ಮೊದಲು ದುಡ್ಡು ಪಡೆದು ಮದುವೆಯಾಗಿ, ಆಮೇಲೆ ನಿಧಾನವಾಗಿ ಹಣ ಪಾವತಿಸಿ ಎನ್ನುವ ಆಫರ್ ಇದೀಗ ಶುರುವಾಗಿದೆ. ಏನಿದು ಯೋಜನೆ? ಡಿಟೇಲ್ಸ್ ಇಲ್ಲಿದೆ.
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಎನ್ನುವ ಗಾದೆ ಮಾತು ತಲೆ ತಲಾಂತರಗಳಿಂದಲೂ ಚಾಲ್ತಿಯಲ್ಲಿ ಇದೆ. ಸುಸೂತ್ರವಾಗಿ ಮದುವೆ ಮಾಡಿ ಮುಗಿಸುವುದು ಮತ್ತು ಮನೆ ಕಟ್ಟಿ ಮುಗಿಸುವುದು ಎಷ್ಟು ಕಷ್ಟ ಎನ್ನುವುದನ್ನು ಮಾಡಿದವರಿಗೇ ಗೊತ್ತು. ಇದಕ್ಕೆ ವಿಭಿನ್ನ ಕಾರಣಗಳು ಇದ್ದರೂ, ಅದರಲ್ಲಿ ಪ್ರಮುಖವಾದದ್ದು ಹಣದ ಕಾರಣವೇ ಆಗಿದೆ. ಹಾಕಿಕೊಂಡಿರುವ ಬಜೆಟ್‌ಗಿಂತಲೂ ಮಿತಿ ಮೀರಿ ಖರ್ಚಾಗುವುದು ಮದುವೆ ಮತ್ತು ಮನೆ ವಿಷಯದಲ್ಲಿ ಸಾಮಾನ್ಯವಾಗಿದೆ. ಅದರಲ್ಲಿಯೂ ಕೆಲವೊಂದು ನಗರಗಳಲ್ಲಿ ಕಲ್ಯಾಣ ಮಂಟಪದ ಶುಲ್ಕ, ಊಟದ ಶುಲ್ಕ ಎಲ್ಲವೂ ವಿಪರೀತ ಆಗಿದೆ. ಮದುವೆ ಸ್ವಲ್ಪ ಗ್ರಾಂಡ್ ಆಗಿ ಮಾಡಬೇಕು ಎಂದರಂತೂ ಮುಗಿದೇ ಹೋಯ್ತು. ಅಷ್ಟು ಕಷ್ಟ ಇದೆ ಸ್ಥಿತಿ.
ಇಂಥವರಿಗೆ ನೆರವಾಗುವ ನಿಟ್ಟಿನಲ್ಲಿ ಮದ್ವೆ ಮೊದಲು, ಹಣ ಆಮೇಲೆ (Marry Now Pay Later) ಎನ್ನುವು ಟ್ರೆಂಡ್ ಒಂದು ಶುರುವಾಗಿದೆ. ಇದಾಗಲೇ ವಿವಿಧ ರಾಜ್ಯಗಳಲ್ಲಿ ಈ ಯೋಜನೆ ಇದ್ದು, ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ವೆಡ್ಡಿಂಗ್ ಪ್ಲಾನರ್‌ಗಳು ನೀಡುವ ಇಐಎಂ ಯೋಜನೆ ಇದಾಗಲೆ. ಅಂದರೆ ಮೊದಲಿಗೆ ನಿಮಗೆ ಅಗತ್ಯ ಇರುವಷ್ಟು ಹಣವನ್ನು ಕೊಡಲಾಗುತ್ತದೆ. ಅದಕ್ಕಾಗಿ ನಿಮ್ಮ ಸಂಬಳ, ದುಡಿಮೆ ಇತ್ಯಾದಿಗಳನ್ನು ಪರಿಗಣಿಸಲಾಗುತ್ತದೆ. ಅಂದರೆ ನಿಮಗೆ ಮದುವೆಗಾಗಿ ಸಾಲ ಸಿಗುತ್ತದೆ. ಬ್ಯಾಂಕ್‌ಗಳಲ್ಲಿ ಸುಲಭದಲ್ಲಿ ಸಾಲ ಸಿಗದಿದ್ದರೆ ವೆಡ್ಡಿಂಗ್ ಪ್ಲಾನರ್‌ಗಳು ಸಾಲ ಕೊಡುತ್ತಾರೆ. ಮದುವೆ ಮುಗಿದ ಬಳಿಕ ನೀವು ಸಾಲಕ್ಕೆ ಬಡ್ಡಿ ಕೊಡುವ ರೀತಿಯಲ್ಲಿ, ಬಡ್ಡಿಯನ್ನು ನೀಡಬೇಕಾಗುತ್ತದೆ. ಸಹಜವಾಗಿ ಇದರ ಬಡ್ಡಿದರ ಬ್ಯಾಂಕ್‌ಗಳಿಗಿಂತ ತುಸು ಹೆಚ್ಚೇ ಇರುತ್ತದೆ.
