ಟಾಟಾ ಮೋಟಾರ್ಸ್ ಜಾಗ್ವಾರ್ ಅನ್ನು ಚೀನಾದ ಗೀಲಿಗೆ ಮಾರಾಟ ಮಾಡಿದೆ ಎಂಬ ವರದಿ ಸುಳ್ಳು ಎಂದು ಟಾಟಾ ಮೋಟಾರ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ದೃಢಪಡಿಸಿವೆ. 2008 ರಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ನಿಂದ ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸ್ವಾಧೀನಪಡಿಸಿಕೊಂಡಿತು.
ಬೆಂಗಳೂರು (ಏ.14): ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟಾಟಾ ಮೋಟಾರ್ಸ್ ವಿಚಾರವಾಗಿ ಭಾರೀ ಸುದ್ದಿಯೊಂದು ಹರಿದಾಡಿತ್ತು. ಟಾಟಾ ಮೋಟಾರ್ಸ್ ತಾನು ಖರೀದಿ ಮಾಡಿದ್ದ ಜಾಗ್ವಾರ್ ಕಂಪನಿಯನ್ನು ಚೀನಾದ ಗೀಲಿಗೆ ಮಾರಾಟ ಮಾಡಿದೆ ಎಂದು ವರದಿಯಾಗಿತ್ತು. ಈ ವರದಿಯನ್ನು ಮೊದಲು "ದಿ ಆಟೋಡ್ರೈವ್" ಎಂಬ ಆಟೋಮೋಟಿವ್ ಪ್ರಕಟಣೆ ಪ್ರಕಟಿಸಿತು.
ಅವರ ಲೇಖನದ ಪ್ರಕಾರ, ಪ್ರಸಿದ್ಧ ಬ್ರಿಟಿಷ್ ಆಟೋಮೋಟಿವ್ ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಅನ್ನು ಹೊಂದಿರುವ ಟಾಟಾ ಮೋಟಾರ್ಸ್, ಲ್ಯಾಂಡ್ ರೋವರ್ ಹೊರತುಪಡಿಸಿ ಜಾಗ್ವಾರ್ ಅನ್ನು ಗೀಲಿ ಆಟೋಮೋಟಿವ್ ಗ್ರೂಪ್‌ಗೆ ಮಾರಾಟ ಮಾಡಿದೆ ಎಂದು ತಿಳಿಸಿತ್ತು. ಈ ಸುದ್ದಿ ಸಖತ್ ಚರ್ಚೆಯಾಯಿತು. ಈ ಸ್ವಾಧೀನದ ಬಗ್ಗೆ ಟಾಟಾ ಮೋಟಾರ್ಸ್, ಜಾಗ್ವಾರ್ ಲ್ಯಾಂಡ್ ರೋವರ್ ಅಥವಾ ಗೀಲಿ ಗ್ಲೋಬಲ್‌ನಿಂದ ಯಾವುದೇ ಅಧಿಕೃತ ಪ್ರಕಟನೆ ಇಲ್ಲದ ಕಾರಣ ಅನೇಕರು ಈ ಸುದ್ದಿಯ ಮೇಲೆಯೇ ಅನುಮಾನ ಪಟ್ಟಿದ್ದರು.
ಟಾಟಾ ಮೋಟಾರ್ಸ್ ಜಾಗ್ವಾರ್ ಅನ್ನು ಗೀಲಿಗೆ ಮಾರಾಟ ಮಾಡಿಲ್ಲ: ಗೀಲ, ಜಾಗ್ವಾರ್ ಅನ್ನು ಸ್ವಾಧೀನಪಡಿಸಿಕೊಂಡ ಬಗ್ಗೆ ವರದಿಯ ನಿಖರತೆಯನ್ನು ಪರಿಶೀಲಿಸಲು ಟಾಟಾ ಮೋಟಾರ್ಸ್ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಅನ್ನು ಸಂಪರ್ಕಿಸಲಾಗಿತ್ತು. ಎರಡೂ ಕಂಪನಿಗಳು ಈ ವರದಿ ಸುಳ್ಳು ಎಂದು ದೃಢಪಡಿಸಿವೆ. ಆರಂಭದಲ್ಲಿ ವರದಿಯನ್ನು ಪ್ರಕಟಿಸಿದ ಪ್ರಕಟಣೆ ಕೂಡ ಇದು ಏಪ್ರಿಲ್ ಫೂಲ್ ಜೋಕ್ ಎಂದು ಬಹಿರಂಗಪಡಿಸಿತು. ಈ ವಿಷಯದ ಬಗ್ಗೆ ಯಾವುದೇ ಬ್ರ್ಯಾಂಡ್ ಅಧಿಕೃತ ಹೇಳಿಕೆಯನ್ನು ನೀಡಿಲ್ಲವಾದರೂ, ವರದಿಯನ್ನು ಈಗಾಗಲೇ ತೆಗೆದುಹಾಕಲಾಗಿದೆ ಎಂದು ಮಾಹಿತಿ ನೀಡಿದೆ.
