Shriram Bhat | Updated: Apr 14, 2025, 12:59 PM IST
ಬಣ್ಣದ ದುನಿಯಾದ ಸುಂದರಿಯರ ನಡುವಿನ ಜಡೆಜಗಳಗಳು ಹೊಸತಲ್ಲ. ಸುಂದರಿಯರ ಸವಾಲುಗಳು ನೋಡಿಗರಿಗೆ ಅವರ ಸಿನಿಮಾಕಿಂತ ಜಾಸ್ತಿ ಮನರಂಜನೆ ಕೊಡ್ತಾವೆ. ಸದ್ಯ ಮರ್ಡರ್ ಬೆಡಗಿ ಮಲ್ಲಿಕಾ ಶೆರಾವತ್ ಬಗ್ಗೆ ಮತ್ತೊಬ್ಬ ಸುಂದರಿ ಅದಿತಿ ಹಿಂದೊಮ್ಮೆ ಆಡಿದ್ದ ಮಾತುಗಳು ವೈರಲ್ ಆಗಿವೆ. ಮತ್ತದು ಸೋಷಿಯಲ್ ಮಿಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟಿಹಾಕಿವೆ.
ಮಲ್ಲಿಕಾ ಬಗ್ಗೆ ಹೀಗಂದ್ರಾ ಅದಿತಿ..? ಸ್ಟೀಲ್ Vs ಸಿಲಿಕಾನ್..! ಅದಿತಿ ರಾವ್ ಹಳೆಯ ಹೇಳಿಕೆ.. ವೈರಲ್ ಆಗಿದ್ದೇತೇಕೆ..?
ಯೆಸ್ ಇದು ಸುಂದರಿಯರಿಬ್ಬರ ಸವಾಲಿನ ಕಹಾನಿ. ಮರ್ಡರ್ ಸಿನಿಮಾ ಮೂಲಕ ರಾತ್ರೋರಾತ್ರಿ ಫೇಮಸ್ ಆಗಿದ್ದ ಮಾದಕ ಬೆಡಗಿ ಮಲ್ಲಿಕಾ ಶೆರಾವತ್ ಕುರಿತ ಸುದ್ದಿ. ನಿಮಗೆಲ್ಲಾ ಗೊತ್ತಿರೋ ಹಾಗೆ ಮರ್ಡರ್ ಅನ್ನೋ ಸಿನಿಮಾ ಬಂದಾಗ ಮಡಿವಂತರೆಲ್ಲಾ ಬೆಚ್ಚಿಬಿದ್ದಿದ್ರು. ಈ ಸಿನಿಮಾದಲ್ಲಿ ಮಲ್ಲಿಕಾ ಬಿಡುಬೀಸಾಗಿ ತನ್ನ ಮೈಮಾಟ ಪ್ರದರ್ಶನ ಮಾಡಿದ್ದ ಪರಿ ಕಂಡು ಎಲ್ಲರೂ ಹೌಹಾರಿ ಹೋಗಿದ್ರು.
ಮಹೇಶ್ ಭಟ್ ನಿರ್ಮಾಣದ ಅನುರಾಗ್ ಬಸು ನಿರ್ದೇಶನದ ಮರ್ಡರ್ ಸಿನಿಮಾ ಬಾಲಿವುಡ್ ಇತಿಹಾಸದಲ್ಲೇ ಬೋಲ್ಡ್ ಸಿನಿಮಾ. ಚಿತ್ರದಲ್ಲಿದ್ದ ಅಧರ ಚುಂಬನದ ದೃಶ್ಯಗಳು, ಶೃಂಗಾರ ದೃಶ್ಯಗಳು ಪಡ್ಡೆ ಹೈಕಳನ್ನ ಚಿತ್ರಮಂದಿರಕ್ಕೆ ನುಗ್ಗುವಂತೆ ಮಾಡಿದ್ವು. ಸಿನಿಮಾ ಬಾಕ್ಸಾಫೀಸ್ನಲ್ಲಿ ಹಣದ ಹೊಳೆಯನ್ನೇ ಹರಿಸಿತ್ತು.
