6 ವಿಮಾನಗಳಲ್ಲಿ 600 ಟನ್‌ ತೂಕದ 15 ಲಕ್ಷ ಐಫೋನ್‌ ರವಾನೆ; ಏ.21ರಂದು ಭಾರತಕ್ಕೆ ಅಮೆರಿಕ ಉಪಾಧ್ಯಕ್ಷ

India-US Trade: ಭಾರತದಿಂದ 600 ಟನ್ ತೂಕದ 15 ಲಕ್ಷ ಐಫೋನ್‌ಗಳನ್ನು ಅಮೆರಿಕಕ್ಕೆ ಸಾಗಿಸಲಾಗಿದೆ. ಆ್ಯಪಲ್ ಕಂಪನಿಯು ಚೆನ್ನೈ ವಿಮಾನ ನಿಲ್ದಾಣದಿಂದ ಈ ಐಫೋನ್‌ಗಳನ್ನು ಸಾಗಿಸಿದೆ.

1g lakh iPhones weighing 600 tons shipped to US from India in 6 flights  mrq

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಪ್ರತಿ ತೆರಿಗೆಗೆ ಹೆದರಿ ಕಳೆದ ವಾರ ಭಾರತದಿಂದ 6 ವಿಮಾನಗಳಲ್ಲಿ ಅಮೆರಿಕಕ್ಕೆ ಹೋಗಿದ್ದ ಐಫೋನ್‌ ತೂಕ ಬರೋಬ್ಬರಿ 600 ಟನ್‌ ಎಂಬುದು ಗೊತ್ತಾಗಿದೆ. 6 ವಿಮಾನಗಳಲ್ಲಿ 600 ಟನ್‌ ತೂಕದ ಒಟ್ಟು 15 ಲಕ್ಷ ಐಫೋನ್‌ಗಳನ್ನು ಆ್ಯಪಲ್‌ ಭಾರತದ ಚೆನ್ನೈ ವಿಮಾನ ನಿಲ್ದಾಣದಿಂದ ಅಮೆರಿಕಕ್ಕೆ ಸಾಗಿಸಿತ್ತು ಎಂದು ಮೂಲಗಳು ತಿಳಿಸಿವೆ.

ಇದಕ್ಕಾಗಿ ಆ್ಯಪಲ್‌ ಕಂಪನಿಯು ಚೆನ್ನೈ ವಿಮಾನ ನಿಲ್ದಾಣದ ಕಸ್ಟಂ ಇಲಾಖೆಗೆ 30 ತಾಸಿನ ಕಸ್ಟಂ ಪ್ರಕ್ರಿಯೆಯನ್ನು 6 ತಾಸಿಗೆ ಇಳಿಸಲು ಮನವಿ ಮಾಡಿತ್ತು. ಹೀಗಾಗಿ ಕ್ಷಿಪ್ರವಾಗಿ 100 ಟನ್‌ ಹೊರಬಲ್ಲ 6 ವಿಮಾನಗಳ ಮೂಲಕ ಆ್ಯಪಲ್‌ ಕಂಪನಿಯು ಐಫೋನ್‌ಗಳನ್ನು ಸಾಗಿಸಿತ್ತು ಎಂದು ತಿಳಿದುಬಂದಿದೆ.

Latest Videos

ತೂಕದ ಲೆಕ್ಕವು ಐಫೋನ್‌ 14 ಜೊತೆ ಚಾರ್ಜಿಂಗ್ ಕೇಬಲ್‌ ಸೇರಿದರೆ ಒಂದು ಪೀಸ್‌ನ ತೂಕವು 350 ಗ್ರಾಂ ಆಗಲಿದ್ದು, ಹೀಗೆ ಅಂದಾಜಿನ ಲೆಕ್ಕ ಹಾಕಿದಾಗ 15 ಲಕ್ಷ ಫೋನ್‌ಗಳು ಸಾಗಾಟವಾಗಿದೆ ಎನ್ನಲಾಗಿದೆ. ಈ ಮೂಲಕ ಅಮೆರಿಕದಲ್ಲಿ ಐಫೋನ್‌ ದಾಸ್ತಾನು ಹೆಚ್ಚಿಸಿಕೊಂಡು, ತೆರಿಗೆ ಹೊಡೆತದಿಂದ ಪಾರಾಗಲು ಆ್ಯಪಲ್‌ ಮುಂದಾಗಿತ್ತು ಎಂದು ಮೂಲಗಳು ತಿಳಿಸಿವೆ.

