ಇಪಿಎಫ್‌ಗೆ ಹೊಂದಿದವರಿಗೆ ಕೇಂದ್ರದಿಂದ ಗುಡ್ ನ್ಯೂಸ್

By Kannadaprabha NewsFirst Published Oct 30, 2021, 6:46 AM IST
Highlights
  • 2020​​-21ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿಯ ಖಾತೆಗೆ ಶೇ.8.5ರಷ್ಟು ಬಡ್ಡಿ
  •  ಶೇ.8.5ರಷ್ಟು ಬಡ್ಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ 

ನವದೆಹಲಿ (ಅ.30): 2020​​-21ನೇ ಸಾಲಿನಲ್ಲಿ ನೌಕರರ ಭವಿಷ್ಯ ನಿಧಿಯ (  Employees Provident Fund ) ಖಾತೆಗೆ ಶೇ.8.5ರಷ್ಟು ಬಡ್ಡಿ (Interest) ನೀಡಲು ಕೇಂದ್ರ ಸರ್ಕಾರ (Central Govt) ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಮುಂದಿನ 3 ವರ್ಷ ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ಮುಂದುವರಿಕೆ!

 ಸರ್ಕಾರದ ಈ ಕ್ರಮವು ಭವಿಷ್ಯ ನಿಧಿ ಸಂಸ್ಥೆಯ ( Employees Provident Fund Organisation) 5 ಕೋಟಿ ಚಂದಾದಾರರಿಗೆ ದೀಪಾವಳಿ (Deepavali) ಉಡುಗೊರೆಯಾಗಿದೆ. 2020-21ನೇ ಸಾಲಿನ ನೌಕರರ ಭವಿಷ್ಯ ನಿಧಿಯ ಖಾತೆಗಳಿಗೆ (Account) ಬಡ್ಡಿ ಹಣ ಮಂಜೂರು ಮಾಡುವ ನಿರ್ಧಾರವನ್ನು ಆರ್ಥಿಕ ಇಲಾಖೆ ಕೈಗೊಂಡಿದ್ದು, ಇದು 5 ಕೋಟಿ ಇಪಿಎಫ್‌ (EPF) ಚಂದಾದಾರರ ಖಾತೆಗಳಿಗೆ ವರ್ಗಾವಣೆಯಾಗಲಿದೆ. 

ಆದರೆ ಇಪಿಎಫ್‌ (EPF) ಮೇಲಿನ ಶೇ.8.5ರಷ್ಟು ಬಡ್ಡಿಯು ಕಳೆದ 7 ವರ್ಷಗಳ ಕನಿಷ್ಠವಾಗಿದೆ. 2018-19ರಲ್ಲಿ ಶೇ.8.65ರಷ್ಟಿದ್ದ ಇಪಿಎಫ್‌ ಮೇಲಿನ ಬಡ್ಡಿಯನ್ನು (Interest) 2019-20ರ ಅವಧಿಯಲ್ಲಿ ಶೇ.8.5ಕ್ಕೆ ಇಳಿಸಲಾಗಿತ್ತು.

ಕರ್ಣಾಟಕ ಬ್ಯಾಂಕ್‌: ತ್ರೈಮಾಸಿಕದಲ್ಲಿ 125.61 ಕೋಟಿ ನಿವ್ವಳ ಲಾಭ

* 2ನೇ ಬಾರಿ ಮುಂಗಡ ಪಿಎಫ್‌ ವಿತ್‌ಡ್ರಾವಲ್‌ಗೆ ಅವಕಾಶ

 ಕೊರೋನಾ (Covid) 2ನೇ ಅಲೆಯ ಹಿನ್ನೆಲೆಯಲ್ಲಿ ನೌಕರರ ಭವಿಷ್ಯ ನಿಧಿ ಸಂಸ್ಥೆ ‘ಇಪಿಎಫ್‌ಒ’, ತನ್ನ ಗ್ರಾಹಕರಿಗೆ 2ನೇ ಬಾರಿಗೆ ಮುಂಗಡ ಹಣವನ್ನು ಹಿಂಪಡೆಯಲು ಅವಕಾಶ ಕಲ್ಪಿಸಿತ್ತು..