ಈ ಸಿನಿಮಾ ಮೂಲಕ ದೇಶದೆಲ್ಲೆಡೆ ರಾತ್ರೋರಾತ್ರಿ ಬಿಚ್ಚಮ್ಮ ಅಂತ ಖ್ಯಾತಿ ಪಡೆದಿದ್ದು ಮಲ್ಲಿಕಾ ಶೆರಾವತ್. ಮರ್ಡರ್ ಬಳಿಕ ಮಲ್ಲಿಕಾ ಬಾಲಿವುಡ್ ನಿಂದ ಹಾಲಿವುಡ್ಗೂ ಹಾರಿದ್ರು. ಮುಂದೆ ಬಾಲಿವುಡ್ ನಲ್ಲಿ ಇಂಥಾ ಶೃಂಗಾರಮಯ ಸಿನಿಮಾಗಳು ಸಾಲು ಸಾಲು ಬಂದು ಹಣ ದೋಚಿದ್ವು.
ಈಗ ಮರ್ಡರ್ ಸಿನಿಮಾವನ್ಯಾಕೆ ನೆನಪು ಮಾಡಿಕೊಳ್ತಾ ಇದ್ದೀವಿ ಅಂದ್ರೆ ಇದೇ ಮರ್ಡರ್ ಸರಣಿಯ ಮೂರನೇ ಸಿನಿಮಾ ಬಂದ ಹೊತ್ತಲ್ಲಿ ಅದರ ನಾಯಕಿ ಸಂದರ್ಶನದಲ್ಲಿ ಆಡಿದ ಮಾತುಗಳು ಈಗ ವೈರಲ್ ಆಗಿವೆ. ಅಂದಹಾಗೆ ಮರ್ಡರ್ -3ನಲ್ಲಿ ನಟಿಸಿದ್ದು ಮತ್ತೊಬ್ಬ ಮಾದಕ ಬೆಡಗಿ ಅದಿತಿ ರಾವ್ ಹೈದರಿ.
ಮರ್ಡರ್-3 ಸಿನಿಮಾದ ಪ್ರಮೋಷನ್ ವೇಳೆ ಅದಿತಿಗೆ ಮಲ್ಲಿಕಾ ಬಗ್ಗೆ ಪ್ರಶ್ನೆ ಕೇಳಲಾಗುತ್ತೆ. ಅದಕ್ಕೆ ಅದಿತಿ ಕೊಟ್ಟ ಉತ್ತರ ಎಲ್ಲರನ್ನೂ ದಂಗು ಬಡಿಸುತ್ತೆ. ಶೃಂಗಾರ ದೃಶ್ಯ ಮಾಡಲಿಕ್ಕೆ ನಿಮ್ಮ ಆತ್ಮದಲ್ಲಿ ಸ್ಟೀಲ್ ಇರಬೇಕಾಗುತ್ತೆ. ಬದಲಾಗಿ ನಿಮ್ಮ ಎದೆಯಲ್ಲಿ ಸಿಲಿಕಾನ್ ಅಲ್ಲ ಅನ್ನೋ ಮಾತು ಹೇಳ್ತಾರೆ ಅದಿತಿ. ಇದನ್ನ ಕೇಳಿ ಅದಿತಿ ಪಕ್ಕದಲ್ಲಿ ಕೂತಿದ್ದ ನಾಯಕ ರಣದೀಪ್ ಹೂಡಾ ಏನು ಅಂತ ಬೆಚ್ಚಿ ಬಿದ್ದು ಕೇಳ್ತಾರೆ. ಅದಕ್ಕೆ ಒನ್ಸ್ ಅಗೈನ್ ಬೋಲ್ಡ್ ಆಗಿ ಉತ್ತರ ಕೊಡ್ತಾರೆ ಅದಿತಿ.
