ಹೆಚ್ಚಿನ ಮಾರಾಟ ಮಾಡುತ್ತಿದೆ ಎಂದಿದ್ದಾರೆ.
ಶೇಪ್‌ವೇರ್ ಅಂಡರ್‌ನೀಟ್ ಬ್ರ್ಯಾಂಡ್ ಭಾರತದಲ್ಲಿ ಪ್ರಮುಖ ಬ್ರ್ಯಾಂಡ್ ಆಗಿ ಬೆಳೆದು ನಿಲ್ಲಲಿದೆ ಎಂದು ರಾಜ್‌ದಾನ್ ಹೇಳಿದ್ದಾರೆ. ನಮ್ಮ ಗುರಿ ಭಾರತದಲ್ಲಿ ನಂಬರ್ 1 ಬ್ರ್ಯಾಂಡ್ ಆಗಿ ಬೆಳೆಯವುದು. ಆದರೆ ಶೇಪ್‌ವೇರ್ ಅಂಡರ್‌ನೀಟ್ ಬ್ರ್ಯಾಂಡ್ ಆರಂಭಿಕ ಹಂತದಲ್ಲಿದೆ. ಸದ್ಯ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ ಎಂದಿದ್ದಾರೆ.
ಸೌಂದರ್ಯ, ಆಕರ್ಷಕ ನೋಟಕ್ಕೆ ಅತೀವ ಮಹತ್ವವಿದೆ. ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ಉಡುಗೆ ತೊಡುಗೆಯನ್ನು ಬದಲಾಯಿಸಲು, ಅಥವಾ ತಮಗೆ ಒಪ್ಪುವಂತೆ ಬ್ರ್ಯಾಂಡ್ ಉತ್ರನ್ನಗಳನ್ನು ಬಳಸುತ್ತಾರೆ. ಶೇಪ್‌ವೇರ್ ಬ್ರ್ಯಾಂಡ್ ಉತ್ಪನ್ನಗಳು ಆಕರ್ಷಕ ನೋಟಕ್ಕೆ ಉತ್ತಮವಾಗಿದೆ. ಸ್ಥಳೀಯ ಮಟ್ಟದಲ್ಲೂ, ಗ್ರಾಮೀಣ ಮಟ್ಟದಲ್ಲೂ ಶೇಪ್‌ವೇರ್ ಬ್ರ್ಯಾಂಡ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ.
ರತನ್ ಟಾಟಾ ಬಿಟ್ಟು ಹೋದ 3800 ಕೋಟಿ ರೂ ಆಸ್ತಿ ಹಂಚಿಕೆ ವಿಲ್ ಬಹಿರಂಗ, ಯಾರಿಗೆ ಎಷ್ಟೆಷ್ಟು?