ಎಲಾನ್ ಮಸ್ಕ್ ಟ್ವಿಟರ್ ಸಂಸ್ಥೆಯನ್ನು ಖರೀದಿಸಿ ಬಳಿಕ ಎಕ್ಸ್ ಆಗಿ ಬದಲಿಸಿದ್ದರು. ಇದೀಗ ಉದ್ಯಮಿ ಎಲಾನ್ ಮಸ್ಕ್ ಇದೀಗ ಬರೋಬ್ಬರಿ 33 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಎಕ್ಸ್ ಮಾರಾಟ ಮಾಡಿದ್ದಾರೆ. ಆದರೆ ಎಲಾನ್ ಮಸ್ಕ್ 44 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಖರೀದಿಸಿದ್ದರು.
ಕ್ಯಾಲಿಫೋರ್ನಿಯಾ(ಮಾ.29) ವಿಶ್ವದ ಅತೀ ದೊಡ್ಡ ಸೋಶಿಯಲ್ ಮೀಡಿಯಾ ತಾಣವಾಗಿರುವ ಎಕ್ಸ್ ಹಲವು ಸಂಚಲನ ಸೃಷ್ಟಿಸಿದೆ. ಟ್ವಿಟರ್ ಹೆಸರಿನಲ್ಲಿದ್ದ ಈ ಸೋಶಿಯಲ್ ಮೀಡಿಯಾವನ್ನು ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ 2022ರ ಎಪ್ರಿಲ್ ತಿಂಗಳಲ್ಲಿ ಖರೀದಿಸಿದ್ದರು. ಬರೋಬ್ಬರಿ 44 ಬಿಲಿಯನ್ ಅಮೆರಿಕನ್ ಡಾಲರ್ ಅಂದರೆ 3.40 ಲಕ್ಷ ಕೋಟಿ ರೂಪಾಯಿಗೆ ಎಲಾನ್ ಮಸ್ಕ್ ಟ್ವಿಟರ್ ಖರೀದಿಸಿದ್ದರು. ಬಳಿಕ ಟ್ವಿಟರ್ ಸೋಶಿಯಲ್ ಮೀಡಿಯಾವನ್ನು ಎಕ್ಸ್ ಆಗಿ ಬದಲಿಸಿದ್ದರು. ಹಲವು ಹೊಸತನ,ಎಡಿಟ್ ಸೇರಿದಂತೆ ಹೆಚ್ಚಿನ ಫೀಚರ್ಸ್ ನೀಡುವ ಮೂಲಕ ಎಕ್ಸ್ ಹೊಸ ಅಧ್ಯಾಯ ಆರಂಭಿಸಿತ್ತು. ಆದರೆ ಇದೀಗ ಎಲಾನ್ ಮಸ್ಕ್ ತಮ್ಮ ಎಕ್ಸ್ ಸೋಶಿಯಲ್ ಮೀಡಿಯಾವನ್ನು ಸರಿಸುಮಾರು 12 ಬಿಲಿಯನ್ ಯುಎಸ್ ಡಾಲರ್ ಕಡಿಮೆ ಡಾಲರ್ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ. ಹೌದು ಎಲಾನ್ ಮಸ್ಕ್ ತಮ್ಮ ಎಕ್ಸ್ ಸೋಶಿಯಲ್ ಮೀಡಿಯಾವನ್ನು 33 ಬಿಲಿಯನ್ ಅಮೆರಿಕನ್ ಡಾಲರ್‌ಗೆ ಮಾರಾಟ ಮಾಡಿದ್ದಾರೆ.
ಆದರೆ ಈ ಮಾರಾಟದಲ್ಲಿ ಎಲಾನ್ ಮಸ್ಕ್ ತಮ್ಮ ಗೂಗ್ಲಿ ಬ್ಯೂಸಿನೆಸ್ ರಣತಂತ್ರ ಎದ್ದುಕಾಣುತ್ತಿದೆ. ಎಲಾನ್ ಮಸ್ಕ್ ತಮ್ಮ ಎಕ್ಸ್ ಸೋಶಿಯಲ್ ಮೀಡಿಯಾ ಸಂಸ್ಥೆಯನ್ನು ಮಾರಾಟ ಮಾಡಿದ್ದು ತಮ್ಮದೇ ಮತ್ತೊಂದು ಸಂಸ್ಥೆಯಾಗಿರುವ xAI ಸಂಸ್ಥೆಗೆ. 2023ರಲ್ಲಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಆಧಾರಿತ xAI ಸಂಸ್ಥೆಯನ್ನು ಎಲಾನ್ ಮಸ್ಕ್ ಆರಂಭಿಸಿದ್ದಾರೆ. ಇದೀಗ ಈ ಸಂಸ್ಥೆಗೆ ಎಕ್ಸ್ ಸೋಶಿಯಲ್ ಮೀಡಿಯಾ ಸಂಸ್ಥೆಯನ್ನು ಮಾರಾಟ ಮಾಡಿದ್ದಾರೆ.