90 ದಿನಗಳ ಕಾಲ ಪ್ರತಿತೆರಿಗೆಯಿಂದ ವಿನಾಯ್ತಿ
ಭಾರತದ ಮೇಲೆ ಹೇರಿದ್ದ ಶೇ.26ರಷ್ಟು ಪ್ರತಿತೆರಿಗೆಗೆ ಜು.9ರವರೆಗೂ ತಡೆ ಇರಲಿದೆ ಎಂದು ಅಮೆರಿಕ ಗುರುವಾರ ಅಧಿಕೃತ ಪ್ರಕಟಣೆ ನೀಡಿದೆ. ಬುಧವಾರ ರಾತ್ರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಫ್‌, ಚೀನಾ ಹೊರತುಪಡಿಸಿ 75 ದೇಶಗಳಿಗೆ 90 ದಿನಗಳ ಕಾಲ ಪ್ರತಿತೆರಿಗೆಯಿಂದ ವಿನಾಯ್ತಿ ನೀಡುವುದಾಗಿ ಘೋಷಿಸಿದ್ದರು. 

ಆದರೆ ದೇಶಗಳ ಹೆಸರನ್ನು ಪ್ರಕಟ ಮಾಡಿರಲಿಲ್ಲ. ಹೀಗಾಗಿ ಗುರುವಾರ ಶ್ವೇತಭವನ ಈ ಕುರಿತು ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ಆದರೆ ಈಗಾಗಲೇ ಜಾರಿಯಲ್ಲಿದ್ದ ಶೇ.10ರಷ್ಟು ಮೂಲ ತೆರಿಗೆ ಹಿಂದಿನಂತೆ ಮುಂದುವರೆಯಲಿದೆ.

ಬ್ಲ್ಯಾಕ್‌ಮೇಲ್‌ಗೆ ನಾವು ಹೆದರಲ್ಲ: ಅಮೆರಿಕಕ್ಕೆ ಚೀನಾ ತಿರುಗೇಟು 
ತೈಪೆ: ತನ್ನ ಉತ್ಪನ್ನಗಳ ಮೇಲೆ ಶೇ.125ರಷ್ಟು ತೆರಿಗೆ ಹಾಕಿರುವ ಅಮೆರಿಕದ ಕ್ರಮದ ಬಗ್ಗೆ ಬಗ್ಗೆ ಕಿಡಿಕಾರಿರುವ ಚೀನಾ, ಇಂಥ ಬೆದರಿಕೆ, ಬ್ಲ್ಯಾಕ್‌ಮೇಲ್‌ ತಂತ್ರಗಳಿಗೆಲ್ಲಾ ನಾವು ಹೆದರುವುದಿಲ್ಲ. ಅಮೆರಿಕದ ಜೊತೆಗೆ ಮಾತುಕತೆಗೆ ನಾವು ಸಿದ್ಧ. ಆದರೆ ಇಂಥ ಮಾತುಕತೆ ಸಮಾನ ನೆಲೆಯಲ್ಲಿ ಮತ್ತು ಪರಸ್ಪರ ಗೌರವದ ರೀತಿಯಲ್ಲಿ ರೀತಿಯಲ್ಲಿ ಇರಬೇಕು. ಅಮೆರಿಕ ವ್ಯಾಪಾರ ಯುದ್ಧ ನಡೆಸಲು ನಿರ್ಧರಿಸಿದರೆ, ಚೀನಾ ಕೊನೆಯವರೆಗೂ ಹೋರಾಡುತ್ತದೆ ಎಂದು ಹೇಳಿದೆ.

