ಉದ್ಯೋಗ, ಗಳಿಕೆ ವಿಷ್ಯ ಬಂದಾಗ ಜನರು ಗೊಂದಲಕ್ಕೊಳಗಾಗ್ತಾರೆ. ಯಾವ ಕ್ಷೇತ್ರದಲ್ಲಿ ಹಣವಿದೆ, ಎಲ್ಲಿ ಹೆಚ್ಚಿನ ಸಂಪಾದನೆ ಸಾಧ್ಯ ಎಂಬುದನ್ನು ತಿಳಿಯಬಯಸ್ತಾರೆ. ಲಂಡನ್ ನಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬ ಆತನ ಗಳಿಕೆಯ ಗುಟ್ಟು ಬಿಚ್ಚಿಟ್ಟಿದ್ದಾನೆ.
ವಿದೇಶ (Abroad) ಕ್ಕೆ ಹೋದ್ರೆ ಹೆಚ್ಚಿನ ಸಂಪಾದನೆ ಮಾಡ್ಬಹುದು ಅಂತ ಬಹುತೇಕರು ನಂಬಿದ್ದಾರೆ. ಆದ್ರೆ ಇಷ್ಟೊಂದು ಸಂಬಳ (salary) ಪಡೆಯಬಹುದು ಎಂಬು ಸಂಗತಿ ಬಹುತೇಕರಿಗೆ ಗೊತ್ತಿಲ್ಲ. ಭಾರತೀಯ ಮೂಲದ ವ್ಯಕ್ತಿಯೊಬ್ಬ ಲಂಡನ್ (London) ನಲ್ಲಿ ಪಡೆಯುತ್ತಿರುವ ಸಂಪಾದನೆ ಹುಬ್ಬೇರಿಸುವಂತೆ ಮಾಡಿದೆ. ಆತ ಹೇಗೆ ಇಷ್ಟೊಂದು ಸಂಬಳ ಪಡೆಯುತ್ತಿದ್ದೇನೆ ಎಂಬುದನ್ನು ಮಾತ್ರ ಹೇಳಿಲ್ಲ, ಜನರಿಗೆ ಅಗತ್ಯವಿರುವ ಕೆಲ ಸಲಹೆಗಳನ್ನು ನೀಡಿದ್ದಾನೆ. ಆತನ ವಿಡಿಯೋ ಈಗ ವೈರಲ್ ಆಗಿದೆ.
ಲಂಡನ್ ನಲ್ಲಿ ವಾರ್ಷಿಕವಾಗಿ ಮೂರು ಕೋಟಿ ಸಂಪಾದನೆ ಮಾಡುತ್ತಿರುವ ವ್ಯಕ್ತಿ ಹೂಡಿಕೆ ಬ್ಯಾಂಕರ್ (Investment Banker). ಇನ್‌ಸ್ಟಾಗ್ರಾಮ್ ಪೇಜ್ ಸಲಾರಿ ಸ್ಕೇಲ್ (Salary Scale) ನ ಭಾರತೀಯ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಪಿಯೂಷ್ ಮೊಂಗಾ ಅವರು ಹೂಡಿಕೆ ಬ್ಯಾಂಕರ್ ಜೊತೆ ಮಾತನಾಡಿದ್ದಾರೆ. ಈ ಹೂಡಿಕೆ ಬ್ಯಾಂಕರ್ ಈಗಷ್ಟೇ ಈ ಕ್ಷೇತ್ರಕ್ಕೆ ಕಾಲಿಟ್ಟವರಲ್ಲ. ಅವರಿಗೆ ಎಂಟು ವರ್ಷಗಳ ಅನುಭವವಿದೆ. ಅವರು ವಾರ್ಷಿಕವಾಗಿ 3.17 ಕೋಟಿಗಿಂತ ಹೆಚ್ಚು ಹಣ ಸಂಪಾದನೆ ಮಾಡುತ್ತಿದ್ದೇನೆ ಎಂದಿರುವ ಅವರು ತಮ್ಮ ನಿಜವಾದ ಸಂಪಾದನೆಯನ್ನು ಬಾಯ್ಬಿಟ್ಟಿಲ್ಲ.
ಮಾಜಿ ಬಾಯ್‌ಫ್ರೆಂಡ್‌ನ ಬಿಟ್‌ಕಾಯಿನ್ ಇದ್ದ ಹಾರ್ಡ್‌ಡ್ರೈವ್ ಕಸದ ಗಾಡಿಗೆ ಎಸೆದ ಯುವತಿ, ಇದರ ಮೌಲ್ಯ 5900 ಕೋಟಿ!
ಅವರ ಸಂಪಾದನೆಯ ಗುಟ್ಟೇನು? : ಉತ್ತಮ ಗಳಿಕೆಯ ಮಂತ್ರ ಯಾವುದು ಎಂದು ಹೂಡಿಕೆ ಬ್ಯಾಂಕರ್‌ಗೆ ಕೇಳಿದಾಗ, ಅವರು ಶಿಕ್ಷಣವನ್ನು ಉನ್ನತ ಸ್ಥಾನದಲ್ಲಿರಿಸಿದ್ದಾರೆ. ಉತ್ತಮ ಶಿಕ್ಷಣ, ಹೆಚ್ಚಿನ ಸಂಪಾದನೆಗೆ ಸಹಕಾರಿ ಎಂಬುದು ಅವರ ನಂಬಿಕೆ. ಹಾಗೆಯೇ ಸರಿಯಾದ ಸಮಯದಲ್ಲಿ ಸರಿಯಾದ ಸ್ಥಳದಲ್ಲಿರುವುದು ಬಹಳ ಮುಖ್ಯ ಎನ್ನುತ್ತಾರೆ ಅವರು. ಕನೆಕ್ಟಿವಿಟಿ ಹಾಗೂ ಕಠಿಣ ಪರಿಶ್ರಮಕ್ಕೂ ಅವರು ಆದ್ಯತೆ ನೀಡುತ್ತಾರೆ.