ಮಗುವಿನ ನಾಮಕರಣದ ವಿಡಿಯೋ ಶೇರ್ ಮಾಡಿದ ಸೀತಾರಾಮ ಸೀತಾ: ಫ್ಯಾನ್ಸ್ ಫುಲ್ ಶಾಕ್!
ಅಂದಹಾಗೆ, ಮೊದಲೇ ಹೇಳಿದ ಹಾಗೆ, ಬ್ಯಾಂಕ್‌ಗಳ ರೀತಿಯಲ್ಲಿಯೇ ನಿಮ್ಮ ಸಂಬಳ, ಆದಾಯ ಇತ್ಯಾದಿಗಳನ್ನು ನೋಡಿ ನೀವು ಎಷ್ಟು ಹಣ ಪಾವತಿಸುತ್ತೀರಿ ಎನ್ನುವ ಲೆಕ್ಕಾಚಾರ ಹಾಕಿ, ಅಗತ್ಯ ಇರುವ ದಾಖಲೆಗಳನ್ನು ಪಡೆದುಕೊಂಡು ಸಾಲ ನೀಡಲಾಗುತ್ತದೆ. ನೀವು ಮದುವೆಯಾದ ಬಳಿಕ, ಇಐಂಐ ಮೂಲಕ ಈ ಹಣವನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಪಡೆದುಕೊಂಡಿರುವ ಸಾಲಕ್ಕೆ ತಕ್ಕಂತೆ 24 ತಿಂಗಳುಗಳಿಂದ ಕೆಲ ವರ್ಷಗಳವರೆಗೆ ಹಣ ಮರುಪಾವತಿಗೆ ಅವಕಾಶವನ್ನು ಕಲ್ಪಿಸಲಾಗುತ್ತದೆ.
ಅಂದಹಾಗೆ, ನಿಮ್ಮ ಮದುವೆಗೆ ಆಗುವ ಖರ್ಚುಗಳನ್ನು ವೆಡ್ಡಿಂಗ್ ಪ್ಲಾನರ್‌ಗಳು ಲೆಕ್ಕಾಚಾರ ಹಾಕಿ ನೀಡುತ್ತಾರೆ. ಅದರಲ್ಲಿ ಮದುವೆಯ ಹಾಲ್, ಲೈಟಿಂಗ್ಸ್, ಸೌಂಡ್ ಸಿಸ್ಟಮ್, ಡೆಕೋರೇಷನ್, ವೆಜ್ ಮತ್ತು ನಾನ್ ಊಟ, ಫೋಟೊ, ವಿಡಿಯೋಗ್ರಫಿ ಅಷ್ಟೇ ಅಲ್ಲದೇ ಮದುಮಕ್ಕಳ ಮೇಕಪ್ ಎಲ್ಲವೂ ಸೇರಿದೆ.
ಕಲ್ಯಾಣ ಮಂಟಪಕ್ಕೆ ಬಂದ, ಧನಸ್ಸು ಮುರಿದ... ವಧುವಿಗೆ ತಾಳಿ ಕಟ್ಟೇಬಿಟ್ಟ : ಆಧುನಿಕ ಸೀತಾ ಸ್ವಯಂವರ ವೈರಲ್!