ಇದನ್ನೂ ಓದಿ: ರಷ್ಯಾ ವಿಕ್ಟರಿ ಡೇ ಪರೇಡ್‌ನಲ್ಲಿ ಭಾಗವಹಿಸಲು ಪ್ರಧಾನಿ ಮೋದಿಗೆ ಅಧ್ಯಕ್ಷ ಪುಟಿನ್ ಆಹ್ವಾನ

ಇನ್ನೊಂದೆಡೆ ಅಮೆರಿಕದ ವಿರುದ್ಧ ಜಂಟಿ ಹೋರಾಟ ಸಂಘಟಿಸುವ ಭಾಗವಾಗಿ ಚೀನಾ ಅನ್ಯ ದೇಶಗಳೊಂದಿಗೆ ಮಾತುಕತೆಗೆ ಮುಂದಾಗಿದೆ. ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ಅವರೊಂದಿಗೆ ಪ್ರಧಾನಿ ಲಿ ಕಿಯಾಂಗ್‌ ದೂರವಾಣಿಯಲ್ಲಿ ಮಾತನಾಡಿದ್ದು, ‘ಚೀನಾ ಮತ್ತು ಯುರೋಪಿಯನ್ ಒಕ್ಕೂಟದ ನಾಯಕರ ನಡುವಿನ ಒಮ್ಮತದ ನಿರ್ಧಾರಗಳನ್ನು, ಸಂವಹನ ಮತ್ತು ವಿನಿಮಯವನ್ನು ಬಲಪಡಿಸಲು, ವ್ಯಾಪಾರ, ಹೂಡಿಕೆ ಮತ್ತು ಕೈಗಾರಿಕಾ ಸಹಕಾರವನ್ನು ಗಾಢವಾಗಿಸಲು ಯುರೋಪಿಯನ್ ಒಕ್ಕೂಟದೊಂದಿಗೆ ಕೆಲಸ ಮಾಡಲು ಚೀನಾ ಸಿದ್ಧವಾಗಿದೆ’ ಎಂದಿರುವುದಾಗಿ ವರದಿಯಾಗಿದೆ. ಬುಧವಾರವಷ್ಟೇ, ‘ಭಾರತ ಮತ್ತು ಚೀನಾ ಟ್ರಂಪ್‌ ವಿರುದ್ಧ ನಿಲ್ಲಬೇಕು’ ಎಂದು ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಆಗ್ರಹಿಸಿದ್ದರು.

ಏ.21ರಂದು ಭಾರತಕ್ಕೆ ಅಮೆರಿಕ ಉಪಾಧ್ಯಕ್ಷ
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಪತ್ನಿ ಉಷಾ ವ್ಯಾನ್ಸ್ ಅವರೊಂದಿಗೆ ಏಪ್ರಿಲ್ 21 ಮತ್ತು 24 ರ ನಡುವೆ ಭಾರತಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ. ಆಗ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿ ಅವರು ಸಭೆ ನಡೆಸಲಿದ್ದಾರೆ. ಅಧಿಕೃತ ಕಾರ್ಯಕ್ರಮಗಳ ಜೊತೆಗೆ, ವ್ಯಾನ್ಸ್ ಜೈಪುರ ಮತ್ತು ಆಗ್ರಾಗೆ ಪ್ರಯಾಣಿಸಲಿದ್ದಾರೆ. ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಮೈಕ್ ವಾಲ್ಟ್ಜ್ ಕೂಡ ಅದೇ ವೇಳೆ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.

ಇದನ್ನೂ ಓದಿ: ಮತ್ತಷ್ಟು ಬಿಗಡಾಯಿಸಿದೆ ಚೀನಾ ಮತ್ತು ಅಮೆರಿಕದ ನಡುವಿನ ತೆರಿಗೆ: ಚೀನಾ 125% ಸುಂಕ ಯುದ್ಧ

vuukle one pixel image
click me!