ಟ್ವಿಟ್ಟರ್‌ನ ಐಕಾನಿಕ್ ಪಕ್ಷಿ ಲೋಗೋ ಹರಾಜು; ಸಿಕ್ಕಿದ್ದು ಭಾರಿ ಬೆಲೆ
600 ಮಿಲಿಯನ್‌ಗೂ ಅಧಿಕ ಬಳಕೆದಾರರನ್ನು ಹೊಂದಿರುವ ಎಕ್ಸ್ ಇದೀಗ xAI ಭಾಗವಾಗಿದೆ. ಇತ್ತೀಚೆಗೆ ಎಲಾನ್ ಮಸ್ಕ್ ಎಕ್ಸ್ ಸೋಶಿಯಲ್ ಮೀಡಿಯಾದಲ್ಲಿ ಆರ್ಟಿಫೀಶಿಯಲ್ ಇಂಟಲಿಜನ್ಸ್ ಪ್ರಾಮುಖ್ಯತೆ ಕುರಿತು ಮಾತನಾಡಿದ್ದರು. ಇದಾದ ಕೆಲವೇ ದಿನದಲ್ಲಿ ಇದೀಗ ಎಕ್ಸ್ ಸೋಶಿಯಲ್ ಮೀಡಿಯಾ xAI ಭಾಗವಾಗಿದೆ. ಇದೀಗ ಅಧಿಕೃತವಾಗಿ ಎಕ್ಸ್, xAI ಭಾಗವಾಗಿದೆ. ಡೇಟಾ ಹಂಚಿಕೆ ಸೇರಿದಂತೆ ಎಲ್ಲಾ ಪಾಲುದಾರಿಕೆಯನ್ನು xAI ಖರೀದಿಸಿದೆ.
ಈ ಕುರಿತು ಎಲಾನ್ ಮಸ್ಕ್ ಪೋಸ್ಟ್ ಮಾಡಿದ್ದಾರೆ. ವಿಶೇಷವಾಗಿ ತಮ್ಮ ಎಕ್ಸ್ ಖರೀದಿ ಹಾಗೂ ಮಾರಾಟದಲ್ಲಿ 12 ಬಿಲಿಯನ್ ಅಮೆರಿಕನ್ ಡಾಲರ್ ಸಾಲ ಎಂದು ಉಲ್ಲೇಖಿಸಿದ್ದಾರೆ. ಈ ವಿಲೀನ xAI ಸಂಸ್ಥೆಯನ್ನು 80 ಬಿಲಿಯನ್ ಡಾಲರ್ ಮತ್ತು X ಸಂಸ್ಥೆಯನ್ನು 33 ಬಿಲಿಯನ್ ಡಾಲರ್ (45 ಬಿಲಿಯನ್ ಡಾಲರ್ ಮೈನಸ್ 12 ಬಿಲಿಯನ್ ಡಾಲರ್ ಸಾಲ) ಎಂದು ಅಂದಾಜಿಸಿದೆ. xAI ಮತ್ತು X ನ ಭವಿಷ್ಯವು ಒಂದಕ್ಕೊಂದು ಬೆಸೆದುಕೊಂಡಿದೆ. ಇಂದು ನಾವು ಡೇಟಾ, ಮಾದರಿಗಳು, ಕಂಪ್ಯೂಟೇಶನ್, ವಿತರಣೆ ಮತ್ತು ಪ್ರತಿಭೆಗಳನ್ನು ಸಂಯೋಜಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತೇವೆ ಎಂದ ಮಸ್ಕ್ ಟ್ವೀಟ್ ಮಾಡಿದ್ದಾರೆ.
xAI ಗೆ ಎಕ್ಸ್ ಮಾರಾಟದಿಂದ ಟ್ವಿಟರ್ ತನ್ನ ನೈಜತೆಯನ್ನು ಮತ್ತಷ್ಟು ಕಳೆದುಕೊಳ್ಳಲಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪ್ರಾಮುಖ್ಯತೆ ಪಡೆದುಕೊಂಡರೆ, ಬಳಕೆದಾರರು ಅಸಮಾಧಾನಗೊಳ್ಳುವ ಸಾಧ್ಯತೆ ಇದೆ. ಇದರಿಂದ ಎಕ್ಸ್‌ಗಗೆ ಪರ್ಯಾ ಮಾರ್ಗಗಳು ಹುಟ್ಟಿಕೊಳ್ಳಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. ಇದೇ ವೇಳೆ xAI ನಿಂದ ಟ್ವಿಟರ್ ಮತ್ತಷ್ಟು ನಿಯಂತ್ರಣಕ್ಕೆ ಒಳಪಡಲಿದೆ. ನಕಲಿ ಮಾಹಿತಿಗಳನ್ನು ನಿಯಂತ್ರಿಸಲಿದೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.
ಎಲಾನ್ ಮಸ್ಕ್ ಏಲಿಯನ್ ಅನ್ನೋದಕ್ಕೆ ಇಲ್ಲಿದೆ ಸಾಕ್ಷಿ, ಟ್ರಂಪ್ ಡಿನ್ನರ್ ಪಾರ್ಟಿ ವಿಡಿಯೋ ಸಂಚಲನ