ಹೂಡಿಕೆ ಬ್ಯಾಂಕರ್ ಗಳಿಗೆ ಅವರ ಸಲಹೆ ಏನು? : ಭವಿಷ್ಯದಲ್ಲಿ ಹೂಡಿಕೆ ಬ್ಯಾಂಕಿಂಗ್ ಕ್ಷೇತ್ರವನ್ನು ವೃತ್ತಿಯಾಗಿ ಆಯ್ದುಕೊಳ್ಳಲು ಆಸಕ್ತಿ ಇರುವ ಜನರು, ಮುಂಚಿತವಾಗಿಯೇ ಅದಕ್ಕೆ ತಯಾರಿ ನಡೆಸಬೇಕು ಎನ್ನುತ್ತಾರೆ ಇವರು. ಇಂಟರ್ನ್‌ಶಿಪ್‌ಗಳ ಮೂಲಕ ಸಾಕಷ್ಟು ಅನುಭವವನ್ನು ಪಡೆದುಕೊಳ್ಳಬೇಕು ಎಂದು ಯುವಕರಿಗೆ ಸಲಹೆ ನೀಡಿದ್ದಾರೆ.
40000 ಕೋಟಿ ಆಸ್ತಿ ತೊರೆದು ಸನ್ಯಾಸಿಯಾದ ಏರ್‌ಸೆಲ್ ಸಂಸ್ಥಾಪಕನ ಏಕೈಕ ಪುತ್ರ
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊವನ್ನು ನೋಡಿದ ನಂತ್ರ ಬಳಕೆದಾರರು, ಅವರ ಸಂಬಳಕ್ಕೆ ಪ್ರಭಾವಿತರಾಗಿದ್ದಾರೆ. ಮತ್ತೆ ಕೆಲವರು ಇಷ್ಟೊಂದು ಸಂಬಳ ಸಿಗಲು ಸಾಧ್ಯವೇ ಇಲ್ಲ ಎನ್ನುತ್ತಿದ್ದಾರೆ. ಅವರ ಲಿಂಕ್ಡ್ ಇನ್ ಖಾತೆಯನ್ನು ಪರಿಶೀಲಿಸಬೇಕಿದೆ, ಅವರು ಯಾವೆಲ್ಲ ಅರ್ಹತೆ ಹೊಂದಿದ್ದಾರೆ ಎಂಬುದನ್ನು ತಿಳಿಯಬೇಕಿದೆ ಎಂದು ಬಳಕೆದಾರರೊಬ್ಬರು ಕಮೆಂಟ್ ಮಾಡಿದ್ದಾರೆ. ಲಂಡನ್‌ನಲ್ಲಿ ಇಷ್ಟೊಂದು ಸಂಬಳ ಸಿಗಲು ಸಾಧ್ಯವೇ ಇಲ್ಲ. ಅಲ್ಲಿನ ರಾಷ್ಟ್ರೀಯ ಸರಾಸರಿಯು 35,000 ಪೌಂಡ್ ಆಗಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ. ಸಹೋದರ ತನ್ನ ಸಂಬಳವನ್ನು ಉತ್ಪ್ರೇಕ್ಷೆ ಮಾಡುತ್ತಿದ್ದಾನೆ, ಇದು ಸಾಧ್ಯವಿಲ್ಲ ಎಂದು ಕೆಲ ಬಳಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು ಸಂಬಳ ಬರ್ತಿದೆ ಅಂದ್ರೆ ಸ್ವಲ್ಪ ನಿಮ್ಮ ಕಪಾಟಿನಲ್ಲಿರುವ ಬಟ್ಟೆ ಬದಲಿಸಿ, ನಿಮ್ಮ ಜಾಕೆಟ್ ಬದಲಿಸಿ ಎಂದು ಸಲಹೆ ನೀಡಿದ ಬಳಕೆದಾರರೂ ಇಲ್ಲಿದ್ದಾರೆ.
ಉದ್ಯೋಗ ಅರಸಿ ವಿದೇಶಕ್ಕೆ ಪ್ರಯಾಣ ಬೆಳೆಸುತ್ತಿರುವ ಭಾರತೀಯರ ಸಂಖ್ಯೆ ಈಗ ಹೆಚ್ಚಿದೆ. ಹಾಗಂತ ಎಲ್ಲ ದೇಶದಲ್ಲಿ ವಿದ್ಯೆಗೆ ತಕ್ಕ ಉದ್ಯೋಗ ಹಾಗೂ ಸಂಪಾದನೆ ಸಾಧ್ಯವಿಲ್ಲ. ಕೆಲ ದೇಶಗಳಲ್ಲಿ ಮಾತ್ರ ಅತಿ ಹೆಚ್ಚಿನ ಸಂಬಳ ಭಾರತೀಯರಿಗೆ ಸಿಗ್ತಿದೆ. ಈ ಪಟ್ಟಿಯಲ್ಲಿ ಅಮೆರಿಕಾ ಮುಂದಿದೆ.