ಕಳೆದ ವರ್ಷದ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿದ್ದರಿಂದ ಭವಿಷ್ಯನಿಧಿಯಿಂದ ಮೂರು ತಿಂಗಳ ಮೂಲ ವೇತನದಷ್ಟುಅಥವಾ ಉಳಿತಾಯದ ಶೇ.75ರಷ್ಟು- ಇವೆರಡರಲ್ಲಿ ಯಾವುದು ಕಡಿಮೆ ಮೊತ್ತವೋ ಅಷ್ಟುಹಣವನ್ನು ಹಿಂಪಡೆಯಲು ಸದಸ್ಯರಿಗೆ ಅವಕಾಶ ನೀಡಲಾಗಿತ್ತು.

ಇದೀಗ ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ 2ನೇ ಬಾರಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ. ಕೊರೋನಾದಿಂದಾಗಿ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಮೂರು ತಿಂಗಳ ಮೂಲ ವೇತನ ಮತ್ತು ತುಟ್ಟಿಭತ್ಯೆ ಅಥವಾ ಖಾತೆಯಲ್ಲಿ ಜಮಾ ಆಗಿರುವ ಹಣದ ಶೇ.75ರಷ್ಟನ್ನು ಹಿಂಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಸದಸ್ಯರು ಕಡಿಮೆ ಮೊತ್ತದ ಹಣವನ್ನು ಹಿಂಪಡೆಯಲು ಕೂಡ ಕೋರಿಕೆ ಸಲ್ಲಿಸಬಹುದು. ಆದರೆ, ಇದನ್ನು ಸಂಸ್ಥೆ ಮರು ಪಾವತಿ ಮಾಡುವುದಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

15 ಸಾವಿಕ್ಕಿಂತ ಕಡಿಮೆ ವೇತನ ಪಡೆಯುತ್ತಿರುವ ಸಂಬಳದಾರರಿಗೆ ತುರ್ತು ಅಗತ್ಯಕ್ಕೆ ಹಣವನ್ನು ಹಿಂಪಡೆಯಲು ಈ ಯೋಜನೆ ನೆರವಾಗಲಿದೆ. ಕೊರೋನಾ ಆರಂಭವಾದ ಬಳಿಕ ಇದುವರೆಗೆ 76.31 ಲಕ್ಷ ಕ್ಲೈಮ್‌ಗಳಿಂದ 18,698 ಕೋಟಿ ರು.ಗಳನ್ನು ಇಪಿಎಫ್‌ಒ ಗ್ರಾಹಕರಿಗೆ ಬಿಡುಗಡೆ ಮಾಡಿದೆ.

  ಕೆಲವು ಹೊಸ ನಿಯಮಗಳು ಜಾರಿ

ಹೊಸ ವಿತ್ತೀಯ ವರ್ಷ (Financial Year) ಏಪ್ರಿಲ್‌ 1ರಂದು ಆರಂಭವಾಗಲಿದ್ದು, ಆರ್ಥಿಕ  (Economic)ಚಟುವಟಿಕೆಗಳು, ನಿಯಮಗಳಲ್ಲಿ ಹಲವು ಬದಲಾವಣೆ ಆಗಲಿವೆ. ಅವುಗಳ ಸಂಕ್ಷಿಪ್ತ ಮಾಹಿತಿ ಇಲ್ಲಿ ನೀಡಲಾಗಿದೆ.

ಆಧಾರ್‌- ಪಾನ್‌ ಲಿಂಕ್‌ ಆಗಿರದಿದ್ದರೆ ದಂಡ:  ಆಧಾರ್‌ (Aadhaar) ಹಾಗೂ ಪಾನ್‌ (Pan) ನಂಬರ್‌ ಅನ್ನು ಸಂಯೋಜನೆ ಮಾಡಲು ಮಾ.31 ಕೊನೆಯ ದಿನವಾಗಿದೆ. ಒಂದು ವೇಳೆ ಆಧಾರ್‌- ಪಾನ್‌ ಲಿಂಕ್‌ ಆಗಿರದೇ ಇದ್ದರೆ ಏ.1ರಿಂದ ಪಾನ್‌ ಕಾರ್ಡ್‌ ಅಸಿಂಧು ಆಗಲಿದೆ. ಆ ಬಳಿಕ ಪಾನ್‌- ಆಧಾರ್‌ ಸಂಯೋಜನೆಗೆ 1000 ರು. ದಂಡ ಪಾವತಿಸಬೇಕಿದೆ.