ಮಲ್ಲಿಕಾ ಶೆರಾವತ್ ಸುಂದರವಾಗಿ ಕಾಣಲಿಕ್ಕೆ ಎದೆಯ ಭಾಗಕ್ಕೆ ಸಿಲಿಕಾನ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಅನ್ನೋ ರೂಮರ್ ಆಗ ಹರಿದಾಡಿತ್ತು. ಅದನ್ನೇ ಕ್ಯಾಮೆರಾ ಎದುರು ಹೇಳುವ ಅದಿತಿ ತನ್ನದು ಸಹಜ ಸೌಂದರ್ಯ ಮಲ್ಲಿಕಾಳದ್ದು ಕೃತಕ ಸೌಂದರ್ಯ ಅಂದುಬಿಟ್ಟಿದ್ರು. ಇದು ಮರ್ಡರ್-3 ಸಮಯದ ಇಂಟರ್ವ್ಯೂ. ಇದು ಆಗ ಎಷ್ಟು ಸದ್ದು ಮಾಡಿತ್ತೋ ಗೊತ್ತಿಲ್ಲ. ಈ ಡಿಜಿಟಲ್ ದುನಿಯಾದಲ್ಲಿ ಇದನ್ನ ಹೆಕ್ಕಿ ತೆಗೆದು ಟ್ರೋಲ್ ಮಾಡಲಾಗ್ತಾ ಇದೆ.
ಮರ್ಡರ್ ಸಿನಿಮಾ ನಂತರ ಫುಲ್ ಬ್ಯುಸಿಯಾಗಿದ್ದ ಮಲ್ಲಿಕಾ ಇಂಗ್ಲೀಷ್, ಚೈನೀಸ್ ಸಿನಿಮಾಗಳಲೆಲ್ಲಾ ನಟಿಸಿದ್ರು. ಇದೀಗ ಮತ್ತೆ ಬಾಲಿವುಡ್ಗೆ ಮರಳಿರೋ ಮಲ್ಲಿಕಾ ಕಳೆದ ವರ್ಷ ವಿಕ್ಕಿ ಔರ್ ವಿಶಾಲ್ ಕಿ ವೋ ವಾಲಾ ವಿಡಿಯೋ ಸಿನಿಮಾದಲ್ಲಿ ನಟಿಸಿದ್ರು.
ಇನ್ನೂ ಅದಿತಿ ರಾವ್ ಹೈದರಿ ಕಳೆದ ವರ್ಷ ರಿಲೀಸ್ ಆದ ಹೀರಾಮಂಡಿ ವೆಬ್ ಸಿರೀಸ್ನಿಂದ ಮತ್ತೆ ಲೈಮ್ ಲೈಟ್ಗೆ ಬಂದಿದ್ದಾರೆ. ಅದಿತಿ ನಾಯಕಿಯಾಗಿ ಮಿಂಚಿದ್ದ ಮರ್ಡರ್-3 ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಆ ಬಳಿಕ ಸೌತ್ನ ಸಾಕಷ್ಟು ಸಿನಿಮಾಗಳ ಮೂಲಕ ಅದಿತಿ ಗುರುತಿಸಿಕೊಂಡಿದ್ರು.
ಇದೀಗ ಅದಿತಿ ನೀಡಿದ್ದ ಹಳೆ ಹೇಳಿಕೆ ವೈರಲ್ ಆಗಿದ್ದು ಕಿಚ್ಚು ಹಚ್ಚಿದೆ. ಅದಿತಿಯ ಈ ಸ್ಟೇಟ್ಮೆಂಟ್ ಬಗ್ಗೆ ಆಗ ಮಲ್ಲಿಕಾ ಮೌನವಾಗಿದ್ರು. ಆದ್ರೆ ಈಗ ವೈರಲ್ ಆಗಿರೋ ಮ್ಯಾಟರ್ ಬಗ್ಗೆ ಏನ್ ಹೇಳ್ತಾರೋ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ. ಈ ಸುಂದರಿಯರ ಸಿಲಿಕಾನ್ ಸಮರದ ನಡುವೆ ನಮಗೆ ಬಿಟ್ಟಿ ಮನರಂಜನೆ ಸಿಗೋದು ಫಿಕ್ಸ್ ಅಂತ ಪಡ್ಡೆ ಹೈಕಳು ಕಾದು ಕುಳಿತಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..