2008 ರಲ್ಲಿ ಟಾಟಾ ಮೋಟಾರ್ಸ್ ಫೋರ್ಡ್ ನಿಂದ JLR ಅನ್ನು ಸ್ವಾಧೀನ: 2008 ರಲ್ಲಿ, ಟಾಟಾ ಮೋಟಾರ್ಸ್ ತೆಗೆದುಕೊಂಡ ದಿಟ್ಟ ಕ್ರಮದಲ್ಲಿ ಜಾಗ್ವಾರ್ ಲ್ಯಾಂಡ್ ರೋವರ್ (JLR) ಅನ್ನು ಫೋರ್ಡ್ ನಿಂದ $2.3 ಬಿಲಿಯನ್ ಗೆ ಸ್ವಾಧೀನಪಡಿಸಿಕೊಂಡಿತು. ಆ ಸಮಯದಲ್ಲಿ, JLR ಹಣಕಾಸು ಸಂಕಷ್ಟದಿಂದ ಹೆಣಗಾಡುತ್ತಿತ್ತು. ಆದರೆ ಟಾಟಾದ ವಿಭಾಗದಲ್ಲಿ, ಬ್ರಿಟಿಷ್ ಐಷಾರಾಮಿ ಬ್ರ್ಯಾಂಡ್ ಪುನರುಜ್ಜೀವನವನ್ನು ಕಂಡಿದೆ. ತನ್ನ ಶ್ರೇಣಿಯನ್ನು ವಿಸ್ತರಣೆ ಮಾಡಿದ್ದು ಮಾತ್ರವಲ್ಲದೆ, ತಂತ್ರಜ್ಞಾನದಲ್ಲಿ ಹೂಡಿಕೆ ಮಾಡುವುದು ಮತ್ತು ನಷ್ಟಗಳನ್ನು ಲಾಭವಾಗಿ ಪರಿವರ್ತನೆ ಆಗುವುದನ್ನು ಕಂಡಿದೆ. ಈ ಒಪ್ಪಂದವು ಜಾಗತಿಕ ಐಷಾರಾಮಿ ಕಾರು ಮಾರುಕಟ್ಟೆಯಲ್ಲಿ ಟಾಟಾದ ಸ್ಥಾನವನ್ನು ಭದ್ರಪಡಿಸಿತು. ಆದರೂ, ಬ್ರೆಕ್ಸಿಟ್, ಚೀನಾದಲ್ಲಿ ಮಾರಾಟ ನಿಧಾನವಾಗುವುದು ಮತ್ತು ಪೂರೈಕೆ ಸರಪಳಿ ಸಮಸ್ಯೆಗಳಂತಹ ಸವಾಲುಗಳು ಇತ್ತೀಚಿನ ದಿನಗಳಲ್ಲಿ JLR ನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚು ಮಾಡಿದೆ. ಇದರೊಂದಿಗೆ ಅಮೆರಿಕದಲ್ಲಿ ಟ್ರಂಪ್ ನೀತಿಗಳು, ಜಾಗತಿಕ ವಿದ್ಯಮಾನಗಳು ಕೂಡ ಜಾಗ್ವಾರ್ ಲ್ಯಾಂಡ್ ರೋವರ್‌ನ ಮಾರಾಟದ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಟಾಟಾ ಮೋಟಾರ್ಸ್ ಇವಿ ಕಾರ್‌ಗಳಿಗೆ ಟಕ್ಕರ್, ಎಂಜಿ ವಿಂಡ್ಸರ್ EV ಭರ್ಜರಿ ಮಾರಾಟ
ಇತ್ತೀಚೆಗೆ, ಜಾಗ್ವಾರ್ ಟೈಪ್ 00 ಪರಿಕಲ್ಪನೆಯನ್ನು ಅನಾವರಣಗೊಳಿಸಿತು, ಇದು EV-ಮಾತ್ರ ಬ್ರಾಂಡ್ ಆಗಿ ಪರಿವರ್ತನೆಗೊಳ್ಳುತ್ತಿರುವಾಗ ಪ್ರಸಿದ್ಧ ಬ್ರಿಟಿಷ್ ಬ್ರ್ಯಾಂಡ್‌ನಿಂದ ಏನನ್ನು ನಿರೀಕ್ಷಿಸಬಹುದು ಎಂಬುದರ ಒಂದು ನೋಟವನ್ನು ಜಗತ್ತಿಗೆ ನೀಡಿತು. ಜಾಗ್ವಾರ್‌ನ ಹೊಸ ಡೈರೆಕ್ಷನ್ ಮತ್ತು ಟೈಪ್ 00 ಪರಿಕಲ್ಪನೆಯು ಮಿಶ್ರ ಪ್ರತಿಕ್ರಿಯೆಗಳನ್ನು ಪಡೆದಿದ್ದರೂ, ಅವು ಖಂಡಿತವಾಗಿಯೂ ಬ್ರ್ಯಾಂಡ್ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿವೆ. ಈ ವರ್ಷದ ಅಂತ್ಯದ ವೇಳೆಗೆ ಜಾಗ್ವಾರ್ ಈ ಹೊಸ EV-ಮಾತ್ರ ತಂತ್ರದ ಅಡಿಯಲ್ಲಿ ತನ್ನ ಮೊದಲ ಉತ್ಪಾದನಾ ಮಾದರಿಯನ್ನು ಅನಾವರಣಗೊಳಿಸಲಿದೆ.
ಎಲಾನ್ ಮಸ್ಕ್ ಸಂಬಳಕ್ಕೆ ಅನುಮೋದನೆ; ಇದು ಟಾಟಾ ಮೋಟಾರ್ಸ್ ಆದಾಯಕ್ಕಿಂತಲೂ ಹೆಚ್ಚು