7 ಬ್ಯಾಂಕ್‌ಗಳ ಚೆಕ್‌ಬುಕ್‌ ನಡೆಯಲ್ಲ:

ಸಾರ್ವಜನಿಕ ವಲಯದ ಬ್ಯಾಂಕುಗಳಾದ ದೇನಾ ಬ್ಯಾಂಕ್‌, ವಿಜಯಾ ಬ್ಯಾಂಕ್‌, ಕಾರ್ಪೊರೇಷನ್‌ ಬ್ಯಾಂಕ್‌, ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌, ಯುನೈಟೆಡ್‌ ಬ್ಯಾಂಕ್‌ ಆಫ್‌ ಇಂಡಿಯಾ ಮತ್ತು ಅಲಹಾಬಾದ್‌ ಬ್ಯಾಂಕ್‌ಗಳ ಚೆಕ್‌ ಮತ್ತು ಪಾಸ್‌ಬುಕ್‌ಗಳು ಏ.1ರಿಂದ ಅಮಾನ್ಯ ಅಗಲಿದ್ದು, ಐಎಫ್‌ಎಸ್‌ಸಿ ಕೋಡ್‌ ಕೂಡ ಬದಲಾಗಲಿದೆ.

ಇಪಿಎಫ್‌ ಮೇಲಿನ ಬಡ್ಡಿಗೂ ತೆರಿಗೆ:

ಏ.1ರಿಂದ ನೌಕರರ ಭವಿಷ್ಯನಿಧಿ ಇಪಿಎಫ್‌ಗೂ ತೆರಿಗೆ ಅನ್ವಯ ಆಗಲಿದೆ. ಇಪಿಎಫ್‌ನಲ್ಲಿ ವಾರ್ಷಿಕ 2.5 ಲಕ್ಷಕ್ಕಿಂತ ಹೆಚ್ಚು ಹೂಡಿಕೆ ಮಾಡಿದರೆ, ಅದಕ್ಕೆ ಲಭ್ಯವಾಗುವ ಬಡ್ಡಿಗೆ ಗ್ರಾಹಕರು ಏ.1ರಿಂದ ಬಡ್ಡಿಯನ್ನು ಪಾವತಿಸಬೇಕು.

ನೂತನ ವೇತನ ನೀತಿ ಜಾರಿ

ವೇತನ ಸಂಹಿತೆ 2019 ಅನ್ನು ಕೇಂದ್ರ ಸರ್ಕಾರ ಏ.1ರಿಂದ ಜಾರಿಗೊಳಿಸುತ್ತಿದೆ. ನೂತನ ನಿಯಮದ ಪ್ರಕಾರ ನೌಕರರ ವೇತನದಲ್ಲಿ ಮೂಲ ವೇತನ ಶೇ.50ರಷ್ಟುಅಥವಾ ಅದಕ್ಕಿಂತ ಹೆಚ್ಚು ಇರುವುದು ಕಡ್ಡಾಯಾಗಿದೆ. ಇದಕ್ಕೆ ತಕ್ಕಂತೆ ಉದ್ಯೋಗಿಗಳ ಪಿಎಫ್‌ ಹಾಗೂ ಗ್ರ್ಯಾಚ್ಯುಟಿ ಪಾಲು ಕೂಡ ಜಾಸ್ತಿ ಆಗಲಿದ್ದು, ಕೈಗೆ ಸಿಗುತ್ತಿದ್ದ ವೇತನ ಕಡಿಮೆ ಆಗುವ ಸಾಧ್ಯತೆ ಇದೆ.

ಐಟಿಆರ್‌ ಸಲ್ಲಿಸದಿದ್ದರೆ ಡಬಲ್‌ ಟಿಡಿಎಸ್‌

ಒಂದು ವೇಳೆ ವೇತನ ಪಡೆಯುತ್ತಿರುವ ನೌಕರನೊಬ್ಬ ಆದಾಯ ತೆರಿಗೆ ಪಾವತಿ (ಐಟಿಆರ್‌) ಮಾಡದೇ ಇದ್ದರೆ, ಏ.1ರಿಂದ ಬ್ಯಾಂಕ್‌ ಠೇವಣಿ ಬಡ್ಡಿಯ ಮೇಲೆ ವಿಧಿಸಲಾಗುತ್ತಿದ್ದ ಟಿಡಿಎಸ್‌ ದರ ದುಪ್ಪಟ್ಟು ಆಗಲಿದೆ. ಉದಾಹರಣೆಗೆ ಬ್ಯಾಂಕ್‌ ಠೇವಣಿಯ ಮೇಲಿನ ಬಡ್ಡಿಗೆ ಶೇ.10ರಷ್ಟುಇರುವ ಟಿಡಿಎಸ್‌ ಶೇ.20ರಷ್ಟುಆಗಲಿದೆ.

click me!